BBMP EX-CORPORATOR COMMITE TO SUCIDE:ಬೆಂಗಳೂರಿನಲ್ಲಿ ಮಾಜಿ ಕಾರ್ಪೊರೇಟರ್ ಶಿವಪ್ಪ ನೇಣಿಗೆ ಶರಣು-ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ

ಗಾಂಧೀನಗರ ಕ್ಷೇತ್ರದ ಎಮ್ಮೆಲ್ಲೆ ಟಿಕೆಟ್ ಆಕಾಂಕ್ಷಿಯಾಗಿದ್ದ ಶಿವಪ್ಪ-ಮುಂಬರುವ ಕಾರ್ಪೊರೇಷನ್ ಎಲೆಕ್ಷನ್ ನಲ್ಲಿ ಸ್ಪರ್ಧಿಸುವ ತಯಾರಿಯಲ್ಲಿದ್ದ ಮಾಜಿ ಬಿಡಿಎ ಸದಸ್ಯ

0

ಬೆಂಗಳೂರು:ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಹಾಗೂ ಕೈ ಪಕ್ಷದಿಂದ ಮಾಜಿ ಕಾರ್ಪೊರೇಟರ್ ಆಗಿದ್ದ ಶಿವಪ್ಪ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.2005ರ ಅವಧಿಯಲ್ಲಿ ಅತ್ತಿಗುಪ್ಪೆ ವಾರ್ಡ್ ನಿಂದ ಕೈ ಪಕ್ಷದಿಂದ ಸ್ಪರ್ಧಿಸಿ ಕಾರ್ಪೊರೇಟರ್ ಆಗಿದ್ದ ಶಿವಪ್ಪ ರಿಗೆ 55 ವರ್ಷ ವಯಸ್ಸಾಗಿತ್ತು,

ಅತ್ತಿಗುಪ್ಪೆಯಲ್ಲಿ ಅನೇಕ ವರ್ಷಗಳಿಂದ ವಾಸವಾಗಿದ್ದ ಶಿವಪ್ಪ ಮಾಜಿ ಬಿಡಿಎ ಸದಸ್ಯರೂ ಆಗಿದ್ದರು.ಜನತಾದಳದಿಂದ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದ್ದ ಶಿವಪ್ಪ ನಂತರ ಕೈ ಸೇರಿ ಕಾರ್ಪೊರೇಟರ್ ಆಗಿ ನಂತರ ಟಿಕೆಟ್ ಸಿಗದ ಹಿನ್ನಲೆಯಲ್ಲಿ ಬಿಜೆಪಿ ಸೇರಿದ್ದರು.

ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಶಿವಪ್ಪ ರಿಗೆ ಆತ್ಮಹತ್ಯೆ ಮಾಡಿಕೊಳ್ಳುವಂಥ ಯಾವ ಕಾರಣಗಳಿದ್ದವೆನ್ನುವು್ದು ಗೊತ್ತಾಗಿಲ್ಲ.ಮಗ ಮನೆಗೆ ಬಂದಾಗ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ತಂದೆಯನ್ನು ಕಂಡು ತಕ್ಷಣ ಹತ್ತಿರದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ.ಆದರೆ ಅಷ್ಟರಲ್ಲಾಗಲೇ ಪ್ರಾಣಪಕ್ಷಿ ಹಾರಿ ಹೋಗಿತ್ತು.

ಗಾಂಧೀನಗರದಿಂದ ಮುಂದಿನ ಚುನಾವಣೆಗೆ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದರೆನ್ನಲಾಗಿದೆ.ಮುಂಬರುವ ಕಾರ್ಪೊರೇಷನ್ ಎಲೆಕ್ಷನ್ ನಲ್ಲೂ ಸ್ಪರ್ಧಿಸಬೇಕೆನ್ನುವ  ಇರಾದೆ ಇಟ್ಟುಕೊಂಡಿದ್ದರೆನ್ನಲಾಗಿದೆ.ಅವರ ಪತ್ನಿ ಕೂಡ ಒಮ್ಮೆ ಕಾರ್ಪೊರೇಟರ್ ಆಗಿದ್ದರು.ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಸಂಗತಿ ದಿಗ್ಬ್ರಾಂತಿ ಮೂಡಿಸಿದೆ.ಆತ್ಮಹತ್ಯೆಗೆ ನಿಖರ ಕಾರಣ ಎನ್ನುವುದನ್ನು ಪತ್ತೆ ಮಾಡುವಲ್ಲಿ ಚಂದ್ರಾ ಲೇ ಔಟ್ ಪೊಲೀಸರು ನಿರತರಾಗಿದ್ದಾರೆ.ಶಿವಪ್ಪ ಅವರ ಅಕಾಲಿಕ ನಿಧನಕ್ಕೆ ಸಚಿವ ಸೋಮಣ್ಣ,ಮಾಜಿ ಸಚಿವರಾದ ಎಂ.ಕೃಷ್ಣಪ್ಪ, ಪ್ರಿಯಾ ಕೃಷ್ಣ ತೀವ್ರ ಸಂತಾಪ ಸೂಚಿಸಿದ್ದಾರೆ.

Spread the love
Leave A Reply

Your email address will not be published.

Flash News