BIG..BIG..VIOLATION IN APPOINTMENT OF CHAIRMAN OF POLLUTION CONTROL BOARD..?! ತನ್ನ “ನೀಲಿಗಣ್ಣಿನ ಆಪ್ತ”ನಿಗೆ ಹುದ್ದೆ ಕೊಡಿಸಲು “ಮಂಡಳಿ”ಯ “ಪರಿಸರ”ವನ್ನೇ “ಮಾಲಿನ್ಯ” ಮಾಡಿದ್ರಾ ಸಚಿವ ಆನಂದ್ ಸಿಂಗ್..?!

ಮಾನದಂಡ”ಗಳನ್ನೆಲ್ಲಾ ಗಾಳಿಗೆ ತೂರಿ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ತನ್ನ “ಗಣಿ ಕಂಪೆನಿ”ಗಳ ಸಲಹೆಗಾರ ಶಾಂತ ತಿಮ್ಮಯ್ಯ ನೇಮಕ..?!ಆಪ್ತರಿಗೆ ಆಶ್ರಯ ಕಲ್ಪಿಸಲು "ಮಂಡಳಿ"ಯೇನು ಗಂಜಿಕೇಂದ್ರನಾ..? ಕಾನೂನಾತ್ಮಕ ಹೋರಾಟಕ್ಕೆ ಪರಿಸರವಾದಿಗಳು ಸಜ್ಜು..

0
ಶಾಂತ ಅವ್ವರೇಹಳ್ಳಿ ತಿಮ್ಮಯ್ಯ
ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಶಾಂತ ಅವ್ವರೇಹಳ್ಳಿ ತಿಮ್ಮಯ್ಯ

ಬೆಂಗಳೂರು:ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರ ನೇಮಕದ ವಿಚಾರದಲ್ಲಿ ಅದ್ಹೇಕೆ ಪ್ರತಿ ಬಾರಿ ಗೊಂದಲ-ವಿವಾದಗಳು ಏರ್ಪಡುತ್ತವೋ ಗೊತ್ತಾಗುತ್ತಿಲ್ಲ..ಆಯಕಟ್ಟಿನ ಹುದ್ದೆಯಲ್ಲಿರುವವರ ಅವಸರ-ಸ್ವಜನ ಪಕ್ಷಪಾತ-ಸ್ವ ಹಿತಾಸಕ್ತಿಗೆ ಪದೇ ಪದೇ ನೇಮಕ ಪ್ರಕ್ರಿಯೆ ಈಡಾಗುತ್ತಲೇ ಬಂದಿದೆ. ಈ ಬಾರಿ ಆಗಿದೆ ಎನ್ನಲಾಗುತ್ತಿರುವುದು ಕೂಡ ಅದೇ..ಹೈ ಕೋರ್ಟ್ ಆದೇಶದ ನಂತರ ಹೊರಬಿ ದ್ದಿರುವ ಹೆಸರಿನ ಸುತ್ತವೂ ವಿವಾದದ ಹುತ್ತ ಬೆಳೆಯ ಹತ್ತಿದೆ.ಹೈ ಕೋರ್ಟ್ ಸೂಚನೆ ಹೊರ ತಾ ಗ್ಯೂ ಸರ್ಕಾರ ಮಂಡಳಿಗೆ ಸೂಕ್ತ-ಅರ್ಹ-ಸಮರ್ಥ-ಸಂಪನ್ಮೂಲಯುಕ್ತ “ಅಧ್ಯಕ್ಷರ”ನ್ನು ನೇಮಕ ಮಾಡುವ ಗೋಜಿಗೇ ಸರ್ಕಾರ ಹೋಗುತ್ತಿಲ್ಲ.ಹೊಸ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಶಾಂತ ಅವ್ವರೇಹಳ್ಳಿ ತಿಮ್ಮಯ್ಯ ನೇಮಕಾತಿ ಕೂಡ ವಿವಾದಗಳಿಂದ ಹೊರತಾಗುಳಿದಿಲ್ಲದಿ ರುವುದು ವಿಪರ್ಯಾಸ-ದುರಾದೃಷ್ಟಕರ ಹಾಗೂ ಹಾಸ್ಯಾಸ್ಪದವೇ ಸರಿ.

ಅಧ್ಯಕ್ಷರ ನೇಮಕಾತಿ ಸ್ವಜನ ಪಕ್ಷಪಾತ-ಸ್ವ ಹಿತಾಸಕ್ತಿಯಿಂದ ಮುಕ್ತವಾಗಿರಬೇಕು ಎನ್ನುವ ಸುಪ್ರಿಂ ಕೋರ್ಟ್-ಹೈಕೋರ್ಟ್ ನಿಯಮಗಳು ನೂತನ ಅಧ್ಯಕ್ಷ ಶಾಂತ ತಿಮ್ಮಯ್ಯರ ನೇಮಕಾ ತಿಯಲ್ಲಿ ಪಾಲನೆಯಾಗಿಲ್ಲ ಎನ್ನುವುದು ಗಂಭೀರ ಆರೋಪ.ಪರಿಸರ ಸಚಿವ ಆನಂದ್ ಸಿಂಗ್ ಅವರ ಅತ್ಯಾಪ್ತ-ಅವರ ಒಡೆತನದ ಗಣಿ ಕಂಪೆನಿಗಳ ಉಸ್ತುವಾರಿ,ಮಾಲಿನ್ಯಕ್ಕೆ ಕಾರಣವಾಗಿರುವ ಅನೇಕ ಕೈಗಾರಿಕೆ-ಕಂಪೆನಿಗಳ ಕನ್ಸಲ್ಟೆನ್ಸಿ ಆಗಿರುವ ಆರೋಪ ಶಾಂತ ತಿಮ್ಮಯ್ಯ ಮೇಲಿದೆ.

ಅಧ್ಯಕ್ಷರನ್ನಾಗಿಸುವಂತೆ ಮಠ ಮಾನ್ಯಗಳ ಮೊರೆ ಹೋಗುತ್ತಿದ್ದ ಶಾಂತ ತಿಮ್ಮಯ್ಯ
ಅಧ್ಯಕ್ಷರನ್ನಾಗಿಸುವಂತೆ ಮಠ ಮಾನ್ಯಗಳ ಮೊರೆ ಹೋಗುತ್ತಿದ್ದ ಶಾಂತ ತಿಮ್ಮಯ್ಯ

ಶಾಂತ ತಿಮ್ಮಯ್ಯ ಅವರನ್ನೇ ಅಧ್ಯಕ್ಷರನ್ನಾಗಿಸೊಕ್ಕೆ ಸಚಿವ ಆನಂದ್ ಸಿಂಗ್ ಸರ್ಕಾರದ ಮಟ್ಟದ ಲ್ಲಿ ದೊಡ್ಡ ಮಟ್ಟದ ಹೋರಾಟವನ್ನೇ ನಡೆಸಿದ್ದರೆನ್ನುವುದು ಗುಟ್ಟಾಗಿ ಉಳಿದಿಲ್ಲ. ಮುಖ್ಯ ಮಂತ್ರಿ ಗಳ ಜತೆಗೆ ಇದಕ್ಕಾಗಿ ಸಣ್ಣ ಮಕ್ಕಳಂತೆ ರಚ್ಚೆ ಹಿಡಿದಿದ್ದನ್ನು ರಾಜ್ಯ ಕಂಡಿದೆ.ಆದ್ರೆ ಆ ರಚ್ಚೆಯಲ್ಲಿ ಶಾಂತ ತಿಮ್ಮಯ್ಯ ಅವರನ್ನೇ ಅಧ್ಯಕ್ಷರನ್ನಾಗಿಸಬೇಕೆನ್ನುವುದು ಕೂಡ ಒಂದು ಉದ್ದೇಶವಾಗಿತ್ತೆ ನ್ನುವ ಮಾತುಗಳಿವೆ.ಶಾಂತ ತಿಮ್ಮಯ್ಯರನ್ನು ಅಧ್ಯಕ್ಷರನ್ನಾಗಿ ಪ್ರತಿಷ್ಟಾಪಿಸಿದ್ರೆ ತಮ್ಮ“ದರ್ಬಾರ್” ನ್ನು ವ್ಯವಸ್ಥಿತ ವಾಗಿ-ನಿರಾತಂಕವಾಗಿ-ಕಾನೂನಾತ್ಮಕ ತೊಡಕುಗಳಿಲ್ಲದೆ ನಡೆಸಬ ಹುದೆನ್ನುವ ಒಟ್ಟಾರೆ ಆಲೋಚನೆಗಳು ಆನಂದ್ ಸಿಂಗ್ ಅವರ ತಲೆಯಲ್ಲಿದ್ದವಾ ಎನ್ನುವುದಕ್ಕೆ ಪುಷ್ಟಿ ನೀಡುವಂತ ಸಾಕಷ್ಟು ಅನುಮಾನಗಳು ವಿವಾದಗಳ ಹಿನ್ನಲೆಯಲ್ಲಿ ಕಾಡಲಿಕ್ಕೆ ಶುರುವಾಗಿವೆ.

ಶಾಂತ ತಿಮ್ಮಯ್ಯ ಅವರಿಗಾಗಿ ಮಂಡಳಿಯ ಹಿಂದಿನ ಅಧ್ಯಕ್ಷ ಬ್ರಿಜೇಶ್ ಕುಮಾರ್ ಅವರಿಗೆ ಕೊಕ್ ಕೊಟ್ಟ ಆರೋಪ ಆನಂದ್ ಸಿಂಗ್ ಮೇಲಿದೆ.
ಶಾಂತ ತಿಮ್ಮಯ್ಯ ಅವರಿಗಾಗಿ ಮಂಡಳಿಯ ಹಿಂದಿನ ಅಧ್ಯಕ್ಷ ಬ್ರಿಜೇಶ್ ಕುಮಾರ್ ಅವರಿಗೆ ಕೊಕ್ ಕೊಟ್ಟ ಆರೋಪ ಆನಂದ್ ಸಿಂಗ್ ಮೇಲಿದೆ.

ಪರಿಸರ ಕಾಪಾಡುವಂಥ,ಅದಕ್ಕೆ ತದ್ವಿರುದ್ಧವಾಗಿ ಮಾಲಿನ್ಯಕ್ಕೆ ಕಾರಣವಾಗುತ್ತಿರುವವರ ಹೆಡೆ ಮುರಿ ಕಟ್ಟಬೇಕಾದಂತದ್ದು ಮಂಡಳಿ ಅಧ್ಯಕ್ಷರ ಆಧ್ಯತೆಯ ಹೊಣೆಗಾರಿಕೆ.ಆದ್ರೆ ಶಾಂತ ತಿಮ್ಮಯ್ಯ ವಿಷಯದಲ್ಲಿ ಗಂಭೀರ ಆರೋಪ ಇರೋದೇ ಅವರು ಗಣಿಗುತ್ತಿಗೆ ಪಡೆದಿದ್ದಾರೆನ್ನುವುದು. ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದರೆನ್ನುವುದನ್ನು ಒಪ್ಪಿಕೊಳ್ಳೋಣ..ಆದ್ರೆ ಗಣಿಗುತ್ತಿಗೆಯೇ ಇವರ ಹೆಸರಿನಲ್ಲಿದೆ ಎನ್ನುವುದನ್ನು ಪರಿಸರವಾದಿ ಯಲ್ಲಪ್ಪರೆಡ್ಡಿ,ಚಿರಂಜೀವಿಸಿಂಗ್ ಅವರಾದಿ ಯಾಗಿ ಯಾರೊಬ್ಬರೂ ಒಪ್ಪಿಕೊಳ್ಳೋದಿಲ್ಲ.ಸ್ವತಃ ಗಣಿಗುತ್ತಿಗೆ ಇರೋರು ಮಂಡಳಿ ಅದ್ಯಕ್ಷರಾಗಿ ಪಾರದರ್ಶಕ-ದಕ್ಷತೆ-ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆನ್ನುವುದನ್ನು ಒಪ್ಪಲಿಕ್ಕೆ ಆಗುತ್ತದಾ..? ಎನ್ನುವುದು ಪರಿಸರವಾದಿ-ಸಾಮಾಜಿಕ ಕಾರ್ಯಕರ್ತ ಆಂಜನೇಯ ರೆಡ್ಡಿ ಅವರ ವಾದ. ಮಾಲಿನ್ಯಕ್ಕೆ ಕಾರಣವಾದ-ಕಾರಣವಾಗುತ್ತಿರುವ ಅನೇಕ ಕಂಪೆನಿಗಳಿಗೆ ಇಂದಿಗೂ ಶಾಂತ ತಿಮ್ಮಯ್ಯ ಸಲಹೆಗಾರರೆಂದರೆ ನಂಬಲೇಬೇಕೆನ್ನುತ್ತಿದ್ದಾರೆ, ಅವರ ಹಿನ್ನಲೆ ಕೆದಕಿ ಆ ಬಗ್ಗೆ ಕಾನೂನಾತ್ಮಕ ಹೋರಾಟಕ್ಕೆ ಸಿದ್ಧವಾಗುತ್ತಿರುವ ಪರಿಸರವಾದಿಗಳು.

ಪರಿಸರ ಸಚಿವ ಆನಂದ್ ಸಿಂಗ್
ಪರಿಸರ ಸಚಿವ ಆನಂದ್ ಸಿಂಗ್

ಶಾಂತ ತಿಮ್ಮಯ್ಯ ಬಿ.ಟೆಕ್,ಎಂ.ಟೆಕ್,ಪಿಎಚ್ ಡಿ ಪಡೆದಿದ್ದಾರೆ ಎಂದೇ ಇಟ್ಟುಕೊಳ್ಳೊಣ.ಆದ್ರೆ ಅವ್ಯಾವು ಪರಿಸರಕ್ಕೆ ಸಂಬಂಧಿಸಿದ ಪದವಿಗಳಲ್ಲ ಎನ್ನುವ ಮಾತಿದೆ.ಅಲ್ಲದೇ ಗಣಿ ಕಂಪೆನಿಗಳಿಗೆ ಕನ್ಸಲ್ಟೆಂಟ್ ಆಗಿರುವುದನ್ನು ಬಿಟ್ಟರೆ ಮಂಡಳಿಯ ಪರಿಸರ ಕಾಪಾಡುವ,ಮಾಲಿನ್ಯ ಹಾಳು ಮಾಡುವ ವಿಷಯಗಳಿಗೆ ಪರಿಹಾರ ಸೂಚಿಸುವ ಸಂಪನ್ಮೂಲ ವ್ಯಕ್ತಿಯಾಗಿರುವ ಅನುಭವ ಇಲ್ಲವಲ್ಲ.ಆನಂದ್ ಸಿಂಗ್ ಮಕ್ಕಳಂತೆ ರಚ್ಚೆ ಹಿಡಿದರೆನ್ನುವ ಏಕೈಕ ಕಾರಣಕ್ಕೆ ಬೊಮ್ಮಾಯಿ ಸರ್ಕಾರ ಶಾಂತ ತಿಮ್ಮಯ್ಯ ಅವರನ್ನು ನೇಮಕ ಮಾಡಿ ಮತ್ತೊಂದು ವಿವಾದಕ್ಕೆ ಸಿಲುಕ್ತಾ ಎನ್ನುವುದು ಮೇಲ್ನೋಟಕ್ಕೆ ಕಾಡುತ್ತಿರುವ ಪ್ರಶ್ನೆ.ವಿವಾದವಾದರೂ ಪರ್ವಾಗಿಲ್ಲ,ತಮ್ಮ ಸಂಪುಟ ಸಹದ್ಯೋಗಿಯ ಹಿತಾಸಕ್ತಿಯೇ ಮುಖ್ಯ ಎನ್ನುವ ರೀತಿಯಲ್ಲಿ ಬೊಮ್ಮಾಯಿ ನಡೆದುಕೊಂಡಿದ್ದು ಕೂಡ ದೌರ್ಭಾಗ್ಯಪೂರ್ಣ.

ಮೆಟಮಾರ್ಫಸಿಸ್ ಪ್ರಾಜೆಕ್ಟ್ ಕನ್ಸಲ್ಟೆಂಟ್ ಪ್ರೈವೇಟ್ ಲಿಮಿಟೆಡ್(Metamorphosis Project Consultants Private Limited) ಕಂಪೆನಿಯ ಎಂಡಿ ಆಗಿರುವ ಶಾಂತ ತಿಮ್ಮಯ್ಯ ತಮ್ಮ ಕಂಪೆನಿ ಮೂಲಕ ಸರ್ಕಾರಕ್ಕೆ ಅನುಕೂಲಕರವಾಗುವ ಯೋಜನೆಗಳ ಡಿಪಿಆರ್ ಸಿದ್ದಪಡಿಸುವ ಕೆಲಸ ಮಾಡಿಸಿದ್ದಾರೆ.ಅನೇಕ ಕಂಪೆನಿಗಳಿಗೆ ಎಸ್ ಟಿಪಿಗಳ ಸ್ಥಾಪನೆಗೆ ಅನುಮತಿ ಕೊಡಿಸುವ ಕೆಲಸವನ್ನೂ ಮೆಟಮಾರ್ಫಸಿಸ್ ಕಂಪೆನಿ ಮಾಡುತ್ತಾ ಬಂದಿದೆ.ಜತೆಗೆ ಅನೇಕ ಗಣಿಗುತ್ತಿಗೆ ಕಂಪೆನಿಗಳ ಲೀಸ್ ಕೂಡ ಪಡೆದು ಕೆಲಸ ಮಾಡಿದೆ.ಅವುಗಳ ಪೈಕಿ ಕೆಲವೊಂದು ಪರಿಸರ ಮಾಲಿನ್ಯಕ್ಕೆ ಕಾರಣವಾಗುವಂಥ ಕಂಪೆನಿಗಳಿವೆ ಎನ್ನುವುದು ಆತಂಕಕಾರಿ.

ಶಾಂತ ತಿಮ್ಮಯ್ಯಎಂಡಿ ಆಗಿರುವ ಮೆಟಮಾರ್ಫಸಿಸ್ ಪ್ರಾಜೆಕ್ಟ್ ಕನ್ಸಲ್ಟೆಂಟ್ ಪ್ರೈವೇಟ್ ಲಿಮಿಟೆಡ್(Metamorphosis Project Consultants Private Limited)
ಶಾಂತ ತಿಮ್ಮಯ್ಯಎಂಡಿ ಆಗಿರುವ ಮೆಟಮಾರ್ಫಸಿಸ್ ಪ್ರಾಜೆಕ್ಟ್ ಕನ್ಸಲ್ಟೆಂಟ್ ಪ್ರೈವೇಟ್ ಲಿಮಿಟೆಡ್ (Metamorphosis Project Consultants Private Limited)

ಇಂಥದ್ದೊಂದಷ್ಟು ಮಾಲಿನ್ಯಕಾರಕ ಅಂಶಗಳಲ್ಲಿ ಸಕ್ರೀಯವಾಗಿರುವ ಶಾಂತತಿ್ಮ್ಮಯ್ಯ ಅವರಂಥವರನ್ನು ಮಂಡಳಿ ಅಧ್ಯಕ್ಷರನ್ನಾಗಿಸುವುದು ಜಾಗತಿಕ ದುರಂತವೇ ಎನ್ನಲಾಗ್ತಿದೆ. ಖುದ್ದು ಮಾಲಿನ್ಯಕ್ಕೆ ಕಾರಣವಾಗುವ ಕಂಪೆನಿಗಳ ಕನ್ಸಲ್ಟೆಂಟ್ ಆಗಿರುವ ತಿಮ್ಮಯ್ಯ ಮಾಲಿನ್ಯ ತಡೆಯುವ ಕೆಲಸ ಮಾಡಲಿಕ್ಕೆ ಸಾಧ್ಯನಾ..? ಮಾಲಿನ್ಯಕಾರಕ ಕಂಪೆನಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆಯಾ..? ಸ್ವತಃ ಆನಂದ್ ಸಿಂಗ್ ಅವರ ಕಂಪೆನಿಗಳ ವಿರುದ್ಧವೇ ಆರೋಪಗಳು ಬಂದಾಗ ನಿಷ್ಪಕ್ಷಪಾತವಾಗಿ ಕ್ರಮ ಜರುಗಿಸಲಾಗುತ್ತದೆಯಾ..? ದೊಡ್ಡ ಮಟ್ಟದ ಗಣಿ ಲಾಭಿ ಮೆಟ್ಟಿ ನಿಲ್ಲೊಕ್ಕೆ ಸಾಧ್ಯವಾಗುತ್ತದಾ..? ಒಟ್ಟಾರೆಯಾಗಿ ಜಲ-ನೆಲ-ವಾಯು-ಗಾಳಿ ಮಾಲಿನ್ಯ ತಡೆಯುವಂಥ ಮಾಫಿಯಾಗಳ ಹೆಡೆ ಮುರಿಕಟ್ಟುವಷ್ಟು ಧೈರ್ಯ-ಸಾಮರ್ಥ್ಯವನ್ನು ಮುಂದಿನ ದಿನಗಳಲ್ಲಿ ಶಾಂತ ತಿಮ್ಮಯ್ಯ ಪ್ರದರ್ಶಿಸಲಿಕ್ಕೆ ಆಗುತ್ತಾ..? ನೋ..ವೇ ಎನ್ನುತ್ತಾರೆ ಪರಿಸರವಾದಿ ಯಲ್ಲಪ್ಪರೆಡ್ಡಿ, ಮಾಲಿನ್ಯಕ್ಕೆ ಕಾರಣವಾಗುವಂಥ ಕಂಪೆನಿಗಳ ಸಲಹೆಗಾರರಾಗಿರುವವ ಕೈಗೇ ಪರಿಸರ ಮಾಲಿನ್ಯ ತಡೆಯುವ ಹೊಣೆಗಾರಿಕೆಯನ್ನು ಸರ್ಕಾರ ನೀಡುತ್ತದೆ ಎಂದರೆ ಅದಕ್ಕಿಂತ ದೊಡ್ಡ ದುರಂತಕಾರಿ ನಿರ್ದಾರ ಮತ್ತೊಂದಿಲ್ಲ ಎನ್ನುವುದು ಒಟ್ಟಾರೆ ಬೆಳವಣಿಗೆಯನ್ನು ಅವಲೋಕಿಸುತ್ತಿರುವ ಪರಿಸರವಾದಿಗಳ ಆಕ್ರೋಶಭರಿತ ಆರೋಪ.

ತನ್ನ ಅತ್ಯಾಪ್ತ ಎನ್ನುವ ಕಾರಣಕ್ಕೋ… ತನ್ನ ಮಾಲೀಕತ್ವದ ಗಣಿ ಕಂಪೆನಿಗಳ ಸಲಹೆಗಾರ ಎನ್ನುವ ಅತ್ಯಾಪ್ತತೆಗೋ….ತಾನು ಸೇರಿದಂತೆ ತನ್ನ ಬಳಿ ಸಹಾಯ ಕೇಳಿಕೊಂಡು ಬರುವ ಕೈಗಾರಿಕೋದ್ಯಮಿಗಳು-ಗಣಿದಣಿಗಳಿಗೆ ಸಲಹೆ-ಸಹಕಾರ ನೀಡಿ ತನ್ನ ಹಿತಾಸಕ್ತಿ ಈಡೇರಿಸಿಕೊಳ್ಳಲಿಕ್ಕೋ ಆನಂದ್ ಸಿಂಗ್ ಅವರು ಶಾಂತ ತಿಮ್ಮಯ್ಯ ಅವರನ್ನು ನೇಮಕ ಮಾಡಿರಬಹುದೆನಿಸುತ್ತದೆ..ಆದ್ರೆ ಈಗಾಗಲೇ ಈ ಬಗ್ಗೆ ಕಾನೂನಾತ್ಮಕ ಹೋರಾಟ ನಡೆಸೊಕ್ಕೆ ಸಿದ್ಧವಾಗಿರುವ ಪರಿಸರವಾದಿಗಳ ವಾದಕ್ಕೆ ಬೆಲೆ ಕೊಟ್ಟು ಸುಪ್ರಿಂ ಕೋರ್ಟ್ ಅವರ ವಾದವನ್ನೇ ಎತ್ತಿ ಹಿಡಿದ್ರೆ ಅದು ಆನಂದ್ ಸಿಂಗ್ ಅವರಿಗಷ್ಟೇ ಆಗುವ ಹಿನ್ನಡೆ ಅಥವಾ ಅಪಮಾನವಲ್ಲ,ಆನಂದ್ ಸಿಂಗ್ ಹಠಕ್ಕೆ ಮಣಿದ ಸರ್ಕಾರಕ್ಕೂ ಆಗಬಹುದಾದ ಭಾರೀ ಮುಖಭಂಗ ಅಲ್ಲವೇ..ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಶಾಂತ ತಿಮ್ಮಯ್ಯ ನೇಮಕ ಮಾಡಿ ಸರ್ಕಾರ ಹೊರಡಿಸಿದ ಆದೇಶದ ಪ್ರತಿ
ಶಾಂತ ತಿಮ್ಮಯ್ಯ ನೇಮಕ ಮಾಡಿ ಸರ್ಕಾರ ಹೊರಡಿಸಿದ ಆದೇಶದ ಪ್ರತಿ

ಶಾಂತ ತಿಮ್ಮಯ್ಯ ಪಾಲುದಾರಿಕೆ ಮತ್ತು ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿರುವ ಕಂಪೆನಿಗಳು

-ಮಧುಗಿರಿ ಗ್ರಾನೈಟ್ಸ್
-ಮಹರ್ಷಿ ಓರ್ಸ್ ಪ್ರೈವೇಟ್ ಲಿಮಿಟೆಡ್
-ಮೆಟಾಮಾರ್ಫಸಿಸ್ ಲ್ಯಾಬೋರೇಟರಿ ಪ್ರೈವೇಟ್ ಲಿಮಿಟೆಡ್
-ಚಿತ್ರದುರ್ಗದ ವೇದಾಂತ ಕಂಪೆನಿ
-ಅದಾನಿ ವಿಳಿಂಜಮ್ ಫೋರ್ಟ್ ಪ್ರೈವೇಟ್ ಲಿಮಿಟೆಡ್-ಕನ್ಸಲ್ಟೆಂಟ್
-ಬೆಂಗಳೂರಿನ ಅನೇಕ ಅಪಾಟ್ಮೆಂಟ್ ಗಳಿಗೆ ಎಸ್ ಟಿಪಿ ಅಳವಡಿಸಲಿ ಕನ್ಸಲ್ಟೆಂಟ್ ಆಗಿ ಕಾರ್ಯನಿರ್ವಹಣೆ
-ಕೈಕೊಂಡರಹಳ್ಳಿ-ಕಸವನಹಳ್ಳಿ ಕೆರೆಗಳಿಗೆ ಕಲುಷಿತ ನೀರು ಹರಿಸಿದ ಅಪಾಟ್ಮೆಂಟ್ ಗೆ ನಿರಪೇಕ್ಷಣಾ ಪತ್ರ ನೀಡುವಲ್ಲಿ ಕನ್ಸಲ್ಟೆಂಟ್ ಆಗಿ ಕಾರ್ಯನಿರ್ವಹಣೆ

ಜಲ(ಮಾಲಿನ್ಯ ನಿಯಂತ್ರಣ ಮಂಡಳಿ) ಕಾಯ್ದೆ-1974 ರ ಸೆಕ್ಷನ್ 8-ಇ ಅಡಿಯಲ್ಲಿ ಸುಪ್ರಿಂ ಕೋರ್ಟ್ ತೀರ್ಪಿಗೆ ಅನುಗುಣವಾಗಿಯೇ ಅಧ್ಯಕ್ಷರ ಆಯ್ಕೆಯಾಗಬೇಕು( ಅಧ್ಯಕ್ಷರಷ್ಟೇ ಅಲ್ಲ ಸದಸ್ಯರ ಆಯ್ಕೆಯೂ ಹಾಗೆಯೇ ನಡೆಯಬೇಕು).ಅಧ್ಯಕ್ಷರ ಆಯ್ಕೆಗೆಂದೇ ನಿರ್ಧಿಷ್ಟವಾದ ನಿಯಮಗಳನ್ನು ರೂಪಿಸಿದ ಬಳಿಕವೇ ಅಧ್ಯಕ್ಷರ ಆಯ್ಕೆಗೆ ಮುಂದಾಗಬೇಕು.ಇದರಲ್ಲಿ ಅವಸರ-ಆತುರ ಸಲ್ಲದು ಎನ್ನುವ ಹಿಂದಿನ ಮುಖ್ಯ ನ್ಯಾಯಮೂರ್ತಿ S. ಓಕಾ ಸೂಚಿಸಿದ್ದರು. ಅವರ ಆದೇಶದ ಮೇರೆಗೆ-

ಸರ್ಕಾರ ರೂಪಿಸಿದ್ದ ನಿರ್ಧಿಷ್ಟ ವಿದ್ಯಾರ್ಹತೆ-ಅನುಭವ-ಮಾನದಂಡಗಳ ವಿವರ ಕೆಳಕಂಡಂತಿದೆ.

1-ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವವರು ಕಡ್ಡಾಯವಾಗಿ ಪರಿಸರ ವಿಜ್ಞಾನ ಅಥವಾ ಪರಿಸರ ಎಂಜಿನಿಯರಿಂಗ್ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.
2-ಅವರೆಡನ್ನೂ ಮಾಡದವರನ್ನು ಆಯ್ಕೆ ಮಾಡಲೇಬೇಕಾದ ಸನ್ನಿವೇಶ ಸೃಷ್ಟಿಯಾದಲ್ಲಿ ಅವಕ್ಕೆ ತತ್ಸಮಾನವಾದಂಥ ಯಾವುದಾದರೂ ಪದವಿಯನ್ನು ಪಡೆದಿರಬೇಕು.
3-ಆ ಪದವಿಯನ್ನು ಯಾವುದೋ ಓಪನ್ ಯೂನಿವರ್ಸಿಟಿಯಲ್ಲಿ ಪಡೆದಿರಬಾರದು.ಅಂಗೀಕೃತ ವಿವಿಯಿಂದಲೇ ಪಡೆದಿರಬೇಕು.
4-ಡಿಗ್ರಿ ಪಡೆದರೆ ಸಾಲದು,ನಿರ್ಧಿಷ್ಟವಾದ ಪರಿಸರ ಸಂರಕ್ಷಣೆ ವಿಷಯದಲ್ಲಿ ಜ್ಞಾನ-ಸಂಶೋಧನೆ-ಅನುಭವ ಹೊಂದಿರಲೇಬೇಕು.
5-ಜನಪ್ರತಿನಿಧಿಗಳು ಅಥವಾ ಆಳುವ ಪಕ್ಷದ ಕಾರ್ಯಕರ್ತರು ಅಥವಾ ಬೆಂಬಲಿಗರನ್ನು ಯಾವುದೇ ಕಾರಣಕ್ಕೂ ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸಲೇಬಾರದು.
6-ಜಲ-ನೆಲ-ವಾಯು-ಶಬ್ಧ ಮಾಲಿನ್ಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಆಳವಾದ ಪರಿಜ್ಞಾನ-ವಿಶೇಷ ಪರಿಣಿತ ಹೊಂದಿರಲೇಬೇಕು.
7- ಅಧ್ಯಕ್ಷರು-ಸದಸ್ಯರಾಗಬಯಸುವವರು ನೇರವಾಗಿ,ಪರೋಕ್ಷವಾಗಿ ಬೇರೊಬ್ಬರ ಕಂಪೆನಿಗಳಲ್ಲಿ ಹಿತಾಸಕ್ತಿಯಾಗಲಿ,ಷೇರುಗಳನ್ನು ಹೊಂದಿರಬಾರದು.

Spread the love
Leave A Reply

Your email address will not be published.

Flash News