“ನಾದಬ್ರಹ್ಮ”ನ ಬೆನ್ನಿಗೆ ಬೆಂಗಳೂರು ವಿವಿ ವಿದ್ಯಾರ್ಥಿಗಳು-ಪುರೋಹಿತಶಾಹಿಯಿಂದ ಹಂಸಲೇಖರನ್ನು ಮುಗಿಸುವ ಹುನ್ನಾರದ ಆರೋಪ..

ಮಾತಿನ ಭರಾಟೆಯಲ್ಲಿ ನಾಲಿಗೆ ತಪ್ಪಿ ನುಡಿದಂಥ ಹಂಸಲೇಖ ಅವರ ಮಾತುಗಳು ಇವತ್ತು ಅವರನ್ನು ಒಬ್ಬ ವಿಲನ್ ಸ್ಥಾನದಲ್ಲಿ ನಿಲ್ಲುವಂತೆ ಮಾಡಿವೆ.

0

ಬೆಂಗಳೂರು: ತನ್ನ ಅತ್ಯದ್ಭುತ ಪ್ರತಿಭೆ-ಸಾಮರ್ಥ್ಯದಿಂದ ಕನ್ನಡ ಚಲನಚಿತ್ರ ಸಂಗೀತದ ದಿಕ್ಕುದಿಸೆಯನ್ನೇ ಬದಲಿಸಿದವರು ಹಂಸಲೇಖ.ಅದಕ್ಕಾಗೇ ಅವರಿಗೆ ಅತ್ಯಂತ ಪ್ರೀತಿ-ವಿಶ್ವಾಸದಿಂದ ಕೊಟ್ಟ ಬಿರುದು ನಾದಬ್ರಹ್ಮ.ಚಿತ್ರರಂಗದ ಇತಿಹಾಸದಲ್ಲಿ ಮತ್ತೊಮ್ಮೆ ಹಂಸಲೇಖ ಹುಟ್ಟೊಕ್ಕೆ ಆಗೋದು ಇಲ್ಲ.. ಅವರು ಪಡೆದುಕೊಂಡ ನಾದಬ್ರಹ್ಮ ಬಿರುದನ್ನು  ಇನ್ನೋರ್ವ ಪಡೆಯಲಿಕ್ಕೂ ಆಗೊಲ್ಲ ಬಿಡಿ..ಹಂಸಲೇಖಾಗೆ ಹಂಸಲೇಖನೇ ಸಾಟಿ..

ಪರಿಸ್ಥಿತಿ ಹೀಗಿರುವಾಗ ಮಾತಿನ ಭರಾಟೆಯಲ್ಲಿ ನಾಲಿಗೆ ತಪ್ಪಿ ನುಡಿದಂಥ ಹಂಸಲೇಖ ಅವರ ಮಾತುಗಳು ಇವತ್ತು ಅವರನ್ನು ಒಬ್ಬ ವಿಲನ್ ಸ್ಥಾನದಲ್ಲಿ ನಿಲ್ಲುವಂತೆ ಮಾಡಿವೆ.ಮಾತಿನ ತಾತ್ಪಾರ್ಯ ಅರ್ಥ ಮಾಡಿಕೊಳ್ಳದ ಕೆಲವು ಕೊಳಕು ಮನಸುಗಳು ಹಂಸಲೇಖ ವಿರುದ್ಧ ಮಾಡುತ್ತಿರುವ ಮಾತಿನ ದಾಳಿಗಳು ನಿಜಕ್ಕೂ ಆತಂಕಕಾರಿಯಾಗಿವೆ.

ಆದ್ರೆ…ಆದ್ರೆ ಕೊಲ್ಲೊಕ್ಕೆ ಒಬ್ಬನಿದ್ದರೆ,ಕಾಯೊಕ್ಕೆ ಇನ್ನೊಬ್ಬನಿರುತ್ತಾನೆ ಎನ್ನುವಂತೆ ಅನೇಕರು ಹಂಸಲೇಖ ಬೆನ್ನಿಗೆ ನಿಲ್ಲೊಕ್ಕೆ ಮುಂದಾಗಿದ್ದಾರೆ. ಹಂಸಲೇಖ ಹೇಳಿದ್ದರಲ್ಲಿ ತಪ್ಪೇನಿದೆ..ಅವರು ಹೇಳಿದ್ದು ಅಕ್ಷರಶಃ ಸತ್ಯ ಎನ್ನುವುದನ್ನು ಸಾರಿ ಹೇಳೊಕ್ಕೆ ಶುರುವಿಟ್ಟುಕೊಂಡಿದ್ದಾರೆ.

ಕ್ಷಮೆ ಯಾಚನೆ ಬೆನ್ನಲ್ಲೂ ಹಂಸಲೇಖ ವಿರುದ್ಧದ  ಮಾತಿನ ದಾಳಿ ನಿಂತಿಲ್ಲ.ಅದು ನಾನಾ ತಿರುವು ಪಡೆಯುತ್ತಿರುವ ಬೆನ್ನಲ್ಲೇ ಹಂಸಲೇಖ ಅವರಿಗೆ ನೈತಿಕ ಬೆಂಬಲ ನೀಡುವ ಬೆಳವಣಿಗೆಗಳು ಕಂಡುಬರುತ್ತಿವೆ.ವೈಚಾರಿಕ ಪ್ರಜ್ಞೆಯನ್ನು ಉಳಿಸಿಕೊಂಡಿರುವ ಬೆಂಗಳೂರು ವಿವಿಯ ಒಂದಷ್ಟು ವಿದ್ಯಾರ್ಥಿಗಳು ಹಾಗೂ ಸಮಾನಮನಸ್ಕ ಸಂಘಟನೆಗಳು ಹಂಸಲೇಖ ಬೆನ್ನಿಗೆ ನಾವಿದ್ದೇವೆ ಎನ್ನುವುದನ್ನು ಸಾರುವ ಕೆಲಸಕ್ಕೆ ಮುಂದಾಗಿವೆ.

ಹಂಸಲೇಖ ಹೇಳಿದ್ದರಿಂದ ಪ್ರಳಯವೇ ಸಂಭವಿಸಿ ಹೋಗಿದೆ.ಆಗಬಾರದ್ದು ನಡೆದೋಗಿದೆ ಎನ್ನುವಂತೆ ಅವರ ಮೇಲೆ ಮುಗಿ ಬೀಳುತ್ತಿರುವ, ಪೊಲೀಸ್ ಸ್ಟೇಷನ್ ಗಳಲ್ಲಿ ಬ್ಯಾಕ್ ಟು ಬ್ಯಾಕ್ ದೂರುಗಳು ದಾಖಲಾಗುತ್ತಿವೆ.ಇದರಿಂದ ಹಂಸಲೇಖ ನೈತಿಕ ಸ್ಥೈರ್ಯ ಕಳೆದುಕೊಳ್ಳಬಾರದೆನ್ನುವ ಸಂದೇಶವನ್ನು ಅವರ ಪರ ಪ್ರತಿಭಟನೆ ಮಾಡುವ ವಿದ್ಯಾರ್ಥಿ ಸಂಘಟನೆಗಳು ರವಾನಿಸಿವೆ.

ವೈಚಾರಿಕ ಪ್ರಜ್ಞೆಯನ್ನು ಉಳಿಸಿಕೊಂಡಿರುವ ಒಂದಷ್ಟು ವಿದ್ಯಾರ್ಥಿ ಮನಸುಗಳ ಹೋರಾಟಕ್ಕೆ ದಲಿತಪರ ಸಂಘಟನೆಗಳು ಸಾಥ್ ಕೊಟ್ಟವು.ಹಂಸಲೇಖ ಹೇಳಿದ್ದನ್ನು ಕೂಲಂಕುಷವಾಗಿ ಅರ್ಥ ಮಾಡಿಕೊಳ್ಳುವ ಕೆಲಸವೇ ನಡೆಯುತ್ತಿಲ್ಲ.ಕೆಲವು ಕೊಳಕು ಮನಸುಗಳು ವಿಷಯವನ್ನು ವಿವಾದ ಮಾಡಿಕೊಂಡು ಅದರಲ್ಲೇ ತಮ್ಮ ಸ್ವಾರ್ಥದ ಬೇಳೆ ಬೇಯಿಸಿಕೊಳ್ಳಲು ಮುಂದಾಗಿವೆ.ಎಷ್ಟೇ ಬೆದರಿಕೆ-ಒತ್ತಡ ಬಂದರೂ ಹಂಸಲೇಖ ಅವರು ದೃತಿಗೆಡಬಾರದು ಎಂದು ಪ್ರತಿಭಟನಾಕಾರರು ಧೈರ್ಯ ಹೇಳಿದ್ರು.

ಪೇಜಾವರ ಶ್ರೀಗಳ ಬಗ್ಗೆ ಕೊಟ್ಟ ಹೇಳಿಕೆ ವಿರೋಧಿಸಿ  ಹಂಸಲೇಖ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆ ಒಂದು ಕಡೆ ನಡೆಯುತ್ತಿರುವಾಗಲೇ ಹಂಸಲೇಖ ಅವರನ್ನು ಕೆಲ ವಿಚಾರವಾದಿಗಳು ಹಾಗೂ ಪ್ರಗತಿಪರರು ಬೆಂಬಲಿಸುತ್ತಿರುವುದು ಹೋರಾಟವನ್ನು ಮತ್ತಷ್ಟು ರೋಚಕಗೊಳಿಸಿದೆ.

ಪ್ರತಿಭಟನಾ ಮೆರವಣಿಗೆಯ ಮುಂದಾಳತ್ವವನ್ನು ವಿದ್ಯಾರ್ಥಿ ಮುಖಂಡರಾದ ವೆಂಕಟಾಚಲ, ವಿ.ಎಸ್ ಗೋಪಿ, ಜಿ ಲೋಕೇಶ್,ಎನ್ ಆರ್ ಸತೀಶ್, ಜಿ.ಕೆ ಲೋಕೇಶ್,ಎನ್ ಚಂದ್ರು ಪೆರಿಯಾರ್, ಯಲ್ಲಪ್ಪ, ಕೆ.ಜಿ ಈಶ್ವರ್ ವಹಿಸಿದ್ದರು.ಮಳೆಯ ನಡುವೆಯೂ ನೂರಾರು ವಿದ್ಯಾರ್ಥಿಗಳು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

Spread the love
Leave A Reply

Your email address will not be published.

Flash News