PUNEETH RAJKUMAR’S DEATH FORECAST : “ಅಪ್ಪು” ಸಾವಿನ ಮುನ್ಸೂಚನೆಯನ್ನು ಈ ಹಿಂದೆನೇ ನೀಡಿದ್ರಾ ಆ “ಮೆಡಿಟೇಷನ್ ಗುರು”..?! ಕೊಲ್ಲೂರು ಮೂಕಾಂಬಿಕೆ ಸನ್ನಿಧಾನಕ್ಕೆ ಹೋಗಿದಿದ್ರೆ ತಪ್ಪುತ್ತಿತ್ತಾ ಪುನೀತ್ “ಸಾವು”..?!

"ದೊಡ್ಮನೆ"ಯಲ್ಲಿ ಕೆಡುಕು ಸಂಭವಿಸಲಿದೆ ಎಂದು ನುಡಿದ "ಭವಿಷ್ಯ" ವೇ "ಅಪ್ಪು" ಸಾವಿನ "ರಹಸ್ಯ" ನಾ..?!- "ದೊಡ್ಮನೆ" ಯಲ್ಲಿ ಏನೋ ಕೆಡುಕಾಗಲಿದೆ..ಕೊಲ್ಲೂರು ಮೂಕಾಂಬಿಕೆ ದರ್ಶನ ಮಾಡ್ಕೊಂಡು ಬನ್ನಿ ಎಂದಿದ್ದೆ ಎಂದಿದ್ದರಂತೆ ಇವರು.

0

ಬೆಂಗಳೂರು: ನಾನು ಅವತ್ತೇ ಹೇಳಿದ್ದೆ..”ದೊಡ್ಮನೆ”ಯಲ್ಲಿ ಏನೋ ಕೆಡುಕಾಗುವ ಸೂಚನೆ ಕಾಣ್ತಿದೆ..ಯಾವುದಕ್ಕೂ ನೆಗ್ಲೆಕ್ಟ್ ಮಾಡದೆ ಕೊಲ್ಲೂರು ಮೂಕಾಂಬಿಕೆ ಸನ್ನಿಧಿಗೆ ಹೋಗಿ ಬನ್ನಿ..ದರ್ಶನ ಪಡುದ್ರೆ ಸರಿಯಾಗುತ್ತೆ ಎಂದು.. ಆದ್ರೆ ಆ ಕುಟುಂಬ ನಿರ್ಲಕ್ಷ್ಯ ಮಾಡ್ತು ಅನ್ಸುತ್ತೆ‌..ಆದ್ರೆ ನನಗೆ ಹೊಳೆದ ಆ ಕೆಡುಕಿನ ಅಂದಾಜು  “ಅಪ್ಪು “ಸಾವಿನ ಮುನ್ಸೂಚನೆಯಾಗಿತ್ತೆಂದು ನೆನಪಿಸಿಕೊಂಡರೆ ದುಃಖವಾಗುತ್ತೆ..ಹೀಗೆಂದವರು ದೊಡ್ಮನೆಯ ಮೆಡಿಟೇಷನ್ ಗುರು ಎಂದೇ ಕರೆಯಿಸಿಕೊಂಡಿರುವ ಮುಖೇಶ್..

ಹೌದು..ಇದನ್ನು ಸತ್ಯ ಎನ್ನಬೇಕೋ…ಕಾಕತಾಳೀಯ ಎನ್ನಬೇಕೋ ಗೊತ್ತಾಗ್ತಿಲ್ಲ.. ಮುಕೇಶ್ ಅವರು ಹೇಳಿದ್ದರೆನ್ನಲಾದ ವಿಷಯ ಸತ್ಯವಾಗ್ಹೋಗಿದೆ.ದೊಡ್ಮನೆಯಲ್ಲಿ ದೋಷ ಇರೋದು ಸತ್ಯ..ಆದ್ರೆ ಅದು ಜೀವಕ್ಕೆ ಕಂಟಕವಾಗುವಷ್ಟು ಅಪಾಯಕಾರಿ ಆಗಿರುತ್ತೆನ್ನುವ ಸಣ್ಣ ಕಲ್ಪನೆಯೂ ನನಗಿರಲಿಲ್ಲ ಎಂದು ಮುಖೇಶ್ ತಿಳಿಸಿದ್ದಾರೆ.

ದೊಡ್ಮನೆಯ ಮೆಡಿಟೇಷನ್ ಗುರು
ದೊಡ್ಮನೆಯ ಮೆಡಿಟೇಷನ್ ಗುರು ಮುಖೇಶ್
ಮಹಾನ್ ಧೈವಭಕ್ತರಾಗಿದ್ದ ಪುನೀತ್ ದೇವರ ಸನ್ನಿಧಿಯಲ್ಲಿ ಭಕ್ತಪರವಶರಾಗಿ..
ಮಹಾನ್ ಧೈವಭಕ್ತರಾಗಿದ್ದ ಪುನೀತ್ ದೇವರ ಸನ್ನಿಧಿಯಲ್ಲಿ ಭಕ್ತಪರವಶರಾಗಿ..

ದೊಡ್ಮನೆಯ ಹಿರಿಯ ಜೀವ ರಾಘವೇಂದ್ರ ರಾಜ್ ಕುಮಾರ್ ಅವರಿಗೆ ಮೆಡಿಟೇಷನ್ ಹೇಳಿಕೊಡುತ್ತಾ ಬಂದಿರುವ ಮುಖೇಶ್ ಸಾಕಷ್ಟು ಸನ್ನಿವೇಶದಲ್ಲಿ ಮೆಡಿಟೇಷನ್ ಮೂಲಕ ದೊಡ್ಮನೆಯ ಸಮಸ್ಯೆಗಳನ್ನು ಹೀಲ್ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.

ದೊಡ್ಮನೆಯಲ್ಲಿ ಏನೋ ಆಗುತ್ತಿದೆ..ಪಾಸಿಟಿವ್ ಎನರ್ಜಿ ಮೇಲೆ ಯಾವುದೋ ಒಂದು ಕೆಟ್ಟ ಶಕ್ತಿಯ ದಾಳಿ ಮಾಡುತ್ತಿದೆ ಎನ್ನುವುದನ್ನು ತಮ್ಮ ಮೆಡಿಟೇಷನ್ ಮೂಲಕ ಅರಿತ ಮುಖೇಶ್ ಆಗಸ್ಟ್ ನಲ್ಲಿಯೇ ರಾಘಣ್ಣರಿಗೆ ಈ ಬಗ್ಗೆ ಸುಳಿವು ನೀಡಿದ್ದರಂತೆ..

ಆ ಬಗ್ಗೆ ರಾಘವೇಂದ್ರ ರಾಜ್ ಕುಮಾರ್ ಅವರಿಗೆ ಸೂಕ್ಷ್ಮವಾಗಿ ಹೇಳಿದ್ದರಲ್ಲದೇ, ಪರಿಹಾರಕ್ಕೆ ಕೊಲ್ಲೂರಿನ ಮೂಕಾಂಬಿಕೆ ಸನ್ನಿಧಾನಕ್ಕೆ ಹೋಗಿ ಪೂಜೆ ಮಾಡಿಸಿ ಕೊಂಡು ಬನ್ನಿ ಒಳ್ಳೆಯದಾಗುತ್ತೆ ಎಂದು ಸಲಹೆ ನೀಡಿದ್ದರಂತೆ..ಈ ಸಂಬಂದ ವಾಟ್ಸಪ್ ನಲ್ಲೂ‌ ಮೆಸೇಜ್ ಹಾಕಿದ್ದರಂತೆ.

ಆದರೆ ಕಾರ್ಯ ಒತ್ತಡದ ನಡುವೆ ಹೋಗಲು ಆಗಲಿಲ್ಲ ಎಂದು ರಾಘಣ್ಣ ಅವರೇ ನನ್ನಲ್ಲಿ ಹೇಳಿದ್ದಾಗಿ ಮುಖೇಶ್ ಹೇಳಿಕೊಂಡಿದ್ದಾರೆ. ಆಗಸ್ಟ್ ನಲ್ಲಿ ಹೇಳಿದ ಮಾತಿಗೆ ನಡೆದುಕೊಳ್ಳದಾಗ ಮತ್ತೆ ಮುಖೇಶ್, ಇದೇ ಎಚ್ಚರಿಕೆ ಹಾಗೂ ಸಲಹೆಯನ್ನು ರಾಘಣ್ಣ ಅವರಿಗೆ ಸೆಪ್ಟೆಂಬರ್ ನಲ್ಲೂ ನೀಡಿದ್ದರಂತೆ..ಆದರೆ ಆಗಲೂ ಹೋಗಲು ಸಾಧ್ಯವಾಗಲಿಲ್ಲ ಗುರುಗಳೇ ಎಂದು ತುಂಬಾ ಬೇಸರದಿಂದ ರಾಘಣ್ಣ ಹೇಳಿಕೊಂಡು ಕ್ಷಮೆ ಯಾಚಿಸಿದ್ದರಂತೆ.

ರಾಘವೇಂದ್ರ ರಾಜ ಕುಮಾರ್ ಅವರಿಗೆ ದೊಡ್ಮನೆಯಲ್ಲಿ ಏನೋ ಕೇಡು ಸಂಭವಿಸಲಿದೆ ಎನ್ನುವುದನ್ನು ಸೂಚ್ಯವಾಗಿ ತಿಳಿಸಲು ಮಾಡಿದ್ದ ವಾಟ್ಸಪ್ ಮೆಸೇಜ್
ರಾಘವೇಂದ್ರ ರಾಜ ಕುಮಾರ್ ಅವರಿಗೆ ದೊಡ್ಮನೆಯಲ್ಲಿ ಏನೋ ಕೇಡು ಸಂಭವಿಸಲಿದೆ ಎನ್ನುವುದನ್ನು ಸೂಚ್ಯವಾಗಿ ತಿಳಿಸಲು ಮಾಡಿದ್ದ ವಾಟ್ಸಪ್ ಮೆಸೇಜ್
ಕೊಲ್ಲೂರು ಮೂಕಾಂಬಿಕೆ ಸನ್ನಿಧಿಗೆ ಭೇಟಿ ಕೊಟ್ಟು ಆಶೀರ್ವಾದ ಪಡೆಯುವಂತೆ ಮೆಸೇಜ್ ಮಾಡಿದ್ದಕ್ಕೆ ಸಾಕ್ಷ್ಯ..
ಕೊಲ್ಲೂರು ಮೂಕಾಂಬಿಕೆ ಸನ್ನಿಧಿಗೆ ಭೇಟಿ ಕೊಟ್ಟು ಆಶೀರ್ವಾದ ಪಡೆಯುವಂತೆ ಮೆಸೇಜ್ ಮಾಡಿದ್ದಕ್ಕೆ ಸಾಕ್ಷ್ಯ..
ರಾಘವೇಂದ್ರ ರಾಜ್ ಕುಮಾರ್
ರಾಘವೇಂದ್ರ ರಾಜ್ ಕುಮಾರ್

ನಿರೀಕ್ಷಿತವೋ ಅಥವಾ ಕಾಕತಾಳೀಯವೋ ಗೊತ್ತಿಲ್ಲ,ಮುಖೇಶ್ ಹೇಳಿದ ಮಾತು ಪುನೀತ್ ಸಾವಿನ ರೂಪದಲ್ಲಿ ನೆರವೇರಿದಂತಾಗಿದೆ.ಬಹುಷಃ ನಾನು ಹೇಳಿದ ಸಲಹೆಯನ್ನು ಪಾಲಿಸಿದಿದ್ದರೆ ಪುನೀತ್ ಜೀವ ಉಳಿಯುತ್ತಿತ್ತೇನೋ ಎಂದೆನಿಸುತ್ತದೆ..ನನ್ನ ಮಾತನ್ನು ಪಾಲಿಸಲಿಲ್ಲವಲ್ಲ..

ಆ ಕಂಟಕದ ತೀವ್ರತೆ ಇಷ್ಟೊಂದು ಗಂಭೀರವಾಗಿರುತ್ತದೆ ಎಂದು ಗೊತ್ತಿದ್ರೆ ನಾನೇ ಕೊಲ್ಲೂರು ಮೂಕಾಂಬಿಕೆ ಸನ್ನಿಧಿಗೆ ಬಲವಂತ ಮಾಡಿಯಾದ್ರೂ ಕೊಂಡೊಯ್ಯುತ್ತಿದ್ದೆನೇನೋ..ನನ್ನಿಂದ ಆ ಕೆಲಸ ಮಾಡಲಾಗಲಿಲ್ಲ ಎನ್ನುವ ನೋವು ಕೊನೇತನಕ ನನ್ನಲ್ಲಿ ಉಳಿದೋಯ್ತು ಎಂದು ನೋವು ತೋಡಿಕೊಳ್ತಾರೆ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ ವಿಜೇತ ಮುಕೇಶ್.

ಅದೇನೇ ಆಗಲಿ,ದೊಡ್ಮನೆಗೆ ತಟ್ಟಿದೆ ಎನ್ನಲಾಗುತ್ತಿರುವ ಕಂಟಕ ದೂರ ಮಾಡಿಕೊಳ್ಳಲು ಕುಟುಂಬ ಮುಕೇಶ್ ಅವರ ಸಲಹೆಯನ್ನು ಇನ್ನಾದರೂ ಗಂಭೀರವಾಗಿ ಪರಿಗಣಿಸಿದ್ರೆ ಒಳ್ಳೇದಾಗಬಹುದೇನೋ..

ಏಕೆಂದರೆ ಯಾವ್ ಕ್ಷಣದಲ್ಲಿ ಏನ್ ಆಗುತ್ತೋ..ಯಾರು ಹೇಳಿದ್ದು ಹೇಗೆಲ್ಲಾ ನಡೆದೋಗುತ್ತೋ ಎನ್ನುವುದನ್ನು ಊಹಿಸಲಿಕ್ಕೆ ಆಗೋದೇ ಇಲ್ಲ..ದೊಡ್ಮನೆಯಿಂದ ಕನ್ನಡ ಚಿತ್ರರಂಗಕ್ಕೆ ಆಗಬೇಕಿರುವುದು ಇನ್ನೂ ಸಾಕಷ್ಟಿದೆ.ರಾಘಣ್ಣ,ಶಿವಣ್ಣ ತಮ್ಮ ಬ್ಯುಸಿ ಷೆಡ್ಯೂಲ್ ಗಳಲ್ಲೇ ಮೈ ಮರೆತು ಕುಟುಂಬದ ಹಿತ ಕಡೆಗಣಿಸಬಾರದು ಅದೇ ನಮ್ಮ ಕಳಕಳಿ.

Spread the love
Leave A Reply

Your email address will not be published.

Flash News