APPU FAN SUCIDE ONLY FOR DONATING HIS EYE / “ಅಪ್ಪು” “ನೇತ್ರದಾನ”ದ ಆದರ್ಶ ಪಾಲಿಸಲು “ಆತ್ಮಹತ್ಯೆ” ಮಾಡಿಕೊಂಡ ಆನೇಕಲ್ “ಅಭಿಮಾನಿ”

ಅಭಿಮಾನವೋ…ಹುಚ್ಚು ಆವೇಶವೋ..ದುಡುಕಿನ ನಿರ್ದಾರವೋ..ಪುನೀತ್ ಅವರಂತೆ ಕಣ್ಣು ದಾನ ಮಾಡಲು ನೇಣಿಗೆ ಶರಣಾದ ಅಭಿಮಾನಿ.

0

ಬೆಂಗಳೂರು/ ಆನೇಕಲ್:ಪುನೀತ್ ದೇಹ ಮಣ್ಣಿಗೆ ಸೇರಿದೆ.ಸಾಯೋ ಮುನ್ನ ತನ್ನ ಕಣ್ಣುಗಳನ್ನು ನಾಲ್ವರಿಗೆ ದಾನ ಮಾಡಿ ತನ್ನ ಮೂಲಕ ಜಗತ್ತನ್ನು ಕಾಣುವುದಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ಪುನೀತ್ ರಾಜ್ ಕುಮಾರ್..ಇಲ್ಲೊಬ್ಬ ಅಭಿಮಾನಿ ಅಪ್ಪು ಅವರಂತೆಯೇ ಮಾದರಿಯಾಗುವ ಏಕೈಕ ಕಾರಣಕ್ಕೆ ತನ್ನ ಬದುಕನ್ನೇ ಕೊನೆಗಾಣಿಸಿಕೊಂಡು ಕಣ್ಣುಗಳನ್ನು ದಾನ ಮಾಡಿ ಅಭಿಮಾನ ಮೆರೆದಿದ್ದಾನೆ.

ಅಂದ್ಹಾಗೆ ಈ ಅಭಿಮಾನಿಯ ಅಭಿಮಾನವನ್ನು ಗಮನಿಸಿದ್ರೆ ಇದೇನು ನೈಜ ಅಭಿಮಾನನೋ..ಹುಚ್ಚು ಆವೇಶವೋ ಒಂದು ಗೊತ್ತಾಗುತ್ತಿಲ್ಲ.ಆದರೂ ಯಾವುದಕ್ಕೂ ಕೇರ್ ಮಾಡದೆ ಆನೇಕಲ್ ನ ರಾಜೇಂದ್ರ ಎಂಬಾತ ಅಪ್ಪು ಅವರಂತೆ ಕಣ್ಣು ದಾನ ಮಾಡಲಿಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾನೆ.ಆತ್ಮಹತ್ಯೆಗೂ ಮುನ್ನ ಮನೆಯವರೊಂದಿಗೆ ಮಾತನಾಡುವಾಗ ತಾನೇನಾದ್ರೂ ಸತ್ತರೆ ತನ್ನ  ಕಣ್ನುಗಳನ್ನು ಅಪ್ಪು ಅವರಂತೆ ಇತರರಿಗೆ ದಾನ ಮಾಡುವಂತೆ ಹೇಳುತ್ತಿದ್ದ ಎನ್ನಲಾಗಿದೆ.ಆದ್ರೆ ಇದನ್ನು ಗಂಭೀರವಾಗಿ ಪರಿಗಣಿಸದ ಮನೆಯವರು ಬೈಯ್ದು ಸಮಾಧಾನ ಮಾಡಿದ್ದಾರೆ.

ಆದರೆ ಅಪ್ಪು ಮೇಲಿನ ಅತಿಯಾದ ಅಭಿಮಾನದಿಂದ ಕೊನೆಗೂ ತಾನಂದುಕೊಂಡಂತೆಯೇ ರಾಜೇಂದ್ರ ಮನೆಯಲ್ಲಿ ಪ್ರತ್ಯೇಕ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ತಮಾಷೆಗೆ ಹೇಳುತ್ತಾನೆಂದುಕೊಂಡಿದ್ದ ಕುಟುಂಬಕ್ಕೆ ರಾಜೇಂದ್ರನ ಸಾವು ತೀವ್ರ ಶೋಕಸಾಗರದಲ್ಲಿ ಮುಳುಗುವಂತೆ ಮಾಡಿದೆ.

ರಾಜೇಂದ್ರ ಸಾಯುವ ಮುನ್ನ ಹೇಳುತ್ತಿದ್ದಂತೆಯೇ ಆತನ ಆಸೆಯಂತೆಯೇ ಕಣ್ಣುಗಳನ್ನು ಆಸ್ಪತ್ರೆಗೆ ದಾನ ಮಾಡಲಾಗಿದೆ.ತಮ್ಮ ಕುಟುಂಬ ಸದಸ್ಯನ ಅಗಲಿಕೆಯ ನೋವಿನಲ್ಲೂ ರಾಜೇಂದ್ರನ ಮಾದರಿಯ ಅಭಿಮಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ.ಇಡೀ ಆನೇಕಲ್ ಗೆ ಆನೇಕಲ್ಲೇ ರಾಜೇಂದ್ರನ ಅಭಿಮಾನಕ್ಕೆ ಗುಣಗಾನ ಮಾಡುತ್ತಿದೆ.

ಕಳೆದ ಒಂದು ವರ್ಷದ ಹಿಂದೆ ಮದುವೆಯಾಗಿದ್ದ ರಾಜೇಂದ್ರ,ಅಪ್ಪು ಅವರ ಅಪ್ಪಟ ಅಭಿಮಾನಿಯಾಗಿದ್ದ.ಅವರ ಚಿತ್ರಗಳನ್ನು ತಪ್ಪದೇ ನೋಡುತ್ತಿದ್ದ.ಅಪ್ಪು ಅವರ ಯಾವುದೇ ಸಿನೆಮಾಗಳು ರಿಲೀಸ್ ಆದರೂ ಮೊದಲ ಶೋ ನೋಡಿ ಬಂದು ಉಳಿದವರಿಗು ಚಿತ್ರ ನೋಡುವಂತೆ ಪ್ರೇರೇಪಿಸುತ್ತಿದ್ದ.ಮದುವೆಯಾದ ಮೇಲೂ ಅದೇ ಅಭಿಮಾನ ಮುಂದುವರೆಸಿದ್ದ

.ಅಪ್ಪು ಸತ್ತ ವಿಷಯ ಕೇಳುತ್ತಿದ್ದಂತೆಯೇ ಮನೆಯಲ್ಲೆಲ್ಲಾ ಬಿದ್ದು ಉರುಳಾಡಿ ರೋಧಿಸಿದ್ದ.ಅನ್ನಾಹಾರವನ್ನೇ ತ್ಯಜಿಸಿದ್ದ.ಆತನನ್ನು ಸಮಾಧಾನಪಡಿಸೊಕ್ಕೆ ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ ಎನ್ನುವುದನ್ನು ನೆನಪು ಮಾಡಿಕೊಳ್ಳುತ್ತಾರೆ ರಾಜೇಂದ್ರ ಸಹೋದರ ಲೋಹಿತ್.

ಒಟ್ಟಿನಲ್ಲಿ ಪುನೀತ್ ಸಾವನ್ನು ಅರಗಿಸಿಕೊಳ್ಳಲಾಗದೆ ಒಂದಷ್ಟು ಅಭಿಮಾನಿಗಳು ಸಾವಿಗೆ ಶರಣಾದರೆ ಅಪ್ಪು ಅವರ ನೇತ್ರದಾನದ ಪರಿಕಲ್ಪನೆಯಿಂದ ಪ್ರೇರೇಪಿತರಾಗಿ ಕಣ್ಣು ದಾನ ಮಾಡಲಿಕ್ಕಾಗಿ ತನ್ನ ಬದುಕನ್ನೇ ಅಂತ್ಯಗೊಳಿಸಿಕೊಂಡಿದ್ದು ಮಾತ್ರ ದುರಂತ.

Spread the love
Leave A Reply

Your email address will not be published.

Flash News