BreakingMoreScrollTop NewsUncategorizedಜಿಲ್ಲೆದೇಶ-ವಿದೇಶಫೋಟೋ ಗ್ಯಾಲರಿರಾಜಕೀಯರಾಜ್ಯ-ರಾಜಧಾನಿ

BY-ELECTION RESULT:BJP LOST-CONGRESS GAIN-JDS WORST: ಕರ್ನಾಟಕದಲ್ಲಿ ಕೈ-ಕಮಲಕ್ಕೆ ಮಿಶ್ರಫಲ-ಸಿಎಂ ತವರು ಜಿಲ್ಲೆಯಲ್ಲಿಯೇ ಬಿಜೆಪಿಗೆ ಭಾರೀ ಮುಖಭಂಗ-ಜೆಡಿಎಸ್ ಗೆ ವರ್ಕೌಟ್ ಆಗದ ಮುಸ್ಲಿಂ ಮತದಾರರ ಓಲೈಕೆ-ಠೇವಣಿ ಕಳೆದುಕೊಂಡ ತೆನೆ ಪಕ್ಷ..

ಕರ್ನಾಟಕದ ಎರಡು ವಿಧಾನಭಾ  ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಸಿಂಧಗಿಯಲ್ಲಿ ಗೆಲುವು ಸಾಧಿಸಿದ್ದರೆ ಕೈ ಅಭ್ಯರ್ಥಿ ಸಿಎಂ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆಯ ಕ್ಷೇತ್ರವಾದ ಹಾನಗಲ್ ನಲ್ಲಿ ಗೆಲುವು ಸಾಧಿಸಿದೆ.

ಈ ಮೂಲಕ ಬಿಜೆಪಿಗೆ ಭಾರೀ ಮುಖಭಂಗವಾದಂತಾಗಿದೆ. ಇನ್ನು ಜೆಡಿಎಸ್ ಎರಡೂ ಕ್ಷೇತ್ರಗಳಲ್ಲಿ ಹೀನಾಯ ಸೋಲು ಕಾಣುವ ಮೂಲಕ ನೆಲ ಕಚ್ಚಿದೆ.ಮುಸ್ಲಿಂ ಮತದಾರರನ್ನು ಓಲೈಸಿದರೂ ಮುಸ್ಲಿಂ ಬಾಹುಳ್ಯವಿರುವ ಎರಡೂ ಕ್ಷೇತ್ರಗಳ ಮತದಾರರು ಠೇವಣಿ ನೀಡದಿರುವುದು ಜೆಡಿಎಸ್ ಗೆ ಭಾರೀ  ಮುಖಭಂಗವಾದಂತಾಗಿದೆ.

ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ವಿವಿಧ ಕ್ಷೇತ್ರಗಳಲ್ಲಿನ ಶಾಸಕರು,ಸಂಸದರು ಸಾವನ್ನಪ್ಪಿದ ಹಿನ್ನಲೆಯಲ್ಲಿ   13 ರಾಜ್ಯ ಒಂದು ಕೇಂದ್ರಾಡಳಿತ ಪ್ರದೇಶಗಳ  3 ಲೋಕಸಭಾ ಕ್ಷೇತ್ರ-29 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಬೈ ಎಲೆಕ್ಷನ್ ರಿಸಲ್ಟ್ ಪ್ರಕಟವಾಗಿದೆ.

ಒಟ್ಟಾರೆ ಫಲಿತಾಂಶ ಗಮನಿಸಿದಾಗ ಆಡಳಿತಾರೂಢ ಬಿಜೆಪಿಗೆ ತೀವ್ರ ಹಿನ್ನಡೆ ಉಂಟಾದಂತಾಗಿದೆ.ಈಗಿನ ವಿದ್ಯಾಮಾನಗಳ ಪ್ರಕಾರ(ಕೊನೇ ಕ್ಷಣದ ಬದಲಾವಣೆ ಹೊರತುಪಡಿಸಿ)29 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿಗೆ ಗೆಲ್ಲೊಕ್ಕೆ ಸಾಧ್ಯವಾಗಿರುವುದು ಕೇವಲ 6 ರಲ್ಲಿ ಮಾತ್ರ.ಕೈ ಅಭ್ಯರ್ತಿಗಳು 9 ಸ್ಥಾನಗಳಲ್ಲಿ ಗೆಲುವಿನತ್ತ ದಾಪುಗಾಲು ಹಾಕುತ್ತಿದ್ದಾರೆ.ಇನ್ನುಳಿದ ಕ್ಷೇತ್ರಗಳಲ್ಲಿ ಆಯಾ ರಾಜ್ಯಗಳ ಪ್ರಾದೇಶಿಕ ಪಕ್ಷಗಳು ಸ್ಪಷ್ಟ ಮುನ್ನಡೆ ಸಾಧಿಸುವ ಮೂಲಕ ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಿದ್ದಾರೆ.

ಈಶಾನ್ಯ ರಾಜ್ಯ ಹಾಗೂ ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಮುನ್ನಡೆಯಾಗಿದ್ಗರೆ, ಹಿಮಾಚಲ ಪ್ರದೇಶದ 1 ಲೋಕಸಭಾ-3 ವಿಧಾನಸಭಾ ಕ್ಷೇತ್ರಗಳಲ್ಲಿ ಕೈ ಮುನ್ನಡೆ ಸಾಧಿಸಿದೆ.

ರಾಜಸ್ತಾನದಲ್ಲೂ ಕೈ ಗೆ ಮುನ್ನಡೆಯಾಗಿದೆ.ಇನ್ನು ದೀದಿ ಸಾಮ್ರಾಜ್ಯವಾದ ಪಶ್ಚಿಮ ಬಂಗಾಳದ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ತೃಣಮೂಲ ಕಾಂಗ್ರೆಸ್ ಸ್ಪಷ್ಟ ಮುನ್ನಡೆ ಸಾಧಿಸಿದೆ.

ಬಿಜೆಪಿ ಅಡಳಿತವಿರುವ  ಅಸ್ಸಾಮ್ ನ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಮುನ್ನಡೆಯಾಗಿದೆ. ಹಾಗೆಯೇ ಬಿಹಾರದ ಎರಡು ಕ್ಷೇತ್ರಗಳಲ್ಲಿ  ತಲಾ ಒಂದೊಂದು ಕ್ಷೇತ್ರದಲ್ಲಿ ಆಡಳಿತಾರೂಧ  ಜೆಡಿಯು,ಆರ್ ಜೆಡಿ  ಮುನ್ನಡೆ ಸಾಧಿಸಿದೆ.

ಅಂದ್ಹಾಗೆ ಅಸ್ಸಾಮ್ ನ ಐದು ವಿಧಾನಸಭಾ ಕ್ಷೇತ್ರ,ಪಶ್ಚಿಮ ಬಂಗಾಳದ ನಾಲ್ಕು,ಮಧ್ಯಪ್ರದೇಶ.ಹಿಮಾಚಲ ಪ್ರದೇಶ,ಮೇಘಾಲಯದ ಮೂರು ಕ್ಷೇತ್ರ,ಬಿಹಾರ್  ಕರ್ನಾಟಕ ಹಾಗು ರಾಜಸ್ತಾನದ ಎರಡು ಕ್ಷೇತ್ರ,ಹಾಗೂ  ಆಂದ್ರಪ್ರದೇಶ,ಹರ್ಯಾಣ,,ಮಹಾರಾಷ್ಟ್ರ, ಮಿಜೋರಾಂ.ತೆಲಂಗಾಣದ 1 ಕ್ಷೇತ್ರಕ್ಕೆ ಬೈ ಎಲೆಕ್ಷನ್ ನಡೆದಿತ್ತು. ಮದ್ಯಪ್ರದೇಶದ ಕಾಂಡ್ವಾ ಲೋಕಸಭಾ ಕ್ಷೇತ್ರದಲ್ಲಿ ಮಾತ್ರ  ಬಿಜೆಪಿಗೆ ಮುನ್ನಡೆ ಬಂದಿದ್ದರೆ, ಹಿಮಾಚಲ ಪ್ರದೇಶದ ಮಂಡಿ ಹಾಗು ದಾದ್ರಾ ನಗರ ಹವೇಲಿಯ  ಲೋಕಸಭಾ ಕ್ಷೇತ್ರದಲ್ಲಿ ಕೈಗೆ ಮುನ್ನಡೆ ದೊರೆತಿದೆ.

Spread the love

Related Articles

Leave a Reply

Your email address will not be published.

Back to top button
Flash News