Breakinglock downMoreScrollTop NewsUncategorizedಕ್ರೈಮ್ /ಕೋರ್ಟ್ಜಿಲ್ಲೆಫೋಟೋ ಗ್ಯಾಲರಿಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP)ರಾಜಕೀಯರಾಜ್ಯ-ರಾಜಧಾನಿ

SHAME..! SHAME..! BBMP, POOJA FOR DEADLY POTHOLES:ಶೇಮ್..ಶೇಮ್ BBMP ,ರಸ್ತೆಗುಂಡಿಗಳಿಗೆ “ಪೂಜೆ”-ಕಮಿಷನರ್ ಗೌರವ್ ಗುಪ್ತಾಗೆ “ಪಿಂಡ”ಪ್ರಧಾನ..

 ಬೆಂಗಳೂರು:ಇದೊಂದು ರೀತಿಯ ವಿಶಿಷ್ಟ ಪ್ರತಿಭಟನೆ..ರಾಜಧಾನಿಯಲ್ಲಿ ನಡೆದ  ಈ ಪ್ರತಿಭಟನೆ ತನ್ನ ಉದ್ದೇಶವಷ್ಟೇ ಅಲ್ಲ,ವೈಶಿಷ್ಟ್ಯತೆಯಿಂದಲೂ ಎಲ್ಲರ ಗಮನ ಸೆಳೆಯಿತು.ರಸ್ತೆ ಗುಂಡಿಗಳ ವಿಚಾರದಲ್ಲಿ ಸುಳ್ಳು ಹೇಳುತ್ತಾ, ಅಪರಾತಪರ ಲೆಕ್ಕ ನೀಡಿ ಹಣ ಲೂಟಿ ಮಾಡುತ್ತಿರುವ ಬಿಬಿಎಂಪಿ ಆಡಳಿತಶಾಹಿ ವಿರುದ್ಧ ಸಿಡಿದೆದ್ದ ನಾಗರಿಕರು ಸಂಘಟನೆ ಜತೆ ವಿಶಿಷ್ಟ ಪ್ರತಿಭಟನೆ ನಡೆಸಿದರು.

ಯಲಹಂಕದ ಜುಡಿಷಿಯಲ್ ಲೇ ಔಟ್ ನಲ್ಲಿರುವ ಸಾಮಾಜಿಕ ಕಾರ್ಯಕರ್ತ ಹಾಗೂ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಮುಖಂಡ ಎಚ್.ಎಂ.ವೆಂಕಟೇಶ್ ಅವರ ನೇತೃತ್ವದಲ್ಲಿ ರಾಷ್ಟ್ರರಕ್ಷಣ ಸಮಿತಿ ಕಾರ್ಯಕರ್ತರು ಇಂದು ಬೆಟ್ಟಹಳ್ಳಿ ಯಿಂದ ವಿದ್ಯಾರಣ್ಯಪುರಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಲ್ಲಿರುವ ಗುಂಡಿಗಳನ್ನೇ ಪ್ರಧಾನವಾಗಿಟ್ಟುಕೊಂಡು ಪೂಜೆ ನೆರವೇರಿಸಿದರು.

ರಾಜಧಾನಿಯಲ್ಲಿ ಯಮಸ್ವರೂಪಿ ಗುಂಡಿಗಳು ಹೆಚ್ಚುತ್ತಿದ್ದರು ಬಿಬಿಎಂಪಿ ಎಚ್ಚೆತ್ತುಕೊಳ್ಳದ ಹಿನ್ನಲೆಯಲ್ಲಿ ಇದಕ್ಕೆ ಕಾರಣವಾದ ಭ್ರಷ್ಟ ಅಧಿಕಾರಿಗಳ ವಿರುದ್ಧ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ  ಗುಂಡಿಗಳ ಲೆಕ್ಕದಲ್ಲಿ ಹಣ ಲೂಟಿ ಮಾಡುತ್ತಿರುವವರ ವಿರುದ್ದ ಘೋಷಣೆ ಕೂಗಿ ಪೂಜೆ ಸಲ್ಲಿಸುವ ಮೂಲಕ ತಮ್ಮ ಆಕ್ರೋಶವನ್ನು ವಿಶಿಷ್ಟ ರೀತಿಯಲ್ಲಿ ವ್ಯಕ್ತಪಡಿಸಿತು. ನಾಗರಿಕರ ತೆರಿಗೆ ಹಣವನ್ನೇ ಲೂಟಿ ಮಾಡುತ್ತಿರುವ ಬಿಬಿಎಂಪಿ ಆಡಳಿತ ವ್ಯವಸ್ಥೆಯ ಧೋರಣೆಯನ್ನು ಖಂಡಿಸಲಾಯಿತು.

ಗುಂಡಿಮುಕ್ತಗೊಳಿಸಿದ್ದೇವೆ ಎನ್ನುವ ಬೆನ್ನಲ್ಲೇ ಹೆಚ್ಚುತ್ತಿರುವ  ಗುಂಡಿಗಳಿಗೆ ಪೂಜೆ ಸಲ್ಲಿಸಿ ಗಮನ ಸೆಳೆದ ಪ್ರತಿಭಟನಾಕಾರರು. ಬಿಬಿಎಂಪಿಯ ಆಯುಕ್ತರಿಗೆ ಪಿಂಡಪ್ರಧಾನ ಮಾಡಿದರು.ಯಲಹಂಕ ವಲಯ ಜಂಟಿ ಆಯುಕ್ತ ಡಾ.ಅಶೋಕ್, ಚೀಫ್ ಇಂಜಿನಿಯರ್ ಹೆಸರಲ್ಲೂ ಪಿಂಡ ವಿಸರ್ಜನೆ ಮಾಡಲಾಯಿತು.ಬಿಬಿಎಂಪಿ ಎಚ್ಚೆತ್ತುಕೊಳ್ಳಲು ಇನ್ನೆಷ್ಟು ರೀತಿಯ ಹೋರಾಟಗಳನ್ನು ಮಾಡಬೇಕೋ ಗೊತ್ತಾಗುತ್ತಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ಯಪಡಿಸಿದರು.

Spread the love

Related Articles

Leave a Reply

Your email address will not be published.

Back to top button
Flash News