MY KIDNEY FOR SALE, PLEASE CONTACT ME :ಮಾರಾಟಕ್ಕಿದೆ…!! ಕಲ್ಯಾಣ ಕರ್ನಾಟಕ ಸಾರಿಗೆ ಕಾರ್ಮಿಕನ ಕಿಡ್ನಿ ಮಾರಾಟಕ್ಕಿದೆ…?!

ಮೇಲಾಧಿಕಾರಿಗಳ ಕಿರುಕುಳ-ಬಲಂತದ ವರ್ಗ-ಜೀವನ ನಿರ್ವಹಣೆ ಕಷ್ಟವಾಗಿ ಕಿಡ್ನಿ ಮಾರಾಟಕ್ಕೆ ಮುಂದಾದ ಸಾರಿಗೆ ಕಾರ್ಮಿಕ

0
ತನ್ನ ಕಿಡ್ನಿ ಮಾರಾಟಕ್ಕಿದೆ ಎಂದು ಸ್ಟೇಟಸ್ ಹಾಕ್ಕೊಂಡಿರುವ ಚಾಲಕ ಪ್ರಕಾಶ್ ಬಾಗೇವಾಡಿ
ತನ್ನ ಕಿಡ್ನಿ ಮಾರಾಟಕ್ಕಿದೆ ಎಂದು ಸ್ಟೇಟಸ್ ಹಾಕ್ಕೊಂಡಿರುವ ಚಾಲಕ ಪ್ರಕಾಶ್ ಬಾಗೇವಾಡಿ
ತನ್ನ ಕಿಡ್ನಿ ಮಾರಾಟಕ್ಕಿದೆ ಎಂದು ಚಾಲಕ ಪ್ರಕಾಶ್ ಬಾಗೇವಾಡಿ ಹಾಕ್ಕೊಂಡಿರುವ ಸ್ಟೇಟಸ್
ತನ್ನ ಕಿಡ್ನಿ ಮಾರಾಟಕ್ಕಿದೆ ಎಂದು ಚಾಲಕ ಪ್ರಕಾಶ್ ಬಾಗೇವಾಡಿ ಹಾಕ್ಕೊಂಡಿರುವ ಸ್ಟೇಟಸ್

ಬೆಂಗಳೂರು:ಸಚಿವ ಶ್ರಿರಾಮಲು ಅವರು ಓದಲೇಬೇಕಾದ ಸ್ಟೋರಿಯಿದು..ತಮ್ಮ ಕಾರ್ಮಿಕರ ತರೇವಾರಿ ಬವಣೆಗಳನ್ನು ಅವರು ಅರ್ಥೈಸಿಕೊಳ್ಳಬೇಕಿದೆ. ತಿಂಗಳೆಲ್ಲಾ ದುಡಿದರೂ ಕೈ ಸೇರುತ್ತಿರುವ ಅರ್ದ ಸಂಬಳದಿಂದ ಹೈರಾಣವಾಗಿರುವ ಸಾರಿಗೆ ಕಾರ್ಮಿಕರು ಘಟಕಗಳಲ್ಲಿ ಮೇಲಾಧಿಕಾರಿಗಳ ಕಿರುಕುಳಕ್ಕೆ ಅಕ್ಷರಶಃ ಕನಲಿ ಹೋಗಿದ್ದಾರೆ.

ಮಾಡದ ತಪ್ಪಿಗೆ ವರ್ಗಾವಣೆ ಶಿಕ್ಷೆ ನೀಡಿ ತನ್ನ ಹಾಗೂ ತನ್ನ ಕುಟುಂಬದ ನೆಮ್ಮದಿ-ಸಂತೋಷ ಕಿತ್ತುಕೊಂಡ ಘಟಕಾಧಿಕಾರಿಯೊಬ್ಬನ ಕಿರುಕುಳದಿಂದ ಬೇಸತ್ತು ಕಲ್ಯಾಣ ಕರ್ನಾಟಕ ನಿಗಮದ ಸಾರಿಗೆ ಕಾರ್ಮಿಕನೋರ್ವ ಕೊಡ್ತಿರೋ ಅರ್ಧ ಸಂಬಳ ಜೀವನ ನಡೆಸಲು ಸಾಲುತ್ತಿಲ್ಲ..ಕಿಡ್ನಿ ಮಾರುತ್ತಿದ್ದೇನೆ..ಆಸಕ್ತರಿದ್ದರೆ ಸಂಪರ್ಕಿಸಿ ಎಂಬ ಸ್ಟೇಟಸ್ ಹಾಕ್ಕೊಂಡಿದ್ದಾನೆ.

ಅಂದ್ಹಾಗೆ ಪ್ರಕಾಶ್ ಬಿ. ಬಾಗೇವಾಡಿ ಎನ್ನುವ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಿಗಮದಲ್ಲಿ ಕೆಲಸ ಮಾಡುತ್ತಿರುವ ಚಾಲಕನೇ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ..ಜೀವನ ನಡೆಸಲು ಕಿಡ್ನಿ ಮಾರುತ್ತಿದ್ದೇನೆ ಸಹಕರಿಸಿ ಎಂದು ತನ್ನ ಮೊಬೈಲ್ 9901737335 / 9901737335 ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿ ಸಂಚಲನವನ್ನೇ ಮೂಡಿಸಿದ್ದಾನೆ.ಸಾರಿಗೆ ಕಾರ್ಮಿಕರ ಜೀವನಗಳನ್ನು ಹೇಗೆ ಹೈರಾಣ ಹಾಗೂ ರೌರವ ನರಕಗೊಳಿಸಿದ್ದಾರೆನ್ನುವುದಕ್ಕೆ ಪ್ರಕಾಶ್ ಬಾಗೇವಾಡಿಯ ಸ್ಟೇಟಸ್ಸೇ ಸಾಕ್ಷಿ ಎನ್ನಬಹುದೇನೋ..

ಹೊಸಪೇಟೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಪ್ರಕಾಶ ಬ ಬಾಗೇವಾಡಿ ಮುಷ್ಕರದ ಸನ್ನಿವೇಶದಲ್ಲಿ ಮೇಲಾಧಿಕಾರಿಗಳ ಪಿತೂರಿಯಿಂದಾಗಿ ಶಿಸ್ತುಕ್ರಮಕ್ಕೆ ಸಿಲುಕಿದ್ದ.ಆದರೆ ವಿಚಾರಣೆ ವೇಳೆ ಆತನಿಂದ ಯಾವುದೇ ತಪ್ಪುಗಳಾಗಿಲ್ಲ.ಆತ ನಿರ್ದೋಷಿ ಎಂದು ಸಾಬೀತಾಗಿತ್ತು.ಬಿ ರಿಪೋರ್ಟ್ ಕೂಡ ಹಾಕಲಾಗಿತ್ತು.ಇಷ್ಟಾದ್ರೂ ಕಾರ್ಮಿಕನಿಂದ ಅಪಮಾನವಾಯಿತು ಎಂಬ ಜಿದ್ದಿಗೆ ಡಿವಿಷನಲ್ ಕಂಟ್ರೋಲರ್ ಸೀನಯ್ಯ, ಡಿಪೋ ಮ್ಯಾನೇಜರ್ ಸತ್ಯನಾರಾಯಣ್  ಅವರುಗಳು  ಅಮಾಯಕ ಹಾಗೂ ನಿಷ್ಪಾಪಿ ಪ್ರಕಾಶ್ ಅವರನ್ನು ದೂರದ ಕಲ್ಬುರ್ಗಿಯ ಚಿಂಚೊಳ್ಳಿ ಡಿಪೋಗೆ ವರ್ಗ ಮಾಡಿದ್ದಾರೆ ಎನ್ನಲಾಗಿದೆ.

ಅಂದ್ಹಾಗೆ ಪ್ರಕಾಶ್ ಬಾಗೇವಾಡಿ ತನ್ನ ಕುಟುಂಬವನ್ನು ಹೊಸಪೇಟೆ ವಿಭಾಗದ ವ್ಯಾಪ್ತಿಯಲ್ಲಿ ಶಿಫ್ಟ್ ಮಾಡಿ ಬಹಳ ವರ್ಷಗಳೇನೂ ಆಗಿಲ್ಲ.ಬದುಕು ಕಟ್ಟಿಕೊಳ್ಳೊಕ್ಕೆ ಪ್ರಯತ್ನಿಸುತ್ತಿರುವಾಗಲೆ ದೂರದ ಚಿಂಚೊಳ್ಳಿ ಡಿಪೋಗೆ ವರ್ಗ ಮಾಡಿರುವುದರಿಂದ ಮತ್ತೆ ಕುಟುಂಬವನ್ನು ಶಿಫ್ಟ್ ಮಾಡುವುದು ಕಷ್ಟಸಾಧ್ಯ ಎಂದು ಹೇಳಿಕೊಂಡಿದ್ದಾನಂತೆ.

ಪ್ರಕಾಶ್ ಬಾಗೇವಾಡಿ ಹಾಗೂ ಇತರರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ FIR
ಪ್ರಕಾಶ್ ಬಾಗೇವಾಡಿ ಹಾಗೂ ಇತರರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ FIR

ತಿಂಗಳಿಗೆ ಬರುತ್ತಿರುವ ಸಂಬಳವೇ ಕಡಿಮೆ..ಪೂರ್ತಿ ಬರುತ್ತಿದ್ದ ಸಂಬಳದಿಂದಲೆ ಕುಟುಂಬ ಮೆಂಟೇನ್ ಮಾಡ್ಲಿಕ್ಕೆ ಆಗುತ್ತಿರಲಿಲ್ಲ..ಮುಷ್ಕರದ ನಂತರ ಬರುತ್ತಿರುವ ಅರ್ದ ಸಂಬಳದಿಂದ ಬದುಕು ಹೈರಾಣವಾಗಿದೆ.ಇಂಥಾ ಸನ್ನಿವೇಶದಲ್ಲಿ ಚಿಂಚೊಳ್ಳಿಗೆ ವರ್ಗ ಮಾಡಿದ್ರೆ ಜೀವನ ನಡೆಸೋದು ಹೇಗೆ ಎಂದು ಪ್ರಶ್ನಿಸಿರುವ ಆತ ಬಹಳಷ್ಟು ಬಾರಿ ಆಲೋಚಿಸಿ ಜೀವನ ನಿರ್ವಹಣೆಗೆ ಬೇಕಿರುವ ಹಣಕ್ಕಾಗಿ ತನ್ನ ಕಿಡ್ನಿ ಮಾರಾಟಕ್ಕೇನೆ ಮುಂದಾಗಿ,ಅದನ್ನು ಫೇಸ್ ಬುಕ್ ನಲ್ಲಿ ಹಾಕ್ಕೊಂಡಿದ್ದಾನೆ.

ಡಿಪೋ ಮ್ಯಾನೇಜರ್ ಸತ್ಯನಾರಾಯಣ್ ಹಾಗೂ ಡಿವಿಷನಲ್ ಕಂಟ್ರೋಲರ್ ಸೀನಯ್ಯ ಅವರ ಉಪಟಳಕ್ಕೆ ಬೇಸತ್ತು ಒಬ್ಬ ಕಾರ್ಮಿಕ ಇಂಥಾ ಸ್ಥಿತಿಗೆ ತಲುಪುತ್ತಾನೆಂದರೆ ಸಾರಿಗೆ ಕಾರ್ಮಿಕರಿಗೆ ಇತರೆಡೆ ಆಗುತ್ತಿರುವ ಶೋಷಣೆ ಇನ್ನೆಷ್ಟರ ಮಟ್ಟಿಗಿದೆ ಎನ್ನುವುದನ್ನು ಊಹಿಸಿಕೊಳ್ಳಬಹುದು.

ಕೆಎಸ್ ಆರ್ ಟಿಸಿ ಕಾರ್ಮಿಕರ ಎಐಟಿಯುಸಿ ರಾಜ್ಯಾಧ್ಯಕ್ಷ ಅನಂತ ಸುಬ್ಬರಾವ್ ಕೂಡ ಪ್ರಕರಣವನ್ನು ಖಂಡಿಸಿದ್ದಾರೆ. ನಮ್ಮ ಸಾರಿಗೆ ಕಾರ್ಮಿಕನ ಬದುಕು ಕಿಡ್ನಿ ಮಾರಾಟಕ್ಕಿದೆ ಎಂದು ಹೇಳುವ ಮಟ್ಟಕ್ಕೆ ಪ್ರಪಾತಕ್ಕೆ ಬೀಳುತ್ತದೆ ಎಂದ್ರೆ ನಮ್ಮ ಆಡಳಿತ ವ್ಯವಸ್ಥೆಗಳು ಎಷ್ಟು ಅಮಾನವೀಯವಾಗಿದೆ ಎನ್ನುವುದನ್ನು ಊಹಿಸಬಹುದು..ಸಾರಿಗೆ ಕಾರ್ಮಿಕರ ಸಮಸ್ಯೆಗಳು ಯಾರಿಗೂ ಬೇಡವಾಗಿದೆ..ಇಂಥಾ ಪರಿಸ್ತಿತಿಯಲ್ಲಿ ಏನ್ ಮಾಡಬೇಕೆನ್ನುವುದೇ ಗೊತ್ತಾಗುತ್ತಿಲ್ಲ ಎನ್ನುತ್ತಾರೆ.

ಪ್ರಕಾಶ್ ಬಾಗೇವಾಡಿ ವಿರುದ್ಧದ ದೋಷಾರೋಪಣೆಗೆ ಯಾವುದೇ ಸಾಕ್ಷ್ಯಗಳಿಲ್ಲವೆಂದು ಪೊಲೀಸರು ನೀಡಿದ ವರದಿ
ಪ್ರಕಾಶ್ ಬಾಗೇವಾಡಿ ವಿರುದ್ಧದ ದೋಷಾರೋಪಣೆಗೆ ಯಾವುದೇ ಸಾಕ್ಷ್ಯಗಳಿಲ್ಲವೆಂದು ಪೊಲೀಸರು ನೀಡಿದ ವರದಿ

ಸಾರಿಗೆ ಕಾರ್ಮಿಕರ ಬದುಕುಗಳನ್ನು ಮೇಲಾಧಿಕಾರಿಗಳು ನಾರಕೀಯಗೊಳಿಸಿರುವುದು ದುಃಖಕರ ಹಾಗೂ ಖಂಡನಾರ್ಹ. ಕಾರ್ಮಿಕರನ್ನು ಪಶುಗಳೆನ್ನುವ ರೇಂಜ್ ನಲ್ಲಿ ಅಧಿಕಾರಿಗಳು ಟ್ರೀಟ್ ಮಾಡುತ್ತಿದ್ದಾರೆ.ಇವರಿಗೆಲ್ಲಾ ಮನುಷ್ಯತ್ವ ಇದೆ ಎಂದೆನಿಸುವುದಿಲ್ಲ. ಸಚವ ಶ್ರೀರಾಮುಲು ಅವರು ಇಂಥಾ ಅಧಿಕಾರಿಗಳನ್ನು ಶಿಕ್ಷಿಸಬೇಕಾದ ಅವಶ್ಯಕತೆ ಇದೆ..ಇಲ್ಲವಾದಲ್ಲಿ ಅಧಿಕಾರಿಗಳು ಲಂಗುಲಗಾಮಿಲ್ಲದಂತಾಗುತ್ತಾರೆ.ಪರಿಸ್ಥಿತಿ ಹೀಗೆಯೇ ಮುಂದುವರುದ್ರೆ ಆತ್ಮಹತ್ಯೆ ಸರಣಿ ಶುರುವಾಗೋ ಆತಂಕವಿದೆ.ಇದನ್ನು ಶ್ರೀರಾಮುಲು ಅರ್ಥೈಸಿಕೊಳ್ಳಬೇಕಿದೆ ಎನ್ನುತ್ತಾರೆ ಕಾರ್ಮಿಕ ಮುಖಂಡ ಆನಂದ್.

ಈ ಬಗ್ಗೆ ಸಾರಿಗೆ ಸಚಿವರನ್ನು ಸಂಪರ್ಕಿಸುವ ಪ್ರಯತ್ನ ಮಾಡಲಾಯಿತಾದ್ರು ಸಾಹೇಬ್ರು ಎಂದಿನಂತೆ ನಾಟ್ ರೀಚಬಲ್..ಒಲ್ಲದ ಮನಸಿನಿಂದ ಸಾರಿಗೆ ಖಾತೆಯನ್ನು ಒಪ್ಪಿಕೊಂಡ ಅವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯವ್ಹೇಳಿ..

ಸಚಿವ ಶ್ರೀರಾಮುಲು ಅವರು ಕಾರ್ಮಿಕರು ಹಾಗು ಅಧಿಕಾರಿಗಳ ನಡುವೆ ಸಮನ್ವಯ ಸೃಷ್ಟಿಸುವ ಮಾತನ್ನು ಆಡುತ್ತಲೇ ಬಂದಿದ್ದಾರೆ.ಆದ್ರೆ ಅವರ ಮಾತಿಗೆ ಕಿಮ್ಮತ್ತಿನ ಬೆಲೆಯನ್ನೂ ನೀಡುತ್ತಿಲ್ಲ ಎನ್ನುವುದನ್ನು ಈ ಒಂದು ಪ್ರಕರಣ ಪ್ರೂವ್ ಮಾಡಿದೆ..

ಇವತ್ತು ಪ್ರಕಾಶ್ ಬಾಗೇವಾಡಿ ಎನ್ನುವಂಥ ಒಬ್ಬ ಸಾರಿಗೆ ಕಾರ್ಮಿಕ ಕಿಡ್ನಿ ಮಾರಾಟಕ್ಕಿದೆ ಎನ್ನುತ್ತಾನೆ..ನಾಳೆ ಇನ್ನೊಬ್ಬ ತನ್ನ ಅಂಗಾಂಗಳು ದಾನಕ್ಕಿವೆ ಸಂಪರ್ಕಿಸಿ ಎನ್ನಬಹುದಲ್ವೇ..ಮತ್ತೊಂದು ದಿನ ಸಾರಿಗೆ ಕಾರ್ಮಿಕ ಕುಟುಂಬಗಳು ನಮಗೆ ಬದುಕೋ ಮನಸಿಲ್ಲ..ನಮಗೆ ದಯಾಮರಣ ಕೊಟ್ಟುಬಿಡಿ ಎಂದು ಅಂಗಲಾಚುವ ಸನ್ನಿವೇಶ ಎದುರಾದರೂ ಆಶ್ಚರ್ಯವಿಲ್ಲ ಎನಿಸುತ್ತದೆ.

Spread the love
Leave A Reply

Your email address will not be published.

Flash News