BreakingMoreScrollTop NewsUncategorizedಫೋಟೋ ಗ್ಯಾಲರಿಬೆಡಗು-ಬಿನ್ನಾಣರಾಜಕೀಯರಾಜ್ಯ-ರಾಜಧಾನಿಸಿನೆಮಾ ಹಂಗಾಮ

ರಾಜ್ಯೋತ್ಸವ ಪ್ರಶಸ್ತಿ ಪ್ರಕಟ-ಡೈನಾಮಿಕ್ ಸ್ಟಾರ್ ದೇವರಾಜ್, ರೋಹನ್ ಬೋಪಣ್ಣ.ಬೀಚಿ ಗಂಗಾವತಿ ಪ್ರಾಣೇಶ್ ಗೆ ಪ್ರಶಸ್ತಿಯ ಗರಿ…

ಬೆಂಗಳೂರು: 2021 ರ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿವೆ.ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರಿಗೆ ಹಾಗೂ ಸಂಘ ಸಂಸ್ಥೆಗಳಿಗೆ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ…

ಸಿನೆಮಾ ಕ್ಷೇತ್ರದಲ್ಲಿ ಡೈನಾಮಿಕ್ ಸ್ಟಾರ್ ದೇವರಾಜ್, ಅಭಿನವ ಬೀಚಿ ಎಂದೆ ಖ್ಯಾತರಾಗಿರುವ ಗಂಗಾವತಿ ಪ್ರಾಣೇಶ್, ಖ್ಯಾತ ಟೆನ್ನಿಸ್ ತಾರೆ ರೋಹನ್ ಬೋಪಣ್ಣ, ವೀರಸೈನಿಕ ನಾಗಪ್ಪ ಸೇರಿದಂತೆ ಹಲವು ಸಾಧಕರಿಗೆ ಪ್ರತ್ಯೇಕ ಕ್ಷೇತ್ರಗಳಲ್ಲಿ ಪ್ರಶಸ್ತಿ ಘೋಷಿಸಲಾಗಿದೆ.

ಭಾರತ ಸ್ವಾತಂತ್ರೋತ್ಸವಕ್ಕೆ 75 ವರ್ಷಗಳು ತುಂಬುತ್ತಿರುವ ಸಂದರ್ಭದಲ್ಲಿ ಕೊಡ ಮಾಡಲಾಗುತ್ತಿರುವ ರಾಜ್ಯೋತ್ಸವ ಪ್ರಶಸ್ತಿಯೂ ಕೂಡ ವಿಶೇಷತೆಯನ್ನು ಪಡೆದುಕೊಂಡಿದೆ. ಅಂದಹಾಗೆ ಸಂಘ ಸಂಸ್ಥೆಗಳ ವಿಭಾಗದಲ್ಲಿ ಗದಗದ ಶ್ರೀ ವೀರೇಶ್ವರ ಪುಣ್ಯಾಶ್ರಮ ಅಂಧ ಮಕ್ಕಳ ಶಾಲೆ, ದಾವಣಗೆರೆಯೇ ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ಸಂಸ್ಥೆಗೆ ಪ್ರಶಸ್ತಿ ಸಂದಾಯವಾಗಿದೆ.

ಕಲಬುರಗಿಯ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ,ಮಂಗಳೂರಿನ ಶ್ರೀ ರಾಮಕೃಷ್ಣಾಶ್ರಮ, ಹುಬ್ಬಳ್ಳಿಯ ಆಲ್ ಇಂಡಿಯಾ ಜೈನ್ ಯುಥ್ ಫೆಡರೇಶನ್, ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆ, ಹಾವೇರಿಯ ಉತ್ಸವ ರಾಕ್ ಗಾರ್ಡನ್ ಹಾಗೂ ಬೆಂಗಳೂರಿನ ಅದಮ್ಯ ಚೇತನ, ಸ್ಟೆಫಾನ್ ಹಾಗೂ ಬೆ ಬನಶಂಕರಿ ಮಹಿಳಾ ಸಮಾಜ ಸಂಸ್ಥೆಗಳು ಪ್ರಶಸ್ತಿಗೆ ಆಯ್ಕೆಯಾಗಿವೆ.

ಸಾಹಿತ್ಯ ಕ್ಷೇತ್ರ:ಸಾಹಿತ್ಯ ಕ್ಷೇತ್ರದಲ್ಲಿ ಚಾಮರಾಜನಗರದ ಮಹಾದೇವ ಶಂಕನಪುರ,ಚಿತ್ರದುರ್ಗದ ಪ್ರೊಫೆಸರ್ ಟಿ ಡಿ ರಂಗಸ್ವಾಮಿ, ರಾಯಚೂರಿನ ಜಯಲಕ್ಷ್ಮೀ ಮಂಗಳಮೂರ್ತಿ, ಚಿಕ್ಕಮಗಳೂರಿನ ಅಜ್ಜಂಪುರ ಮಂಜುನಾಥ್, ವಿಜಯಪುರದ ಡಾಕ್ಟರ್ ಕೃಷ್ಣ ಕೊಲ್ಹಾರ ಕುಲಕರ್ಣಿ ಹಾಗೂ ಬಾಗಲಕೋಟೆಯ ಸಿದ್ದಪ್ಪ ಬಿದರಿ ಅವರಿಗೆ ಪ್ರಶಸ್ತಿಗಳು ಲಭಿಸಿವೆ.

ರಂಗಭೂಮಿ:ಇನ್ನೂ ರಂಗಭೂಮಿ ಕ್ಷೇತ್ರದಲ್ಲಿ ಹಾವೇರಿಯ ಫಕೀರಪ್ಪ ರಾಮಪ್ಪ ಕೊಡಹಿ ಚಿಕ್ಕಮಗಳೂರಿನ ಪ್ರಕಾಶ್ ಬೆಳವಾಡಿ ಬಳ್ಳಾರಿ ರಮೇಶ್ ಗೌಡ ಪಾಟೀಲ್ ರಾಮನಗರದ ಮಲ್ಲೇಶಯ್ಯ ಗದಗದ ಸಾವಿತ್ರಿ ಗೌಡ

ಜಾನಪದ ಕ್ಷೇತ್ರ:ಜಾನಪದ ಕ್ಷೇತ್ರದಲ್ಲಿ ವಿಜಯಪುರದ ಬಿ ನಾಯಕ ಶಿವಮೊಗ್ಗದ ಗೌರಮ್ಮ ಹುಚ್ಚಪ್ಪ ಮಾಸ್ತರ್ ಬಳ್ಳಾರಿಯ ದುರ್ಗಪ್ಪ ಚನ್ನದಾಸರ ಉಡುಪಿಯ ಬನ್ನಂಜೆ ಬಾಬು ಅಮೀನ್ ಬಾಗಲಕೋಟೆಯ ಮಲ್ಲಿಕಾರ್ಜುನ ರಾಚಪ್ಪ ಮುದಕವಿ ಧಾರವಾಡದ ವೆಂಕಪ್ಪ ಗೋವಿಂದಪ್ಪ ಭಜಂತ್ರಿ ಹಾವೇರಿಯ ಮಹಾರುದ್ರಪ್ಪ ಈರಪ್ಪ ಇಟಗಿ ಅವರಿಗೆ ಪ್ರಶಸ್ತಿ ಲಭಿಸಿವೆ.

ಸಂಗೀತ- ಶಿಲ್ಪಕಲೆ-ಸಮಾಜಸೇವೆ:ಸಂಗೀತ ಕ್ಷೇತ್ರದಲ್ಲಿ ಕೋಲಾರದ ತ್ಯಾಗರಾಜು ದಕ್ಷಿಣಕನ್ನಡದ ಹೆರಾಲ್ಡ್ ಸಿರಿಲ್ ಡಿಸೋಜ ಶಿಲ್ಪಕಲೆ ಕ್ಷೇತ್ರದಲ್ಲಿ ಚಿಕ್ಕಬಳ್ಳಾಪುರದಡಾಕ್ಟರ್ ಜಿ ಜ್ಞಾನಾನಂದ ಕೊಪ್ಪಳದ ವೆಂಕಣ್ಣ ಚಿತ್ರಗಾರ ಸಮಾಜಸೇವೆ ಕ್ಷೇತ್ರದಲ್ಲಿ ಬಾಗಲಕೋಟೆಯ ಸೂಲಗಿತ್ತಿ ಯಮನಪ್ಪ ಮೈಸೂರಿನ ಮುದದಲಿ ಮಾದಯ್ಯ ಬೆಂಗಳೂರಿನ ಮುನಿಯಪ್ಪ ದೊಮ್ಮಲೂರು ಬೆಳಗಾವಿಯ ಬಿ ಎಲ್ ಪಾಟೀಲ್ ಮಂಡ್ಯದ ಜಿ ಎನ್ ರಾಮಕೃಷ್ಣೇಗೌಡ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ವೈದ್ಯಕೀಯ: ಕ್ರೀಡೆ-ಸಿನೆಮಾ:ವೈದ್ಯಕೀಯ ಕ್ಷೇತ್ರದಲ್ಲಿಡಾಕ್ಟರ್ ಸುಲ್ತಾನ್ ಬೀ ಜಗಳೂರು, ಡಾ. ವ್ಯಾಸ ದೇಶಪಾಂಡೆ, ಡಾಕ್ಟರ್ ಪ್ರದೀಪ್, ಡಾ.ಸುರೇಶ್ ರಾವ್ ,ಡಾಕ್ಟರ್ ಸುದರ್ಶನ್ ಡಾಕ್ಟರ್ ಶಿವನಗೌಡ ರುದ್ರಗೌಡ ರಾಮನಗೌಡ,ಕ್ರೀಡಾಕ್ಷೇತ್ರದಲ್ಲಿ ರೋಹನ್ ಬೋಪಣ್ಣ, ಕೆ ಗೋಪಿನಾಥ್, ರೋಹಿತ್ ಕುಮಾರ್ ಕಟೀಲ್, ಎ ನಾಗರಾಜ್ ,ಸಿನಿಮಾ ಕ್ಷೇತ್ರದಲ್ಲಿ ಡೈನಾಮಿಕ್‌ ಸ್ಟಾರ್ ದೇವರಾಜ್ ಅವರು ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಶಿಕ್ಷಣ-ಸಂಕೀರ್ಣ-ವಿಜ್ಞಾನ-ತಂತ್ರಜ್ಞಾನ:ಇನ್ನು ಶಿಕ್ಷಣ ಕ್ಷೇತ್ರದಲ್ಲಿ ಮೈಸೂರಿನ ಸ್ವಾಮಿಲಿಂಗಪ್ಪ, ಧಾರವಾಡದ ಶ್ರೀಧರ್ ಚಕ್ರವರ್ತಿ, ಶಿವಮೊಗ್ಗದ ಪ್ರೊಫೆಸರ್ ಪಿ ವಿ ಕೃಷ್ಣಭಟ್ ,ಸಂಕೀರ್ಣ ಕ್ಷೇತ್ರದಲ್ಲಿ ವಿಜಯನಗರದ ಡಾಕ್ಟರ್ ಬಿ ಅಂಬಣ್ಣ, ಬಳ್ಳಾರಿಯ ಕ್ಯಾಪ್ಟನ್ ರಾಜಾರಾವ್, ಕೊಪ್ಪಳದ ಗಂಗಾವತಿ ಪ್ರಾಣೇಶ್ (ಬೀಚಿ),, ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರಿನ ಡಾಕ್ಟರ್ ಎಚ್ ಎಸ್ ಸಾವಿತ್ರಿ ಡಾಕ್ಟರ್ ಜಿ ಯು ಕುಲಕರ್ಣಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕೃಷಿ-ಪರಿಸರ-ಪತ್ರಿಕೋದ್ಯಮ-ನ್ಯಾಯಾಂಗ ಕ್ಷೇತ್ರ: ಕೃಷಿ ಕ್ಷೇತ್ರದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಡಾಕ್ಟರ್ ಸಿ ನಾಗರಾಜ್, ಬೀದರ್ ನ ಗುರುಲಿಂಗಪ್ಪ ಮೇಲ್ದೊಡ್ಡಿ, ತುಮಕೂರಿನ ಶಂಕರಪ್ಪ ಅಮ್ಮನಘಟ್ಟ, ಪರಿಸರ ಕ್ಷೇತ್ರದಲ್ಲಿ ಉತ್ತರ ಕನ್ನಡ ಜಿಲ್ಲೆಯ ಮಹಾದೇವ ವೇಳಿಪ, ಬೈಕಂಪಾಡಿ ರಾಮಚಂದ್ರ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಮೈಸೂರಿನ ಪಟ್ನಂ ಅನಂತಪದ್ಮನಾಭ, ಉಡುಪಿಯ ಡಾಕ್ಟರ್ ಯು ಬಿ ರಾಜಲಕ್ಷ್ಮಿ,ನ್ಯಾಯಾಂಗ ಕ್ಷೇತ್ರದಲ್ಲಿ ಮೈಸೂರಿನ ಸಿ ವಿ ಕೇಶವಮೂರ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಆಡಳಿತ-ಸೈನಿಕ-ಯಕ್ಷಗಾನ-ಹೊರನಾಡು ಕನ್ನಡಿಗ-ಪೌರ ಕಾರ್ಮಿಕ ಕ್ಷೇತ್ರ: ಆಡಳಿತ ಕ್ಷೇತ್ರದಲ್ಲಿ ಹೆಚ್ಚಾಗಿ ಕಸ್ತೂರಿರಂಗನ್ ,ಸೈನಿಕ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಡಾಕ್ಟರ್ ನವೀನ್ ನಾಗಪ್ಪ, ಯಕ್ಷಗಾನ ಕ್ಷೇತ್ರದಲ್ಲಿ ಶಿವಮೊಗ್ಗದ ಗೋಪಾಲಾಚಾರ್ಯ, ಹೊರನಾಡು ಕನ್ನಡಿಗ ವಿಭಾಗದಲ್ಲಿ ದಟ್ಟ ಸುನೀತಾ ಶೆಟ್ಟಿ ,ಚಂದ್ರಶೇಖರ್ ಪಾಲ್ತಾಡಿ, ಸಿದ್ಧರಾಮೇಶ್ವರ ಕಂಟೀಕರ್ ,ಪ್ರವೀಣ್ ಶೆಟ್ಟಿ, ಪೌರಕಾರ್ಮಿಕ ಕ್ಷೇತ್ರದಲ್ಲಿ ಯಾದಗಿರಿಯ ರತ್ನಮ್ಮ ಶಿವಪ್ಪ ಬಬಲಾದ ಆಯ್ಕೆಯಾಗಿದ್ದಾರೆ.

ಇದೇ ಮೊದಲ ಬಾರಿಗೆ ಹೈದರಾಬಾದ್ ಕರ್ನಾಟಕ ಏಕೀಕರಣ ಹೋರಾಟಗಾರರ ವಿಭಾಗದಲ್ಲಿ ಕಲಬುರಗಿಯ ಮಹಾದೇವಪ್ಪ ಕಡಚೂರು ಅವರನ್ನು ನಾಮನಿರ್ದೇಶನ ಗೊಳಿಸಲಾಗಿದೆ. ಉದ್ಯೋಗ ಕ್ಷೇತ್ರದಲ್ಲಿ ಶಿವಮೊಗ್ಗದ ಭಾಮಾ ಶ್ರೀಕಂಠ,ಬೆಂಗಳೂರಿನ ರಾಘವೇಂದ್ರ ಶೆಣೈ ಹಾಗೂ ಉದ್ಯಮ ಕ್ಷೇತ್ರದಲ್ಲಿ ಬೆಂಗಳೂರಿನ ಖ್ಯಾತ ಉದ್ಯಮಿ ಶ್ಯಾಮರಾಜು ಅವರು ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಎಲ್ಲವೂ ನಿರೀಕ್ಷೆಯಂತೆ ಆಗಿದ್ದರೆ ಕನ್ನಡ ರಾಜ್ಯೋತ್ಸವ ಪುರಸ್ಕೃತರ ಪಟ್ಟಿ ಈಗಾಗಲೇ ಪ್ರಕಟವಾಗಬೇಕಿತ್ತು. ಆದರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಪ್ರಶಸ್ತಿ ಘೋಷಣೆಯನ್ನು‌ ಬಾಕಿ ಉಳಿಸಿಕೊಳ್ಳಲಾಗಿತ್ತು .ಪ್ರಶಸ್ತಿ ಪುರಸ್ಕೃತರಿಗೆ ನಾಳೆಯ ಕನ್ನಡ ರಾಜ್ಯೋತ್ಸವದ ವಿಶೇಷ ಸಂದರ್ಭದಲ್ಲಿ‌‌ ಪ್ರಶಸ್ತಿ ಯನ್ನು ಪ್ರದಾನ ಮಾಡಲಾಗುವುದು ಎಂದು ಕನ್ನಡ ಸಂಸ್ಕ್ರ್ರತಿ ಇಲಾಖೆ ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ.

 

Spread the love

Related Articles

Leave a Reply

Your email address will not be published.

Back to top button
Flash News