APPU NAME FOR LONGEST ROAD OF BENGALURU:ಯಾರಿಗೂ ಸಿಗದ ಗೌರವ ಅಪ್ಪುಗೆ ಸಿಗ್ತಿದೆ ಗೊತ್ತಾ..? ಹಾಗಾದ್ರೆ ಆ ಗೌರವವಾದ್ರೂ ಏನು..?

ಡಾ.ರಾಜ್. ಡಾ.ವಿಷ್ಣು ವರ್ಧನ್ ಅವರ ನಂತರ ಇಂತದ್ದೊಂದು ಗೌರವಕ್ಕೆ ಪಾತ್ರವಾಗುತ್ತಿದ್ದಾರೆ ಪುನೀತ್

0

ಬೆಂಗಳೂರು:ಕೆಲವರು ಇರುವಾಗಲಷ್ಟೇ ಸುದ್ದಿಯಲ್ಲಿದ್ದು ಸತ್ತ ನಂತರ ಇತಿಹಾಸದ ಪುಟ ಸೇರಿಬಿಡ್ತಾರೆ..ಅವರ ನೆನಪುಗಳು ಮತ್ತೆ ಕಾಡೋದು..ಅವರ ಹುಟ್ಟುಹಬ್ಬಕ್ಕೋ,ಅಥವಾ ಪುಣ್ಯಸ್ಮರಣೆಯಂದು ಅಷ್ಟೇ..ಆದ್ರೆ ಕೆಲವೇ ಕೆಲವು ವ್ಯಕ್ತಿಗಳು ಬದುಕಿದ್ದಾಗಲಷ್ಟೇ ಅಲ್ಲ,ಸತ್ತ ಮೇಲೂ ಅಷ್ಟೇ ಮನೆ-ಮನಗಳಲ್ಲಿ ವಿರಾಜಮಾನರಾಗಿಬಿಡ್ತಾರೆ.ಅಂಥವರ ಸಾಲಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸೇರಿ ಹೋಗಿದ್ದಾರೆ.ಅದಕ್ಕೆ ಅವರ ಅಂತಿಮ ದರ್ಶನ-ಅಂತ್ಯಸಂಸ್ಕಾರ ಹಾಗು ಸಮಾಧಿದರ್ಶನದಂದು ಜಮಾವಣೆಗೊಂಡ ಜನಸಾಗರವೇ ಸಾಕ್ಷಿ.

ಇಂಥಾ ಅಪ್ರತಿಮ ನಟನಿಂದ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಇತಿಹಾಸ ನಿರ್ಮಾಣವಾಗ್ತಿದೆ.ಇದು ಪ್ರತಿಯೋರ್ವ ಕನ್ನಡಿಗ ಹೆಮ್ಮೆ ಪಡುವಂಥ ಸಂಗತಿ. ರಾಜಧಾನಿಯ ಅತೀ ಉದ್ದದ ರಸ್ತೆಗೆ ಅಪ್ಪು ಹೆಸರು ನಾಮಕರಣವಾಗುವ ಸಾಧ್ಯತೆ ದಟ್ಟವಾಗಿದೆ.ಇಂತದ್ದೊಂದು ಪುಣ್ಯ ಹಾಗೂ ದಾಖಲಾರ್ಹ ಘಟನೆಗೆ ಮುನ್ನಲೆಯಲ್ಲಿ ನಿಂತಿರೋದು ಬಿಬಿಎಂಪಿ ಮಾಜಿ ಕಾರ್ಪೊರೇಟರ್,ಮಾಜಿ ಆಡಳಿತ ಪಕ್ಷದ ನಾಯಕ ಮತ್ತು ಬಿಜೆಪಿ ದಕ್ಷಿಣ ಜಿಲ್ಲೆಯ ಅಧ್ಯಕ್ಷ ಎನ್.ಆರ್ ರಮೇಶ್.

ಹೌದು..ಡಾ.ರಾಜ್ ಕುಮಾರ್ ಹಾಗೂ ಅವರ ಕುಟುಂಬದ ನಟರುಗಳ ಅಪ್ಪಟ ಅಭಿಮಾನಿಯಾಗಿರುವ ಎನ್.ಆರ್ ರಮೇಶ್ ರಾಜಧಾನಿ ಬೆಂಗಳೂರಿನ ಪ್ರಮುಖ ಹಾಗು ಉದ್ದದ ರಸ್ತೆಗಳಲ್ಲೊಂದಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹೆಸರನ್ನು ನಾಮಕರಣ ಮಾಡಲು ಬಿಬಿಎಂಪಿ ಮಟ್ಟದಲ್ಲಿ ಪ್ರಯತ್ನ ಮಾಡುತ್ತಿದ್ದಾರೆ.

ಬೆಂಗಳೂರಿನಲ್ಲಿ ಸಧ್ಯಕ್ಕೆ ಬಹುತೇಕ ಪ್ರಮುಖ ರಸ್ತೆಗಳಿಗೆ ಪ್ರತಿಷ್ಟಿತರ ಹೆಸರನ್ನು ಇಡಲಾಗಿದೆ.ಆ ಪೈಕಿ ಡಾ.ರಾಜ್ ಕುಮಾರ್,ಡಾ, ವಿಷ್ಣುವರ್ಧನ್ ಅವರ ಹೆಸರುಗಳಿವೆ.ಯಾವ ರಸ್ತೆಗಳು ಹೆಸರಿಲ್ಲದೆ ಖಾಲಿ ಇವೆ ಎನ್ನುವುದರ ಬಗ್ಗೆ ತಮ್ಮ ಅಪ್ತ ವಲಯದಿಂದ ಮಾಹಿತಿ ಸಂಗ್ರಹಿಸಿದ್ದಾರೆ ಕೂಡ.ಆಗ ಬಹುತೇಕ ರಸ್ತೆಗಳೆಲ್ಲಾ ಹೆಸರುಗಳಿಂದ ತುಂಬಿ ಹೋಗಿರುವುದು ಬೆಳಕಿಗೆ ಬಂದಿದೆ.

ಆ ಪೈಕಿ ಉಳಿದಿರುವ ಎರಡು ಪ್ರಮುಖ ರಸ್ತೆಗಳಲ್ಲಿ ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್ ನಿಂದ ಬನ್ನೇರುಘಟ್ಟ ರಸ್ತೆಯ ಮೆಗಾಸಿಟಿ ಮಾಲ್ ಜಂಕ್ಷನ್ ವರೆಗಿನ ವರ್ತುಲ ರಸ್ತೆ ಪತ್ತೆಯಾಗಿದೆ.ಅದರ ಜತೆಗೆ ಬನಶಂಕರಿ ಬಸ್ ನಿಲ್ದಾಣದಿಂದ ಪ್ರಾರಂಭವಾಗಿ ಸಿಲ್ಕ್ ಬೋರ್ಡ್ ಜಂಕ್ಷನ್ ಹಾಗೂ ಮಾರತ್ತಹಳ್ಳಿ ಜಂಕ್ಷನ್ ಮೂಲಕ ಕೃಷ್ಣರಾಜಪುರದ ತೂಗು ಸೇತುವೆ ವರೆಗೆ ಹಾದು ಹೋಗುವ ಹೊರ ವರ್ತುಲ ರಸ್ತೆ ಯಾವುದೇ ಹೆಸರಿಲ್ಲದೆ ಖಾಲಿ ಉಳಿದಿರುವುದು  ಗೊತ್ತಾಗಿದೆ.

ತಡಮಾಡದೆ ಮನವಿಯೊಂದನ್ನು ಸಿದ್ದಪಡಿಸಿಕೊಂಡು ಬಂದ ಎನ್.ಆರ್ ರಮೇಶ್ ಬಿಬಿಎಂಪಿ ಮುಖ್ಯ ಆಯುಕ್ತರಾಗಿರುವ ಗೌರವ್ ಗುಪ್ತಾರಿಗೆ ಸಲ್ಲಿಸಿದ್ದಾರೆ.ಎರಡು ರಸ್ತೆಗಳ ಪೈಕಿ ಒಂದಕ್ಕೆ ಪುನೀತ್ ರಾಜ್ ಕುಮಾರ್ ರಸ್ತೆ” ಎಂದು ನಾಮಕರಣ ಮಾಡುವಂತೆ ಮನವಿ ಮಾಡಿದ್ದಾರೆ.ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಗೌರವ್ ಗುಪ್ತಾ ತಮ್ಮ ಕೆಳಹಂತದ ಅಧಿಕಾರಿಗಳಿಗೆ ಈ ಬಗ್ಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.

ಇದಕ್ಕು ಮುನ್ನ ಪುನೀತ್ ಅವರ ಹೆಸರನ್ನು ವೆಸ್ಟ್ ಆಫ್ ಕಾರ್ಡ್ ರಸ್ತೆಗೆ ಇಡಲು ಚಿಂತನೆ ನಡೆಸಲಾಗಿತ್ತು.ಆದ್ರೆ ಆ ರಸ್ತೆಗೆ ಈಗಾಗಲೇ  ವರಕವಿ ದ.ರಾ ಬೇಂದ್ರ ಹೆಸರನ್ನು ಇಡಬೇಕೆನ್ನುವ ತೀರ್ಮಾನವಾಗಿದೆ.ಅದಕ್ಕಾಗಿ ದ.ರಾ ಬೇಂದ್ರೆ ಅವರ ಹೆಸರನ್ನು ಬದಲಿಸುವುದು ಸಾರಸ್ವತ ಲೋಕಕ್ಕೆ ಅಪಮಾನ ಮಾಡಿದಂತಾಗುತ್ತದೆ ಎನ್ನುವುದನ್ನು ಖಾತ್ರಿಪಡಿಸಿಕೊಂಡ ಬಳಿಕ ಮೇಲ್ಕಂಡ ಎರಡು ರಸ್ತೆಗಳಲ್ಲಿ ಒಂದಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹೆಸರನ್ನಿಡುವಂತೆ ಮನವಿ ಮಾಡಲಾಗಿದೆ,.

Spread the love
Leave A Reply

Your email address will not be published.

Flash News