BANGLORE’S ILLEGAL BUILDINGS FINAL LIST READY..ಪಟ್ಟಿ ರೆಡಿ….ಹೈಕೋರ್ಟ್ ಗೆ ಸಲ್ಲಿಸೊಕ್ಕೆ ಸಿದ್ದವಾಯ್ತು 8496-5223=ಶೇ.84=2348 ಅಕ್ರಮ ಕಟ್ಟಡಗಳ ಪಟ್ಟಿ….?! ಸರ್ವೆಯಲ್ಲಿ ಬಯಲಾಯ್ತು ಕಟ್ಟಡ ಮಾಲೀಕರ ಕಳ್ಳಾಟ..

2020-2021ರ ಒಂದೂವರೆ ವರ್ಷದಲ್ಲಿ ನಕ್ಷೆ ಮಂಜೂರಾತಿ ಪಡೆದದ್ದು 8496-ಅದರಲ್ಲೂ 5223 ಅನಧೀಕೃತ =ಅಕ್ರಮದ ಪ್ರಮಾಣ ಶೇಕಡಾ 84. –ಸರ್ವೆಗೆ ಬಾಕಿ ಇರೋದು 2348-ಅದರಲ್ಲೂ 2000 ರಷ್ಟು ಅಕ್ರಮವಾಗುವ ಶಂಕೆ.!ಇದು ಕನ್ನಡ ಫ್ಲ್ಯಾಶ್ ನ್ಯೂಸ್ EXCLUSIVE ಕ್ಲ್ಯೂಸಿವ್ ರಿಪೋರ್ಟ್…

0

ಬೆಂಗಳೂರು:ರಾಜಧಾನಿ ಬೆಂಗಳೂರಿನಲ್ಲಿರುವ ಅಕ್ರಮ ಕಟ್ಟಡಗಳ ಒಂದು ಹಂತದ ಚಿತ್ರಣ ದೊರೆತಿದೆ.2020 ರಿಂದ 2021ರ ಕೇವಲ 1 ವರೆ ವರ್ಷದ ಅವಧಿಯಲ್ಲಿನ ಕಟ್ಟಡಗಳ ಅಂಕಿ ಅಂಶಗಳ ಮೇಲೆ ಕೆಲಸ ಮಾಡಿರುವ ಬಿಬಿಎಂಪಿ ನಗರ ಯೋಜನೆ ವಿಭಾಗ ಒಂದು ಪಟ್ಟಿ ಸಿದ್ಧಪಡಿಸಿಟ್ಟುಕೊಂಡು ಕೋರ್ಟ್ ಗೆ ಸಲ್ಲಿಸೊಕ್ಕೆ ಮುಂದಾಗಿದೆ.ಆ ಪಟ್ಟಿ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ EXCLUSIVE ಆಗಿ ದೊರೆತಿದೆ.

ಪಟ್ಟಿಯಲ್ಲಿರುವ ಅಂಕಿಅಂಶಗಳೇ ಶಾಕ್ ಮೂಡಿಸುತ್ತವೆ.ಏಕೆಂದರೆ ಈ ಒಂದೂವರೆ ವರ್ಷದಲ್ಲಿ ನಕ್ಷೆ ಅನುಮೋದನೆ ಪಡೆದ ಕಟ್ಟಡಗಳು 8496…ಆದ್ರೆ ನಕ್ಷೆಗೆ ವ್ಯತಿರಿಕ್ತವಾಗಿ ನಿರ್ಮಾಣ ಮಾಡಲಾದ ಕಟ್ಟಡಗಳು ಎಷ್ಟು ಗೊತ್ತೆ… 5223..ಅಂದ್ರೆ ಕಟ್ಟಡ ನಿರ್ಮಾಣದ ಬೈಲಾ ಉಲ್ಲಂಘಿಸಿ ನಿರ್ಮಾಣವಾಗಿರುವ ಕಟ್ಟಡಗಳ ಪ್ರಮಾಣ ಶೇ.84 ರಷ್ಟು ಎನ್ನುವುದು ಆತಂಕಕಾರಿಯಷ್ಟೇ ಅಲ್ಲ,ಅಘಾತಕಾರಿಯೂ ಹೌದು..ಇಲ್ಲಿದೆ ಅದರ ಕಂಪ್ಲೀಟ್..ಡೀಟೈಲ್ ರಿಪೋರ್ಟ್..

ಹೈಕೋರ್ಟ್ ಕೊಟ್ಟ ಚಾಟಿ ಏಟಿಗೆ ಅಕ್ಷರಶಃ ಬೆಚ್ಚಿಬಿದ್ದ ಬಿಬಿಎಂಪಿ ಆಡಳಿತ 198 ವಾರ್ಡ್ ಗಳಲ್ಲಿ ನಕ್ಷೆ ಮಂಜೂರಾತಿ( ಪ್ಲ್ಯಾನ್ ಅಪ್ರೂವಲ್) ಮಾಡಲಾದ ಕಟ್ಟಡಗಳು,ಆ ಪೈಕಿ ನಿಯಮ ಉಲ್ಲಂಘಿಸಿರುವ ಕಟ್ಟಡಗಳ ಒಂದು ನೀಲನಕ್ಷೆ ಸಿದ್ದಪಡಿಸಿ ಹೈಕೋರ್ಟ್ ಗೆ ಸಲ್ಲಿಸೊಕ್ಕೆ ಸಿದ್ಧತೆ ಮಾಡಿಕೊಂಡಿದೆ. ಅಂ ದ್ಹಾಗೆ ಈಗ ಸಿದ್ಧವಾಗಿರುವ ಪಟ್ಟಿ, ರಾಜಧಾನಿಯಲ್ಲಿರುವ ಕಟ್ಟಡಗಳ ಪ್ರಮಾಣದಲ್ಲಿ ಶೇಕಡಾ 10 ಕ್ಕಿಂತ ಕಡಿಮೆ ಎನ್ನಲಾಗಿದೆ..ಹಾಗಾಗಿ ಒಟ್ಟಾರೆ ಚಿತ್ರಣವನ್ನು “ಪಿಕ್ಚರ್ ಅಭಿ ಬೀ ಬಾಕಿ ಹೈ..” ಎಂದು ವಿಶ್ಲೇಷಿಸಬಹುದೇನೋ..

ಹೈ ಕೋರ್ಟ್ ಗೆ ಸಲ್ಲಿಸಲು ಸಿದ್ಧವಾಗಿರುವ ಪಟ್ಟಿ..2020 ರಿಂದ 2021ರ 1 ವರೆ ವರ್ಷದಲ್ಲಿ ನಕ್ಷೆ ಮಂಜೂರಾತಿ ನೀಡಿದ,ಬೈಲಾ ಉಲ್ಲಂಘನೆ ಮಾಡಿ ನಿರ್ಮಾಣ ಮಾಡಿದ ಕಟ್ಟಡಗಳ ಸರ್ವೆ ರಿಪೋರ್ಟ್..
ಹೈ ಕೋರ್ಟ್ ಗೆ ಸಲ್ಲಿಸಲು ಸಿದ್ಧವಾಗಿರುವ ಪಟ್ಟಿ..2020 ರಿಂದ 2021ರ 1 ವರೆ ವರ್ಷದಲ್ಲಿ ನಕ್ಷೆ ಮಂಜೂರಾತಿ ನೀಡಿದ,ಬೈಲಾ ಉಲ್ಲಂಘನೆ ಮಾಡಿ ನಿರ್ಮಾಣ ಮಾಡಿದ ಕಟ್ಟಡಗಳ ಸರ್ವೆ ರಿಪೋರ್ಟ್..

ಅಪ್ರೂವಲ್ ಆದ ಪ್ಲ್ಯಾನ್( ನಕ್ಷೆ ಮಂಜೂರಾತಿ): 01-01-2020 ರಿಂದ 30-06-2021 ರವರೆಗಿನ 1 ವರೆ ವರ್ಷದ ಅವಧಿಯಲ್ಲಿ  ಒಟ್ಟು ಹತ್ತು ವಲಯ  ಕಚೇರಿಗಳ ಮೂಲಕ ಕಟ್ಟಡ ನಕ್ಷೆ ಅನುಮೋದನೆ(ಪ್ಲ್ಯಾನ್ ಅಪ್ರೂವಲ್) ಆಗಿರುವುದು ಒಟ್ಟು 8496.ಈ ಪೈಕಿ ಅತೀ ಹೆಚ್ಚಿನ ನಕ್ಷೆ ಅನುಮೋದನೆ ಆಗಿರುವುದು ಆರ್ ಆರ್ ನಗರದಲ್ಲಿ(2154).ನಂತರದಲ್ಲಿ ಪಶ್ಚಿಮದಲ್ಲಿ-1270,ದಕ್ಷಿಣ-1215,ಪೂರ್ವ-977, ಮಹಾದೇವಪುರ-889, ಬೊಮ್ಮನಹಳ್ಳಿ-796, ಯಲಹಂಕ-757, ದಾಸರಹಳ್ಳಿ-307,ಬೆಂಗಳೂರು ಉತ್ತರದಲ್ಲಿ 92 ಹಾಗೂ ಬೆಂಗಳೂರು ದಕ್ಷಿಣದಲ್ಲಿ 39 ನಕ್ಷೆ ಅನುಮೋದನೆಯಾಗಿದೆ ಎಂದು ವರದಿ ನೀಡಿದ್ದಾರೆ.

ನಕ್ಷೆ ಮಂಜೂರಾತಿಗೆ ಆಸಕ್ತಿ – ಸರ್ವೆ ವಿಷಯದಲ್ಲಿ ನಿರುತ್ಸಾಹ: ಈ ಪೈಕಿ  03-07-2021 ರವರೆಗೆ ಸರ್ವೆ ಮಾಡಲಾದ ಕಟ್ಟಡಗಳ ಸಂಖ್ಯೆ 3393 ಎಂದು ಅಧಿಕಾರಿಗಳು ವರದಿ ನೀಡಿದ್ದಾರೆ.ಅತೀ ಹೆಚ್ಚಿನ ಸರ್ವೆ ಆದ ಕಟ್ಟಡಗಳು ದಕ್ಷಿಣದಲ್ಲಿ,ಇಲ್ಲಿನ 974 ಕಟ್ಟಡಗಳನ್ನು ಸರ್ವೆ ಮಾಡಲಾಗಿದೆ ಯಂತೆ.ಪಶ್ಚಿಮ 549,ಪೂರ್ವ-463,ಯಲಹಂಕ-364,ಮಹಾದೇವಪುರ-351,ಬೊಮ್ಮನಹಳ್ಳಿ-263,ಆರ್ ಆರ್ ನಗರ-198,ದಾಸರಹಳ್ಳಿ-100 ಕಟ್ಟಡಗಳ ಸರ್ವೆ ನಡೆದಿದೆ ಎನ್ನಲಾಗಿದೆ.ಪ್ಲ್ಯಾನ್ ಅಪ್ತೂವಲ್ ಮಾ ಡುವಾಗ ತೋರಿರುವಷ್ಟು ಆಸಕ್ತಿಯನ್ನು ವಲಯಗಳಲ್ಲಿ ನಗರ ಯೋಜನೆ ಅಧಿಕಾರಿಗಳು ಬಿಲ್ಡಿಂಗ್ ಗಳ ಸರ್ವೆ ವಿಚಾರದಲ್ಲಿ ತೋರದಿರುವುದು ಅವರೇ ಕೊಟ್ಟ ಮಾಹಿತಿಗಳಿಂದ  ಸ್ಪಷ್ಟವಾಗುತ್ತದೆ.ಆದ್ರೆ ಕೊಟ್ಟ ಪ್ಲ್ಯಾನ್ ಗಳ ಕಟ್ಟಡಗಳು ಅಂದ್ರೆ ಜೆಡಿಟಿಪಿ ದಕ್ಷಿಣ ಕಚೇರಿ-39 ಹಾಗೂ ಜೆಡಿಟಿಪಿ ಉತ್ತರ ಕಚೇರಿಲ್ಲಿ ನೀಡಲಾದ 92 ಪ್ಲ್ಯಾನ್ ಗಳನ್ನು ಸರ್ವೆ ಮಾಡಿರುವುದು  ಸಮಾಧಾನಕರ.

03-07-2021 ರಿಂದ 31-08-2021:ನಕ್ಷೆ ಮಂಜೂರಾತಿ ನೀಡಲಾದ ಕಟ್ಟಡಗಳನ್ನು ಹಂತ ಹಂತವಾಗಿ ಸರ್ವೆ ಮಾಡುವ ಕೆಲಸ ಮಾಡಿರುವ ಅಧಿಕಾರಿಗಳು 03-07-2021 ರಿಂದ 31-08-2021 ರವರೆಗೆ ಅಂದ್ರೆ 2 ತಿಂಗಳಲ್ಲಿ 1251 ಕಟ್ಟಡಗಳನ್ನು ಸರ್ವೆ ಮಾಡಿರುವುದಾಗಿ ಹೇಳಿದ್ದಾರೆ. ಪಶ್ಚಿಮ 597,ಪೂರ್ವ-169,ಯಲಹಂಕ-168,ಮಹಾದೇವಪುರ 49, ದಾಸರಹಳ್ಳಿ-107 ಕಟ್ಟಡಗಳ ಸರ್ವೆ ನಡೆದಿದೆ ಎನ್ನಲಾಗಿದೆ.

ಆದ್ರೆ ಅತ್ಯಂತ ಬೃಹತ್ತಾದ ವಲಯವಾದ ಆರ್ ಆರ್ ನಗರದಲ್ಲಿ ಈ ಎರಡು ತಿಂಗಳಲ್ಲಿ ಅಧಿಕಾರಿಗಳು ಕೇವಲ 20 ಕಟ್ಟಡಗಳ ಸರ್ವೆ ಮಾಡುತ್ತಾರೆಂದರೆ ಅವರ ಬದ್ಧತೆ ಎಷ್ಟಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು.ಅದಕ್ಕಿಂತ ದುರಂತದ ವಿಚಾರ ಎಂದ್ರೆ ಬೊಮ್ಮನಹಳ್ಳಿಯಲ್ಲಿ ಒಂದೇ ಒಂದು ಕಟ್ಟಡದ ಸರ್ವೆ ನಡೆಸಿಲ್ಲ ಎಂದು ಅಧಿಕಾರಿಗಳೇ ವರದಿ ನೀಡಿದ್ದಾರೆ.

01-09-2021 ರಿಂದ 17-9-2021:ಇನ್ನು 2021ರ ಸೆಪ್ಟೆಂಬರ್ ತಿಂಗಳ 15 ದಿನಗಳಲ್ಲಿ ಎಲ್ಲಾ10 ವಲಯ ಕಚೇರಿಗಳಲ್ಲಿ ನಗರ ಯೋಜನೆ ಅಧಿಕಾರಿಗಳು 339 ಕಟ್ಟಡಗಳ ಸರ್ವೆ ಪೂರ್ಣಗೊಳಿಸುತ್ತಾರೆ.ಪೂರ್ವ ವಲಯದಲ್ಲಿ ಅತೀ ಹೆಚ್ಚಿನ 136 ಕಟ್ಟಡಗಳ ಸರ್ವೆ ಮಾಡಲಾಗುತ್ತದೆ.ಆದರೆ ಇನ್ನುಳಿದಂತೆ ಮಹಾದೇವಪುರ ಹಾಗು ಯಲಹಂಕದಲ್ಲಿ ತಲಾ 39 ಕಟ್ಟಡಗಳು,ದಾಸರಹಳ್ಳಿ-52,ಆರ್ ಆರ್ ನಗರ-ಬೊಮ್ಮನಹಳ್ಳಿಯಲ್ಲಿ ತಲಾ 30,ದಕ್ಷಿಣದಲ್ಲಿ 13 ಕಟ್ಟಡಗಳ ಸರ್ವೆ ನಡೆಸಿದ್ದಾರೆ.ಪಶ್ಚಿಮ ವಲಯದಲ್ಲಿ ಯಾವುದೇ ಕಟ್ಟಡದ ಸರ್ವೆ ನಡೆಸಿಲ್ಲದಿರುವುದಾಗಿ ಅಧಿಕಾರಿಗಳು ವರದಿ ನೀಡಿದ್ದಾರೆ.

18-09-2021 ರಿಂದ 21-10-2021:ಮುಂದುವರೆದು 18-09-2021 ರಿಂದ 21-10-2021 ಅಂದ್ರೆ 1 ತಿಂಗಳ ಅವಧಿಯಲ್ಲಿ 940 ಕಟ್ಟಡಗಳ ಸರ್ವೆ ಮಾಡಲಾಗಿದೆ.ಆರ್ ಆರ್ ನಗರ-375, ಪೂರ್ವ-179,ಮಹಾದೇವಪುರ-262,ಯಲಹಂಕ-90 ಕಟ್ಟಡಗಳ ಸರ್ವೆ ಮಾಡಲಾಗಿದ್ರೆ, ದಕ್ಷಿಣದಲ್ಲಿ19 ಹಾಗೂ  ದಾಸರಹಳ್ಳಿಯಲ್ಲಿ ಕೇವಲ 15 ಕಟ್ಟಡಗಳ ಸರ್ವೆ ಮಾಡಲಾಗಿದೆ.ದುರಂತ ಎಂದರೆ ಬೊಮ್ಮನಹಳ್ಳಿ ಹಾಗೂ ಪಶ್ಚಿಮ ವಲಯಗಳಲ್ಲಿ ಒಂದೇ ಒಂದು ಕಟ್ಟಡ ಸರ್ವೆ ಮಾಡದಿರುವುದು ಅಚ್ಚರಿ ಹಾಗೂ ಅನುಮಾನವನ್ನು ಮೂಡಿಸಿದೆ.

22-10-2021 ರಿಂದ 10-11-2021: ಇನ್ನು ಕೊನೆಯ ಹಂತವಾಗಿ ನಡೆಸಲಾದ ಸರ್ವೆ ಅತ್ಯಂತ ಚುರುಕು ಹಾಗೂ ಗಂಭೀರವಾಗಿ ನಡೆದಿರಬಹುದೆಂದು ಭಾವಿಸುವ ವರಿಗೆ ಶಾಕ್ ನೀಡುವಂತೆ ಮಾಡಿದ್ದಾರೆ ಅಧಿಕಾರಿಗಳು.ಚುರುಕಾಗುವ ಬದಲು ತಮ್ಮ ಸರ್ವೆಯ ಪ್ರಗತಿಯನ್ನು ಕ್ಷೀಣಿಸಿಕೊಂಡಿರುವುದು ಉಡಾಫೆತನಕ್ಕೆ ನಿದರ್ಶನ ದಂತಿದೆ.ಏಕೆಂದರೆ ಈ  25 ದಿನಗಳ ಅವಧಿಯಲ್ಲಿ 225 ಕಟ್ಟಡಗಳ ಸರ್ವೆ ಮಾಡಲಿಕ್ಕಷ್ಟೇ ಅಧಿಕಾರಿಗಳಿಗೆ ಸಾಧ್ಯವಾಗಿದೆ.ಅದರಲ್ಲಿ ಆರ್ ಆರ್ ನಗರದಲ್ಲಿ 129 ಹಾಗೂ ಮಹಾದೇವಪುರ ವಲಯದಲ್ಲಿ 96 ಕಟ್ಟಡಗಳ ಸರ್ವೆ ಮಾತ್ರ ಮಾಡಲಾಗಿದೆ.ಉಳಿದ ಪೂರ್ವ,ಪಶ್ಚಿಮ,ದಕ್ಷಿಣ, ದಾಸರಹಳ್ಳಿ,ಬೊಮ್ಮನಹಳ್ಳಿ,ಯಲಹಂಕ ವಲಯಗಳಲ್ಲಿ ಒಂದೇ ಒಂದು ಕಟ್ಟಡದ ಸರ್ವೆ ಮಾಡಿಲ್ಲ.

ಈ ಎಲ್ಲಾ 1 ವರೆ ವರ್ಷದ ಅವಧಿಯಲ್ಲಿ ಎಲ್ಲಾ 10 ವಲಯ ಕಚೇರಿಗಳಲ್ಲಿ 8496 ಕಟ್ಟಡಗಳ ಪೈಕಿ ಸರ್ವೆ ನಡೆಸಲಾದ ಕಟ್ಟಡಗಳ ಸಂಖ್ಯೆ ಒಟ್ಟು 6148 ಎಂದು ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ.ಈ ಪೈಕಿ ಜಂಟಿ ನಿರ್ದೇಶಕರು ಉತ್ತರ ಕಚೇರಿ-92, ಜಂಟಿ ನಿರ್ದೇಶಕರು ದಕ್ಷಿಣ ಕಚೇರಿ-39,ಪೂರ್ವ-947, ಮಹಾದೇವಪುರ-797, ಯಲಹಂಕ-661,ದಾಸರಹಳ್ಳಿ-274,ದಕ್ಷಿಣ-1147,ಪಶ್ಚಿಮ-1146,ಆರ್ ಆರ್ ನಗರ-752,ಬೊಮ್ಮನಹಳ್ಳಿ-293 ಕಟ್ಟಡಗಳ ಸರ್ವೆ ಸೇರಿದೆ.

ಪ್ಲ್ಯಾನ್ ಅಪ್ರೂವಲ್ ಆದ 8496 ಕಟ್ಟಡಗಳಲ್ಲಿ 6148 ಕಟ್ಟಡಗಳ ಸರ್ವೆ ನಡೆಸಿದಾಗ ಪತ್ತೆಯಾಗಿದ್ದು 5223 ಅಕ್ರಮ ಕಟ್ಟಡಗಳು,ಅಂದ್ರೆ ಕಟ್ಟಡ ನಿರ್ಮಾಣಕ್ಕೆಂದೇ ನಿಗಧಿಯಾಗಿರುವ ನಿಯಮಗಳನ್ನು ಧಿಕ್ಕರಿಸಿ ನಿರ್ಮಾಣಗೊಂಡಿರುವ ಕಟ್ಟಡಗಳು.ಅತೀ ಹೆಚ್ಚಿನ ಅಕ್ರಮ ಕಟ್ಟಡಗಳು ದಕ್ಷಿಣದಲ್ಲಿ ಪತ್ತೆಯಾಗಿವೆ.ಇಲ್ಲಿ 1147 ಕಟ್ಟಡಗಳು ಬೈಲಾ ಉಲ್ಲಂಘಿಸಿ ನಿರ್ಮಾಣಗೊಂಡಿವೆ.ಅದರ ನಂತರದ ಸ್ಥಾನ 1146 ಅಕ್ರಮ ಕಟ್ಟಡಗಳಿರುವ ಪಶ್ಚಿಮ ವಲಯಕ್ಕೆ ಸೇರಿದೆ.ಪೂರ್ವದಲ್ಲಿ 947,ಆರ್ ಆರ ನಗರ-752,ಯಲಹಂಕ-661,ಬೊಮ್ಮನಹಳ್ಳಿ-293 ಹಾಗೂ ದಾಸರಹಳ್ಳಿಯಲ್ಲಿ 274 ಅಕ್ರಮ ಕಟ್ಟಡಗಳನ್ನು ಸರ್ವೆ ವೇಳೆ ಪತ್ತೆ ಮಾಡಲಾಗಿದೆ.

8496 ಪ್ಲ್ಯಾನ್ ಸ್ಯಾಂಕ್ಷನ್ ಆದ ಕಟ್ಟಡಗಳ ಪೈಕಿ 6148 ಕಟ್ಟಡಗಳ ಸರ್ವೆ ಕಾರ್ಯ ಮುಗಿದಿದೆ.ಇದರಲ್ಲಿ 5223 ಕಟ್ಟಡಗಳು ಬೈಲಾ ಉಲ್ಲಂಘಿಸಿಯೇ ಕಟ್ಟಡ ನಿರ್ಮಿಸಿರುವುದು ಪತ್ತೆಯಾಗಿದೆ.ಅಂದ್ರೆ ಶೇಕಡಾ 84 ರಷ್ಟು ಕಟ್ಟಡಗಳು ಅಕ್ರಮ ಎಂದು ಸಾಬೀತಾದಂತಾಯಿತು.ಈ ಅಂಕಿಸಂಖ್ಯೆಯಲ್ಲೇ ಇನ್ನೂ 2348 ಕಟ್ಟಡಗಳ ಸರ್ವೆ ಬಾಕಿ ಇದೆ.

ಆರ್ ಆರ್ ನಗರದಲ್ಲಿ 1403 ಕಟ್ಟಡಗಳು ಇನ್ನೂ ಸರ್ವೆ ಆಗಿಲ್ಲ. ಬೊಮ್ಮನಹಳ್ಳಿಯಲ್ಲಿ 503, ಪಶ್ಚಿಮದಲ್ಲಿ 124 ಕಟ್ಟಡಗಳು ಹಾಗೂ ಪೂರ್ವದಲ್ಲಿ 30,ಮಹಾದೇವಪುರ-92,ಯಲಹಂಕ-96,ದಾಸರಹಳ್ಳಿ-33,ದಕ್ಷಿಣ-68 ಕಟ್ಟಡಗಳ ಸರ್ವೆ ಇನ್ನೂ ಮುಗಿಯಬೇಕಿದೆ.8496 ಕಟ್ಟಡಗಳ ಪೈಕಿ ಸರ್ವೆಯಾದ 5223 ಕಟ್ಟಡಗಳು ಅಕ್ರಮ ಎಂದು ಸಾಬೀತಾದಂತೆಯೇ ಉಳಿದ 2348 ಕಟ್ಟಡಗಳಲ್ಲೂ 2000 ರಷ್ಟು ಅಂದ್ರೆ ಶೇಕಡಾ 80 ರಷ್ಟು ಕಟ್ಟಡಗಳು ಅಕ್ರಮ ಎಂಬುದು ಸಾಬೀತಾದರೂ ಆಶ್ಚರ್ಯಪಡಬೇಕಿಲ್ಲ ಎನ್ನುತ್ತಾರೆ ನಗರ ಯೋಜನೆಯ ಹಿರಿಯ ಅಧಿಕಾರಿಯೊಬ್ಬರು.

ಇದು ಕೇವಲ ಕಳೆದ ಒಂದೂವರೆ ವರ್ಷದಲ್ಲಿ ಅಂದ್ರೆ 01-01-2020 ರಿಂದ 30-06-2021 ರ ಅವಧಿಯ ಅಂಕಿ ಅಂಶ ಅಷ್ಟೇ..ಹೈ ಕೋರ್ಟ್ ಬೀಸಿರುವ ಚಾಟಿ ಏಟಿಗೆ ಎಚ್ಚೆತ್ತುಕೊಂಡು ಬಿಬಿಎಂಪಿ ನಗರಯೋಜನೆ ವಿಭಾಗ ಸಿದ್ದಪಡಿಸಿ ಕೊಟ್ಟಿರುವ ಪಟ್ಟಿ.ಆದರೆ ಈ ಲೆಕ್ಕದ ಬಗ್ಗೆಯೂ ಸಾಕಷ್ಟು ಗುಮಾನಿಗಳಿವೆ.

ಅವಸರವಸರವಾಗಿ ಸಿದ್ದಪಡಿಸಿ ಕೊಟ್ಟಿರುವ ಪಟ್ಟಿ ಇರಬಹುದೆನ್ನುವ ಅನುಮಾನಗಳಿವೆ.ಇದನ್ನೇ ಹೈ ಕೋರ್ಟ್ ಗೆ ಸಲ್ಲಿಸಲು ಬಿಬಿಎಂಪಿ ಸಿದ್ಧತೆ ಮಾಡಿಕೊಂಡಿದೆ.ಇದಾದ ಕೂಡಲೇ 2020ಕ್ಕಿಂತ ಮುನ್ನ ಕಟ್ಟಡಗಳಿಗೆ ನೀಡಲಾದಂಥ ನಕ್ಷೆ ಮಂಜೂರಾತಿ ಬಗ್ಗೆ ಸರ್ವೆ ನಡೆಯಲಿದೆ..ಹಾಗಾಗಿ ಇದು ಕೇವಲ ಒಂದು ಸ್ಯಾಂಪಲ್ ಅಷ್ಟೇ..ಶೇಕಡಾ 90ರಷ್ಟು ಕೆಲಸ ಇನ್ನೂ ಬಾಕಿ ಇದೆ ಎನ್ನಲಾಗುತ್ತಿದೆ.

Spread the love
Leave A Reply

Your email address will not be published.

Flash News