HIGH COURT WARNS BBMP-BDA:CJ WARNS COMMISSINORS TO SEND THEM JAIL“ಜೈಲಿಗೆ ಹಾಕಿದ್ರೆ ಗೊತ್ತಾಗುತ್ತೆ..ಕೋರ್ಟ್ ಪವರ್ ಏನೆಂದು”..ಹೀಗೊಂದು ಖಡಕ್ ಎಚ್ಚರಿಕೆ ಕೊಟ್ಟವರು ಯಾರ್ ಗೊತ್ತಾ…?

ಪಾರ್ಕ್-ಮೈದಾನಗಳಲ್ಲಿನ ಅಕ್ರಮ ಕಟ್ಟಡಗಳ ಸರ್ವೆ ವರದಿ ಸಲ್ಲಿಸುವಲ್ಲಿ ಬಿಡಿಎ-ಬಿಬಿಎಂಪಿ ದಿವ್ಯನಿರ್ಲಕ್ಷ್ಯಕ್ಕೆ ತರಾಟೆ..

0

ಬೆಂಗಳೂರು:ಅಕ್ರಮ ಕಟ್ಟಡಗಳ ವಿಚಾರದಲ್ಲಿ ಬಿಬಿಎಂಪಿ ವಹಿಸುತ್ತಿರುವ ವ್ಯಾಪಕ ಹಾಗು ದಿವ್ಯ ನಿರ್ಲಕ್ಷ್ಯವನ್ನು ಹೈ ಕೋರ್ಟ್ ಅತೀ ಕಟುವಾಗಿ ಖಂಡಿಸಿದೆ.

ಕೋರ್ಟ್  ಬಗ್ಗೆಯಾಗಲಿ, ಈ ಗೌರವವಯುತವಾದ ಪೀಠದಲ್ಲಿ ಕುಳಿತು ಸೂಚನೆ-ಆದೇಶ ನೀಡುವವರ ಬಗ್ಗೆ ಕಿಂಚಿತ್ತು ಹೆದರಿಕೆಯಿಲ್ಲದಂತಿರುವ ನಿಮ್ಮಗಳ ಧೋರಣೆ ಸರಿಯಲ್ಲ ಎಂದು ಹೈ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ ಖಂಡಿಸಿದ್ದಾರೆ.

ಅಷ್ಟೇ ಅಲ್ಲ,ನಿಮ್ಮಲ್ಲಿ ಯಾರಾದರೂ ಒಂದಿಬ್ಬರನ್ನು ಜೈಲಿಗೆ ಕಳುಹಿಸಿದ ಮೇಲಾದ್ರೂ ಎಚ್ಚೆತ್ತುಕೊಂಡು ಸರಿಯಾಗಿ ಕೆಲಸ ಮಾಡುತ್ತಿರೇನೋ ಎನ್ನುವಂಥ ಎಚ್ಚರಿಕೆಯನ್ನೂ ಮುಖ್ಯ ನ್ಯಾಯಮೂರ್ತಿಗಳು ನೀಡಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮ ಕಟ್ಟಡಗಳು ನಾಯಿಕೊಡೆಗಳಂತೆ ತಲೆ ಎತ್ತಿ ನಿಂತಿವೆ.ಈ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ.ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಬಗ್ಗೆ ಕೋರ್ಟ್  ನೀಡುತ್ತಿರುವ ಆದೇಶ-ಸೂಚನೆ ಬಗ್ಗೆ ಬಿಡಿಎ-ಬಿಬಿಎಂಪಿಗೆ ಕೊಂಚವೂ ಹೆದರಿಕೆಯಾಗಲಿ, ಅಂಜಿಕೆಯಾಗಲಿ ಇಲ್ಲ.

ಪಾರ್ಕ್ ಹಾಗು  ಮೈದಾನಗಳಲ್ಲಿ ನಿರ್ಮಾಣವಾಗಿರುವ ಅಕ್ರಮ ಕಟ್ಟಡಗಳ ಬಗ್ಗೆ ವರದಿ ಸಲ್ಲಿಸಿ ಎಂದು ಹೇಳಿದ ಮೇಲೂ ಸರ್ವೆ ವರದಿ ಸಲ್ಲಿಸದಿರುವ ಉದ್ದಟತನವನ್ನು ಖಂಡಿಸಿದ್ದಾರೆ.

ಬಿಡಿಎ ಹಾಗು ಬಿಬಿಎಂಪಿ ಆಯುಕ್ತರಿಗೆ ಖಡಕ್ ಎಚ್ಚರಿಕೆ ನೀಡಿರುವ ಹೈ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ ಅವರು, ನಿಮ್ಮಲ್ಲಿ ಯಾರದರೂ ಇಬ್ಬರನ್ನು ಜೈಲಿಗೆ ಕಳುಹಿಸಿದ್ರೆ ಗೊತ್ತಾಗುತ್ತೆ..ಆಗಲಾದರು ಎಚ್ಚೆತ್ತುಕೊಳ್ಳುತ್ತಿರೇನೋ ನೋಡಬೇಕು ಎಂದು ಹೇಳಿದ್ದಾರೆ.

Spread the love
Leave A Reply

Your email address will not be published.

Flash News