APPU’S SHAKTHIDHAAMA IS MY RESPOSIBILITY /“ಅಪ್ಪು” ನಿರ್ವಹಣೆಯ ಅನಾಥಾಶ್ರಮದ ಹೊಣೆ ನನ್ನದು ಎಂದ ತಮಿಳು ಸ್ಟಾರ್ ನಟ..-ಪುನೀತ್ ಸಾಮಾಜಿಕ ಕಳಕಳಿಗೆ ಸ್ಟಾರ್ ನಟರ ಸಾಥ್..

ಮೈಸೂರಿನಲ್ಲಿರುವ ಶಕ್ತಿಧಾಮ ಡಾ.ರಾಜ್ ಕುಟುಂಬದ ಕಾಳಜಿಯ ಕೇಂದ್ರ-1500 ಅನಾಥ ಹೆಣ್ಣು ಮಕ್ಕಳ ನೆಮ್ಮದಿಯ ತಾಣ...

0

ಬೆಂಗಳೂರು:ಪ್ರೀತಿಯ ಅಪ್ಪು ಸಮಾಧಿಯಾಗಿದ್ದಾಗಿದೆ.ಅವರ ಸಾವಿನ ಬೆನ್ನಲ್ಲೇ ಅವರನ್ನು ಆಶ್ರಯಿಸಿದ ಸಾಕಷ್ಟು ಜೀವಗಳು ಅನಾಥಪ್ರಜ್ಞೆಯಿಂದ ಬಳಲುವಂತಾಗಿದೆ.ಅದರಲ್ಲೂ ಪ್ರಮುಖವಾಗಿ ಡಾ.ರಾಜ್ ಕುಟುಂಬದ ಆಸರೆಯಲ್ಲಿ ಬದುಕು ಕಂಡುಕೊಂಡಿದ್ದ ಅನಾಥಾಶ್ರಮಗಳು-ವೃದ್ಧಾಶ್ರಮಗಳು ತೊಂದರೆಗೆ ಸಿಲುಕಿವೆ.ಇಂತದ್ದೊಂದು ಸನ್ನಿವೇಶದಲ್ಲಿ ಪುನೀತ್ ನಡೆಸುತ್ತಿದ್ದ ಅನಾಥಾಶ್ರಮದ ಹೆಣ್ಣುಮಕ್ಕಳ ಕಾಳಜಿಗೆ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಮುಂದಾಗಿದ್ದಾರೆ.

ಅಪ್ಪು ಕೇವಲ ಕಲಾಸೇವೆಗೆ ಮಾತ್ರ ತಮ್ಮನ್ನು ಸೀಮಿತಗೊಳಿಸಿಕೊಂಡಿರಲಿಲ್ಲ.. ಸಮಾಜಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರೆನ್ನುವುದು ಬಹುತೇಕ ಮಂದಿಗೆ ಗೊತ್ತಿರಲೇ ಇಲ್ಲ.ಅವರ ಸಾವಿನ ನಂತರ ಅದೆಲ್ಲಾ ಬಹಿರಂಗವಾಗುತ್ತಿದೆ. ಅದರಲ್ಲೂ ಪ್ರಮುಖವಾಗಿ ಅಪ್ಪು ಬಹುದೊಡ್ಡ ಸಂಖ್ಯೆಯಲ್ಲಿ ಕಾಳಜಿ ನಡೆಸುತ್ತಿದ್ದ ಮೈಸೂರಿನ ಶಕ್ತಿಧಾಮ ಕೂಡ ಒಂದು.

ಅಪ್ಪು ಬದುಕಿದ್ದವರೆಗೂ ಶಕ್ತಿಧಾಮದ ಉಸ್ತುವಾರಿಯನ್ನು ಕೊಂಚವೂ ಕೊರತೆಯಿಲ್ಲದಂತೆ ನೋಡಿಕೊಳ್ಳುತ್ತಿದ್ದರು.ಅಮ್ಮ ಬದುಕಿದ್ದ ದಿನಗಳಲ್ಲಿ ಅವರೊಂದಿಗೆ ಸಾಕಷ್ಟು ಸನ್ನಿವೇಶಗಳಲ್ಲಿ ಶಕ್ತಿಧಾಮಕ್ಕೆ ಭೇಟಿ ಕೊಟ್ಟು ಅಲ್ಲಿನ ಆಗುಹೋಗುಗಳನ್ನು ನೋಡಿಕೊಳ್ಳುತ್ತಿದ್ದರು.ಅಮ್ಮನ ಕಾಲಾನಂತರದಲ್ಲಿ ಆರೈಕೆಗೆ ಸ್ವಲ್ಪವು ಕಳಂಕ ತಟ್ಟದಂತೆ ನೋಡಿಕೊಂಡು ಬಂದಿದ್ದರು.

ಇದೀಗ ಅಪ್ಪು ಇಲ್ಲದೆ ಕಾಳಜಿ-ಆರೈಕೆಯ ಬಹುದೊಡ್ಡ ಕೊರತೆ ಕಾಣಿಸಿಕೊಳ್ಳಲಾರಂಭಿಸಿದೆ.ಹಣದ ಪೂರೈಕೆಗಿಂತ ಕಾಳಜಿಯ ಸಮಸ್ಯೆಯ ಎದುರಾಗುವ ಆತಂಕವಿದೆ.ಆದರೆ ಕೇವಲ ಕನ್ನಡ ಚಿತ್ರರಂಗದೊಂದಿಗೆ ಅಷ್ಟೇ ಅಲ್ಲ ದಕ್ಷಿಣ ಭಾರತ ಚಿತ್ರರಂಗದ ಬಹುತೇಕ ದೊಡ್ಡ ಸ್ಟಾರ್ ಗಳೊಂದಿಗೆ ಉತ್ತಮ ಒಡನಾಟ-ಬಾಂಧವ್ಯ-ಸಂಪರ್ಕ ಹೊಂದಿದ್ದ ಪುನೀತ್ ಗೆ ತಮಿಳು ಚಿತ್ರರಂಗದ ಸ್ಟಾರ್ ನಟ ವಿಶಾಲ್ ಕೂಡ ಒಳ್ಳೆಯ ಸ್ನೇಹಿತರಾಗಿದ್ದರು.ಇನ್ ಫ್ಯಾಕ್ಟ್ ಅಪ್ಪು ಅವರು ಶಕ್ತಿಧಾಮ ನಡೆಸುತ್ತಿರುವುದರ ಬಗ್ಗೆ ಸ್ಪಷ್ಟ ಮಾಹಿತಿ ಹೊಂದಿದ್ದ ವಿಶಾಲ್ ಅವರು ಅಪ್ಪು ಸಾಮಾಜಿಕ ಕಾಳಜಿಯನ್ನು ಮೆಚ್ಚಿ ಅನೇಕ ಸಾರಿ ತಾನೂ ತಮಿಳ್ನಾಡಿನಲ್ಲಿ ಇಂತದ್ದೊಂದು ಕಾನ್ಪೆಪ್ಟ್ ನಲ್ಲಿ ಕೆಲಸ ಮಾಡಬೇಕೆಂಬ ಇಂಗಿತ ವ್ಯಕ್ತಪಡಿಸಿದ್ದರು.

ಇದೀಗ ಅಪ್ಪು ಕಣ್ಮರೆಯಾಗಿರುವುದರಿಂದ ಶಕ್ತಿಧಾಮಕ್ಕೆ ಬೇಕಿರುವ ನೆರವು-ನಿಗಾ ಎರಡನ್ನು ನೀಡಲು ವಿಶಾಲ್ ಮುಂದಾಗಿದ್ದಾರೆ.ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ವಿಷಯವನ್ನು ಅವರೇ ವ್ಯಕ್ತಪಡಿಸಿದ್ದಾರಂತೆ.ನನ್ನ ಸ್ನೇಹಿತ ಇಲ್ಲದ ಸನ್ನಿವೇಶದಲ್ಲಿ ಅನಾಥಾಶ್ರಮದಲ್ಲಿ ಇರುವ ಎಲ್ಲಾ 1500 ಹೆಣ್ಣುಮಕ್ಕಳ ವಿದ್ಯಾಭ್ಯಾಸ ಹಾಗೂ ಇತರೆ ಅವಶ್ಯಕತೆಗಳನ್ನು ತಾನೇ ಪೂರೈಸುವುದಾಗಿ ಹೇಳಿಕೊಂಡಿದ್ದಾರಂತೆ.

ವಿಶಾಲ್ ಅವರ  ಈ ಸಾಮಾಜಿಕ ಕಾಳಜಿ-ಬದ್ಧತೆ ಬಗ್ಗೆ ಸಾರ್ವಜನಿಕವಾಗಿ ಪ್ರಶಂಸೆ ವ್ಯಕ್ತವಾಗ್ತಿದೆ.ಕೇವಲ ವಿಶಾಲ್ ಮಾತ್ರವಲ್ಲ ಕನ್ನಡ ಹಾಗೂ ಇತರೆ ಭಾಷೆಗಳ ಸ್ಟಾರ್ ನಟರು ಕೂಡ ಅಪ್ಪು ನಡೆಸುತ್ತಿದ್ದ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಮುನ್ನಡೆಸಿಕೊಂಡು ಹೋಗಲು ಮನಸು ಮಾಡಿದ್ದಾರೆ.ಈ ಮೂಲಕ ಅಪ್ಪು ಅವರನ್ನು ಜೀವಂತವಾಗಿಡುವ ಕೆಲಸಕ್ಕೆ ಮುಂದಾಗಿದ್ದಾರೆ.ಇದು ಕೇವಲ ತೋರಿಕೆಗಲ್ಲ,ಅಪ್ಪು ಅವರ ಸಾಮಾಜಿಕ ಕಾಳಜಿ-ಕಳಕಳಿಗೆ ನಮ್ಮದೊಂದು ಪುಟ್ಟ ಸೇವೆ ಎಂದು ಹೇಳಿಕೊಂಡಿದ್ದಾರೆ.

Spread the love
Leave A Reply

Your email address will not be published.

Flash News