SHOCKING NEWS FOR “APPU”S “NONVEG” FANS..-“ಅಪ್ಪು” ಸಾವಿಗೆ ಅದೊಂದೇ “ಕಾರಣ”ವಲ್ಲವಂತೆ…?! ನೀವು ನಿಜಕ್ಕೂ ಅಪ್ಪು “ಅಭಿಮಾನಿ” ಗಳಾಗಿದ್ರೆ ಇನ್ಮುಂದೆ “ಇದನ್ನು” ಬಿಟ್ಟುಬಿಡಿ..ಇಲ್ಲಾಂದ್ರೆ ಕಡ್ಮೆ ಮಾಡಿ.. .?!

“ನಾನ್ ವೆಜ್” ಪ್ರಿಯರಿಗೆ ಶಾಕಿಂಗ್ ನ್ಯೂಸ್ ಬಿಟ್ಟೋದ ಪವರ್ ಸ್ಟಾರ್ ಪುನೀತ್ ಅಕಾಲಿಕ ಸಾವು-ಅತಿಯಾದ ಮಾಂಸಹಾರದಿಂದಲೂ ಅಪ್ಪು ಆರೋಗ್ಯಕ್ಕೆ ಸಂಚಕಾರ

0

ಬೆಂಗಳೂರು: ನೀವು ನಾನ್ ವೆಜ್ ಪ್ರಿಯರಾ….ಮಾಂಸಹಾರ ಎಂದ್ರೆ ನಿಮಗೆ ಪಂಚಪ್ರಾಣನಾ..ನಾನ್ ವೆಜ್ ಊಟಕ್ಕಾಗಿ ಹಪಾಹಪಿಸುವವರೋ..ಮನ ತಣಿಯುವವರೆಗೂ ನಾನ್ ವೆಜ್ ತಿನ್ನುವವರೋ..ಹಾಗಿದ್ದಲ್ಲಿ ಅಪ್ಪು ಸಾವನ್ನೊಮ್ಮೆ ನೆನಪಿಸಿಕೊಳ್ಳಲೇಬೇಕು…ಅರರೆ…ಅಪ್ಪು ಸಾವಿಗು ನಾನ್ ವೆಜ್ ಗು ಏನ್ ಸಂಬಂಧ ಎಂದು ಕೇಳಬಹುದು..ಖಂಡಿತಾ ಇದೆ.. ಈ ಸ್ಟೋರಿ ಓದುತ್ತಾ ಹೋಗಿ ನಿಮಗೆ ಗೊತ್ತಾಗುತ್ತೆ..ಅಪ್ಪುನೇ ತಮ್ಮ ಸಾವಿನ ಮೂಲಕ ನಾನ್ ವೆಜ್ ಸೇವನೆ ಪರಿಣಾಮವನ್ನು ವೇದಾಂತವಾಗಿ ಬಿಟ್ಟು ಹೋಗಿದ್ದಾರೆಂದು ಎನಿಸದೆ ಇರದು.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಾವಿಗೆ ಕಾರ್ಡಿಯಕ್ ಅರೆಸ್ಟ್ ಕಾರಣವಾಯಿತೆನ್ನುವ ಹಿನ್ನಲೆಯಲ್ಲಿ ಅನೇಕರು ತಮ್ಮ ಹೃದಯದ ಕಾಳಜಿ ಮಾಡಲು ಪ್ರಾರಂಭಿಸಿರೋದು ಎಲ್ಲರಿಗು ಗೊತ್ತಿರುವ ವಿಷಯ.ಅಪ್ಪು ಸಾವಿನ ಬೆನ್ನಲ್ಲಿ ನೇತ್ರದಾನವೂ ಒಂದು ದೊಡ್ಡ ಅಭಿಯಾನವಾಗಿದ್ದು ತಿಳಿದಿದೆ.ಅಂದ್ರೆ ಅಪ್ಪು ತನ್ನ ಸಾವನ್ನು ಆದರ್ಶಪ್ರಾಯವಾಗಿಸಿದ್ದು ಮಾತ್ರ ಸತ್ಯ.

ಅತ್ಯಾಕರ್ಷಕ ಅಂಗಸೌಷ್ಟವ ಹಾಗೂ ಸದೃಢಕಾಯ ಎಲ್ಲರ ಆಧ್ಯತೆಯಾಗಿರೋದು ಸಹಜ.ಆದರೆ ಅದಕ್ಕಾಗಿ ಅಗತ್ಯಕ್ಕಿಂತ ಹೆಚ್ಚಿನ ಕಸರತ್ತು ಮಾಡೋದು ಕೂಡ ಅಪಾಯಕಾರಿ ಎನ್ನೋದು ಪುನೀತ್ ಸಾವಿನಿಂದ ಪ್ರೂವ್ ಆದ ಮೇಲೆ ಸಾಕಷ್ಟು ಜನ ಜಿಮ್ ಗಳತ್ತ ಮುಖ ಮಾಡದೇ ಹೋದದ್ದನ್ನು ಕಂಡಿದ್ದೇವೆ..ಕೇಳಿದ್ದೇವೆ.ಸಾವಿನ ಮೂಲಕ ಒಂದು ಜಾಗೃತಿ ಮೂಡಿಸಿದ್ದು ಕೂಡ ಸತ್ಯ.

ಇದೀಗ ಮತ್ತೊಂದು ಸುದ್ದಿ ಪುನೀತ್ ಆರೋಗ್ಯಕ್ಕೆ ಸಂಬಂಧಿಸಿದಂತೆ ಕೇಳಿ ಬರುತ್ತಿದೆ.ಅದೇ ಅತಿಯಾದ ಮಾಂಸ ಸೇವನೆ.ಹೌದು..ಅತಿಯಾಸ ಮಾಂಸಹಾರ ಮಾಡುತ್ತಿದ್ದ ಸಂಗತಿ ಕೂಡ ಪುನೀತ್ ಆರೋಗ್ಯದ ಮೇಲೆ ಮಾರಕವಾದ ಪರಿಣಾಮ ಬೀರಿತ್ತು.ಹೃದಯ ಸೇರಿದಂತೆ ದೇಹದ ಅಂಗಗಳ ಕಾರ್ಯಕ್ಷಮತೆಯನ್ನೇ ಹಾಳು ಮಾಡಿತು.ಅದು ಮುಂದುವರೆದು ಕಾರ್ಡಿಯಕ್ ಅರೆಸ್ಟ್ ಗೂ ಕಾರಣವಾಗಿರಬಹುದೆನ್ನುವುದು ಅನೇಕ ತಜ್ಞ ವೈದ್ಯರ ಅಭಿಪ್ರಾಯ.

ಅಪ್ಪು ಅವರೇ  ಅನೇಕ ಸಂದರ್ಶನಗಳಲ್ಲಿ ಹೇಳಿಕೊಂಡಂತೆ ಅವರು ಅಪ್ಪಟ ನಾನ್ ವೆಜ್ ಪ್ರಿಯ.ಸಸ್ಯಹಾರಕ್ಕಿಂತ ಮಾಂಸಹಾರಕ್ಕೆ ಹೆಚ್ಚಿನ ಆಧ್ಯತೆ ಕೊಡುತ್ತಿದ್ದರಂತೆ.ಸ್ನೇಹಿತರು,ಆತ್ಮೀಯರು ಅಥವಾ ಸಿನೆಮಾರಂಗದ ಸಹ ಕಲಾವಿದರು ಆಮಂತ್ರಣ ಕೊಟ್ಟರೆ ಮೊದಲು ಕೇಳುತ್ತಿದ್ದುದೇ ವೆಜ್ಜಾ..ನಾನ್ ವೆಜ್ಜಾ ಎಂದು.ವೆಜ್ ಅಂದ್ರೆ ಅದೆಷ್ಟೋ ಕಾರ್ಯಕ್ರಮಗಳಿಗೆ ತಪ್ಪಿಸಿಕೊಳ್ಳುತ್ತಿದ್ದುಂಟಂತೆ.ನಾನ್ ವೆಜ್ ಎಂದ್ರೆ ಓಕೆ ಬಾಸ್ ಎಂದ್ಹೇಳಿ ತಪ್ಪದೇ ಅಟೆಂಡ್ ಮಾಡುತ್ತಿದ್ದರಂತೆ.ಊಟಕ್ಕೆ ಕುಳಿತರೆ ಯಾವುದೇ ಸಂಕೋಚ-ನಿರ್ಭಿಡೆಯಿಲ್ಲದೆ ಮಾಂಸಹಾರವನ್ನು ಸೇವಿಸಿ ಸಂತೃಪ್ತರಾಗುತ್ತಿದ್ದರಂತೆ.ಹಲವರಿಗೆ ಅಷ್ಟೊಂದು ನಾನ್ ವೆಜ್ ಅಡಿಕ್ಷನ್ ಒಳ್ಳೇದಲ್ಲ ಎಂದ್ಹೇಳಬೇಕೆನಿಸಿದ್ರೂ ಅಪ್ಪು ಊಟ ಮಾಡುವ ಪರಿಯನ್ನು ನೋಡಿಕೊಂಡು ಸಂತೋಷ ಪಡುತ್ತಿದ್ದರಂತೆ.ಮನೆಯಲ್ಲೂ ಅಷ್ಟೇ, ದಿನಂಪ್ರತಿ ನಾನ್ ವೆಜ್ ಇರಲೇಬೇಕಿತ್ತಂತೆ.ಸಹಜವಾಗಿ ಬೆಂಗಳೂರಲ್ಲಿ ಶೂಟ್ ನಲ್ಲಿದ್ದರೆ ನಾನ್ ವೆಜ್ ಗಾಗಿಯೇ ಮನೆಗೆ ಬಂದೋಗುತ್ತಿದ್ದರಂತೆ.ಊಟದ ವಿಷಯದಲ್ಲಿ ಯಾವುದೇ ಸಂಕೋಚವಿಲ್ಲದೆ ಊಟವನ್ನು ಆಸ್ವಾದಿಸುತ್ತಿದ್ದರಂತೆ.

ಊಟ ತನ್ನಿಚ್ಛೆ…ನೋಟ ಪರರಿಚ್ಚೆ ಎನ್ನುವ ಗಾಧೆ ಮಾತಿಗೆ ಮೊದಲು ನಿದರ್ಶನವಾಗಿದ್ದವರೇ ಅಣ್ಣಾವ್ರು.ಊಟವನ್ನು ಚೆನ್ನಾಗಿ ಊಟ ಮಾಡಬೇಕು..ವೇಸ್ಟ್ ಮಾಡಬಾರದು..ಎಂದ್ಹೇಳುತ್ತಿದ್ದ ಡಾ.ರಾಜ್ ಕೂಡ ನಾನ್ ವೆಜ್ ಪ್ರಿಯರು.ಆದ್ರೆ ಆರೋಗ್ಯದ ಬಗ್ಗೆ ಸದಾ ಕಾಳಜಿ ಮಾಡುತ್ತಿದ್ದ ಡಾ.ರಾಜ್,ವೈದ್ಯರು ನಾನ್ ವೆಜ್ ಅತಿಯಾಗಿ ತಿನ್ನಬೇಡಿ..ಕಂಟ್ರೋಲ್ ನಲ್ಲಿರಲಿ ಎಂದ್ಹಾಗ ಸಲಹೆಯನ್ನು ಪಡೆಯುತ್ತಿದ್ದರಂತೆ.ಕಾಡಿನಿಂದ ವಾಪಸ್ ಬಂದ ಮೇಲೆ ಮಾಂಸಹಾರ ಬಿಟ್ಟು ಸಾತ್ವಿಕ ಆಹಾರಕ್ಕೆ ಮೊರೆ ಹೋದದ್ದಕ್ಕೂ ಇದೇ ಕಾರಣ ಎನ್ನುತ್ತಾರೆ ಅವತ್ತಿನ ಸನ್ನಿವೇಶಕ್ಕೆ ಸಾಕ್ಷಿಯಾದವರು.

ನಾನ್ ವೆಜ್ ತಿನ್ನೊಕ್ಕೆ ಕೂತ್ರೆ ಅಣ್ಣಾವ್ರು ಅಷ್ಟೇ..ತನ್ಮಯತೆಯಿಂದ ಮಾಂಸಹಾರದ ರುಚಿಯನ್ನು ಆಸ್ವಾದಿಸುತ್ತಿದ್ದರು.
ನಾನ್ ವೆಜ್ ತಿನ್ನೊಕ್ಕೆ ಕೂತ್ರೆ ಅಣ್ಣಾವ್ರು ಅಷ್ಟೇ..ತನ್ಮಯತೆಯಿಂದ ಮಾಂಸಹಾರದ ರುಚಿಯನ್ನು ಆಸ್ವಾದಿಸುತ್ತಿದ್ದರು.
ಅಪ್ಪನಂತೆಯೇ ನಾನ್ ವೆಜ್ ಪ್ರಿಯರಾಗಿದ್ದ ಪುನೀತ್ ಮಾಂಸಹಾರ ಸೇವಿಸೊಕ್ಕೆ ಶುರುವಿಟ್ಟುಕೊಂಡ್ರೆ ಮುಗಿದೇ ಹೋಯಿತು..
ಅಪ್ಪನಂತೆಯೇ ನಾನ್ ವೆಜ್ ಪ್ರಿಯರಾಗಿದ್ದ ಪುನೀತ್ ಮಾಂಸಹಾರ ಸೇವಿಸೊಕ್ಕೆ ಶುರುವಿಟ್ಟುಕೊಂಡ್ರೆ ಮುಗಿದೇ ಹೋಯಿತು..

ಆದ್ರೆ ವಿಚಾರದಲ್ಲಿ ಪುನೀತ್ ಅಪ್ಪಾಜಿಗೆ ತದ್ವಿರುದ್ಧ.ಅನೇಕ ಬಾರಿ ವೈದ್ಯರು ಅವರ ಆರೋಗ್ಯದ ಬಗ್ಗೆ ಕಾಳಜಿ ಮಾಡಿ,ನಾನ್ ವೆಜ್ ನಿಮ್ಮ ಆರೋಗ್ಯ ಹಾಗೂ ದೇಹವನ್ನು  ಹಾಳು ಮಾಡಬಹುದು ಎಂದು ಎಚ್ಚರಿಸಿದರೂ ಅದಕ್ಕೆ ತಲೆ ಕೆಡಿಸಿ,ಕೊಂಡಿರಲಿಲ್ಲ..

ಅವರ ನಿರ್ಲಕ್ಷ್ಯಕ್ಕೆ ಕಾರಣ ಜಿಮ್..ಜಿಮ್ನಾಷಿಯಂನಲ್ಲಿ ದೇಹವನ್ನು ದಣಿಸಿದ್ರೆ ಮಾಂಸಹಾ ರದಿಂದ ಉತ್ಪತ್ತಿಯಾಗುವಂಥ  ಕೊಲೆಸ್ಟ್ರಾಲ್ ನ್ನು ಕರಗಿಸಬಹುದು..ಎನ್ನುವ ಮಾತನ್ನಾಡಿ ಅಪ್ಪು ಸುಮ್ಮನಾಗುತ್ತಿದ್ದರಂತೆ.ಆದ್ರೆ ಅದೇ  ಮಾಂಸಹಾರ ಉತ್ಪತ್ತಿ ಮಾಡಿದ ಅತಿಯಾದ ಕೊಲೆಸ್ಟ್ರಾಲ್ ನ್ನು ಕರಗಿಸೋದಕ್ಕೆ ಅಪ್ಪುಗೆ ಆಗಲಿಲ್ಲ ಎನ್ನುವುದು ಕೂಡ ಅಷ್ಟೇ ಸತ್ಯ.

ಅಪ್ಪುವಿನ ಆರೋಗ್ಯ ಹದಗೆಡುವುದಕ್ಕೆ ಅತಿಯಾದ ಮಾಂಸಹಾರವೂ ಕಾರಣವಾಗಿರಬಹುದೆನ್ನಲಾಗುತ್ತಿದೆ.ದೇಹಕ್ಕೆ ಪೋಷಕಾಂಶಗಳು ಇಂತಿಷ್ಟೇ ಪ್ರಮಾಣದಲ್ಲಿ ಬೇಕಾಗುತ್ತವೆ.ಆದರೆ ಅವುಗಳ ಸೇವನೆ ಇತಿಮಿತಿಗಿಂತ ಹೆಚ್ಚಾದ್ರೆ ಅದು ವಿಷವಾಗಿ ಪರಿಣಮಿಸಬಹುದು..ಸಾವಿಗೂ ಕಾರಣವಾಗಬಹುದೆನ್ನುವ ವೈದ್ಯಕೀಯ ಪರಿಭಾಷೆಯ ಎಚ್ಚರಿಕೆಯನ್ನು ಪ್ರತಿಯೋರ್ವರು ಅರ್ಥ ಮಾಡಿಕೊಳ್ಳಬೇಕಿದೆ.ಹೃದಯದ ಸಹಜ ಕ್ರಿಯೆ-ಮಿಡಿತ-ಸ್ಪಂದನೆಯನ್ನು ಅತಿಯಾದ ಮಾಂಸಹಾರ ಏರುಪೇರು ಮಾಡುವ ಆತಂಕವಿರುತ್ತದೆ.ಅಪ್ಪು ವಿಷಯದಲ್ಲಿ ಅದೇ ಆಗಿರಬಹುದು ಎನ್ನಲಾಗುತ್ತಿದೆ.

ಅಪ್ಪು ಸಾವಿನಿಂದ ಜಿಮ್ ಬಗ್ಗೆ ಅತಿಯಾದ ವ್ಯಾಮೋಹ ಇರುವವರು ಹೇಗೆ ಎಚ್ಚೆತ್ತುಕೊಂಡು ಆರೋಗ್ಯ ಕಾಪಾಡಿಕೊಳ್ಳೊಕ್ಕೆ ಬೇಕಿರುವಷ್ಟು ಕಸರತ್ತನ್ನಷ್ಟೇ ಮಾಡೊಕ್ಕೆ ಮುಂದಾಗಿರುವಾಗ,ಮಾಂಸಹಾರಕ್ಕೆ ಮುಗಿಬಿದ್ದವರು ಕೂಡ ಅಪ್ಪು ಸಾವಿನಿಂದ ಎಚ್ಚೆತ್ತುಕೊಂಡು ದೇಹ-ಮನಸು-ಹೃದಯಕ್ಕೆ ಬೇಕಿರುವಷ್ಟು ಮಾಂಸಹಾರಕ್ಕೆ ಆಧ್ಯತೆ ಕೊಡೋದು ಸೂಕ್ತ ಎನಿಸುತ್ತದೆ..ಅಂತದ್ದೊಂದು ಎಚ್ಚರಿಕೆ-ಮುಂಜಾಗ್ರತೆಯನ್ನು ಅಪ್ಪು ತಮ್ಮ ಸಾವಿನ ಮೂಲಕ ಸಾರಿ ಹೋಗಿದ್ದಾರೆ.

Spread the love
Leave A Reply

Your email address will not be published.

Flash News