BreakingMoreScrollTop Newsಕ್ರೈಮ್ /ಕೋರ್ಟ್ಜಿಲ್ಲೆಫೋಟೋ ಗ್ಯಾಲರಿರಾಜಕೀಯ

WHY MINISTER ESHWARAPPA ANGRY OVER SHIVAMOGGA SP LAXMIPRASAD..?!- “ಮಿನಿಸ್ಟರ್” ಈಶ್ವರಪ್ಪಂಗೆ ಶಿವಮೊಗ್ಗ “ಪೊಲೀಸ”ರೆಂದರೆ ಅಷ್ಟೊಂದು “ಕಂಡಮ್ಮಾ” – ದಕ್ಷ ‘ಎಸ್ಪಿ” ಲಕ್ಷ್ಮಿಪ್ರಸಾದ್ ಕಂಡರೆ “ಸಿಡಿಮಿಡಿ” ಏಕೆ..?!

ಬೆಂಗಳೂರು:ಕೆ.ಎಸ್.ಈಶ್ವರಪ್ಪ ಅವರ ನಾಲಿಗೆಯಲ್ಲಿ ಇದೆಲ್ಲಾ ಕಾಮನ್ ಬಿಡಿ.. ವಿವಾದ-ವಿರೋಧ ಇವೆಲ್ಲಾ ಸಚಿವರ ನರನಾಡಿಗಳಲ್ಲಿ ಕರಗತ ವಾಗ್ಹೋಗಿದೆ.  .ಹಾಗಾಗಿನೇ ಅವರಿಗೇನೆ ತಾನ್ ಏನ್ ಮಾಡ್ತಿದ್ದೀನಿ..ಏನ್ ಮಾತಾಡ್ತಾ ಇದ್ದೀನಿ..ಅದರ ಅಗತ್ಯ-ಔಚಿತ್ಯ ಎರಡೂ ಇದೆಯಾ ಎನ್ನುವುದನ್ನು ಅವಲೋಕಿಸುವುದಕ್ಕೂ ಹೋಗೊಲ್ಲ..ಏನೇ ಅಂದ್ರೂ ಎಲೆಕ್ಷನ್ ಟೈಮ್ನಲ್ಲಿ ಒಂದು ಸಮುದಾಯವನ್ನು ಓಲೈಕೆ ಮಾಡಿದ್ರೆ ಸಾಕು ಗೆಲ್ಲಬಹುದೆನ್ನುವುದು ಅವರ ಆಲೋಚನೆಯಂತಿದೆ..ಆದ್ರೆ ಸೋಲುಗಳ ಅನುಭವ ಅವರಿಗೆ ಅದಾಗಲೇ ಪಾಠ ಕಲಿಸಿಯಾಗಿದೆ..

ಇದನ್ನೆಲ್ಲಾ ಹೇಳೊಕ್ಕೆ ಕಾರಣವೂ ಇದೆ..ಶಿವಮೊಗ್ಗ ಎಸ್ಪಿಯಾಗಿ ಒಳ್ಳೆಯ ಕೆಲಸ ಮಾಡುತ್ತಿರುವ ದಕ್ಷ-ಪ್ರಾಮಾಣಿಕ ಅಧಿಕಾರಿ  ಲಕ್ಷ್ಮಿ ಪ್ರಸಾದ್ ಮೇಲೆ ಹರಿಹಾಯುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.ಎಸ್ಪಿ ಅವರ ಜತೆಗಿನ ಕೆ.ಎಸ್.ಈಶ್ವರಪ್ಪ ಅವರ ಮಾತಿನ ಸಂಭಾಷಣೆಗೆ ಸಾಕಷ್ಟು ವಿರೋಧ ಕೂಡ ವ್ಯಕ್ತವಾಗ್ತಿದೆ..

ಹಲ್ಲೆಗೊಳಗಾದ ಪೌರ ಕಾರ್ಮಿಕ
ಹಲ್ಲೆಗೊಳಗಾದ ಪೌರ ಕಾರ್ಮಿಕ
ಹಲ್ಲೆಗೊಳಗಾದ ಪೌರ ಕಾರ್ಮಿಕನ ಆರೋಗ್ಯ ವಿಚಾರಿಸುತ್ತಿರುವ ಸಚಿವ ಕೆ.ಎಸ್.ಈಶ್ವರಪ್ಪ
ಹಲ್ಲೆಗೊಳಗಾದ ಪೌರ ಕಾರ್ಮಿಕನ ಆರೋಗ್ಯ ವಿಚಾರಿಸುತ್ತಿರುವ ಸಚಿವ ಕೆ.ಎಸ್.ಈಶ್ವರಪ್ಪ

ಅಂದ್ಹಾಗೆ ಶಿವಮೊಗ್ಗದಲ್ಲಿ ಇತ್ತೀಚೆಗೆ ಪೌರ ಕಾರ್ಮಿಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಯಿತು.ಆತ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನೂ ಪಡೆಯುತ್ತಿದ್ದಾನೆ.ಆರೋಪಿಗಳ ಪತ್ತೆ ಕಾರ್ಯವನ್ನು ಪೊಲೀಸರೂ ಚುರುಕುಗೊಳಿಸಿದ್ದಾರೆ.ಆಗಿರುವಾಗ ಆಸ್ಪತ್ರೆಗೆ ಭೇಟಿ ಕೊಟ್ಟ ಈಶ್ವರಪ್ಪ,ವಸ್ತುಸ್ಥಿತಿಯನ್ನು ಅವಲೋಕಿಸಿ ಮಾತನಾಡುವುದನ್ನು ಬಿಟ್ಟು,

“ಪೌರ ಕಾರ್ಮಿಕನ ಮೇಲೆ ಹಲ್ಲೆ ನಡೆಸಿದವರನ್ನು ಒದ್ದು ಒಳಗೆ ಹಾಕೊಕ್ಕೆ ಆಗೊಲ್ಲ ಎಂದರೆ ನಿಮ್ಮ ಡಿಪಾರ್ಟ್ಮೆಂಟೇನು ದನ ಕಾಯುತ್ತಿದೆಯಾ..? ತಪ್ಪು ಮಾಡಿದವರು ಸಿಗಲಿಲ್ಲ ಎಂದರೆ ಅವರ ಮನೆಯವರನ್ನು ಕರೆ ತಂದು ಲಾಕಪ್ ನಲ್ಲಿ ಹಾಕಿ ಒದೀರಿ ಬಾಯಿ ಬಿಡ್ತಾರೆ..” ಎಂದು ಮಾತನಾಡಿ ತಮ್ಮ ಬಾಯಿಚಪಲ ತೀರಿಸಿಕೊಂಡಿದ್ದಾರೆ.

ಆದರೆ ಇಲ್ಲಿ ಪ್ರಶ್ನೆ ಇರೋದು ಪೊಲೀಸರನ್ನು ಸಾರ್ವಜನಿಕವಾಗಿ ನಿಂದಿಸುವುದು ಎಷ್ಟು ಸರಿ..ಅದು ಅವರ ಮನೋಸ್ಥೈರ್ಯವನ್ನು ಕುಗ್ಗಿಸಿದಂತಾಗುವುದಿಲ್ಲವೇ ಎನ್ನುವುದು. ಶಿವಮೊಗ್ಗ ಪೊಲೀಸರೇನೂ ದನ ಕಾಯುತ್ತಿದ್ದಾರಾ ಎಂದು ಎಸ್ಪಿಯವರನ್ನು ಸಾರ್ವಜವಿಕವಾಗಿ ಪ್ರಶ್ನಿಸಿದ್ದು ಎಷ್ಟು ಸರಿ?, ಎನ್ನುವುದು ಸಾರ್ವಜನಿಕರ ಪ್ರಶ್ನೆ.

ಪೌರ ಕಾರ್ಮಿಕನ ಆರೋಗ್ಯ ವಿಚಾರಿಸಿದ ಬಳಿಕ ಪೂರ್ವಾಪರ ಅವಲೋಕಿಸದೆ ಎಸ್ಪಿ ಲಕ್ಷ್ಮಿ ಪ್ರಸಾದ್ ಅವರನ್ನು ಹಿಗ್ಗಾಮುಗ್ಗಾ ಜಾಡಿಸುತ್ತಿರುವ ಸಚಿವ ಕೆ.ಎಸ್ ಈಶ್ಪರಪ್ಪ
ಪೌರ ಕಾರ್ಮಿಕನ ಆರೋಗ್ಯ ವಿಚಾರಿಸಿದ ಬಳಿಕ ಪೂರ್ವಾಪರ ಅವಲೋಕಿಸದೆ ಎಸ್ಪಿ ಲಕ್ಷ್ಮಿ ಪ್ರಸಾದ್ ಅವರನ್ನು ಹಿಗ್ಗಾಮುಗ್ಗಾ ಜಾಡಿಸುತ್ತಿರುವ ಸಚಿವ ಕೆ.ಎಸ್ ಈಶ್ಪರಪ್ಪ

ಆರೋಪಿ ನಾಪತ್ತೆಯಾದ್ರೆ,,,ಅವರ ಕುಟುಂಬದವರನ್ನು ಲಾಕ್ ಅಪ್ ನಲ್ಲಿ ಹಾಕಬೇಕೆಂಬ ನಿಯಮ ಕಾನೂನಿನ ಯಾವ ಪುಸ್ತಕದಲ್ಲಿದೆ? ಎನ್ನುವುದನ್ನು ವಿವೇಚನೆ ಕಳೆದುಕೊಂಡು ( ಇಷ್ಟು ವರ್ಷ ಪೌರ ಕಾರ್ಮಿಕರ ಕಡೆ ಕಣ್ಣೆತ್ತಿಯೂ ನೋಡದಿದ್ದ ಈಶ್ವರಪ್ಪ ದಿಢೀರ್ ಮಮಕಾರದಿಂದ ವರ್ತಿಸಿದ್ದು ಬಹುಷಃ  ಪೌರ ಕಾರ್ಮಿಕ ಸಮುದಾಯದ ಮತ ಬ್ಯಾಂಕ್ ಮೇಲೆ ಕಣ್ಣಿಟ್ಟಿರುವ ಕಾರಣಕ್ಕಾ ಗೊತ್ತಿಲ್ಲ..?) ಮಾತನಾಡಿದ ಈಶ್ವರಪ್ಪ ಅವರೇ ಹೇಳಬೇಕು.

ಆರೋಪಿ ಅಪರಾಧ ಎಸಗಿದ್ರೆ. ಅವರ ಕುಟುಂಬದವರನ್ನು ಯಾಕೆ ಲಾಕ್ ಅಪ್ ಗೆ ಹಾಕಬೇಕು ಸಚಿವರೆ?  ಗೃಹಸಚಿವರ ಜಿಲ್ಲೆಯ ಪೊಲೀಸ್ ವ್ಯವಸ್ಥೆ ಅಷ್ಟೊಂದು ಹದಗೆಟ್ಟಿದೆಯಾ? ಕೆ.ಎಸ್ ಈಶ್ವರಪ್ಪ ಗ್ರಾಮೀಣಾಭಿವೃದ್ಧಿ ಸಚಿವರು ಹಾಗು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜವಬ್ದಾರಿ ನಿರ್ವಹಿಸುತ್ತಿದ್ದಾರೆ. ಸಾಂದರ್ಭಿಕವಾಗಿ ಅವರು ಮಾತನಾಡುವ ರೀತಿ ಇತ್ತೀಚೆಗಂತೂ ಸಾರ್ವಜನಿಕವಾಗಿ ಚರ್ಚೆಗೊಳಪಡುತ್ತಿವೆ.ಅದಕ್ಕೆ

ಪಾಲಿಕೆ ಪೌರ ಕಾರ್ಮಿಕನ ಮೇಲಿನ ಹಲ್ಲೆ ಕೂಡ ಒಂದು.ಆದ್ರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವರು, ಎಸ್ಪಿ ಲಕ್ಷ್ಮಿ ಪ್ರಸಾದ್ ಗೆ ಮೊಬೈಲ್ ನಲ್ಲಿ ಕರೆ ಮಾಡಿ ತೀವೃ ತರಾಟೆಗೆ ತೆಗೆದುಕೊಂಡದ್ದು ಎಷ್ಟು ಸರಿ..?ಇದು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಎಸ್ಪಿ ಅವರ ಮನೋಬಲ ಹಾಳು ಮಾಡುವಂಥ ಮಾತುಗಳಲ್ಲವೇ ಎನ್ನುವುದು ಈಶ್ವರಪ್ಪ ಅವರಂಥ ಹಿರಿಯ ರಾಜಕಾರಣಿಗೆ ಗೊತ್ತಾಗದೇ ಹೋದದ್ದು ಮಾತ್ರ ದುರಾದೃಷ್ಟಕರ.

ಗಾಂಜಾ ಮತ್ತಿನಲ್ಲಿಯೇ ಪೌರ ಕಾರ್ಮಿಕನ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಏನೇನು ಮಾಡಲಾಗಿದೆ ಎನ್ನುವುದರ ಮಾಹಿತಿಯನ್ನೇ ಪಡೆಯದೆ ಇದ್ದಕ್ಕಿದ್ದಂತೆ ಎಸ್ಪಿ ಮೇಲೆ ರೇಗಾಡಿದ್ದು ಎಷ್ಟು ಸರಿ..? ಹಿಂದೆ ಮುಂದೆ ಏನೂ ತಿಳಿಯದೆ ಶೋ ಅಪ್ ಕೊಡಲಿಕ್ಕಷ್ಟೇ ಆಸ್ಪತ್ರೆಗೆ ತೆರಳಿರುವ ಸಚಿವರು, ಎಸ್ಪಿ ಲಕ್ಷ್ಮಿ ಪ್ರಸಾದ್ ಅವರನ್ನು ಫೋನ್ ನಲ್ಲಿ  ಹಿಗ್ಗಾಮುಗ್ಗಾ ಜಾಡಿಸಿರುವುದು ನಿಜಕ್ಕೂ ಸರಿನಾ..?

ದಕ್ಷ-ಖಡಕ್ ಎಸ್ಪಿ ಲಕ್ಷ್ಮಿ ಪ್ರಸಾದ್
ದಕ್ಷ-ಖಡಕ್ ಎಸ್ಪಿ ಲಕ್ಷ್ಮಿ ಪ್ರಸಾದ್

ಇದರ ಜತೆ ಜತೆಗೆ ಆರೋಪಿಗಳ ಪತ್ತೆಗೆ ಇನ್ನೆಷ್ಟು ಸಮಯಬೇಕು. ಆರೋಪಿಗಳ ಮನೆಯವರನ್ನು ಕರೆದುಕೊಂಡು ಬಂದು ಪೊಲೀಸ್ ಠಾಣೆಗೆ ಕೂರಿಸಿಕೊಂಡ್ರೆ..ಆಗ ಅವರೇ ಠಾಣೆಗೆ ಬರ್ತಾರೆ ಅಂತಾ ಈಶ್ವರಪ್ಪ ಹೇಳುತ್ತಾರೆಂದರೆ ಅವರೆಷ್ಟು ಜವಬ್ದಾರಿಯುತ ಸಚಿವ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಅಪರಾಧ ಎಸಗುವ ವ್ಯಕ್ತಿ ಪರಾರಿಯಾದ್ರೆ ಪೊಲೀಸ್ರು ಹುಡುಕಿ ಕರೆತಂದು ಪ್ರಕರಣ ದಾಖಲಿಸುವುದನ್ನು ನೋಡಿದ್ದೇವೆ.

ಆದ್ರೆ ಆರೋಪಿ ನಾಪತ್ತೆಯಾದಾಗ,, ಆರೋಪಿಯ ಕುಟುಂಬದವರನ್ನು ಠಾಣೆಗೆ ಕರೆಸಿ, ಆರೋಪಿ ಬರುವವರೆಗೂ ಅಂದರ್ ಮಾಡಲು ಕಾನೂನಿನ ಯಾವ ಚೌಕಟ್ಟಿನಲ್ಲಿ ಅವಕಾಶವಿದೆ ಎಂಬುದನ್ನು ಸಚಿವರೇ ಹೇಳಬೇಕು. ಸಚಿವರಾದವರಿಗೆ ಕಾನೂನಿನ ಕೆಲವು ಸಂಗತಿಗಳ ಬಗ್ಗೆಯೂ ಅರಿವಿರಬೇಕಾಗುತ್ತದೆ ಎನ್ನುವುದನ್ನು ಹೇಳಿಕೊಡಬೇಕಾದ ಸನ್ನಿವೇಶ ಸೃಷ್ಟಿಯಾಯ್ತಲ್ಲ ಎನ್ನುವುದೇ ದುರಾದೃಷ್ಟಕರ.

ಒಂದ್ವೇಳೆ ಈಶ್ವರಪ್ಪ ಹೇಳಿದಂತೆಯೇ ಪೊಲೀಸರು ಆರೋಪಿಯ ಕುಟುಂಬದವರನ್ನು ಠಾಣೆಗೆ ಕರೆದುಕೊಂಡು ಬಂದ್ರು ಅಂತನೇ ಭಾವಿಸೋಣ.ಒಂದ್ವೇಳೆ ಅವರೆಲ್ಲಾ ಸೂಕ್ಷ್ಮ ಮನಸ್ಥಿತಿಯವರಾಗಿದ್ದರೆ, ಮಾನಕ್ಕೆ ಅಂಜಿಯೇ ಏನಾದ್ರೂ ಹೆಚ್ಚುಕಮ್ಮಿ ಮಾಡಿಕೊಳ್ಳುವ ಆತಂಕವೂ ಇರುತ್ತದೆಯಲ್ಲವೇ..?

ಈಶ್ವರಪ್ಪ ಅವರಿಗೆ ಎಸ್ಪಿ ಕೆಲಸದ ಬಗ್ಗೆ ನಿಜಕ್ಕೂ ಬೇಸರವಿದ್ದರೆ, ಅವರ ಚೇಂಬರ್ ಗೆ ಹೋಗಿ ಮಾತನಾಡಬಹುದಿತ್ತಲ್ಲವೇ.. ಅಥವಾ ಖಾಸಗಿಯಾಗಿ ಮಾತನಾಡಬಹುದಿತ್ತಲ್ಲವೇ.. ಸಾರ್ವಜನಿಕರ ಎದುರು, ಆರೋಪಿಗಳ ಕುಟುಂಬದವರನ್ನು ಠಾಣೆಯಲ್ಲಿ ಕೂರಿಸಿ ಲಾಕ್ ಅಪ್ ನಲ್ಲಿ ಹಾಕಿ ಎನ್ನುವುದು ಸರಿಯಾದ ಹೇಳಿಕೆಯಲ್ಲ. ಹಲ್ಲೆಗೊಳಗಾದ ಪೌರ ಕಾರ್ಮಿಕನ ಬಗ್ಗೆ ಕಾಳಜಿ ತೋರುವ ಭರದಲ್ಲಿ ಈಶ್ವರಪ್ಪ ಪೊಲೀಸ್ ವ್ಯವಸ್ಥೆ ವಿರುದ್ಧ ಹರಿಹಾಯ್ದಿರುವುದು ಎಷ್ಟು ಸರಿ ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ಇನ್ನಾದರೂ ಬಾಯಿ ಚಪಲಕ್ಕೆ ಏನೇನೋ ಮಾತನಾಡಿ ರಂಪಾಟ ಸೃಷ್ಟಿಸುವುದು, ಶೋ ಅಪ್ ಕೊಡಲಿಕ್ಕೆ ಹೋಗಿ ನಾಲಿಗೆ ಹರಿಬಿಡೋದನ್ನು ಈಶ್ವರಪ್ಪ ಅವರಂಥ ಹಿರಿಯ ಸಚಿವರು ಬಿಡಬೇಕು..ಇಲ್ಲವಾದಲ್ಲಿ ಎಲ್ಲೆಲ್ಲಿ ಮಾನ ಕಳಕೊಳ್ತಾರೋ ಆ ದೇವರಿಗೇ ಗೊತ್ತು..?

Spread the love

Related Articles

Leave a Reply

Your email address will not be published.

Back to top button
Flash News