HOME MINISTERS SPECIAL OPERATION MEDAL FOR KARNATAKA COPS: IPS ಸಂತೋಷ್ ಬಾಬು,ಖಡಕ್ ಇನ್ಸ್ ಪೆಕ್ಟರ್ ಬಾಲರಾಜ್ ಗೆ ಗೃಹಸಚಿವಾಲಯದ ವಿಶೇಷ ಪದಕ

ಶಿವಕುಮಾರ್ ,ಸುದರ್ಶನ್ ,ಮಹೇಶ್ ಪ್ರಸಾದ್, ಶ್ರೀಧರ್ ಎಸ್ಸಾರ್ ಗೆ ಗೃಹಸಚಿವಾಲಯದ ವಿಶೇಷ ಪದಕ

0

ಬೆಂಗಳೂರು.ವಿಶೇಷ ಕಾರ್ಯಾಚರಣೆಯ ಸಂದರ್ಭದಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಕೆಲಸ ಮಾಡುವ ಪೊಲೀಸ್ ಅಧಿಕಾರಿ ಸಿಬ್ಭಂದಿಗಳಿಗೆ ನೀಡುವ “ಕೇಂದ್ರ ಗೃಹ ಸಚಿವರ ವಿಶೇಷ ಕಾರ್ಯಾಚರಣೆಯ ಪದಕ” ಗಳು ಈ ಬಾರಿ ಕರ್ನಾಟಕದ ಹಲವು ಪೋಲೀಸ್ ಅಧಿಕಾರಿ ಸಿಬ್ಬಂದಿಗೆ ಲಭಿಸಿದೆ.

2021 ರ ಸಾಲಿನ ವಿಶೇಷ ಕಾರ್ಯಾಚರಣೆಯ ಪದಕಗಳನ್ನು ಪಡೆದವರಲ್ಲಿ ಐಪಿಎಸ್ ಅಧಿಕಾರಿ ಸಂತೋಷ್ ಬಾಬು ಸೇರಿದಂತೆ ಇನ್ಸ್ ಪೆಕ್ಟರ್ಸ್ ಗಳಾದ ಜಿ ಬಾಲರಾಜು, ಶಿವಕುಮಾರ್ ,ಸುದರ್ಶನ್ ,ಮಹೇಶ್ ಪ್ರಸಾದ್, ಶ್ರೀಧರ್ ಎಸ್ಸಾರ್ ಸೇರಿದ್ದಾರೆ.

ಇನ್ನುಳಿದಂತೆ ಎಎಸ್ಸೈ ಶೌಕತ್ತಾಲಿ, ಹೆಡ್ ಕಾನ್ ಸ್ಟೆಬಲ್ ಗಳಾದ ಸೋಮಶೇಖರ್, ಫಕ್ರುದ್ದಿನ್ ಕುಂಡಿ, ಕೃಷ್ಣ ದೇವೇಗೌಡ ಹಾಗೂ ಪೇದೆಯಾ ಅಕ್ಬರ್ ಯಡ್ರಾಮಿ ಅವರಿಗೆ ವಿಶೇಷ ಪದಕಗಳು ಲಭಿಸಿವೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

ದೇಶದ ಗಮನಸೆಳೆದ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡು ಪೋಲೀಸ್ ಇಲಾಖೆ ಮತ್ತು ರಾಜ್ಯಕ್ಕೆ ಕೀರ್ತಿ ತಂದ ನಂತಹ ಕೆಲವೇ ಕೆಲವು ಪ್ರಕರಣಗಳನ್ನು ಈ ಪ್ರಶಸ್ತಿಗೆ ಹಾಗೂ ಗೌರವಕ್ಕೆ ಪರಿಗಣಿಸುತ್ತಾ ಬಂದಿರುವುದು ಪೋಲಿಸ್ ಇಲಾಖೆಯ ಸಂಪ್ರದಾಯ.

Spread the love
Leave A Reply

Your email address will not be published.

Flash News