Breakinglock downMoreScrollTop NewsUncategorizedಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC-KSRTC)ರಾಜಕೀಯರಾಜ್ಯ-ರಾಜಧಾನಿ

SHOCK..SHOCK TO BMTC 90 DRIVERS: Electric ಬಸ್ ಗಳ “IN” ಗಾಗಿ BMTC 90 ಚಾಲಕರು “OUT”…3 ಡಿಪೋಗಳ ಚಾಲಕರಿಗೆ ಬಲವಂತದ ಟ್ರಾನ್ಸ್ ಫರ್..?!

ಎಲೆಕ್ಟ್ರಿಕಲ್ ಬಸ್ ಗಳು ಎಂಟ್ರಿ ಹೊಡೆಯುತ್ತಿರುವುದರಿಂದ ನಿಮ್ಮಗಳ ಅವಶ್ಯಕತೆ ನಮಗಿಲ್ಲ..ನಿಮ್ಮನ್ನು ಬೇರೆಡೆ ವರ್ಗಾಯಿಸುತ್ತಿದ್ದೇವೆ..ಚಕಾರವೆತ್ತದೆ ಹೋಗಿ ಎನ್ನುವ ಒಕ್ಕಣೆಯಲ್ಲಿ ಬಿಎಂಟಿಸಿ ಮುಖ್ಯ ಕಚೇರಿಯಿಂದ ಹೊರಬಿದ್ದಿರುವ ಸುತ್ತೋಲೆ ಪ್ರತಿ
ಎಲೆಕ್ಟ್ರಿಕ್ ಬಸ್ ಗಳು ಎಂಟ್ರಿ ಹೊಡೆಯುತ್ತಿರುವುದರಿಂದ ನಿಮ್ಮಗಳ ಅವಶ್ಯಕತೆ ನಮಗಿಲ್ಲ..ನಿಮ್ಮನ್ನು ಬೇರೆಡೆ ವರ್ಗಾಯಿಸುತ್ತಿದ್ದೇವೆ..ಚಕಾರವೆತ್ತದೆ ಹೋಗಿ ಎನ್ನುವ ಒಕ್ಕಣೆಯಲ್ಲಿ ಬಿಎಂಟಿಸಿ ಮುಖ್ಯ ಕಚೇರಿಯಿಂದ ಹೊರಬಿದ್ದಿರುವ ಸುತ್ತೋಲೆ ಪ್ರತಿ

ಬೆಂಗಳೂರು:ವಿಷಯ ಪಕ್ಕಾ ಆಯ್ತು ಬಿಡಿ..ಸಾರಿಗೆ ಕಾರ್ಮಿಕರ ವಿಚಾರದಲ್ಲಿ ಸರ್ಕಾರ ಹಾಗೂ ನಿಗಮಗಳ ಆಡಳಿತಶಾಹಿಯ ಮನಸ್ಸಿನೊಳಗೆ ಏನಿದೆ ಎನ್ನೋದು ಖಾತ್ರಿ ಆಯ್ತು…ಸಾರಿಗೆ ಕಾರ್ಮಿಕರ ಹಿತ ಕಾಯುತ್ತೇವೆ..ಅವರ ಜೀವನಗಳನ್ನು ಹಳಿಗೆ ತರುತ್ತೇವೆ ಎಂದು ಸಚಿವ ಶ್ರೀ ರಾಮುಲು ಹೇಳಿದ್ದೆಲ್ಲಾ ಸುಳ್ಳು..ಬಿಟ್ಟಿದ್ದೆಲ್ಲಾ ಬೊಗಳೆ ಎನ್ನೋದಕ್ಕೆ ಇದಕ್ಕಿಂತ ದೊಡ್ಡ ನಿದರ್ಶನ ಬೇಕೆನಿಸುವುದಿಲ್ಲ.. ದಶಕಗಳವರೆಗೆ ರಕ್ತ ಬೆವರಯ ಸುರಿಸಿ,ತಮ್ಮ ಜೀವವನ್ನೆಲ್ಲಾ ತೇಯ್ದು ಬದುಕಿನ ಅರ್ಧ ಕಾಲವನ್ನು ಇಲ್ಲಿಯೇ ಕಳೆದು ವಿಷ ಘಳಿಗೆಯಲ್ಲಿ ದುಡುಕಿದ ತಪ್ಪಿಗೆ  ವಜಾಗೊಂಡ..ಅಮಾನತುಗೊಂಡ ಕಾರ್ಮಿಕರ ಅವಶ್ಯಕತೆಯೇ ಇಲ್ಲ ಎನ್ನೋದಕ್ಕೆ ನಿಗಮದಿಂದ ಹೊರಬಿದ್ದಿರುವ ಈ ಪತ್ರಿಕಾ ಪ್ರಕಟಣೆಗಿಂತ ದೊಡ್ಡ ಸಾಕ್ಷ್ಯ ಬೇಕಿಲ್ಲ ಎನಿಸುತ್ತೆ..

ಸಾರಿಗೆ ಕಾರ್ಮಿಕರ ಪಾಲಿಗೆ ಮರಣಶಾಸನವಾಗುವಂತ ಸುತ್ತೋಲೆಯೊಂದು ಹೊರಬಿದ್ದಿದೆ.ಬಹು ನಿರೀಕ್ಷಿತ ಎಲೆಕ್ಟ್ರಿಕಲ್ ಬಸ್ ಗಳನ್ನು ಚಲಾಯಿಸುವ ಇರಾದೆ ಹೊಂದಿದ್ದ,ಆ ಮೂಲಕ ನಿಗಮದೊಳಗೆ ಎಂಟ್ರಿ ಹೊಡೆಯುವ ಆಕಾಂಕ್ಷೆ ಹೊಂದಿದ್ದ ಸಾಕಷ್ಟು ಚಾಲಕರಿಗೆ  ಅಘಾತ- ದಿಗ್ಬ್ರಮೆ ಉಂಟು ಮಾಡುವ ಒಕ್ಕಣೆಯ ಅಂಶಗಳನ್ನು ಆ ಸುತ್ತೋಲೆ ಒಳಗೊಂಡಿದೆ.ಖಾಸಗಿ ಸಂಸ್ಥೆಯೊಂದಿಗೆ ಮಾಡಿಕೊಂಡ ಒಡಂಬಡಿಕೆ ಅನ್ವಯವೇ ಖಾಸಗಿ ಬಸ್ ಗಳ ಚಾಲಕರನ್ನೇ ಬಳಸಿಕೊಳ್ಳಲಾಗುವುದು..ಇದಕ್ಕೆ ಬಿಎಂಟಿಸಿ ಚಾಲಕರ ಅವಶ್ಯಕತೆ ಇರುವುದಿಲ್ಲ ಎನ್ಮೋದು ಆ ಸುತ್ತೋಲೆಯ ಸಾರಾಂಶ.

ಮೊದಲ ಹಂತದಲ್ಲಿ 90 ಎಲೆಕ್ಟ್ರಿಕ್ ಬಸ್ಗಳು ನಿಗಮಕ್ಕೆ ಎಂಟ್ರಿ ಹೊಡೆದಿವೆ.ಇವುಗಳನ್ನು ಆರಂಭದಲ್ಲಿ ಮೆಟ್ರೋ ಫೀಡರ್ (ಸಂಪರ್ಕ) ಸೇವೆಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.ತಲಾ 30 ರಂತೆ ಈ ಬಸ್ ಗಳನ್ನು ಡಿಪೋ 08 ಡಿಪೋ  27 ಡಿಪೋ 30 ರ ಮೂಲಕ ಕಾರ್ಯಾಚರಣೆಗೊಳಿಸಲು ನಿರ್ಧರಿಸಲಾಗಿದೆ.ಬಸ್ ಗಳನ್ನು‌ ಖರೀದಿಸಿರುವ ಎನ್ ಟಿಪಿಸಿ ವಿದ್ಯುತ್ ವ್ಯಾಪಾರ್ ನಿಗಮ್ ಲಿಮಿಟೆಡ್ (NTPC VIDYUTH VYAPAAR NIGAM LIMITED)ಮೂಲಕವೇ ಖಾಸಗಿಯಾಗಿ ಚಾಲಕರನ್ನು ಬಳಸಿಕೊಳ್ಳುತ್ತಿರುವ ಸಂಗತಿಯನ್ನೂ ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.ಅಲ್ಲಿಗೆ ಎಲೆಕ್ಟ್ರಿಕಲ್ ಬಸ್ ಬಂದ್ರೆ ಡ್ಯೂಟಿ ಸಿಗುತ್ತೆ…ನಾವು ಕೆಲಸಕ್ಕೆ ಮರು ನಿಯೋಜನೆಗೊಳ್ಳಬಹುದು..ಬದುಕುಗಳು ಮೊದಲನಂತ ಆಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದ ಕಾರ್ಮಿಕರಿಗೆ  ದೊಡ್ಡ ಅಘಾತ..ಅಘಾತ..ವುಂಟಾಗಿರುವುದಂತೂ ಸತ್ಯ.

ಎಲೆಕ್ಟ್ರಿಕ್ ಬಸ್ ಗಳ ಕಾರ್ಯಾಚರಣೆಯಿಂದ ಬೆಂಗಳೂರಿನ ನಾಗರಿಕರು..ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣವೇನೋ‌ ಸಾಧ್ಯವಾಗಬಹುದು..ಆದ್ರೆ ಚಾಲಕರ ಗತಿ ಏನು.? ಏಕೆಂದ್ರೆ ಮೇಲ್ಕಂಡ ಸುತ್ತೋಲೆಯಲ್ಲಿ ಆ ಎಲೆಕ್ಟ್ರಿಕ್ ಬಸ್ ಗಳನ್ನು ಆ ಸಂಸ್ಥೆಯ ಚಾಲಕರೇ ಓಡಿಸುವುದರಿಂದ, ಬಿಎಂಟಿಸಿ ಡ್ರೈವರ್ಸ್..ಸಿಬ್ಬಂದಿ ಅವಶ್ಯಕತೆ ಇರುವುದಿಲ್ಲ ಎನ್ನುವುದನ್ನು ಸ್ಪಷ್ಟೀಕರಿಸಲಾಗಿದೆ..ಹಾಗಾಗಿ ಈ‌ ಮೂರು ಡಿಪೋಗಳಲ್ಲಿರುವ  80-90 ಸಿಬ್ಬಂದಿಯನ್ನು ಬೇರೆಡೆ ವರ್ಗಾವಣೆ ಮಾಡಲಾಗುವುದು ಎನ್ನೋದನ್ನು ಉಲ್ಲೇಖಿಸಲಾಗಿದೆ..ತಮ್ಮ ಡಿಪೋಗಳಿಂದ ತಮ್ಮನ್ನೇ ಹೊರಹಾಕುವಂಥ ಸ್ಥಿತಿಗೆ ಸರ್ಕಾರ ಹಾಗೂ  ಆಡಳಿತಶಾಹಿ ಬಂದಿರೋದು ದುಃಖಕರ ಅಷ್ಟೇ ಅಲ್ಲ ಖಂಡನೀಯ.

ಸಾರಿಗೆ ಸಚಿವ ಶ್ರೀರಾಮುಲು ಎಲೆಕ್ಟ್ರಿಕ್ ಬಸ್ ಬಸ್ ಗಳ ಬಗ್ಗೆ ಅಪ್ಯಾಯಮಾನವಾಗಿ ಮಾತನಾಡಿದಾಗಲೇ ಬಿಎಂಟಿಸಿಯಲ್ಲಿರೋ ಕಾರ್ಮಿಕ ಸಿಬ್ಬಂದಿಗೆ ತಾವು ಹೊರದಬ್ಬಿಸಿಕೊಳ್ಳಲಿರುವ ಸೂಚನೆ ಸಿಕ್ಕಿತ್ತು.ಆದರೆ ಅದನ್ನು ಪ್ರಶ್ನಿಸಿದ್ರೆ..ಉಲ್ಲಂಘಿಸಿದ್ರೆ ಏನೂ ಪ್ರಯೋಜನವಾಗೊಲ್ಲ ಎಂಬ ಕಾರಣಕ್ಕೆ ಸುಮ್ಮನಿದ್ದರಷ್ಟೆ… ಏಕೆಂದ್ರೆ ಸಾರಿಗೆ ಕಾರ್ಮಿಕರ ಪಾಲಿಗೆ ಭರವಸೆ ಮೂಡಿಸುವಂಥ ಯಾವುದೇ ಕೆಲಸವನ್ನು ಈವರೆಗೂ ಶ್ರೀರಾಮುಲು ಮಾಡಿಲ್ಲ ಎನ್ನುವ ಆರೋಪವಿದೆ.ಇಂದು ಹೊರಬಿದ್ದಿರುವ ಸುತ್ತೋಲೆ ಶ್ರೀರಾಮುಲು ಮೇಲಿನ ಆರೋಪವನ್ನು ಮತ್ತಷ್ಟು ಪುಷ್ಟೀಕರಿಸುವುದಂತೂ ಸತ್ಯ..

ಖಾಸಗಿ ಬಸ್ ಗಳ  ಇನ್ ನಿಂದ ಬೇರೆಡೆ ಔಟ್ ಆಗಲಿರುವ ಸಾರಿಗೆ ಕಾರ್ಮಿಕರನ್ನು ಕನ್ನಡ ಫ್ಲ್ಯಾಶ್ ನ್ಯೂಸ್ ಸಂಪರ್ಕಿಸಿತು.ಈ ವೇಳೆ ಹೆಸರು ಹೇಳಲಿಚ್ಚಿಸದ ಮೂರು ಡಿಪೋಗಳ ಡ್ರೈವರ್ಸ್-ಕಂಡಕ್ಟರ್ಸ್ ಇಷ್ಟು ವರ್ಷ ಕೆಲಸ ಮಾಡಿದ ಡಿಪೋಗಳಿಗೆ ನಾವೇ ಬೇಡವಾಗುತ್ತಿದ್ದೆವೆಲ್ಲಾ ಎನ್ನುವ ನೋವು ಹೃದಯ ಹಿಂಡುತ್ತದೆ ಸಾರ್.ಎಲೆಕ್ಟ್ರಿಕ್ ಬಸ್   ಗಳ ಬಗ್ಗೆ ನಡೆಯುತ್ತಿದ್ದ ಬೆಳವಣಿಗೆಗಳ ಬೆನ್ನಲ್ಲಿ ನಮಗೊಂದಿಷ್ಟು ಶಂಕೆ ಇತ್ತು..ಆದ್ರೆ ಅದು ನಮ್ಮ ನೌಕರಿಗಳಿಗೇನೆ ಕುತ್ತು ತರುತ್ತೆ ಎನ್ನುವ ಅಂದಾಜಿರಲಿಲ್ಲ..ಎಲೆಕ್ಟ್ರಿಕಲ್ ಬಸ್ ಗಳನ್ನು ನಮ್ಮ ಕೈಗೆ ಕೊಟ್ಟರೆ ಓಡಿಸೋದಿಲ್ವೇನು..ನಾವು ಯಾವಾಗಲಾದ್ರೂ ಹಾಗೆ ಹೇಳಿದ್ದೀವಾ..ನಮ್ಮ ಮಾತನ್ನು ಕೇಳದೆ,ದಿಢೀರ್ ಶೇಕಡಾ 25 ರಷ್ಟು ಸಿಬ್ಬಂದಿಯನ್ನು ಬೇರೆಡೆ ವರ್ಗಾಯಿಸಿ ಖಾಸಗಿ ಅವರನ್ನು ಒಳಗೆ ಬಿಟ್ಟುಕೊಳ್ಳುತ್ತಿರುವುದು ಎಷ್ಟು ಸರಿ..ಎಂದು ಪ್ರಶ್ನಿಸುತ್ತಾರೆ.

ಅಷ್ಟೇ ಅಲ್ಲ,ಇದು ಕೇವಲ 90 ಬಸ್ ಗಳು ಹಾಗೂ 3 ಡಿಪೋಗಳಿಗೆ ಸೀಮಿತವಾದ ವಿಚಾರ ಅಲ್ಲವೇ ಅಲ್ಲ,,ಏಕೆಂದ್ರೆ ಸಂಸ್ಥೆಯಲ್ಲಿರುವ ಕೆಲವು ಭ್ರಷ್ಟರು ಹಾಗೂ ನಾಲಾಯಕ್ ಎನಿಸಿಕೊಂಡವರು ಎಲೆಕ್ಟ್ರಿಕ್ ಬಸ್  ಗಳಿಂದ ನಾನಾ ಮೂಲಗಳಿಂದ ಬರಬಹುದಾದ ಕಿಕ್ ಬ್ಯಾಕ್ ಆಸೆಗೆ ಎಲೆಕ್ಟ್ರಿಕಲ್ ಬಸ್ ಗಳ ಸಂಚಾರದ ಬಗ್ಗೆ ಸುಳ್ಳು ರಿಪೋರ್ಟ್ ಕೊಟ್ಟು ಇನ್ನೊಂದಷ್ಟು ಎಲೆಕ್ಟ್ರಿಕ್ ಬಸ್   ಗಳನ್ನು ಒಳಗೆ ಬಿಟ್ಟುಕೊಳ್ಳಬಹುದಾದ ಆತಂಕ ಇದ್ದೇ ಇದೆ..ಹಾಗಾಗಿದ್ದಲ್ಲಿ ಹಂತ ಹಂತವಾಗಿ ಬಿಎಂಟಿಸಿ ಸಿಬ್ಬಂದಿ ಡಿಪೋಗಳ ನ್ನು ತೊರೆಯಬೇಕಾಗಿ ಬರಬಹುದು..ಪರಿಸ್ತಿತಿ ಹೀಗೆಯೇ ಮುಂದುವರುದ್ರೆ ಅದು ಎಲ್ಲಿ ಹೋಗಿ ನಿಲ್ಲುತ್ತೆನ್ನುವ ಅಂದಾಜೇ ಇಲ್ಲದಂತಾಗಿದೆ ಎನ್ನುತ್ತಾರೆ.

ಸಾರಿಗೆ ಕಾರ್ಮಿಕರ ಯೂನಿಯನ್ಸ್ ಹಾಗೂ ಸಂಘಟನೆಗಳ ಮುಖಂಡರು ಕೂಡ ಸರ್ಕಾರ ಹಾಗೂ ಸಾರಿಗೆ ನಿಗಮದ ಆಡಳಿಶಾಹಿ ಯ ನಿರ್ದಾರವನ್ನು ಖಂಡಾತುಂಡವಾಗಿ ಖಂಡಿಸಿವೆ.ಇದು ಖಾಸಗೀಕರಣದ ಮೊದಲ ಹೆಜ್ಜೆ..ಇದನ್ನು ವಿರೋಧಿಸದೆ ಸುಮ್ಮನಿದ್ದರೆ ಮುಂದಿನ ದಿನಗಳಲ್ಲಿ ಸಂಪೂರ್ಣ ಖಾಸಗೀಕರಣಕ್ಕೆ ವೇದಿಕೆ ಕಲ್ಪಿಸಿಕೊಟ್ಟಂತಾಗುತ್ತದೆ..ಹಾಗಾಗಿ ಶೀಘ್ರವೇ ಸಿಎಂ ಹಾಗೂ ಸಾರಿಗೆ ಸಚಿವರನ್ನು ಭೇಟಿ ಮಾಡಿ,ಎಲೆಕ್ಟ್ರಿಕ್ ಬಸ್ ಗಳ ವಿಚಾರದಲ್ಲಿ ಖಾಸಗಿ ಸಂಸ್ಥೆ ಹಾಗೂ ಬಿಎಂಟಿಸಿ ಆಡಳಿತ ಮಂಡಳಿ ನಡುವಿನ ಒಪ್ಪಂದದ ಪರಿಷ್ಕರಣೆಯಾಗಬೇಕು..ಇಲ್ಲದಿದ್ದರೆ ಪರಿಣಾಮದ ಬಗ್ಗೆ ತಲೆಕೆಡಿಸಿಕೊಳ್ಳದೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿವೆ.

ಎಲೆಕ್ಟ್ರಿಕ್ ಬಸ್ ಗಳನ್ನು ರಸ್ತೆಗಿಳಿಸುವ ವಿಚಾರದ ಹಿಂದೆ ಸಾರಿಗೆ ಕಾರ್ಮಿಕರ ಬದುಕುಗಳನ್ನು ಶಾಶ್ವತವಾಗಿ ಬೀದಿಗೆ ತಳ್ಳುವಂಥ ಕೆಟ್ಟ-ಪರಮ ಅನ್ಯಾಯದ ನಿರ್ದಾರ ಹಾಗೂ ಹುನ್ನಾರ ಅಡಗಿದೆ ಎನ್ನುವುದು ಮಾತ್ರ ದುರಾದೃಷ್ಟಕರ ಹಾಗೂ ಖಂಡನಾರ್ಹ.

Spread the love

Related Articles

Leave a Reply

Your email address will not be published.

Back to top button
Flash News