SAVE BMTC…SAVE EMPLYOEES..407 CORES LOAN:”ಸಾಲ”ದ ಹೊರೆಗೆ BMTC ಸಂಪೂರ್ಣ “ಬರ್ಬಾದ್”. . ಈ .ಮುಳುಗುವ ಹಡಗಿಗೆ ‘”ನಾವಿಕ” ನಾಗಲು “ಸರ್ಕಾರ”ವೂ ಸಿದ್ಧವಿಲ್ಲವಂತೆ..?! ಕಾರ್ಮಿಕ-ಸಿಬ್ಬಂದಿ ಕಥೆಯೋ ಹರೋಹರ…!?

ಬಿಎಂಟಿಸಿ ಒಂದರಲ್ಲೇ 40 7.5 5 ಕೋಟಿ ಸಾಲ,....57ಕೋಟಿ ಬಡ್ಡಿ......,230 ಕೋಟಿ ಸಾಲ ತೀರಿಸಲು ಟಿಟಿಎಂಸಿ ಅಡಮಾನ ..346 ಕೋಟಿ PF....... ,151 ಕೋಟಿ‌ LIC ಹಣ ಪಾವತಿಸದೆ ಬಾಕಿ..

0

ಬೆಂಗಳೂರು : ಬಿಎಂಟಿಸಿ ವಿಷಯದಲ್ಲಿ ಏನಾಗಬಾರದಿತ್ತೋ,ಅದೇ ಆಗುವಂತಹ ಆತಂಕ ಗೋಚರಿಸುತ್ತಿದೆ. ಬಿಎಂಟಿಸಿಯನ್ನು ಆ ಹರಿಹರ ಬ್ರಹ್ಮ ಬಂದರೂ ರಕ್ಷಿಸಲು ಸಾಧ್ಯವಿಲ್ಲವೇನೋ ಎನ್ನುವಂಥ ಸ್ಥಿತಿ ನಿರ್ಮಾಣವಾಗಲು ಕಾರಣ ದಿನೇದಿನೆ ಆರ್ಥಿಕವಾಗಿ ಶೋಚನೀಯವಾಗುತ್ತಿರುವ ಅದರ ಸ್ಥಿತಿ.

ಹೌದು ಬಿಎಂಟಿಸಿಯನ್ನು ಕಾಡುತ್ತಿರುವ ಆರ್ಥಿಕ ನಷ್ಟದ ಸನ್ನಿವೇಶ ಎಲ್ಲೋ ಒಂದು ಕಡೆ ಅದು ಮುಳುಗುವ ಹಡಗು ಆಗುತ್ತಿದೆಯೇ ಎನ್ನುವಂಥ ಅನುಮಾನವನ್ನು ಸೃಷ್ಟಿಸುತ್ತಿದೆ. ದಿನೇ ದಿನೇ ಅದರ ಆರ್ಥಿಕ ಹೊರೆ ಹೆಚ್ಚಾಗುತ್ತಿದ್ದು ಸರ್ಕಾರ ಯಾವುದೇ ರೀತಿಯಲ್ಲೂ ಅದಕ್ಕೆ ಪುನಶ್ಚೇತನ ಕೊಡುವಂತಹ ಕೆಲಸವನ್ನು ಮಾಡುತ್ತಿಲ್ಲ. ಮಾಸಿಕ ಸಂಬಳವನ್ನು ಕೊಡಲು ಸಾಧ್ಯವಾಗದೆ ಅರ್ಧ ಸಂಬಳವನ್ನು ಕೊಡುವಂತಹ ಸ್ಥಿತಿ ಸರ್ಕಾರದ್ದಾಗಿದೆ ಎನ್ನೋದರಲ್ಲೇ ಅರ್ಧ ಮುಳುಗುತ್ತಿರುವ ಬಿಎಂಟಿಸಿ ಸಂಪೂರ್ಣ ಮುಳುಗೋಗುತ್ತೋ ಎನ್ನುವ ಅನುಮಾನ ದಟ್ಟೈಸಲು ಕಾರಣವಾಗುತ್ತಿದೆ.

ಸಾಲದಿಂದ ನಲುಗಿ ಹೋಗುತ್ತಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ದಯನೀಯ ಪರಿಸ್ಥಿತಿಗೆ ಕಾರಣ ಯಾರು ..? ಸಾರಿಗೆ ಅಧಿಕಾರಿಗಳಾ..? ಅಥವಾ ಸಾರಿಗೆ ಸಚಿವರ..? ಅಥವಾ ಸರ್ಕಾರನಾ..? ಎನ್ನುವಂಥ ಅನುಮಾನ ಕಾಡುತ್ತಿರುವ ಸಂದರ್ಭದಲ್ಲಿಯೇ ಬಿಎಂಟಿಸಿಯ ಅಳಿವು ಉಳಿವು ಅವಲಂಭಿಸಿರುವ ” ಆರ್ಥಿಕತೆ”ಯ ಬಗ್ಗೆ ಸಾಕಷ್ಟು ಆತಂಕ ಪಡುವಂಥ ಸ್ಥಿತಿ ಈಗ ನಿರ್ಮಾಣವಾಗಿದೆ.

ಆಡಳಿತ ವೈಫಲ್ಯ,ಅತಿಯಾದ ದುಂದು ವೆಚ್ಚ.. ನಿಯಂತ್ರಣಕ್ಕೆ ಬಾರದ ಅಕ್ರಮಗಳು… ಬಿಎಂಟಿಸಿಯನ್ನು ಸಂಪೂರ್ಣವಾಗಿ ದಿವಾಳಿ ಸ್ಥಿತಿಗೆ ತಂದು ತಲುಪಿಸಿವೆ ಎನ್ನುವುದರಲ್ಲಿ‌ ಅನುಮಾನವಿಲ್ಲ. ಹಿಂದಿನ ಸಾರಿಗೆ ಸಚಿವರಾಗಿದ್ದ ಲಕ್ಷ್ಮಣ ಸವದಿಯವರ ಅವಧಿಯಲ್ಲೇ ಅಪಾರ ಸಾಲವಾಗಿತ್ತೆನ್ನುವ ಮಾಹಿತಿ ಜತೆಗೆ ಮಾಡಿಕೊಂಡಿರುವ ಸಾಲ ತೀರಿಸಲು ಬಿಎಂಟಿಸಿಯನ್ನೇ ಮಾರಬೇಕಾಗುತ್ತಾ ಎನ್ನುವ ಅನುಮಾನ ಮೂಡುವಷ್ಟರ ಮಟ್ಟಿಗೆ ಸಂಸ್ಥೆ ದಿವಾಳಿಯಾಗಿರುವ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

ಯಾರೇ ಹೊಸ ಅಧ್ಯಕ್ಷರು ಬಂದರೂ, ಯಾರೇ ಬಿಎಂಟಿಸಿಗೆ ಎಂಡಿಯಾಗಿ ಕುರ್ಚಿಯನ್ನು ಅಲಂಕರಿಸಿದರೂ ಸಂಸ್ಥೆಯ ಉದ್ಧಾರಕ್ಕೆ ತಲೆಕೆಡಿಸಿಕೊಂಡು ಕೆಲಸ ಮಾಡಿದ್ದು ಕಡಿಮೆ ಎನ್ನುವುದು ದಿನೇ ದಿನೇ ಹೆಚ್ಚುತ್ತಿರುವ‌ ಹಾಗೂ ಹೆಚ್ಚಿರುವ ಸಾಲದ ಹೊರೆಯ ಅಂಕಿಅಂಶಗಳೇ ಸಾಕ್ಷಿ ಒದಗಿಸುತ್ತವೆ. ಬಿಎಂಟಿಸಿ ಸೇರಿದಂತೆ ಸಾರಿಗೆಯ 4 ನಿಗಮಗಳ ಒಳ ಹೊರಗನ್ನು ಆರಂಭದಿಂದಲೂ ವರದಿ ಮಾಡುತ್ತಾ ಬಂದಿರುವ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ದೊರೆತಿರುವ ಮಾಹಿತಿಗಳನ್ನು ಕ್ರೋಡೀಕರಿಸಿ ನೋಡಿದಾಗ ಸಂಸ್ಥೆ ಬಹುಶಃ ಬದುಕುಳಿಯುವ ಸಾಧ್ಯತೆಗಳು ಕಡಿಮೆ ಎನಿಸುತ್ತದೆ. ಸರ್ಕಾರ ಮನಸ್ಸು ಮಾಡಿದರೂ ಅದು ಕಷ್ಟಸಾಧ್ಯವಾಗಬಹುದೇನೋ ಎನಿಸುತ್ತದೆ.ಅಂದ್ಹಾಗೆ ಸಧ್ಯಕ್ಕೆ ಬಿಎಂಟಿಸಿಯ ಸಾಲದ ಹೊರೆಯ‌ ಸ್ಥಿತಿಗತಿ ಹೇಗಿದೆ ಎನ್ನುವುದರ ಬಗ್ಗೆ ಗಮನಹರಿಸಿದರೆ ಆತಂಕ ಹೆಚ್ಚಾಗುತ್ತದೆ.
2019-20 ರಲ್ಲಿ 160 ಕೋಟಿ ಸಾಲವನ್ನು ಹೊರೆಯಲ್ಲಿ ಸಿಲುಕಿದ್ದ ಬಿಎಂಟಿಸಿ 2020-21 ರಲ್ಲಿ 230 ಕೋಟಿ ಸಾಲದ ಪ್ರಪಾತಕ್ಕೆ ಬೀಳುತ್ತಿದೆ.2019-20,2020-21  ರ ಅವಧಿಯಲ್ಲಿ ಮಾಡಿದ ಸಾಲನೆ ಬರೋಬ್ಬರಿ 40 7.5 5 ಕೋಟಿ ಸಾಲ ಎನ್ನಲಾಗಿದೆ. ಅಂದಹಾಗೆ ಬಿಎಂಟಿಸಿ ಸದ್ಯಕ್ಕೆ 40 7ಕೋಟಿಯಷ್ಟು ಸಾಲದ ಹೊರೆಯನ್ನು ತನ್ನ ಮೇಲೆ ಹೊತ್ತುಕೊಂಡಿದೆ. ಅದಕ್ಕಿಂತ ಮತ್ತೊಂದು ದೊಡ್ಡ ಆಘಾತಕರ ಸಂಗತಿ ಅಂದ್ರೆ 40 7ಕೋಟಿ ಸಾಲಕ್ಕೆ ಅದು ಪಾವತಿಸುತ್ತಿರುವ ಬಡ್ಡಿ. 57ಕೋಟಿಯಷ್ಟು ಬಡ್ಡಿಯನ್ನು ಪ್ರತಿ ಅದು ಪಾವತಿಸುತ್ತಿದೆ ಎನ್ನುವ ಮತ್ತೊಂದು ಮಾಹಿತಿ ಹೊರಬಿದ್ದಿದೆ.

ತನ್ನಲ್ಲೇ ಅಪಾರವಾದ ಆಸ್ತಿಯನ್ನು ಹೊಂದಿದ್ದರು ಕೂಡ, ಬಿಎಂಟಿಸಿ ತನ್ನಲ್ಲಿರುವ ಕೆಲವೊಂದು ಆಸ್ತಿಗಳನ್ನು ಅಡಮಾನ ಇಡುವಂತಹ ಸಂಸ್ಕೃತಿಯಿಂದ ಹೊರ ಬಂದಿಲ್ಲ. ಇದಕ್ಕೆ ಸ್ಪಷ್ಟ ನಿದರ್ಶನ ಬಿಎಂಟಿಸಿಯ ಶಾಂತಿನಗರ ಟಿಟಿಎಂಸಿ.ತಾನು ಮಾಡಿಕೊಂಡಿರುವ ಸಾಲದ ಪೈಕಿ 230 ಕೋಟಿ ಸಾಲ ತೀರಿಸಲು ಅದು ಶಾಂತಿನಗರದಲ್ಲಿರುವ ಟಿಟಿಎಂಸಿಯಲ್ಲಿ ಅಡಮಾನ ಇಟ್ಟಿರುವುದು ಎಲ್ಲರೂ ಕೂಡ ಗೊತ್ತಿರುವ ಸಂಗತಿಯೇ. ಇದರ ಬೆನ್ನಲ್ಲೇ ಮತ್ತಷ್ಟು ಆಸ್ತಿಗಳನ್ನೂ ಅಡ ಇಡೊಕ್ಕೆ ಪ್ಲ್ಯಾನ್ ನಡೀತಿದೆ ಎನ್ನುವ ಮಾಹಿತಿ ಕೂಡ ಇದೆ.

151 ಕೋಟಿ LIC  ಬಾಕಿ : ಅದಷ್ಟೇ ಅಲ್ಲ ಎಲ್ ಐಸಿ ಯನ್ನೂ ಪಾವತಿಸದೆ ಕಾರ್ಮಿಕರ ಭವಿಷ್ಯ ನಿಧಿಯೂ ಅತಂತ್ರವಾಗೊಕ್ಕೆ ಆಡಳಿಮಂಡಳಿ ಕಾರಣವಾಗುತ್ತಿದೆ. ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಸಿಕ್ಕಿರುವ ಮಾಹಿತಿ ಪ್ರಕಾರ
ವರ್ಷ.            ಪಾವತಿಸದೆ ಬಾಕಿ‌ ಉಳಿಸಿಕೊಂಡ ಹಣ
*2017-18.     34.25 ಕೋಟಿ
*2018-19      31.25 ಕೋಟಿ
*2019-20.     30.74 ಕೋಟಿ.
*2020-21.      46.77 ಕೋಟಿ.

ಒಟ್ಟು 151 ಕೋಟಿ

2017-18 ರಲ್ಲಿ 34.25 ಕೋಟಿ ಪಾವತಿಸಬೇಕಿತ್ತು.2018-19 ರಲ್ಲಿ 31.47 ಕೋಟಿ ಪಾವತಿಸಬೇಕಿತ್ತು.ಇನ್ನು‌ 2019-20 ರಲ್ಲಿ 30.74 ಕೋಟಿ,2020-21 ರಲ್ಲಿ ಅತೀ ಹೆಚ್ಚು ಎನ್ನಬಹುದಾದ 46.77 ಕೋಟಿ ಹಾಗೂ 2020-21 ರಲ್ಲಿ ಈವರೆಗೂ 7.94 ಕೋಟಿ ಬಾಕಿ ಉಳಿಸಿಕೊಂಡಿದೆ ಎನ್ನುವುದು ಆರ್ ಟಿ ಐ ನಲ್ಲೇ ತಿಳಿದುಬಂದಿದೆ.

346 ಕೋಟಿ, 25 ಲಕ್ಷದ 25 ಸಾವಿರದ 865 ರೂ ಪಿಎಫ್ ಬಾಕಿ : ಬಿಎಂಟಿಸಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರ ಪಿಎಫ್ ಹಣಕ್ಕೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗಳಿಗೆ ನೀಡಿರುವಂಥ ಉತ್ತರವೂ ಕೂಡ ಅತ್ಯಂತ ಆಘಾತಕಾರಿಯಾಗಿದೆ ಫೆಬ್ರವರಿ 2ಸಾವಿರದ ಇಪ್ಪತ್ತರ ಮಾಯೆಗೆ ಅನ್ವಯವಾಗುವಂತೆ 346 ಕೋಟಿ, 25 ಲಕ್ಷದ 25 ಸಾವಿರದ 865 ರೂ ಬಾಕಿ ಉಳಿಸಿಕೊಳ್ಳಲಾಗಿದೆ ಎಂದು‌ ಮಾಹಿತಿ ನೀಡಲಾಗಿದೆ.

ಕಳೆದ 2ವರ್ಷಗಳಿಂದ ಬಿಎಂಟಿಸಿಯ ಪರಿಸ್ಥಿತಿ ಎಷ್ಟು ದಯನೀಯವಾಗಿದೆಯೆಂದರೆ, ಸಿಬ್ಬಂದಿಗೆ ಕೊಡಲು ಸಂಬಳವಿಲ್ಲ..ಸ್ಪೇರ್ ಪಾರ್ಟ್ಸ್ ಗಳನ್ನು ಕೊಳ್ಳಲು ಯಾವುದೇ ಆರ್ಥಿಕ ಮೂಲವಿಲ್ಲ..ಸಂಪನ್ಮೂಲ ಕ್ರೋಡೀಕರಣ ವಂತೂ ಬಿಎಂಟಿಸಿಯಲ್ಲಿ ಸಾಧ್ಯ ಆಗುತ್ತಲೇ ಇಲ್ಲ..ಈ ಕಾರಣದಿಂದಲೇ ಬಿಎಂಟಿಸಿಯನ್ನು ಮುಳುಗುವ ಹಡಗು ಎಂತಲೇ ಬಣ್ಣಿಸಲಾಗುತ್ತಿದೆ. ಈ ಮುಳುಗುವ ಹಡಗನ್ನು ಸರ್ಕಾರ ರಕ್ಷಿಸುತ್ತದೆಯೇ..ರಕ್ಷಿಸುವುದು ಸಾಧ್ಯವಾಗಿದ್ದರೆ ಅದು ಹೇಗೆ ಎನ್ನುವ ಪ್ರಶ್ನೆ ಕಾಡೋದಂತೂ ಸಹಜ..

Spread the love
Leave A Reply

Your email address will not be published.

Flash News