NO VALUE FOR TRANSPORT EMPLYOEES LIFE: SUCIDES ARE BECOME COMMON: ಸಚಿವ ಶ್ರೀರಾಮಲು ಅವ್ರೇ…ನಿಮ್ ಸರ್ಕಾರದ “ದಾಹ”ಕ್ಕೆ ಇನ್ನೆಷ್ಟು ಅಮಾಯಕ ಸಾರಿಗೆ ನೌಕರರ “ಬಲಿ” ಬೇಕೋ..?

ಹೆಚ್ಚುತ್ತಲೇ ಇದೆ, ಸಾರಿಗೆ ಕಾರ್ಮಿಕರ ಅಸಹಜ ಸಾವಿನ ಸರಣಿ..?! ಕಳೆದ ಮೂರ್ನಾಲ್ಕು ತಿಂಗಳಲ್ಲಿ 15ಕ್ಕೂ ಹೆಚ್ಚು ಕಾರ್ಮಿಕರ ಆತ್ಮಹತ್ಯೆ ಶಂಕೆ..?!

0

ಬೆಂಗಳೂರು:ಸಾರಿಗೆ ಕಾರ್ಮಿಕರ ವಾಟ್ಸಪ್ ಗ್ರೂಪ್ ಗಳನ್ನು ನೋಡಿದ್ರೆ ಸಾಕು, ಅದರಲ್ಲಿ ದಿನಕ್ಕೆ ಕನಿಷ್ಠ ಪಕ್ಷ ಒಂದಿಬ್ಬರು ಅಸಹಜ ಸಾವಿಗೆ ಬಲಿಯಾಗು ತ್ತಲೇ ಇರುವ ಸುದ್ದಿ ಸಿಗುತ್ತೆ.ಎಷ್ಟೇ ಕಾರ್ಮಿಕರು ಬಲಿಯಾದರೂ ಸರ್ಕಾರ ಮತ್ತು ಸಾರಿಗೆ ನಿಗಮಗಳ ಆಡಳಿತ ವ್ಯವಸ್ಥೆ ಮಾತ್ರ ಮನಸು ಬದಲಿಸಿಕೊಂಡಂತಿಲ್ಲ..ಸಾರಿಗೆ ಕಾರ್ಮಿಕರ ಬಲಿ ಪಡೆಯೊಕ್ಕಂತನೇ ಇರುವ ಯಮಸ್ವರೂಪಿಯಂತೆ ಕಾಣುತ್ತಾರೆ.

ನಿಜಕ್ಕೂ ಸಾರಿಗೆ ಸಾರಿಗೆ ಕಾರ್ಮಿಕರು ಹಿಂದಿನ ಜನ್ಮದಲ್ಲಿ ಕರ್ಮ ಮಾಡಿದ್ರು ಅನ್ಸುತ್ತೆ..ಅದಕ್ಕೆ ಈ ಈ ಜನ್ಮದಲ್ಲಿ ಪಾಪನಿವಾರಣೆಗೆ ಸಾರಿಗೆ ನಿಗಮಗಳಲ್ಲಿ ಕೆಲಸ ಮಾಡುತ್ತಿದ್ದಾರೆನ್ನುವ ಮಾತು ಸಾಮಾನ್ಯವಾಗಿದೆ.ಸಾರಿಗೆ ಕಾರ್ಮಿಕರು ನಿತ್ಯವೂ ಅನುಭವಿಸುತ್ತಿರುವ ಕಿರುಕುಳ-ಮಾನಸಿಕ ಹಿಂಸೆ-ಯಮಯಾತನೆ-ಮೇಲಾಧಿಕಾರಿ ದೌರ್ಜನ್ಯ,ದಬ್ಬಾಳಿಕೆ ಗಮನಿಸಿದ್ರೆ ಇದೆಲ್ಲಾ ಹೌದಾ ಎನಿಸುತ್ತದೆ.

ಸಾರಿಗೆಯ 4  ನಿಗಮಗಳಲ್ಲಿ ಕೆಲಸ ಮಾಡುತ್ತಿರುವ ಹಾಗೂ ಮುಷ್ಕರದ ಕಾರಣಕ್ಕೆ ಕೆಲಸ ಕಳೆದುಕೊಂಡ ಕಾರ್ಮಿಕರು ಬದುಕಿನ ಬಗ್ಗೆ ಆಶಾವಾದವನ್ನೇ ಕಳೆದುಕೊಂಡಿದ್ದಾರೆ.ಬದುಕಿದ್ದೇನು  ಪ್ರಯೋಜನ ಎನ್ನುವ ಬೇಸರಕ್ಕೆ ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ.ನಾವು ಸತ್ತರಾದರೂ ಸಾರಿಗೆ ನಿಗಮಗಳ ವ್ಯವಸ್ಥೆ ಬದಲಾಗಬೋದು,ಉಳಿದ ಕಾರ್ಮಿಕರಿಗೆ ನ್ಯಾಯ ಸಿಗಬೋದು ಎನ್ನುವ ತ್ಯಾಗಕ್ಕೆ ಇಳಿದಿದ್ದಾರೆ.ಅದರಲ್ಲೂ ಕೆಲಸ ಕಳೆದುಕೊಂಡ ಮೇಲಂತೂ ಕಾರ್ಮಿಕರು ನಿತ್ಯವೂ ಸತ್ತು ಸತ್ತು ಬದುಕುವಂತಾಗಿದೆ.

ನಿತ್ಯದ ಜೀವನ ಹೊರೆಯೊಕ್ಕೆ ಸಾಧ್ಯವಾಗದೆ ಆತ್ಮಹತ್ಯೆ ನಿರ್ದಾರ ಕೈಗೊಳ್ಳುತ್ತಿದ್ದಾರೆನ್ನುವುದು ಕೆಲಸ ಕಳೆದುಕೊಂಡು ಅದೇ ಮನಸ್ಥಿತಿಯಲ್ಲಿರುವ ಅದೆಷ್ಟೋ ಕಾರ್ಮಿಕರ ಒಡಲಾಳದ ಅಳಲು.

ಕಲಘಟಗಿ ನಿಲ್ದಾಣದ ಕಚೇರಿಯಲ್ಲೇ ಮೇಲಾಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಸಾರಿಗೆ ನಿಯಂತ್ರಕ ಸುಭಾಷ್ ಬುಲಬುಲೆ
ಕಲಘಟಗಿ ನಿಲ್ದಾಣದ ಕಚೇರಿಯಲ್ಲೇ ಮೇಲಾಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಸಾರಿಗೆ ನಿಯಂತ್ರಕ ಸುಭಾಷ್ ಬುಲಬುಲೆ….

ಹೆಸರು ಹೇಳಲಿಚ್ಚಿಸದ ಸಾರಿಗೆ ಕಾರ್ಮಿಕರ ಮುಖಂಡರೊಬ್ಬರೇ ಹೇಳುವಂತೆ ಕಳೆದ ಎರಡ್ಮೂರು ತಿಂಗಳಲ್ಲಿ ಹದಿನೈದಕ್ಕು ಹೆಚ್ಚು ಸಾರಿಗೆ ಕಾರ್ಮಿಕರು ಆತ್ಮಹತ್ಯೆಗೆ ಶರಣಾಗಿದ್ದಾರಂತೆ.ಕೆಲಸ ಕಳೆದುಕೊಂಡು ನಿತ್ಯವೂ ಜೀವನ ನಡೆಸಲಿಕ್ಕೆ ಹೋರಾಟ ನಡೆಸುತ್ತಿರುವ ಅದೆಷ್ಟೋ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡರೆ ಸಮಾಜ ಹೇಡಿ ಎನ್ನುತ್ತೆ ಎನ್ನುವ ಕಾರಣಕ್ಕೆ ಆತ್ಮಹತ್ಯೆ ನಿರ್ದಾರದಿಂದ ಹಿಂದಕ್ಕೆ ಸರಿಯುತ್ತಿದ್ದಾರಂತೆ.

ಮುಷ್ಕರ ಮಾಡಿದ್ದೆ ಮಹಾನ್ ಅಪರಾಧ ಎನ್ನುವಂಥ ಸನ್ನಿವೇಶ ಸೃಷ್ಟಿ ಮಾಡಿ,ಅವರನ್ನು ಕೆಲಸದಿಂದ ವಜಾಗೊಳಿಸಿದ ಸರ್ಕಾರ,ಆನಂತರದಲ್ಲಿ ಕೊಟ್ಟ ಭರವಸೆಯನ್ನೇ ಈಡೇರಿಸಿಲ್ಲ.ಸಚಿವ ಶ್ರೀರಾಮಲು ಅವರಿಗೂ ಸಚಿವ ಸ್ಥಾನದಲ್ಲಿ ಮುಂದುವರೆಯುವ ಆಸೆ ಇಲ್ಲದಿರುವುದರಿಂದ ಸಾರಿಗೆ ಕಾರ್ಮಿಕರ ವಿಷಯವನ್ನೇ ಕೈಗೆತ್ತಿಕೊಳ್ಳುತ್ತಿಲ್ಲ.ಅಧಿಕಾರಿಗಳು ರಿಪೋರ್ಟ್ ರೆಡಿ ಮಾಡಿಕೊಂಡು ಸಚಿವರ ಮುಂದಿಟ್ಟರೂ ನೋಡುದ್ರೆ ಆಯ್ತು ಬಿಡ್ರಿ ಎಂಬ ನಿರ್ಲಕ್ಷ್ಯ ತೋರುತ್ತಿದ್ದಾರೆನ್ನುವ ಮಾತುಗಳು ಕೇಳಿಬರುತ್ತಿವೆ.ಆರಂಭದಲ್ಲಿ ಆಸಕ್ತಿ ತೋರಿಸಿದ ಸಚಿವರೇ ಈಗ ತಾತ್ಸಾರ ತೋರುತ್ತಿರುವುದು ಕಾರ್ಮಿಕರಲ್ಲಿ ಸಚಿವರ ಬಗ್ಗೆ ಬೇಸರವನ್ನಷ್ಟೇ ಅಲ್ಲ ನಂಬಿಕೆಯೂ ಕಳೆದು ಹೋಗುವಂತೆ ಮಾಡಿಸಿದೆ.

ಕೆಲಸ ಕಳೆದುಕೊಂಡ ಕಾರ್ಮಿಕರ ಬವಣೆ ಒಂದು ರೀತಿಯದ್ದಾಗಿದ್ದರೆ ಉದ್ಯೋಗದಲ್ಲಿರೋ ಕಾರ್ಮಿಕರದ್ದು ಮತ್ತೊಂದು ಬವಣೆ.ಮಾಡೋ ಕೆಲಸಕ್ಕೆ ನೀಯತ್ತಾಗಿ ಸಂಬಳ ಪಡೆಯಲಾರದ ಸ್ಥಿತಿಯಲ್ಲಿದ್ದಾರೆ.ತಾರೀಖು 18 ಆದ್ರೂ ಇನ್ನೂ ತಿಂಗಳ ಸಂಬಳ ಕೈ ಸೇರಿಲ್ಲ.ಸರ್ಕಾರವನ್ನು ಕೇಳಿದ್ರೆ ಹಣ ಎಲ್ಲಿಂದ ತರೋದೆನ್ನುವ ಸಬೂಬು ಮುಂದೊಡ್ಡುತ್ತಿದೆ.ಹಾಗಾಗಿ ಈ ತಿಂಗಳು ಸಂಬಳ ಸಿಕ್ರೆ ಅದು ಸಾರಿಗೆ ಕಾರ್ಮಿಕರ ಅದೃಷ್ಟ ಅಷ್ಟೇ..

ಸಾರಿಗೆ ಕಾರ್ಮಿಕರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವುದಕ್ಕೆ ಅಧಿಕಾರಿಗಳು ಹೇಳುವಷ್ಟು ಕಠಿಣ ಸವಾಲುಗಳೇನೂ ಇಲ್ಲ..ತಾಂತ್ರಿಕ-ಆಡಳಿತಾತ್ಮಕ ತೊಡಕುಗಳೇನು ಇಲ್ಲ…ಕಾರ್ಮಿಕ ಇಲಾಖೆ ಜತೆ ಕುಳಿತು ಒಂದೆರೆಡು ಮೀಟಿಂಗ್ ಗಳನ್ನು ಗಂಭೀರವಾಗಿ ಮಾಡಿದ್ರೆ ಸಮಸ್ಯೆ ಬಗೆಹರಿದು ಹೋಗುತ್ತೆ..ಆದ್ರೆ ಮಾಡುವ ಮನಸ್ಸೇ ಸಚಿವರಿಗಿಲ್ಲದಿರುವಾಗ ಸಮಸ್ಯೆ ಬಗೆಹರಿಯುವುದಾದರೂ ಹೇಗೆ..?ಅಲ್ಲವೇ..?

ಪರಿಸ್ಥಿತಿ ಹೀಗಿದ್ದರೆ ಸಾರಿಗೆ ಕಾರ್ಮಿಕರು ಆತ್ಮಹತ್ಯೆ ದಾರಿಯನ್ನು ಹಿಡಿಯದೆ ಇನ್ನೇನು ಮಾಡಿಯಾರು ಅಲ್ಲವೇ..?ಸಾರಿಗೆ ಸಚಿವರ ಮನೆಯಲ್ಲೇ ಯಾರಿಗಾದರೂ ಹೀಗೆ ಆಗಿದ್ದರೆ,ಅವರ ಸಂಬಂಧಿಕರಲ್ಲಿ ಯಾರಾದ್ರೂ ಸಾರಿಗೆ ಇಲಾಖೆಯಲ್ಲಿದ್ದು ಅವರಲ್ಲಿ ಯಾರಾದರೂ ಆತ್ಮಹತ್ಯೆ ಮಾಡಿಕೊಂಡಿರುತ್ತಿದ್ದರೆ ಅವರ ಕರುಳು ಚುರುಕ್ ಎನ್ನುತ್ತಿತ್ತೇನೋ..

 

Spread the love
Leave A Reply

Your email address will not be published.

Flash News