HEAVY WORKOUT BECOME DANGEROUS TO APPU: ಅತಿಯಾದ “ವರ್ಕೌಟ್” “ಅಪ್ಪು” ಜೀವಕ್ಕೆ ಮಾರಕವಾಯ್ತಾ..? ಅನೇಕ ಬಾರಿ ಎಚ್ಚರಿಸಿದ್ದ ವೈದ್ಯರು-ಎಚ್ಚರಿಕೆ ನಿರ್ಲಕ್ಷ್ಯಿಸಿದ್ದ “ಪವರ್ ಸ್ಟಾರ್”

ದಿನದ ಬಹುತೇಕ ಸಮಯವನ್ನು ಜಿಮ್ ನಲ್ಲೇ ಕಳೆಯುತ್ತಿದ್ದರಂತೆ ಪುನೀತ್-ಅನ್ನಾಹಾರ ಬಿಟ್ಟಿಯೂ ಜಿಮ್ ಮಾಡುತ್ತಿದ್ದರಂತೆ..!

0

ಬೆಂಗಳೂರು: ಎಲ್ಲರನ್ನು ಕಾಡುತ್ತಿರುವ ಪ್ರಶ್ನೆಯೇ ಇದು..ಆರೋಗ್ಯದ ಬಗ್ಗೆ ಸದಾ ಕಾಳಜಿ ವಹಿಸುತ್ತಿದ್ದ ಅಪ್ಪು,ಅತಿಯಾದ ಆಸ್ಥೆಯನ್ನು ಅದಕ್ಕಾಗಿ ಮೀಸಲಿಟ್ಟಿದ್ದೇ ಅವರಿಗೆ ಮುಳುವಾಯಿತೇ ಗೊತ್ತಾಗುತ್ತಿಲ್ಲ..ದಿನದ ಹೆಚ್ಚಿನ ಸಮಯವನ್ನು ದೇಹವನ್ನು ಹುರಿಗೊಳಿಸಿಕೊಳ್ಳೊಕ್ಕೆ ವಿನಿಯೋಗಿಸುತ್ತಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಆಗಾಗ ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಂಡಿದ್ದುಂಟು ಎನ್ನಲಾಗಿದೆ.

ವಯಸ್ಸು ಎಷ್ಟೇ ಆಗಿರಲಿ,ಎಂಥದ್ದೇ ನಟ ಕೂಡ ತೆರೆ ಮೇಲೆ ಸ್ಮಾರ್ಟ್ ಅಂಡ್ ಸ್ಲಿಮ್ ಆಗಿ ಕಾಣೊಕ್ಕೆ ಇಷ್ಟಪಡುತ್ತಾನೆ..ಇದು ಅಪ್ಪುಗೂ ಕೂಡ ಹೊರತಾಗಿರಲಿಲ್ಲ..ದೇಹವನ್ನು ಚೆನ್ನಾಗಿ ಇಟ್ಟುಕೊಳ್ಳದಿದ್ದರೆ ಅದು ತನ್ನ ವೃತ್ತಿ ಬದುಕಿಗೆ ಹಿನ್ನಡೆ ಆಗಬಹುದೆನ್ನುವ ಆತಂಕದಿಂದ ಏನೇ ತಪ್ಪಿದ್ರೂ ದಿನನಿತ್ಯ ಜಿಮ್ ಮಾಡೋದನ್ನು ಮಾತ್ರ ಬಿಡುತ್ತಿರಲಿಲ್ಲ..

ಸದಾಶಿವನಗರದಲ್ಲಿರುವ ತನ್ನ ಮನೆ ಹಾಗು ಕಾಮನ್ ಆಗಿ ಹೋಗುತ್ತಿದ್ದ ಜಿಮ್ ನಲ್ಲಿ ಗಂಟೆಗಟ್ಟಲೇ ಬೆವರು ಹರಿಸುತ್ತಿದ್ದ ಪುನೀತ್ ಕೆಲವೊಮ್ಮೆ ದಿನದ ಬಹುತೇಕ ಸಮಯವನ್ನು ಅಲ್ಲಿಯೇ ಕಳೆಯುತ್ತಿದ್ದುದನ್ನು ಕಂಡವರುಂಟು..ಮನೆಯವರು ಕೂಡ ಅನೇಕ ಬಾರಿ ಅತಿಯಾದ ವರ್ಕೌಟ್ ಮಾಡದಂತೆ ಕಾಳಜಿಯ ಮಾತನ್ನಾಡುತ್ತಿದ್ದರೆನ್ನಲಾಗಿದೆ.ವೈದ್ಯರು ಕೂಡ  ಈ ಬಗ್ಗೆ ಅಪ್ಪು ಅವರನ್ನು ಎಚ್ಚರಿಸಿದ್ದುಂಟಂತೆ.

ಜಿಮ್ ಸೆಂಟರ್ ನಲ್ಲಿ ಅಥವಾ ಮನೆಯಲ್ಲಿ ಗಂಟೆಗಟ್ಟಲೇ ವರ್ಕೌಟ್ ನಲ್ಲೇ ಕಾಲ ಕಳೆಯುತ್ತಿದ್ದ ಪುನೀತ್ ಪಾಲಿಗೆ ಅದೇ ಮುಳುವಾಗಿದ್ದು ಮಾತ್ರ ವಿಪರ್ಯಾಸ.ಆರೋಗ್ಯ ತೀವ್ರ ಸ್ತಿತಿಯಲ್ಲಿ ಹದಗೆಡೊಕ್ಕೆ ಕಾರಣವಾಗಿದ್ದು ದಯನೀಯ.ಸಧ್ಯ  ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಪ್ಪುಗೆ ನುರಿತ ವೈದ್ಯರ ತಂಡಗಳು ನಿರಂತರವಾಗಿ ಚಿಕಿತ್ಸೆ ನೀಡುತ್ತಲೇ ಇವೆ.ಆದರೂ ಕ್ಷಣ ಕ್ಷಣಕ್ಕು ದೇಹಸ್ತಿತಿ ವಿಷಮವಾಗುತ್ತಿರುವುದು ವೈದ್ಯರಿಗೂ ಆತಂಕ ಮೂಡಿಸಿದೆ.

ಈ ನಡುವೆ ತನ್ನ ನೆಚ್ಚಿನ ನಟ ಜೀವನ್ಮರಣಗಳ ನಡುವೆ ಹೋರಾಡುತ್ತಿರುವುದರಿಂದ ದಿಗ್ಬ್ರಾಂತಿಗೊಳಗಾದ ಅಪಾರ ಅಭಿಮಾನಿಗಳು ಈಗಾಗಲೇ ಆಸ್ಪತ್ರೆ ಬಳಿ ದೌಡಾಯಿಸುತ್ತಿದ್ದಾರೆ.ಅಪ್ಪು ಕ್ಷೇಮವಾಗಿ ಹೊರಬನ್ನಿ ಎಂದು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.ಅಪ್ಪು ಕುಟುಂಬದಲ್ಲಂತೂ ಶೋಕ ಮಡುಗಟ್ಟಿದೆ.ಆಸ್ಪತ್ರೆಯಲ್ಲಿರುವ ಕುಟುಂಬಸ್ತರು ಕಣ್ಣೀರಿಡುತ್ತಿದ್ದಾರೆ.ಈ ನಡುವೆ ಆಸ್ಪತ್ರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ಅನೇಕ ಸಚಿವರು ಹಾಗೂ ಚಿತ್ರರಂಗದ ಗಣ್ಯರು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಲಾರಂಭಿಸಿದ್ದಾರೆ.

ರಾಜ್ಯಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಅಪ್ಪು ಆರೋಗ್ಯ ಸ್ತಿತಿ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಅಭಿಮಾನಿಗಳು ದಿಕ್ಕುತೋಚದಂತಾಗಿದ್ದಾರೆ.ಸಾಕಷ್ಟು ಮಂದಿ ಬೆಂಗಳೂರಿನತ್ತ ದೌಡಾಯಿಸುತ್ತಿದ್ದಾರೆ.ಸ್ಥಳೀಯ ಪೊಲೀಸ್ ವ್ಯವಸ್ಥೆ ಪರಿಸ್ತಿತಿ ನಿಯಂತ್ರಿಸುವಲ್ಲಿ ನಿರತವಾಗಿದೆ.ರಾಜಧಾನಿ ಬೆಂಗಳೂರಿನಲ್ಲೂ ಪೊಲೀಸ್ ಸರ್ಪಗಾವಲು ನಿಯೋಜಿಸಲಾಗುತ್ತಿದೆ.ಅಭಿಮಾನಿಗಳನ್ನು ತಡೆಯೊಕ್ಕೆ ಪೊಲೀಸರು ಹರಸಾಹಸ ಪಡುವಂತಾಗಿದೆ,.

Spread the love
Leave A Reply

Your email address will not be published.

Flash News