HEART BREAKING NEWS-APPU FANS ANGRY ON DR.RAMANARAO..?! DEMAND FOR FARE INVESTIGATION -“ಅಪ್ಪು” ಸಾವಿಗೆ “ದೊಡ್ಮನೆ” ಡಾಕ್ಟರ್ ಡಾ.ರಮಣರಾವ್ ಕಾರಣನಾ..?! ಹತ್ತಿರದ ಎಂ.ಎಸ್ ರಾಮಯ್ಯ ಹಾಸ್ಟಿಟಲ್ ಬಿಟ್ಟು, ದೂರದ ವಿಕ್ರಂ ಆಸ್ಪತ್ರೆಗೆ ಸೇರಿಸಿದ್ದೇಕೆ..?! “ಅಪ್ಪು” ಜೀವದ ಜತೆಯಲ್ಲಿ ಚೆಲ್ಲಾಟವಾಡಿದ್ರಾ..? ಅಭಿಮಾನಿಗಳಲ್ಲಿ ಭುಗಿಲೆದ್ದ ಆಕ್ರೋಶ..?

ಸಾಮಾಜಿಕ ಜಾಲತಾಣಗಳಲ್ಲಿ ಡಾ.ರಮಣರಾವ್ ಗೆ ಹಿಡಿಶಾಪ..?! ಸಾವಿನ ಸತ್ಯಾಂಶದ ತನಿಖೆಗೆ ಆಗ್ರಹಿಸಿ ದೂರು-ರಮಣರಾವ್ ಕ್ಲಿನಿಕ್- ಮನೆಗೆ ಬೇಕಿದೆ ಪೊಲೀಸ್ ಭದ್ರತೆ..?!

ಡಾ.ರಮಣರಾವ್
“ದೊಡ್ಮನೆ” ಡಾಕ್ಟರ್ ಡಾ.ರಮಣರಾವ್

ಬೆಂಗಳೂರು:ನಮ್ಮೆಲ್ಲರ  ಪ್ರೀತಿಯ  ಅಪ್ಪು.. ಪುನೀತ್..ಪವರ್ ಸ್ಟಾರ್.. ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾಗಿದೆ… ಮತ್ತೆಂದು ಮರಳಿ ಬಾರದ ಲೋಕದತ್ತ ಪಯಣಿಸಿದ್ದಾಗಿದೆ.ಅವರಿನ್ನು ಕೇವಲ ನೆನಪು.. ಅವರ ಅವಿಸ್ಮರಣೀಯ ಚಿತ್ರಗಳ ಮೂಲಕ..ಸಮಾಜಮುಖಿ-ಮಾನವಮುಖಿ ಕಾರ್ಯಗಳ ಮೂಲಕವಷ್ಟೇ ನೆನಪು ಮಾಡಿಕೊಳ್ಳಬೇಕು.. .ನಿಜ..ಇದೇ  ವಾಸ್ತವ..ಆದ್ರೆ ಅದೇಕೋ ಅದೊಂದು ವಿಚಾರ ಮಾತ್ರ ರಹಸ್ಯವಾಗೇ ಉಳಿದೋಯ್ತ..? ಎನ್ನುವುದಷ್ಟೇ ಬೇಸರ..ಅದು ಅವರ ಸಾವಿನ ರಹಸ್ಯ..ಸಾವಿಗೆ ನಿಜವಾದ ಕಾರಣವೇನು ಎನ್ನುವುದರ ಬಗೆಗಿನ ರಹಸ್ಯ..

ಅಪ್ಪುಗೆ ಪ್ರಾಥಮಿಕ ಚಿಕಿತ್ಸೆ ಕೊಟ್ಟು ವಿಕ್ರಂ ಆಸ್ಪತ್ರೆಗೆ ದಾಖಲಿಸಿದ “ದೊಡ್ಮನೆ” ಫ್ಯಾಮಿಲಿ ಡಾಕ್ಟರ್  ಡಾ.ರಮಣರಾವ್…ಅಪ್ಪು ಜತೆಗಿದ್ದ ಪತ್ನಿಗಷ್ಟೇ ಗೊತ್ತಿರಬಹುದಾದ ಆ ಸಂಗತಿ ಯಾವತ್ತಿದ್ರೂ ಬಹಿರಂಗವಾಗಬೇಕಲ್ಲ.. ಬಯಲಾಗಬೇಕೆನ್ನುವುದಲ್ಲ…. ಬಟಾಬಯಲಾಗಲೇಬೇಕು.. ಪತಿಯ ಅಗಲಿಕೆಯಿಂದ ಪತ್ನಿ ಅಶ್ವಿನಿ ಅಕ್ಷರಶಃ ಅಘಾತಕ್ಕೊಳಗಾಗಿದ್ದಾರೆ..ಅವರು ಸಹಜ ಸ್ಥಿತಿಗೆ ಬರೊಕ್ಕೆ ಇನ್ನೊಂದಷ್ಟು ದಿನ ಬೇಕಾಗಬಹುದೇನೋ…

ಅಂದು ಏನಾಯ್ತೆನ್ನುವುದನ್ನು ಹೇಳೊಕ್ಕೆ ಆ ನೋವು ಅನುಭವಿಸಿ ಸಾವನ್ನಪ್ಪಿದ ಅಪ್ಪು ನಮ್ಮ ನಡುವಿಲ್ಲ.ಆ ರಹಸ್ಯ ಅರಿತ ಇನ್ನೊಂದು ವ್ಯಕ್ತಿತ್ವವಾಗಿ ನಮ್ಮ ಮುಂದೆ ಇರೋದು ಡಾ.ರಮಣರಾವ್ ಅಷ್ಟೇ… ಆದ್ರೆ ಅವರು ಹೇಳುವುದನ್ನು ಸಲೀಸಾಗಿ ಅಪ್ಪು ಅಭಿಮಾನಿಗಳು ನಂಬುತ್ತಲೇ ಇಲ್ಲ. ರಮಣರಾವ್ ಹೇಳುತ್ತಿರುವುದು ಎಷ್ಟರ ಮಟ್ಟಿಗೆ ಸತ್ಯನೋ..ಸುಳ್ಳೋ,ಆದ್ರೆ ಅಶ್ವಿನಿ ಮೌನಕ್ಕೆ ಶರಣಾಗಿರುವುದರಿಂದ ರಮಣರಾವ್ ಹೇಳೋದನ್ನೇ ಕೇಳಬೇಕಿದೆ ಅಷ್ಟೇ..

ಹಾರ್ಟ್ ಅಟ್ಯಾಕ್..ಕಾರ್ಡಿಯಕ್ ಅರೆಸ್ಟ್ ಎನ್ನುವ ಆಯಾಮಗಳಲ್ಲಿ ಪುನೀತ್ ಸಾವು ಚರ್ಚೆ ಯಾಗುತ್ತಿದೆ. ಡಾ,ರಮಣರಾವ್, ಡಾ.ಮಂಜುನಾಥ್ ಸೇರಿದಂತೆ ಸಾಕಷ್ಟು ವೈದ್ಯರು ಇದರ ಬಗ್ಗೆ ಮಾತನ್ನಾಡಿದ್ದಾಗಿದೆ..ಆದ್ರೆ ಚರ್ಚೆ ಅದೇ ಚೌಕಟ್ಟಿನಲ್ಲಿ ನಡೆಯುತ್ತಿ ದ್ದರೂ ಅಪ್ಪು ಸಾವಿಗೆ ಬೇರೆಯದೇ ಕಾರಣ ಇತ್ತಾ…?ಎನ್ನುವ ಬಗ್ಗೆ ಪ್ರಶ್ನೆಗಳು ಸುಳಿದಾಡತೊಡಗಿವೆ.ಆ ಎಲ್ಲಾ ಪ್ರಶ್ನೆಗಳು ಗಿರಕಿ ಹೊಡೆಯುತ್ತಿರುವುದು ಡಾ,.ರಮಣರಾವ್ ಸುತ್ತ.ಅವರು ನೀಡುತ್ತಿರುವ ಕಾರಣಗಳ ಸುತ್ತ..! ಅಪ್ಪು ಅಭಿಮಾನಿಗಳು ಇಂತದೊಂದಷ್ಟು ಪ್ರಶ್ನೆಗಳನ್ನು ಎತ್ತಿದ್ದಾರೆ.

ಅಪ್ಪು ವಿಷಯದಲ್ಲಿ ರಮಣರಾವ್ ಒಬ್ಬ ತಜ್ಞ ಹಾಗು ನುರಿತ ವೈದ್ಯರಾಗಿ ನಡೆದುಕೊಳ್ಳಲಿಲ್ಲ ಎನ್ನುವುದು ಆವೇಶ-ಆಕ್ರೋಶದಲ್ಲಿ ಕುದಿಯುತ್ತಿರುವ ಸಾಕಷ್ಟು ಅಭಿಮಾನಿಗಳ ಆಕ್ಷೇಪ ಹಾಗೂ ಅಸಮಾಧಾನ. ಅಪ್ಪುಗೆ ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡು ಡಾ.ರಮಣರಾವ್ ಕ್ಲಿನಿಕ್ ಗೆ ಹೋದ ಕ್ಷಣದಿಂದ ಹಿಡಿದು ಚಿಕಿತ್ಸೆ ಕೊಟ್ಟು, ವಿಕ್ರಂ ಆಸ್ಪತ್ರೆಗೆ ಅಡ್ಮಿಟ್ ಮಾಡಿಸಿ,ಚಿಕಿತ್ಸೆ ಫಲಕಾರಿಯಾಗದೆ ಅಪ್ಪು ನಮ್ಮನ್ನೆಲ್ಲಾ ಬಿಟ್ಟು ಅಗಲಿದ ಸನ್ನಿವೇಶದವರೆಗಿನ ಬೆಳವಣಿಗೆಗಳ ಕುರಿತು ಅಭಿಮಾನಿಗಳು ವ್ಯಕ್ತಪಡಿಸುತ್ತಿರುವ ಶಂಕೆಯ ಪ್ರಶ್ನೆಗಳು ಇಂತಿವೆ..

ಅಪ್ಪುಗೆ ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡು ಡಾ.ರಮಣರಾವ್ ಕ್ಲಿನಿಕ್ ಗೆ ಹೋದ ಕ್ಷಣದಿಂದ ಹಿಡಿದು ಚಿಕಿತ್ಸೆ ಕೊಟ್ಟು, ವಿಕ್ರಂ ಆಸ್ಪತ್ರೆಗೆ ಅಡ್ಮಿಟ್ ಮಾಡಿಸಿ,ಚಿಕಿತ್ಸೆ ಫಲಕಾರಿಯಾಗದೆ ಅಪ್ಪು ನಮ್ಮನ್ನೆಲ್ಲಾ ಬಿಟ್ಟು ಅಗಲಿದ ಸನ್ನಿವೇಶದವರೆಗಿನ ಬೆಳವಣಿಗೆಗಳ ಕುರಿತು ಅಭಿಮಾನಿಗಳು ವ್ಯಕ್ತಪಡಿಸುತ್ತಿರುವ ಶಂಕೆಯ ಪ್ರಶ್ನೆಗಳು ಇಂತಿವೆ..

1-ಪುನೀತ್ ಚಿಕಿತ್ಸೆಗೆಂದು ಕ್ಲಿನಿಕ್ ಗೆ ಬಂದಾಗ ಇಸಿಜಿ ಮಾಡಿದ್ದ ವೈದ್ಯ ರಮಣರಾವ್ ಅವರಿಗೆ, ಇಸಿಜಿ ವೇಳೆ ಹೃದಯದಲ್ಲಿ ಸಮಸ್ಯೆ ಇರೋದು ಗೊತ್ತಾಗಿತ್ತು. ಆಗ ಅಲ್ಲೇ ತಮ್ಮ ಅನುಭವ ಬಳಸಿ ಪ್ರಾಥಮಿಕ ಚಿಕಿತ್ಸೆ ನೀಡಬೇಕಿತ್ತು. ಅದನ್ನು ಮಾಡದೇ ಕನ್ನಿಂಗ್ ಹ್ಯಾಂ ರಸ್ತೆಯ ವಿಕ್ರಂ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ಕೊಟ್ಟಿದ್ದೆಷ್ಟು ಸರಿ..?

2-ಎಲ್ಲಾ ರೀತಿಯ ಸುಸಜ್ಜಿತವಾದ ವೈದ್ಯಕೀಯ ಸೇವೆಯನ್ನು ಹೊಂದಿದೆ ಎನ್ನಲಾಗುತ್ತಿರುವ ರಮಣರಾವ್ ಅವರ ಕ್ಲಿನಿಕ್ ನಲ್ಲಿ ಯಾವುದಾದರೂ ಗಂಭೀರ ಆರೋಗ್ಯ ಸಮಸ್ಯೆಗಳಾದರೆ ಅವರನ್ನು ಸಾಗಿಸಲು ವೆಂಟಿಲೇಟರ್ ಯುಕ್ತ ಅಂಬುಲೆನ್ಸ್ ಗಳಿಲ್ಲವೇ..? ಅಥವಾ ಅಂತದೊಂದಿಷ್ಟು ವ್ಯವಸ್ಥೆಯನ್ನು ತಕ್ಷಣಕ್ಕೆ ಮಾಡಿಕೊಳ್ಳಬಹುದಿತ್ತಲ್ಲವೇ..? ಪುನೀತ್ ಅಂಥ ವಿವಿಐಪಿಗೆ ಇಂತದ್ದೊಂದು ಸಮಸ್ಯೆ ಇದೆ ಎಂದು ಹೇಳಿದ್ರೆ ಹತ್ತಿರದಲ್ಲೇ ಇರಬಹುದಾದ ವೆಂಟಿಲೇಟರ್ ಯುಕ್ತ ಅಂಬುಲೆನ್ಸ್ ಗಳು ಬರಲು ನಿರಾಕರಿಸುತ್ತವಾ..? ವಿವಿಐಪಿಗಳೇ ಹೆಚ್ಚಾಗಿರುವ ಪ್ರತಿಷ್ಟಿತ ಏರಿಯಾದಲ್ಲಿ ಇದು ತತ್ ಕ್ಷಣಕ್ಕೆ ಸಾಧ್ಯವಾಗುವಂಥ ವ್ಯವಸ್ಥೆಯಲ್ಲವೇ..? ಟೆನ್ಷನ್ ನಲ್ಲಿ ಇದನ್ನು ಮರೆತುಬಿಟ್ಟರಾ ರಮಣರಾವ್ ..?

ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿರುವ ಅಭಿಪ್ರಾಯಗಳು
ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿರುವ ಅಭಿಪ್ರಾಯಗಳು

3- ಅಪ್ಪು ಅವರ ಮನೆ ಇರುವ ಸದಾಶಿವನಗರಕ್ಕೆ ತಾಗಿಕೊಂಡಂತೆಯೇ ಇರುವ ಎಂ.ಎಸ್ ರಾಮಯ್ಯ ಆಸ್ಪತ್ರೆಯೇ, ವಿಕ್ರಂ ಆಸ್ಪತ್ರೆಗಿಂತ ಹತ್ತಿರವಿದ್ದರೂ ವಿಕ್ರಂಗೇಕೇ ರೆಫರ್ ಮಾಡಿದ್ರು..? ಹೃದಯ ಸಂಬಂಧಿ ಚಿಕಿತ್ಸೆಗೆ ಸಹಕಾರಿಯಾಗಲು ನಾರಾಯಣ ಹೃದಯಾಲಯದ ಸಹಯೋಗದಲ್ಲಿ ಹೊಸದಾದ ಯೂನಿಟ್ ಇದ್ದರೂ ಅಲ್ಲಿಗೇಕೆ ಕರೆದೊಯ್ಯದೇ ನೇರವಾಗಿ ವಿಕ್ರಂಗೆ ಹೋಗಲು ಹೇಳಿದ್ದೇಕೆ…

4-ಅಪ್ಪು ಜೀವನ್ಮರಣಗಳ ನಡುವೆ ಹೋರಾಡುವ ಕೊನೇ ಗಳಿಗೆಯ ಗೋಲ್ಡನ್ ಅವರ್ ವೇಳೆ ಅತ್ಯಾಧುನಿಕ ವೈದ್ಯಕೀಯ ವ್ಯವಸ್ಥೆಯುಳ್ಳ ಅಂಬುಲೆನ್ಸ್ ನ್ನು ಕರೆಯಿಸಿದಿದ್ದರೆ ಅಥವಾ ರಮಣರಾವ್ ಅವ್ರೇ ಕಾಲ್ ಮಾಡಿ ಅಂತದ್ದೊಂದು ವ್ಯವಸ್ಥೆ ಮಾಡಿದಿದ್ದರೆ ಆ ಗೋಲ್ಡನ್ ಅವರ್ ನಲ್ಲಿ ಅಪ್ಪು ಅವರನ್ನು ಉಳಿಸಿಕೊಳ್ಳಬಹುದಾಗಿತ್ತೇನೋ..? ವೈದ್ಯಕೀಯ ಕ್ಷೇತ್ರದಲ್ಲಿ ಅಷ್ಟೊಂದು ವರ್ಷಗಳ ಅನುಭವವಿರುವ ರಮಣರಾವ್ ಕೇವಲ ಕಾರ್ಡಿಯಕ್ ಅರೆಸ್ಟ್ ಆದವರ ಜೀವ ಉಳಿಸೋದು ತೀರಾ ಕಷ್ಟ ಎನ್ನುವ ಮಾತನ್ನಾಡುತ್ತಿದ್ದಾರೆಯೇ ಹೊರತು,ಅಪ್ಪು ಅವರನ್ನು ಬದುಕುಳಿಸುವ ಪ್ರಯತ್ನಗಳ ಬಗ್ಗೆ ಪ್ರಸ್ತಾಪ ಮಾಡುತ್ತಲೇ ಇಲ್ಲ..?

ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿರುವ ಅಭಿಪ್ರಾಯಗಳು-1
ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿರುವ ಅಭಿಪ್ರಾಯಗಳು-1

5-ಪ್ರತಿಷ್ಟೆಗಷ್ಟೇ ತಮ್ಮನ್ನು ದೊಡ್ಮನೆಯ  ಫ್ಯಾಮಿಲಿ ಡಾಕ್ಟರ್ ಎಂದು ಹಾಡಿ ಹೊಗಳಿಕೊಳ್ಳುವ, ಬೆಂಗಳೂರಿನ ಪ್ರತಿಷ್ಟಿತ ವೈದ್ಯ ಎಂದು ಕರೆಯಿಸಿಕೊಳ್ಳುವ  ರಮಣರಾವ್ ಅವರ ಕ್ಲಿನಿಕ್ ನಲ್ಲಿ ಎಮರ್ಜೆನ್ಸಿ ಸನ್ನಿವೇಶದಲ್ಲಿ ರೋಗಿಗಳನ್ನು ಆಸ್ಪತ್ರೆಗಳಿಗೆ ಸಾಗಿಸಲು ವೆಂಟಿಲೇಟರ್ ಯುಕ್ತ ಅಂಬುಲೆನ್ಸ್ ಗಳಿಲ್ಲವೇ..?ಅಥವಾ ಕೆಲವೇ ನಿಮಿಷಗಳಲ್ಲಿ ಅಂತದ್ದೊಂದು ವ್ಯವಸ್ಥೆ ಮಾಡುವಷ್ಟು ಕೆಪಾಸಿಟಿ ಇರಲಿಲ್ಲವೇ..?

6-ಅಪ್ಪು ಅವರನ್ನು ವಾಹನದಲ್ಲಿ ಕೊಂಡೊಯ್ಯುವ ಬದಲು ಅಂಬುಲೆನ್ಸ್ ನಲ್ಲಿ ಚಿಕಿತ್ಸೆ ಕೊಡುತ್ತಾ ಕರೆದೊಯ್ಯವ ಕೆಲಸ ಮಾಡಬಹುದಿತ್ತಲ್ಲವಾ..? ಅಶ್ವಿನಿ ಬದಲು  ತಾವೇ ಅವರನ್ನು ಕೂರಿಸಿಕೊಂಡೋ..ಮಲಗಿಸಿಕೊಂಡೋ ಆಸ್ಪತ್ರೆಗೆ ಹೋಗಬಹುದಿತ್ತಲ್ಲ..ಹೋಗುವಾಗಲೇ ಅಪ್ಪುಗೆ ಅಗತ್ಯವಿರುವ ಚಿಕಿತ್ಸೆ ಕೊಡಬಹುದಿತ್ತೇನೋ..ಅಥವಾ ಅಪ್ಪುಗೆ ಚಿಕಿತ್ಸೆಗಿಂತ  ಹೆಚ್ಚು ಅಗತ್ಯವಾಗಿ ಬೇಕಿರೋ ಧೈರ್ಯ-ಸಾಂತ್ವನ ಹೇಳಬಹುದಿತ್ತೇನೋ..ಗಾಬರಿಯಲ್ಲಿದ್ದ ಪತ್ನಿ ಅಶ್ವಿನಿ ಅವರಿಗೂ ಪಾಪ ಅಂತ ಕ್ರಿಟಿಕಲ್ ಮೂಮೆಂಟ್ ನಲ್ಲಿ ಏನ್ ಮಾಡೊಕ್ಕಾಗುತ್ತಾ..? ಈ ಸಾಮಾನ್ಯವಾದ ಸತ್ಯ ರಮಣರಾವ್ ಗೆ ಅರ್ಥವಾಗಲಿಲ್ಲವೇಕೆ..? ವಿಕ್ರಂ ಆಸ್ಪತ್ರೆಗೆ ತತ್ ಕ್ಷಣಕ್ಕೆ ಕರೆ ಮಾಡಿ ಅಲ್ಲಿ ವೈದ್ಯರನ್ನು ರೆಡಿ ಮಾಡಿಸಿ ಉಪಕಾರ ಮಾಡಿದೆ ಎನ್ನುವ ರೇಂಜ್ ನಲ್ಲಿ ಬಿಲ್ಡಪ್ ಕೊಡುತ್ತಿದ್ದಾರಷ್ಟೇ..? ರಮಣರಾವ್ ಅವ್ರೇ ಅಪ್ಪು ಜತೆಗಿದ್ದು ಅಂತದ್ದೊಂದು ಕೆಲಸ ಮಾಡಬಹುದಿತ್ತಲ್ಲಾ..?

7-ಆಸ್ಪತ್ರೆಗೆ ಕೊಂಡೊಯ್ಯುವ ಮುನ್ನ ತಮ್ಮದೇ ಕ್ಲಿನಿಕ್ ನಲ್ಲಿರುವ ಸೌಲಭ್ಯಗಳಲ್ಲೇ ಪುನೀತ್ ಅವರಿಗೆ ಪ್ರಾಥಮಿಕ ಚಿಕಿತ್ಸೆ ಕೊಡಬಹುದಿತ್ತೇನೋ..? ಪುನೀತ್ ಜೀವಕ್ಕೆ ಅಪಾಯವಿದೆ ಎಂದು ತಿಳಿದಾಕ್ಷಣ ಕೊಂಚವೂ ತಡಮಾಡದೆ ಏನಾದ್ರೊಂದು ಚಿಕಿತ್ಸೆ ಮಾಡಬಹುದಿತ್ತೇನೋ..? ಕೇವಲ ಕಾಮನ್ ಮ್ಯಾನ್ ರಂತೆ ಪುನೀತ್ ಅವರನ್ನು ಟ್ರೀಟ್ ಮಾಡಿದ್ರಾ..?

ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿರುವ ಅಭಿಪ್ರಾಯಗಳು-2
ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿರುವ ಅಭಿಪ್ರಾಯಗಳು-2

8- ಕೆಲ ವೈದ್ಯರು ಹೇಳುವಂತೆ ಹಾರ್ಟ್ ಅಟ್ಯಾಕ್ ಅಥವಾ ಕಾರ್ಡಿಯಕ್ ಅರೆಸ್ಟ್  ಆದ ವೇಳೆ, ರೋಗಿಗಳಿಗೆ ಕೆಲವು ನಿರ್ದಿಷ್ಟವಾದ ಮಾತ್ರೆ ನೀಡಿದ್ರೆ ರಕ್ತಸಂಚಲನ ಸಹಜ ಸ್ತಿತಿಗೆ ಬರುತ್ತಂತೆ.. ಆ ಫಾರ್ಮೂಲವನ್ನು ಅಪ್ಪು ವಿಷಯದಲ್ಲಿ ಅಪ್ಲೈ ಮಾಡಲಿಕ್ಕೆ ಅವಕಾಶವಿತ್ತಾ..? ಅಥವಾ ಕೃತಕ ಉಸಿರಾಟ ವ್ಯವಸ್ಥೆ ಮಾಡಬಹುದಿತ್ತೇನೋ..? ಅದನ್ನೇಕೆ ರಮಣರಾವ್ ಮಾಡಲಿಲ್ಲ..?

9-ಎಂ.ಎಸ್ ರಾಮಯ್ಯಕ್ಕೆ ಹೋಲಿಸಿದಲ್ಲಿ ಒಂದಷ್ಟು ದೂರದಲ್ಲಿರುವ ವಿಕ್ರಂ ಆಸ್ಪತ್ರೆಗೇನೆ ರೆಫರ್ ಮಾಡುವ ಹಿಂದೆ ಅಲ್ಲಿ ತಮ್ಮ ಹತ್ತಿರದ ಸಂಬಂಧಿ ಇದ್ದರೆನ್ನುವುದು ಕಾರಣವಾಗಿತ್ತಾ..? ವಿಕ್ರಂ ಆಸ್ಪತ್ರೆಯಲ್ಲಿ ರಮಣರಾವ್ ಅವರ ಕನ್ಸಲ್ಟೆನ್ಸಿ ಇದ್ದುದ್ದರಿಂದ ಪ್ರತಿಷ್ಟೆಗೆ ವಿಕ್ರಂಗೆ ರೆಫರ್ ಮಾಡಲಾಯಿತಾ..? ಹೃದಯಕ್ಕೆ ಸಂಬಂಧಿಸಿದಂತೆ ಅತ್ಯಂತ ಉತ್ಕ್ರಷ್ಟ ದರ್ಜೆಯ ಚಿಕಿತ್ಸೆ ಯೂನಿಟ್ ಇದ್ದ ಹೊರತಾಗ್ಯೂ ಎಂ.ಎಸ್ ರಾಮಯ್ಯಗೆ ಕೊಂಡೊಯ್ಯಲಿಲ್ಲವಾ..? ರಮಣರಾವ್ ಅವರಿಗೆ ಒಂದು ಜೀವ ಉಳಿಯಬೇಕೆನ್ನುವ ಕಾಳಜಿಗಿಂತ ವಿಕ್ರಂಗೇ ಕೊಂಡೊಯ್ಯಬೇಕೆನ್ನುವ  ಪ್ರತಿಷ್ಟೆ ಮುಖ್ಯವಾಯಿತೇ..?

10-ಹಲವು ವೈದ್ಯರೇ ಹೇಳುವಂತೆ  ತುರ್ತು ಸಮಯದಲ್ಲಿ ಜೀವರಕ್ಷಕ ಇಂಜೆಕ್ಷನ್ ಅಥವಾ ಮಾತ್ರೆಗಳಿರುತ್ವೆ..ಅವು ಅಪಾಯವನ್ನು ಪೋಸ್ಟ್ ಪೋನ್ ಮಾಡುತ್ತವೆ..ಅಂಥಾ ಜೀವರಕ್ಷಕ ಔಷದೋಪಚಾರವನ್ನೇಕೆ ರಮಣರಾವ್ ಮಾಡಲಿಲ್ಲ.ಅವರು ಹಾಗೆ ಮಾಡಿದಿದ್ದರೆ, ಅಪಾಯವನ್ನು ತಡೆಗಟ್ಟಬಹುದಿತ್ತೇನೋ..?

11-ಕೇವಲ ಐದಾರು ನಿಮಿಷದಲ್ಲಿ ವಿಕ್ರಂ ಆಸ್ಪತ್ರೆಗೆ ರೀಚ್ ಆದೆವು ಎಂದು ರಮಣರಾವ್ ಹೇಳುತ್ತಿರುವುದೇ ಡೌಟ್ ಫುಲ್ ಆಗಿದೆ.. ಕನಿಷ್ಟ 4 ಕಿಲೋಮೀಟರ್ ದೂರವಿರುವ ವಿಕ್ರಂ ಆಸ್ಪತ್ರೆಗೆ ಕೇವಲ 5-6 ನಿಮಿಷಗಳಲ್ಲಿ ರೀಚ್ ಆಗಲು ಸಾಧ್ಯನಾ..?ಅವರು ಹೋಗಿದ್ದು ಸಾಮಾನ್ಯ ಕಾರಿನಲ್ಲಿ, ಅದು ಕೂಡ ಪೀಕ್ ಅವರ್. ವಿಕ್ರಂ ಆಸ್ಪತ್ರೆ ಟು ಸದಾಶಿವನಗರದ ಆ ರಸ್ತೆಯಲ್ಲಿ ಟ್ರಾಫಿಕ್ ಇರಲಿಲ್ಲವೇ..ಅಷ್ಟೊಂದು ಕಡಿಮೆ ಸಮಯದಲ್ಲಿ ಕರೆತಂದೆವೆನ್ನುವುದನ್ನು ನಂಬೋದು ಕಷ್ಟ..?  ವಿಕ್ರಂಗೆ ಹೋಲಿಸಿದ್ರೆ ಎಂ.ಎಸ್ ರಾಮಯ್ಯ ಹತ್ತಿರವಿದೆ..ಅಲ್ಲದೇ ಆ ರಸ್ತೆಯಲ್ಲಿ ಟ್ರಾಫಿಕ್ಕೂ ಕಡ್ಮೆ..ರಮಣರಾವ್ ತಲೆ ಓಡಿಸಿದಿದ್ರೆ ವಿಕ್ರಂಗಿಂತ ಮುನ್ನವೇ ಎಂ.ಎಸ್ .ರಾಮಯ್ಯಗೆ ಶಿಫ್ಟ್ ಮಾಡಿಸಿ ತುರ್ತು ಚಿಕಿತ್ಸೆ ಕೊಡಿಸಿ,ಪ್ರಾಣ ಉಳಿಸಬಹುದಿತ್ತೇನೋ..?

ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿರುವ ಅಭಿಪ್ರಾಯಗಳು-3
ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿರುವ ಅಭಿಪ್ರಾಯಗಳು-3

12-ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಘಟನೆ ನಡೆಯುತ್ತಿದ್ದಂತೆಯೇ ಇನ್ಫಾರ್ಮ್ ಮಾಡಿದಿದ್ರೆ ಡಾ.ರಾಜ್ ಫ್ಯಾಮಿಲಿ ಬಗ್ಗೆ ಅತ್ಯಾಪ್ತ ಭಾವನೆ-ಸಂಬಂಧ ಹೊಂದಿರುವ ಅಲ್ಲಿನ ನುರಿತ ವೈದ್ಯಕೀಯ ಸಿಬ್ಬಂದಿಯೇ ವೆಂಟಿಲೇಟರ್ ಯುಕ್ತ ಎಮರ್ಜೆನ್ಸಿ ಯೂನಿಟನ್ನೇ ಪುನೀತ್ ಮನೆಗೋ..ರಮಣರಾವ್ ಕ್ಲಿನಿಕ್ ಗೋ ತಂದುಬಿಡುತ್ತಿದ್ದರೇನೋ..ಅಂತದ್ದೊಂದು ವ್ಯವಸ್ಥೆ ರಾಮಯ್ಯದಲ್ಲಿದ್ದರೂ ಏಕೆ ರಮಣರಾವ್ ಆ ಬಗ್ಗೆ ಕೊಂಚವೂ ಯೋಚಿಸಲಿಲ್ಲ..?

ಹೀಗೆ ಹತ್ತಲವು ಪ್ರಶ್ನೆಗಳು ಅಭಿಮಾನಿಗಳಿಂದ ಕೇಳಲ್ಪಡುತ್ತಿದೆ.ಡಾ.ರಮಣರಾವ್ ಅವರ ದಕ್ಷತೆ-ತಜ್ಞತೆ ಬಗ್ಗೆ ಅನುಮಾನಿಸುವುದು ಸರಿಯಲ್ಲ ಎಂದು ಹೇಳುವವರ ನಡುವೆ, ಅಪ್ಪು ಅವರನ್ನು ಕಳೆದುಕೊಂಡ ನೋವಲ್ಲಿ ಅಭಿಮಾನಿಗಳು  ಈ ರೀತಿಯ ಒಂದಷ್ಟು ಪ್ರಶ್ನೆಗಳನ್ನು ಮುಂದಿಟ್ಟು ಶಂಕೆ ವ್ಯಕ್ತಪಡಿಸುವುದು ಕೂಡ ತಪ್ಪೇನಲ್ಲ ಎನಿಸುತ್ತದೆ.

ಡಾಕ್ಟರ್ ರಮಣರಾವ್ ಕನ್ನಡದ ನುರಿತ ತಜ್ಞ, ಅನುಭವಿ ವೈದ್ಯ ಎನ್ನುವುದರಲ್ಲಿ  ದೂಸ್ರಾ ಮಾತಿಲ್ಲ ಅವರಿಗೆ  ಆ “ಕ್ವಾಲಿಟಿಸ್.. ಕೆಪಾಸಿಟಿ..” ಇಲ್ಲದಿದ್ದರೆ  ಅಣ್ಣಾವ್ರ ಕುಟುಂಬದ ಆರೋಗ್ಯ ನಿರ್ವಹಣೆ ಕೆಲಸವನ್ನು ನೋಡಿಕೊಳ್ಳಕ್ಕೆ ಸಾಧ್ಯವೇ ಇರುತ್ತಿರಲಿಲ್ಲ. ಕೇವಲ ದೊಡ್ಮನೆ ಮಾತ್ರವಲ್ಲ ಅನೇಕ ಗಣ್ಯರು ಪ್ರತಿಷ್ಠಿತರು ಹಾಗೂ ಅವರ ಕುಟುಂಬಗಳಿಗೆ ಇವರೇ ಬೇಕು ಎನ್ನುವಷ್ಟು ಡಾ ರಮಣರಾವ್ ಅಚ್ಚುಮೆಚ್ಚು. ಅವರಲ್ಲಿ ಅಂಥಾ ತಜ್ಞತೆ- ದಕ್ಷತೆ- ಬದ್ಧತೆ ಇಲ್ಲದಿದ್ದರೆ ಇದೆಲ್ಲ ಸಾಧ್ಯವಾಗುತ್ತಿರಲಿಲ್ಲ ಎನ್ನುವುದು ಕೂಡ ಅಷ್ಟೇ ಸತ್ಯ.

ಹಾಗಂತ ದೊಡ್ಡವರಿಂದ ತಪ್ಪುಗಳ ಆಗಲೇ ಬಾರದು ಎಂಬ ಲಿಖಿತ ನಿಯಮವೇನೂ ಇಲ್ಲವಲ್ಲ.. ಎಂತೆಂಥ ದೊಡ್ಡವರಿಗೇನೆ ಟೈಮ್ ಕೈ ಕೊಟ್ಟ ನಿದರ್ಶನಗಳಿವೆ. ಆಯಾ ಸಂದರ್ಭಗಳಿಗೆ ಅವರೆಲ್ಲ ಅವರನ್ನು ಹತ್ತಿರದಿಂದ ಬಲ್ಲವರಿಂದ-ಅಗಾಧವಾಗಿ ನಂಬಿದವರಿಂದಲೇ ಟೀಕಿಸಿ ಕೊಂಡಿರುವುದುಂಟು. ಆಕ್ರೋಶಕ್ಕೆ ಈಡಾಗಿರುವುದುಂಟು. ಇಂಥ ಅನುಭವಗಳಿಗೆ ರಮಣ ರಾವ್ ಹೊರತಾಗಬೇಕೆಂದೇನಿಲ್ಲವಲ್ಲ..

ಡಾ.ರಮಣರಾವ್ ಅವರ ಮಾತುಗಳ ಮೇಲೆ ಅದೇನೋ ಅವಿಶ್ವಾಸ ವ್ಯಕ್ತಪಡಿಸಿರುವ ಲಕ್ಷಾಂತರ ಅಭಿಮಾನಿಗಳು, ಅಶ್ವಿನಿ ಮೌನ ಮುರಿದು ಬಾಯಿ ಬಿಡುವವರೆಗೂ ಕಾಯುವಂ ತಾಳ್ಮೆಯ ಮನಸ್ತಿತಿಯಲ್ಲಿಲ್ಲ..ಈಗಾಗಲೇ ಸದಾಶಿವನಗರ ಪೊಲೀಸ್ ಠಾಣೆಯಲ್ಲೂ ಅಭಿಮಾನಿಯೋರ್ವ ಪುನೀತ್ ಸಾವಿನ ಬಗ್ಗೆ ಸಮಗ್ರ ತನಿಖೆಯಾಗಬೇಕೆನ್ನುವ ದೂರು ನೀಡಿಯಾಗಿದೆ..ನಾಳೆಯಿಂದ ಮತ್ತಷ್ಟು ಅಭಿಮಾನಿಗಳು ಅದೇ ಜಾಡನ್ನಿಡಿಯುವ ಸಾಧ್ಯತೆಗಳನ್ನು ಅಲ್ಲಗೆಳೆಯುವಂತಿಲ್ಲ.

ಸಾವಿಗೆ ಸರಿಯಾದ ಕಾರಣ ಗೊತ್ತಾಗಬೇಕು.. ರಮಣರಾವ್ ಹೇಳುತ್ತಿರುವುದು ನಿಜವೋ ಅಥವಾ ಗಂಭೀರ ಪ್ರಯತ್ನಗಳಾಗಿದ್ದರೆ ಅಪ್ಪು ಅವರನ್ನು ಉಳಿಸಲು ಸಾಧ್ಯವಿತ್ತಾ ಹಾಗೊಂದು ಅವಕಾಶಗಳಿದ್ದರೂ  ಡಾ. ರಮಣರಾವ್  ಏಕೆ ಮಾಡಲಿಲ್ಲ..?  ಹೀಗೆ  ತಮ್ಮನ್ನು ಕಾಡುತ್ತಿರುವ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ, ಅಪ್ಪು ಸಾವಿನ ಬಗ್ಗೆ ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆಯಾಗಬೇಕು ಎಂದು ಆಗ್ರಹಿಸಲಾರಂಭಿಸಿದ್ದಾರೆ.

ಅದೇನೇ ಆಗಲಿ ಎಲ್ಲವೂ ಮುಗಿಯಿತು ಎನ್ನುವಾಗಲೇ ಅಪ್ಪು ಅವರಿಗೆ ತಪಾಸಣೆ- ಚಿಕಿತ್ಸೆಗೆ ಆಸ್ಪತ್ರೆಗೆ ಕೊಂಡೊಯ್ಯುವ ವಿಚಾರದಲ್ಲಿ ಡಾ.ರಮಣರಾವ್ ನಡೆದುಕೊಂಡ ರೀತಿ… ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಒಂದಷ್ಟು ಗೊಂದಲ- ಆಕ್ಷೇಪ ವ್ಯಕ್ತವಾಗುತ್ತಿರುವುದು ದುರದೃಷ್ಟಕರ… ಅಪ್ಪು ವಿಚಾರದಲ್ಲಿ ಹೀಗೆಲ್ಲ ಮಾಡಬಹುದಿತ್ತೇನೋ..?  ಹಾಗಿದ್ದಾಗ್ಯೂ ಹಾಗೆ ಲ್ಲ ಏಕೆ ಮಾಡಲಿಲ್ಲ…?  ಇದು ತಪ್ಪಲ್ವಾ…?  ಎನ್ನುವ ಧಾಟಿಯ ಪ್ರಶ್ನೆಗಳು ಅಭಿಮಾನಿಗಳ ವಲಯದಲ್ಲಿ ಕಾಡಹತ್ತಿದೆ.

ಡಾ. ರಮಣರಾವ್ ಒಂದಿಷ್ಟು ಪ್ರಶ್ನೆಗಳಿಗೆ ಉತ್ತರಿಸಿ ಅಭಿಮಾನಿಗಳನ್ನು ಸಮಾಧಾನಪಡಿಸುವುದು ಕೂಡ  ಒಳ್ಳೆಯದೆನಿಸುತ್ತದೆ. ಇಲ್ಲದಿದ್ದರೆ ಅಭಿಮಾನಿಗಳಲ್ಲಿ ರಮಣರಾವ್ ಬಗ್ಗೆ ಇರುವ ತಪ್ಪು ಅಭಿಪ್ರಾಯಗಳು ಹಾಗೇ ಉಳಿದುಬಿಡುತ್ತವೆ. ಈ ಎಲ್ಲ ವಿಚಾರಗಳ ನಡುವೆ ಮತ್ತೊಂದು ಮುಖ್ಯವಾದ ವಿಚಾರ ಏನಂದ್ರೆ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಡಾ ರಮಣ ರಾವ್ ಅವರ ಮನೆ ಕ್ಲಿನಿಕ್ ಅಷ್ಟೆ ಅಲ್ಲ ಅವರಂತೆ ಅವರ ಕುಟುಂಬಕ್ಕೆ ಭದ್ರತೆ ಕೊಡಬೇಕಾದ ಅಗತ್ಯವಿದೆ…

Spread the love

Comments are closed.

Flash News