HEAVY RAIN-TOMMOROW SCHOOLS ARE REMAIN CLOSE:ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನಾಳೆ ಶಾಲೆಗಳಿಗೆ ರಜೆ..-ಮಳೆ ಮುಂದುವರೆದರೆ ರಜೆ ವಿಸ್ತರಣೆ ಸಾಧ್ಯತೆ..?!

ಪರಿಸ್ತಿತಿ ಮತ್ತೆ ನಿಯಂತ್ರಣಕ್ಕೆ ಬಾರದೆ ಇದ್ದಲ್ಲಿ ರಜೆ ವಿಸ್ತರಿಸುವ  ಸಾಧ್ಯತೆಗಳಿವೆ. ಪರಿಸ್ತಿತಿ ಅವಲೋಕಿಸಿ ನಿರ್ದಾರ.

0

ಬೆಂಗಳೂರು:ಬಿಟ್ಟೂ ಬಿಡದೆ ಸುರಿಯುತ್ತಿರುವ ಮಳೆಯ ಹಿನ್ನಲೆಯಲ್ಲಿ ನಾಳೆ ಬೆಂಗಳೂರು ನಗರದ ಎಲ್ಲಾ ಅಂಗನವಾಡಿ ಹಾಗೂ ಎಲ್ಲಾ ಸರ್ಕಾರಿ/ಅನುದಾನಿತ/ಅನುದಾನ ರಹಿತ/ಕಿರಿಯ/ಹಿರಿಯ/ಪ್ರೌಢಶಾಲೆಗಳಿಗೆ ರಜೆ ಘೋಷಿಸಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಆದೇಶ ಹೊರಡಿಸಿದ್ದಾರೆ.

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಮಂಜುನಾಥ್,ಮಳೆಯಿಂದ ಸಂಭವಿಸಬಹುದಾದ ಸಮಸ್ಯೆಗಳಿಗೆ ವಿದ್ಯಾರ್ಥಿಗಳಿಗೆ ತುತ್ತಾಗಬಹುದಾದ ಅತಂಕವನ್ನು ಮನಗಂಡು ಇಂತಹದೊಂದು ನಿರ್ದಾರ ಕೈಗೊಂಡಿದ್ದಾರೆ.

ಜಿಲ್ಲೆಯ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಜತೆಗೆ ಮಾತನಾಡಿ ಇಂಥಾ ಸೂಕ್ಷ್ಮವಾದ ಪರಿಸ್ಥಿತಿಯಲ್ಲಿ ಶಾಲೆ ನಡೆಸುವುದರಿಂದ ಆಗಬಹುದಾದ ಸಮಸ್ಯೆಗಳ ಬಗ್ಗೆ ಮಾಹಿತಿ ಕ್ರೋಢೀಕರಿಸಿದ ತರುವಾಯವೇ ಶಾಲೆಗಳಿಗೆ ರಜೆ ಘೋಷಿಸುವ ತೀರ್ಮಾನಕ್ಕೆ ಬರಲಾಯತು ಎನ್ನಲಾಗಿದೆ.

ಸಧ್ಯಕ್ಕೆ ನಾಳೆ ಒಂದು ದಿನ ರಜೆ ನೀಡಲಾಗಿದೆ.ಪರಿಸ್ತಿತಿ ಮತ್ತೆ ನಿಯಂತ್ರಣಕ್ಕೆ ಬಾರದೆ ಇದ್ದಲ್ಲಿ ರಜೆ ವಿಸ್ತರಿಸುವ  ಸಾಧ್ಯತೆಗಳಿವೆ ಎನ್ನಲಾಗಿದೆ.ಆದರೆ ಪರಿಸ್ತಿತಿ ಅವಲೋಕಿಸಿ ಈ ನಿರ್ದಾರ ಕೈಗೊಳ್ಳಬಹುದೆನ್ನಲಾಗುತ್ತಿದೆ. 

Spread the love
Leave A Reply

Your email address will not be published.

Flash News