SHOCKING NEWS..POWER STAR ” APPU “PUNEETH SERIOUS..!? ಪವರ್ ಸ್ಟಾರ್ ಪುನೀತ್ ಗೆ ಹೃದಯಾಘಾತ-ಸ್ತಿತಿ ಗಂಭೀರ- ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ

ಬೆಳಗ್ಗೆ ವರ್ಕ್ ಔಟ್ ಮಾಡುವ ವೇಳೆ ಹೃದಯಾಘಾತವಾದ ಹಿನ್ನಲೆಯಲ್ಲಿ ತತ್ ಕ್ಷಣಕ್ಕೆ ಕನ್ನಿಂಗ್ ಹ್ಯಾಂ ರಸ್ತೆಯಲ್ಲಿರುವ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿದೆ.

0

ಬೆಂಗಳೂರು: ದೊಡ್ಮನೆಯ ಕುಡಿ,ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಹೃದಯಾಘಾತವಾಗಿದೆ.ಬೆಳಗ್ಗೆ ವರ್ಕ್ ಔಟ್ ಮಾಡುವ ವೇಳೆ ಹೃದಯಾಘಾತವಾದ ಹಿನ್ನಲೆಯಲ್ಲಿ ತತ್ ಕ್ಷಣಕ್ಕೆ ಕನ್ನಿಂಗ್ ಹ್ಯಾಂ ರಸ್ತೆಯಲ್ಲಿರುವ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರ ಪ್ರಕಾರ ಆರೋಗ್ಯಸ್ಥಿತಿ ಗಂಭೀರವಾಗಿದೆ.

ವೈದ್ಯರು ಕೊಡುತ್ತಿರುವ ಚಿಕಿತ್ಸೆಗೆ ಪುನೀತ್ ದೇಹಸ್ಥಿತಿ ಸ್ಪಂದಿಸುತ್ತಿಲ್ಲ ಎನ್ನಲಾಗಿದೆ. ತಮ್ಮ ನೆಚ್ಚಿನ ನಟನಿಗೆ ಹೃದಯಾಘಾತವಾದ ಸುದ್ದಿ ತಿಳಿಯುತ್ತಿದ್ದಂತೆ ಅಘಾತಕ್ಕೀಡಾಗಿ ಆಸ್ಪತ್ರೆ ಬಳಿ ದೌಡಾಯಿಸುತ್ತಿದ್ದಾರೆ.ಪ್ರೀತಿಯ ತಮ್ಮ ಅಪ್ಪುಗೆ ಹೃದಯಾಘಾತವಾದ ಸುದ್ದಿ ತಿಳಿಯುತ್ತಿದ್ದಂತೆ ತಮ್ಮ ಭಜರಂಗಿ-2 ಸಿನೆಮಾದ ಪ್ರೊಮೊಷನ್ ನಿಲ್ಲಿಸಿ ಶಿವರಾಜ್ ಕುಮಾರ್ ಆಸ್ಪತ್ರೆಗೆ ದೌಡಾಯಿಸಿದ್ದಾರೆ.ಅಪಾರ ಸಂಖ್ಯೆಯ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಚೇತರಿಕೆಗೆ ಪ್ರಾರ್ಥಿಸಲಾರಂಭಿಸಿದ್ದಾರೆ.ಕ್ಷಣ ಕ್ಷಣಕ್ಕೂ ಅಪ್ಪು ಸ್ತಿತಿ ಗಂಭೀರವಾಗುತ್ತಿದ್ದು ವೈದ್ಯರ ತಂಡ ಸೂಕ್ತ ಚಿಕಿತ್ಸೆ ನೀಡುವಲ್ಲಿ ನಿರತವಾಗಿದೆ.

Spread the love
Leave A Reply

Your email address will not be published.

Flash News