
ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳ ಕೊನೆಗೂ, ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ ವನ್ನು ದಂಧೆಯ ಅಡ್ಡೆಯನ್ನಾಗಿಸಿಕೊಂಡಿದ್ದ ಆಯಕಟ್ಟಿನ ಹುದ್ದೆಯಲ್ಲಿನ ಅಧಿಕಾರಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದೆ.ಸಣ್ಣ ಪುಟ್ಟ ಕೆಲಸಕ್ಕೂ ನಾಲಿಗೆ ಚಾಚಿಕೊಂಡು ಹಣ ಪಡೆಯುತ್ತಿದ್ದ ಹೇಸಿಗೆ ಮನಸ್ಥಿತಿಯ ಅಧಿಕಾರಿಗಳ ಬಂಡವಾಳ ಬಟಾಬಯಲಾಗಿದೆ.
ಬಿಡಿಎ ನಲ್ಲಿ ಆಯುಕ್ತರು, ಅಬಿಯಂತರ ಸದಸ್ಯರು, ಕಾರ್ಯದರ್ಶಿಗಳನ್ನು ಬಿಟ್ಟರೆ ಆಯಕಟ್ಟಿನ ಹುದ್ದೆಗಳಲ್ಲಿ ಕೆಲಸ ಮಾಡುವವರೇ ಡೆಪ್ಯುಟಿ ಸೆಕ್ರೆಟರಿಸ್( ಡಿಎಸ್) ಗಳು.ಬಿಡಿಎ ನಲ್ಲಿ ಅಗತ್ಯವಿಲ್ಲದಿದ್ದರೂ ನಾಲ್ವರು ಡಿಎಸ್ ಗಳನ್ನು ನಿಯೋಜನೆ ಮಾಡಿಕೊಳ್ಳಲಾಗಿದೆ.
ಈ ಪೈಕಿ ಹೆಚ್ಚು ಪ್ರಭಾವಶಾಲಿ ಹುದ್ದೆ ಡಿಎಸ್-1..ಈ ಹುದ್ದೆಗೆ ಬರೋವರು ನಿಜಕ್ಕೂ ಮನಸು ಮಾಡಿದ್ರೆ, ಪ್ರಾಮಾಣಿಕವಾಗಿ ಕೆಲಸ ಮಾಡಿದ್ರೆ ಸಮಸ್ಯೆ ಹೇಳಿಕೊಂಡು ರೈತರಾಗಲಿ, ಭೂಮಿ ಕಳೆದುಕೊಂಡವರಾಗಲಿ ಬಿಡಿಎಗೆ ಚಪ್ಪಲಿ ಸವೆಸುವ ಅಗತ್ಯವೇ ಇರೋದಿಲ್ಲ.ಆದ್ರೆ ಬಂದೋರೆಲ್ಲಾ ತಮ್ಮ ತಾಕತ್ತಿಗೆ ಮೀರಿ ಹಣ ಮಾಡಿಕೊಂಡವರೇ ಎನ್ನೋ ಆರೋಪವಿದೆ.
ಸಧ್ಯ ಡಿಎಸ್-1 ಹುದ್ದೆಯಲ್ಲಿ ರಾಜ್ ಮಾಡುತ್ತಿರುವ ಡಾ.ಮಧು ಬಗ್ಗೆಯೂ ಹೇಳಿಕೊಳ್ಳುವಂಥ ಒಳ್ಳೆಯ ಹೆಸರಿಲ್ಲ.ತಮ್ಮ ಕಚೇರಿಯನ್ನು ಬ್ರೋಕರ್ ಗಳ ಅಡ್ಡೆಯನ್ನಾಗಿಸಿಕೊಂಡಿದ್ದಾರೆನ್ನುವ ಗಂಭೀರ ಆರೋಪ ಅವರ ಮೇಲಿದೆ.ತನ್ನ ಸಂಬಂಧಿಯನ್ನೇ ಹಣ ವಸೂಲಿ ಮಾಡಲಿಕ್ಕೆಂದೇ ಇಟ್ಟುಕೊಂಡಿದ್ದಾರೆನ್ನುವುದು ಅವರ ಮೇಲಿರುವ ಮತ್ತೊಂದು ಅರೋಪ. ನೋಡೊಕ್ಕೆ ಪ್ರಾಮಾಣಿಕವಾಗಿ ಕೆಲಸ ಮಾಡುವಂತೆ ಫೋಸ್ ಕೊಡುವ ಮಧುಗೆ ಅನೇಕ ರಾಜಕೀಯ ಮುಖಂಡರ ಬೆಂಬಲವಿದೆ ಎನ್ನುವ ಮಾತಿದೆ.ಇನ್ನೂ ಸಣ್ಣ ವಯಸ್ಸಿನಲ್ಲಿ ಸಾಕಷ್ಟು ಉತ್ತಮ ಕೆಲಸ ಮಾಡೊಕ್ಕೆ ತನ್ನ ಹುದ್ದೆಯನ್ನು ಬಳಸಿಕೊಂಡು ನೊಂದವರ ಪಾಲಿನ ಆಶಾಕಿರಣವಾಗಬಹುದಾಗಿದ್ದ ಈ ಕೆಎಎಸ್ ಅಧಿಕಾರಿ ಇವತ್ತು ನೊಂದವರಿಂದಲೇ ಹಾಳಾಗಿ ಹೋಗು ಎಂದು ಹಿಡಿಶಾಪ ಹಾಕಿಸಿಕೊಳ್ಳುವ ಸ್ತಿತಿಗೆ ಬಂದಿರುವುದು ದುರಾದೃಷ್ಟಕರ.ಎಸಿಬಿ ದಾಳಿಯಿಂದಲೇ ಬಹುತೇಕ ಇವರ ಬಣ್ಣ ಬಯಲಾಗಿದೆ.ಇನ್ನು ತನ್ನನ್ನು ಪ್ರಾಮಾಣಿಕಳು ಎಂದು ಸಾರಿ ಹೇಳೊಕ್ಕೆ ಹೊರಟರೆ ಜನರೇ ಕ್ಯಾಕರಿಸಿ ಉಗಿಬೋದೇನೋ..

ಇನ್ನು ದಾಳಿಗೆ ಬಲಿಯಾಗಿರುವ ಗೀತಾ ಹುಡೇದ್ ಡಿಎಸ್-4 ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ.ಆ ಮಹಾತಾಯಿ ಹಿನ್ನಲೆ ಸುಧಾ ಅವರಿಗಿಂತ ಖರಾಬ್ ಆಗಿದೆ ಎನ್ನುವ ಮಾತಿದೆ.ತನ್ನ ವ್ಯಾಪ್ತಿಗೆ ಬರುವ ಎಲ್ಲಾ ವಿಚಾರಗಳಲ್ಲಿ ನ್ಯಾಯ-ಪರಿಹಾರ ಕೇಳಿಕೊಂಡು ಯಾರೇ ಬಂದ್ರೂ ಮೀಡಿಯೇಟರ್ ಗಳ ಮೂಲಕ ವ್ಯವಹಾರ ಕುದುರಿಸಿ ಪರ್ಸಂಟೇಜ್ ಗಿಟ್ಟಿಸುವುದು ಇವರ ಮಾಮೂಲು ಕಾಯಕ ಎನ್ನುವ ಮಾತುಗಳಿವೆ.
ನಿಜಕ್ಕು ಪರಿಹಾರಕ್ಕೆ ಯೋಗ್ಯರಾದ ಸಾವಿರಾರು ಮಂದಿಯ ಪೈಕಿ ನೂರಾರು ಜನ ಇವರ ಕಚೇರಿಗೆ ಎಡತಾಕಿದರೂ ಅವರನ್ನು ಬಾಗಿಲಲ್ಲೇ ಕಾಯಿಸುವ ಕೆಲಸ ಮಾಡುತ್ತಿದ್ದಾರೆ..ಆದರೆ ಪರ್ಸಂಟೇಜ್ ಹಣ ಕೊಡೋವ್ರು ಬರುತ್ತಿದ್ದಾರೆಂದ್ರೆ ಅವರಿಗೆ ರೆಡ್ ಕಾರ್ಪೆಟ್ ಹಾಸಿ ಸ್ವಾಗತಿಸುವ ಕೆಲಸ ಮಾಡುತ್ತಿದ್ದಾರೆ ಎನ್ನುವ ಆರೋಪ ಅಂತದ್ದೊಂದು ಅನುಭವಕ್ಕೆ ಸಾಕ್ಷಿಯಾದ ಅದೆಷ್ಟೋ ಮಂದಿ ಮಾಡುತ್ತಿದ್ದಾರೆ.ಡಿಎಸ್-4 ಆಗಿ ಬಂದ ಮೇಲಂತೂ ಸಾಕಷ್ಟು ಹಣವನ್ನು ನುಂಗಿ ನೀರು ಕುಡಿದಿದ್ದಾರೆನ್ನುವ ಆರೋಪವಿದೆ.ಎಸಿಬಿ ತನ್ನ ದಾಳಿ ಹಾಗೂ ಪರಿಶೀಲನೆಯನ್ನು ಕೊಂಚ ಗಂಭೀರಗೊಳಿಸಿದ್ರೆ ಈ ಮಹಾತಾಯಿಯ ಅಕ್ರಮದ ವಿಶ್ವರೂಪ ಬಯಲಾಗಬಹುದೆನ್ನುವ ಸುಳಿವನ್ನು ಬಿಡಿಎ ನಲ್ಲಿರುವ ಅನೇಕರೇ ನೀಡುತ್ತಿದ್ದಾರೆ.


ಇನ್ನು ನವೀನ್ ಜೊಸೇಫ್ ನೋಡೊಕ್ಕೆ ಸಭ್ಯಸ್ಥ-ಸಾಚಾನಂತೆ ಕಾಣುವ ಕೆಎಎಸ್ ಅಧಿಕಾರಿ..ಇವ್ರು ಮನಸು ಮಾಡಿದಿದ್ರೆ ಒಳ್ಳೆಯ ಕೆಲಸ ಮಾಡಬಹುದಿತ್ತು.ನೊಂದವರಿಗೆ ನ್ಯಾಯ ದೊರಕಿಸಿಕೊಡಬಹುದಾಗಿತ್ತು.ತನ್ನನ್ನು ಅಲ್ಪಸಂಖ್ಯಾತ ಸಮುದಾಯದ ಅಧಿಕಾರಿ ಎನ್ನುತ್ತಲೇ ಅದರಿಂದ ಸಿಂಪತಿ ಗಿಟ್ಟಿಸುತ್ತಾ ಬಂದಿರುವ ನವೀನ್ ಜೋಸೆಫ್, ಮೇಲಿನ ಇಬ್ಬರು ಅಧಿಕಾರಿಗಳ ಮೇಲಿರುವ ಭ್ರಷ್ಟಾಚಾರ ಆರೋಪಕ್ಕೆ ತುತ್ತಾಗುವುದಿಲ್ಲವಾದರೂ ತನ್ನತ್ತಿರ ಕೆಲಸ ಮಾಡಿಸಿಕೊಳ್ಳೊಕ್ಕೆ ಬರೋವರಿಂದ ಹಣ ಪೀಕುವುದನ್ನು ಬಿಡುತ್ತಿರಲಿಲ್ಲವಂತೆ.ಕೊಟ್ಟರೆ ಪಡೆಯುತ್ತೇನೆ..ಒತ್ತಾಯವಿಲ್ಲ ಎಂದು ನಾಜೂಕಯ್ಯನ ನಾಟಕ ಆಡುತ್ತಿದ್ದ ಬಗ್ಗೆ ಮಾತುಗಳಿವೆ.ಕೆಲ ದಿನಗಳವರೆಗೂ ಬಿಡಿಎ ನಲ್ಲಿ ಆಯಕಟ್ಟಿನ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದ (ಪತ್ರಿಕೋದ್ಯಮದ ಸಹಪಾಠಿ..) ಅಧಿಕಾರಿಯ ಅಣತಿಯಂತೆ ಕೆಲಸ ಮಾಡುತ್ತಾ ಹಣ ಮಾಡಿದ ಆರೋಪಕ್ಕೆ ತುತ್ತಾಗಿದ್ರು.ಸಧ್ಯ ಬಿಡಿಎ ನಿಂದ ಎತ್ತಂಗಡಿಯಾಗಿ ರಾಜಕೀಯ ಪಡಸಾಲೆಯಲ್ಲಿ ಮಜಾ ಉಡಾಯಿಸುತ್ತಿರುವ ಆ ಅಧಿಕಾರಿಯ ಹಣೇಬರಹವನ್ನು ಕನ್ನಡ ಫ್ಲ್ಯಾಶ್ ನ್ಯೂಸ್ ಕೆಲವೇ ದಿನಗಳಲ್ಲಿ ಆ ಬಿಚ್ಚಿಡಲಿದೆ).

ಡಿಎಸ್-3 ಹುದ್ದೆಯಲ್ಲಿರುವ ಸುಮಾ ಕೂಡ ಮೇಲಿನ ಮೂವರಂತೆ ತನ್ನ ಅದಿಕಾರವನ್ನು ದುರುಪಯೋಗಪಡಿಸಿಕೊಂಡು ಹಣ ಮಾಡಿರುವ ಆರೋಪಕ್ಕೆ ತುತ್ತಾಗಿದ್ದಾರೆ.ಸರ್ಕಾರ ಕೊಡುವ ಸಂಬಳಕ್ಕೆ ನೀಯತ್ತಾಗಿ ಕೆಲಸ ಮಾಡೋದನ್ನು ಬಿಟ್ಟು ಲಂಚಕ್ಕೆ ನಾಲಿಗೆ ಚಾಚಿದ ಈ ನಾಲ್ವರ ಪಾಪದ ಕೊಡ ತುಂಬಿತ್ತೆಂದು ಅನ್ನಿಸುತ್ತದೆ.ಹಾಗಾಗಿ ಇವರ ಆಟಾಟೋಪವನ್ನು ನೋಡೋವರೆಗೆ ನೋಡಿ,ಅದನ್ನೆಲ್ಲಾ ಸಹಿಸಿಕೊಂಡಿದ್ದ ಯಾರೋ ಅಮಾಯಕ ಪುಣ್ಯಾತ್ಮರು ಕೊನೆಗೂ ಎಸಿಬಿ ಕದ ತಟ್ಟಿ ನಿಜಕ್ಕು ಬಿಡಿಎ ಕಚೇರಿಯ ಕ್ಯಾಂಪಸ್ ನಲ್ಲಿ ನಡೆಯಲೇಬೇಕಿದ್ದ ಪಾಪ ನಿವಾರಣೆಯ ಕೆಲಸವನ್ನು ಮಾಡಿದ್ದಾರೆ.
ಎಸಿಬಿ ದಾಳಿಯಿಂದ ಕೇವಲ ಮೇಲ್ಕಂಡ ನಾಲ್ವರು ಅಧಿಕಾರಿಗಳ ಹಣೇಬರಹ ಮಾತ್ರ ಬಯಲಾಗುತ್ತಿಲ್ಲ. ಜತೆಗೆ ಇವರಿಗೆ ಸಾಥ್ ಕೊಟ್ಟಿರುವ ಮತ್ತಷ್ಟು ಸಿಬ್ಬಂದಿಯ ಬಂಡವಾಳ ಬಯಲು ಮಾಡೊಕ್ಕೆ ಕಾರಣವಾಗುತ್ತಿದ್ದಾರೆ. ಯಾರ ಭಯವಿಲ್ಲದೆ ತಾವಾಡಿದ್ದೇ ಆಟ..ಹೂಡಿದ್ದೇ ಲಗ್ಗೆ ಎನ್ನುವಂತೆ ಕೊಬ್ಬಿ ಹೋಗಿದ್ದ ಇಲ್ಲಿನ ಅಧಿಕಾರಶಾಹಿಗೆ ಬಿಸಿಮುಟ್ಟಿಸುವ ಕೆಲಸವನ್ನು ಎಸಿಬಿ ಮಾಡಿದೆ.ಇದರಿಂದ ಪಾಠ ಕಲಿತು,,ಇನ್ನಾದ್ರೂ ಬಿಡಿಎ ನಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿ-ಸಿಬ್ಬಂದಿ, ಭಯಭಕ್ತಿಯಲ್ಲಿ ಕೆಲಸ ಮಾಡಿಕೊಂಡು ಹೋಗುವ ಬುದ್ದಿ ಕಲಿಯಲಿ..