Breakinglock downMoreScrollTop NewsUncategorizedಕ್ರೈಮ್ /ಕೋರ್ಟ್ಜಿಲ್ಲೆಫೋಟೋ ಗ್ಯಾಲರಿರಾಜಕೀಯರಾಜ್ಯ-ರಾಜಧಾನಿ

WHETHER CM BOMMAI LIED IN BITCOIN SCANDLE INVESTIGATION..?! :“ಬಿಟ್ ಕಾಯಿನ್” ತನಿಖೆ ವಿಚಾರದಲ್ಲೇಕೆ, ಸಿಎಂ ಬೊಮ್ಮಾಯಿ ಸುಳ್ಳು ಹೇಳಿದ್ರು..!? ಸುಳ್ಳಿನ ಅನಿವಾರ್ಯತೆಯಾದರೂ ಏನಿತ್ತು..?! ಆ ಸುಳ್ಳಿನ ಹಿಂದೆ ಇರುವ ರಹಸ್ಯವೇನು..?!

ಬೆಂಗಳೂರು:ರಾಜ್ಯ ರಾಜಕಾರಣ ಹಾಗೂ ಪೊಲೀಸ್ ಇಲಾಖೆಯಲ್ಲಿ ಬಿಟ್ ಕಾಯಿನ್ ಹಗರಣ  ಕೋಲಾಹಲವನ್ನೇ ಎಬ್ಬಿಸಿದ್ರೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತ್ರ ಗಾಢನಿದ್ದೆಯಲ್ಲಿದ್ದಂತಿದೆ. ಬಿಟ್ ಕಾಯಿನ್ ಸರ್ಕಾರದ ಬುಡವನ್ನೇ   ಕಾಯಿಸುತ್ತಿದ್ದರೂ ತುಂಬಾ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ.ಬಿಟ್ ಕಾಯಿನ್ ನಿಂದ ಏನೂ ಆಗೊಲ್ಲ ಎನ್ನುವ ಉತ್ತರ ನೀಡಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ.ಅದೆಲ್ಲಾ ಮಾಡಿಕೊಳ್ಳಲಿ,ಆದ್ರೆ ಹಗರಣವನ್ನು ಸಿಬಿಐ ಹಾಗೂ  ಇಡಿಗೆ ವಹಿಸಲಾಗಿದೆ ಎಂದು   ಹೇಳಿರುವುದು ಮಾತ್ರ ನೈತಿಕತೆ ಮತ್ತು ಪ್ರಾಮಾಣಿಕತೆಯನ್ನೇ ಪ್ರಶ್ನಿಸುವಂತಿದೆ..ಏಕೆಂದ್ರೆ ದಾಖಲೆಗಳೇ ಬೊಮ್ಮಾಯಿ ಹೇಳುತ್ತಿರುವುದು ಸುಳ್ಳೆನ್ನುವುದನ್ನು ಸಾರಿ ಹೇಳುತ್ತಿವೆ.ಆ ದಾಖಲೆಗಳು ಕನ್ನಡ ಫ್ಲ್ಯಾಶ್ ನ್ಯೂಸ್ ಗೂ ಲಭ್ಯವಾಗಿದೆ.

ಬಿಟ್ ಕಾಯಿನ್ ಹಗರಣದ ತನಿಖೆಯನ್ನು ಸರ್ಕಾರ ಇಡಿಗೂ ವಹಿಸಿಲ್ಲ..ಸಿಬಿಐಗೂ ನೀಡಿಲ್ಲ ಎನ್ನುವುದು ದಾಖಲೆಗಳಲ್ಲೇ ಸ್ಪಷ್ಟವಾಗಿವೆ.ಅಕ್ಟೋಬರ್ 29 ರಂದು ಬಿಟ್ ಕಾಯಿನ್ ಪ್ರಕರಣದ ಜತೆಗೆ ಡ್ರಗ್ಸ್ ಹಗರಣವನ್ನು ಸಿಬಿಐ ಇಂಟರ್ ಪೋಲ್ ಮತ್ತು  ಜಾರಿ ನಿರ್ದೇಶನಾಲಯಕ್ಕೆ ವಹಿಸುತ್ತಿರುವುದಾಗಿ ಹೇಳಿದ್ದರು.ಮುಖ್ಯಮಂತ್ರಿ ಹಾಗೂ ಸರ್ಕಾರದ ಮೇಲೆ ಜನ ನಂಬಿಕೆ ಮೂಡಿಸಿಕೊಂಡಿದ್ರು.ಆದರೆ ನಂತರ ಬಹಿರಂಗವಾದ ವಿಚಾರಗಳಿಂದ ಮುಖ್ಯಮಂತ್ರಿಗಳು ಹೇಳುತ್ತಿರುವುದೆಲ್ಲಾ ಸುಳ್ಳು ಎನ್ನುವುದು ಸ್ಪಷ್ಟವಾಗುತ್ತಿದೆ.ಏಕೆಂದರೆ ತನಿಖಾ ಸಂಸ್ಥೆಗಳೇ ಇಲ್ಲಿನ ಸಂಬಂಧಪಟ್ಟ ಇಲಾಖೆಗಳಿಗೆ ಪತ್ರಮುಖೇನ ಮಾಹಿತಿ ಪಡೆಯುವ ಕೆಲಸ ಮಾಡಿವೆಯೇ ಹೊರತು, ಮುಖ್ಯಮಂತ್ರಿಗಳು ಹಗರಣದ ತನಿಖೆ ಬಗ್ಗೆ ಗಂಭೀರವಾದ  ನಿರ್ದಾರ ಮಾಡಿದಂತಿಲ್ಲ ಎನ್ನುವುದು ಬಹುತೇಕ ಖಚಿತವಾದಂತಿದೆ.

ಮಾರ್ಚ್ 3 ರಂದು ಬಿಟ್ ಕಾಯಿನ್ ಹಗರಣವನ್ನು ರಾಜ್ಯ ಸರ್ಕಾರ ಇ.ಡಿಗೆ ವಹಿಸಿದೆ ಎಂದು ಹೇಳಿಕೆ ಕೊಟ್ಟಿದ್ದರು.ಆದ್ರೆ ವಾಸ್ತವದಲ್ಲಿ ಇ.ಡಿಯಿಂದ ಸೋರಿಕೆಯಾದ ಒಂದು ಪತ್ರದಲ್ಲಿ ಇ.ಡಿ ನಿರ್ದೇಶಕರೇ ಪೊಲೀಸ್ ಆಯುಕ್ತರಿಗೆ ಫೆಬ್ರವರಿ 15 ರಂದು ಒಂದು ಪತ್ರ ಬರೆದು ವಿವರಣೆ ಕೇಳಿತ್ತೆನ್ನುವುದು ಸಾಬೀತಾಗಿತ್ತು.

ಮಾದ್ಯಮಗಳಲ್ಲಿ ಬಿಟ್ ಕಾಯಿನ್ ವಿಚಾರ ಮಾಡುತ್ತಿರುವ ಸದ್ದು ಸರ್ಕಾರ ಹಾಗೂ ಪೊಲೀಸ್ ಇಲಾಖೆಯನ್ನು ಮುಜುಗರಕ್ಕೀಡು ಮಾಡಿದ್ದರಿಂದ ಮಾರ್ಚ್  3 ರಂದು ಬೆಂಗಳೂರು ಅಪರಾಧ ವಿಭಾಗದ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಅವ್ರೇ ಇಡಿಗೆ ಪತ್ರ ಬರೆದು ಪ್ರಕರಣದ ಬಗ್ಗೆ ಇಲಾಖೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವಿವರಣೆ ನೀಡಿದ್ದರು.

ಇದೆಲ್ಲವೂ ಪೊಲೀಸ್ ಇಲಾಖೆ.ಕೇಂದ್ರ ಗೃಹ ಇಲಾಖೆ,ಇ.ಡಿ ನಡುವೆ ಪತ್ರ ವ್ಯವಹಾರದ ಮಾಹಿತಿಗಳೇ ಹೊರತು,ಸರ್ಕಾರ ಮುತುವರ್ಜಿ ವಹಿಸಿ ಸಿಬಿಐ ಮತ್ತು ಇ.ಡಿಗೆ ವಹಿಸುವ ಕೆಲಸ ಮಾಡಿರಲಿಲ್ಲ ಎನ್ನುವುದು ಕೂಡ ದಾಖಲೆಗಳಿಂದಲೇ ಸಾಬೀತಾಗಿದೆ.

ಇದೆಲ್ಲವನ್ನು ಗಮನಿಸಿದ್ರೆ ಬೊಮ್ಮಾಯಿ ಅವರು ಯಾಕೆ ಮೇಲ್ಕಂಡ ಪ್ರಕರಣದಲ್ಲಿ ಸುಳ್ಳು ಹೇಳಿದ್ರು…ಮುಖ್ಯಮಂತ್ರಿಯಂಥ ಮಹತ್ವದ ಸ್ಥಾನದಲ್ಲಿದ್ದುಕೊಂಡು ಅಂತದ್ದೊಂದು ಹಸಿ ಹಸಿ ಸುಳ್ಳನ್ನೇಳೊ ಅವಶ್ಯಕತೆ ಅವರಿಗೇನಿತ್ತು..ಮೇಲ್ಕಂಡ ಪ್ರಕರಣದಲ್ಲಿ ಅವರೇಕೆ ಗಂಭೀರವಾಗಿ ವರ್ತಿಸುತ್ತಿಲ್ಲ ಹಾಗೆಯೇ ವ್ಯವಹರಿಸುತ್ತಿಲ್ಲ.. ಈ ಹಗರಣ ಸರ್ಕಾರಕ್ಕೆ ಮುಜುಗರ ತರಿಸುತ್ತದೆ..ಅದು ಗಂಭೀರವಾದ್ರೆ ರಾಜ್ಯದ ಜನತೆ ಮುಂದೆ ಬೆತ್ತಲಾಗಬೇಕಾಗುತ್ತದೆ ಎನ್ನುವ ಮುಂದಾಲೋಚನೆ ಅವರಿಗಿಲ್ಲವೇ..? ಎನ್ನುವ ಶಂಕೆ ವ್ಯಕ್ತವಾಗುತ್ತಿದೆ.

ಇವು ಒಂದು ಹಂತದ ಅನುಮಾನಗಳಾದ್ರೆ ಹಗರಣದ ವಿಚಾರದಲ್ಲಿ ಅಷ್ಟೇನು ಗಂಭೀರವಾಗಿರುವಂತೆ ತೋರದ ಅವರ ಅನಾದಾರದ ಹಿಂದೆ ಬೇರೆ ಏನಾದ್ರು ಕಾರಣಗಳಿವೆಯಾ..? ಯಾರಿಂದಲಾದ್ರೂ ಒತ್ತಡ ಇದೆಯಾ..;? ಸರ್ಕಾರದ ಬಹಳಷ್ಟು ಮಂದಿ ಹಗರಣದಲ್ಲಿ ಸಿಲುಕಿರಬಹುದಾದ ಹಿನ್ನಲೆಯಲ್ಲಿ ಅವರನ್ನು ರಕ್ಷಿಸಲು ಇಂತದ್ದೊಂದು ಸುಳ್ಳು ಹೇಳುತ್ತಿದ್ದಾರಾ..? ಹಗರಣದಿಂದ ಸರ್ಕಾರಕ್ಕೆ ಬರಬಹುದಾದ ಕಳಂಕ ತೊಡೆದುಕೊಳ್ಳಲು ತಾವೇ ಮುಂದೆ ನಿಂತು ಹಗರಣವನ್ನು ಮುಚ್ಚಾಕಲು ಯತ್ನಿಸುತ್ತಿದ್ದಾರಾ..? ಬೊಮ್ಮಾಯಿ ಅವರ ಕೈವಾಡವೇನಾದ್ರೂ ಇದರಲ್ಲಿದೆಯಾ..? ಅವರ ಆತ್ಮೀಯರೆನಿಸಿಕೊಂಡವರೇನಾದ್ರೂ ಹಗರಣದಲ್ಲಿ ಭಾಗಿಯಾಗಿದ್ದಾರಾ..? ಈ ರೀತಿಯೂ ಸಾಕಷ್ಟು ಅನುಮಾನಗಳಿವೆ.

ಆದ್ರೆ ಒಂದಂತೂ ಸತ್ಯ..ಬೊಮ್ಮಾಯಿ ಬಡಾಯಿ ಕೊಚ್ಚಿಕೊಳ್ಳುವಷ್ಟೇನು ಗಂಭೀರ ಹಾಗು ಪ್ರಾಮಾಣಿಕ ಪ್ರಯತ್ನದ ಭಾಗವಾಗಿ ಹಗರಣವನ್ನು ಸಿಬಿಐ ಅಥವಾ ಜಾರಿ ನಿರ್ದೇಶನಾಲಯಕ್ಕೆ ವಹಿಸಿಲ್ಲ.. ಆ ನಿಟ್ಟಿನಲ್ಲಿ ಮುಖ್ಯಮಂತ್ತಿಗಳ ಕಚೇರಿಯಿಂದ ಯಾವುದೇ ಪತ್ರ ವ್ಯವಹಾರಗಳಾಗಿಲ್ಲ ಎನ್ನುವುದಂತೂ ಸತ್ಯ ಎನ್ನುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತದೆ..ಯಾಕೆ ಬಸವರಾಜ ಬೊಮ್ಮಾಯಿ ಇಂತದ್ದೊಂದು ಸುಳ್ಳು ಹೇಳಿದ್ರೆನ್ನುವುದಕ್ಕೆ ಅವರೇ ಸ್ಪಷ್ಟನೆ ಕೊಡಬೇಕಿದೆ ಅಷ್ಟೇ..

Spread the love

Related Articles

Leave a Reply

Your email address will not be published.

Back to top button
Flash News