POLICE INPECTOR NO MORE…ಹೃದಯಾಘಾತಕ್ಕೆ ಜನಾನುರಾಗಿ ಇನ್ಸ್ ಪೆಕ್ಟರ್ ಮಹಮ್ಮದ್ ರಫೀಕ್ ಬಲಿ…ರಫೀಕ್ ಅಗಲಿಕೆಗೆ ಕಂಬನಿ ಮಿಡಿದ ಇಲಾಖೆ..

ಒಡೆಯ" ನ ಅಗಲಿಕೆಯಿಂದ ಕಂಗಾಲಾದ "ಭೀಮಾ"..

0

ಬೆಂಗಳೂರು:ಕೆಆರ್ ಪುರಂ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಹಮ್ಮದ್ ರಫೀಕ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇಂದು ಬೆಳಗ್ಗೆ ಸ್ನಾನಕ್ಕೆ ತೆರಳುವ ಸಂದರ್ಭದಲ್ಲಿ ಕಾಣಿಸಿಕೊಂಡ ಉಸಿರಾಟದ ಸಮಸ್ಯೆಯಿಂದ ಅವರು ಸಾವನ್ನಪ್ಪಿದ್ದಾರೆಂದು ಹೇಳಲಾಗಿದೆ.

ಪೋಲಿಸ್ ಇಲಾಖೆಯಲ್ಲಿ ಜನಾನುರಾಗಿ ಅಧಿಕಾರಿ ಎಂದೇ ಕರೆಸಿಕೊಂಡಿದ್ದ ಮೊಹಮ್ಮದ್ ರಫೀಕ್ ಅವರಿಗೆ  ಇಂದು ಬೆಳಿಗ್ಗೆ ಸ್ನಾನಕ್ಕೆ ತೆರಳುವ ಸಂದರ್ಭದಲ್ಲಿ ಎದೆ  ನೋವು ಕಾಣಿಸಿಕೊಂಡು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣಕ್ಕೆ ಗಾಬರಿಗೊಂಡ ಮನೆಯ ಸದಸ್ಯರು ವೈದ್ಯರನ್ನು ಕರೆಯಿಸಿದ್ದಾರೆ. ವೈದ್ಯರ ಬಂದು ಪರೀಕ್ಷಿಸಿದಾಗ ಅದಾಗಲೇ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತೆನ್ನಲಾಗಿದೆ.

ಇಲಾಖೆಯಲ್ಲಿ ಕೇವಲ ಓರ್ವ ಅಧಿಕಾರಿ ಆಗದೆ ಎಲ್ಲರ ಜೊತೆಗೆ ಉತ್ತಮವಾದ ಒಡನಾಟವನ್ನು ಹೊಂದಿದ್ದ ಮಹಮ್ಮದ್ ರಫೀಕ್ ಅವರು ಕಲೆ ಸಾಹಿತ್ಯ ಸಂಸ್ಕೃತಿ ಸೇರಿದಂತೆ ಸಾಕಷ್ಟು ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದರು ಎನ್ನಲಾಗಿದೆ. ಲಾಕ್ ಡೌನ್ ಸಂದರ್ಭದಲ್ಲಿ ಕಸಾಯಿಖಾನೆ ಪಾಲಾಗಲಿದ್ದ ಕರುವನ್ನು ರಕ್ಷಿಸಿ ಅದಕ್ಕೆ “ಭೀಮಾ”ಎನ್ನುವ ಹೆಸರಿಟ್ಟು ಕಾಯುವ ಮೂಲಕ‌  ಒಬ್ಬ ಒಳ್ಳೆಯ ಪ್ರಾಣಿಪ್ರಿಯ ಎಂದೂ ಕೂಡ ಮಹಮ್ಮದ್ ರಫಿಕ್ ಕರೆಸಿಕೊಂಡಿದ್ದರು.

ಮಹಮ್ಮದ್ ರಫೀಕ್ ಅವರ ಸಾವಿಗೆ ಕಂಬನಿ ಮಿಡಿದಿರುವ ಪೋಲಿಸ್ ಇಲಾಖೆ ಸಾವಿಗೆ ದಿಗ್ಭ್ರಾಂತಿ ವ್ಯಕ್ತಪಡಿಸಿದೆ ಪೋಲಿಸ್ ಕಮಿಷನರ್ ಕಮಲ್ ಪಂತ್, ಡಿಜಿ ಪ್ರವೀಣ್ ಸೂದ್ ಸೇರಿದಂತೆ ಅನೇಕ ಪೊಲೀಸ್ ಅಧಿಕಾರಿಗಳು ಅವರ ಸಾವಿಗೆ ಸಂತಾಪ‌ ಸೂಚಿಸಿದ್ದಾರೆ.

ಸಾವಿನ ದವಡೆಯಲ್ಲಿದ್ದ ತನ್ನನ್ನು ರಕ್ಷಿಸಿ ತನಗೆ ಮರುಹುಟ್ಟು ನೀಡಿದ ಒಡೆಯನ ಅಗಲಿಕೆಯಿಂದ ಭೀಮ ಕೂಡ ಚಿಂತಾಕ್ರಾಂತನಾಗಿದ್ದಾನೆ.ಠಾಣೆಯ ಸುತ್ತೆಲ್ಲ ಸ್ವಚ್ಚಂದವಾಗಿ ಓಡಾಡಿಕೊಂಡಿದ್ದ ತನ್ನನ್ನು ಪ್ರತಿ ಹಂತದಲ್ಲೂ ರಕ್ಷಿಸಿದ್ದ  ಒಡೆಯನಿಲ್ಲದೆ  ದಿಕ್ಕು ತೋಚದಂತಾಗಿದ್ದಾನೆ.

Spread the love
Leave A Reply

Your email address will not be published.

Flash News