ACB MEGA RAID ON BDA- BUT ALL FOUR DS ARE SAFE..?! “BDA ಬಿಲಕ್ಕೆ ACB ರೇಡ್: ದಾಳಿ ಹೊರತಾಗ್ಯು ನಾಲ್ವರು KAS ಗಳು ಸೇಫ್..!! ಯಾಕೆ ಗೊತ್ತಾ..?ಇಲ್ಲಿವೆ ಆ ಕಾರಣಗಳು..

ದೂರುದಾರ ಹೇಮಂತರಾಜು ಕೊಟ್ಟ ದೂರುಗಳೆಲ್ಲವೂ ಮೂರ್ನಾಲ್ಕು ವರ್ಷಗಳ ಹಿಂದಿನ ಅಕ್ರಮಕ್ಕೆ ಸಂಬಂಧಿಸಿದವು..

0

ಬೆಂಗಳೂರು:ಬೆಂಗಳೂರು ನಗರಾಭಿವೃದ್ದಿ ಪ್ರಾಧಿಕಾರದ ವಿವಿಧ ಕಚೇರಿಗಳ ಮೇಲೆ ದಾಳಿ-ಪರಿಶೀಲನೆ ನಡೆಸಿದರೂ ಉಪ ಕಾರ್ಯದರ್ಶಿಗಳಿಗೆ ಯಾವುದೇ ಆತಂಕವಾಗಲಿ ಗಂಡಾಂತರವಾಗಲಿ ಇಲ್ಲ ಎನ್ನಲಾಗುತ್ತಿದೆ.ಇದಕ್ಕೆ ಕಾರಣ ದೂರುಗಳೆಲ್ಲವೂ ಮೂರ್ನಾಲ್ಕು ವರ್ಷಗಳ ಹಿಂದೆ ನಡೆದಿವೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದವು ಎನ್ನಲಾಗಿದೆ.ಹಾಗಾಗಿ ಪರಿಶೀಲನೆ ದಾಳಿಯ ಭಾಗವಾಗಿ ನಡೆಯಲಿದೆ.

ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಎನ್ನುವ ಅಕ್ರಮಗಳ ಬಿಲ ಬಗೆಯಲಾರಂಭಿಸಿ 24 ಗಂಟೆ ಕಳೆದೋಗಿವೆ.ಹತ್ತಿರತ್ತಿರ 100 ಕೋಟಿಯಷ್ಟು ಅಕ್ರಮಕ್ಕೆ ಸಂಬಂಧಿಸಿದ ದಾಖಲೆಗಳನ್ನು ಎಸಿಬಿ ಟೀಮ್ ವಶಕ್ಕೆ ತೆಗೆದುಕೊಂಡ್ಹೋಗಿದೆ.ಆದ್ರೆ 24 ಗಂಟೆಗಳ ನಿರಂತರ ಪರಿಶೀಲನೆಯಲ್ಲಿ ಸಿಕ್ಕಷ್ಟೇ ದಾಖಲೆಗಳನ್ನು ಕೊಂಡೊಯ್ಯುವ ಇರಾದೆಯಲ್ಲಿದ್ದಂತೆ ಕಾಣುತ್ತಿಲ್ಲ ಎಸಿಬಿ.ಹಾಗಾಗಿ ಸೋಮವಾರವೂ ದಾಳಿ ಮುಂದುವರೆಯುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ಬಿಡಿಎನ ಅರ್ಕಾವತಿ-ಕೆಂಪೇಗೌಡ ಹಾಗೂ ವಿಶ್ವೇಶ್ವರಾಯ ಬಡಾವಣೆಗಳಲ್ಲಿ ಸುಮಾರು 75 ಕೋಟಿಗೂ ಅಧಿಕ ಮೌಲ್ಯದ  6 ನಿವೇಶನಗಳನ್ನು ಖೊಟ್ಟಿ ದಾಖಲೆ ಮಾಡಿ ಹಂಚಿಕೆ ಮಾಡಿರುವ ದಾಖಲೆಗಳನ್ನು ವಶಕ್ಕೆ ಪಡೆದಿದೆ.ಕೆಂಗೇರಿ ಹೋಬಳಿ ಉಳ್ಳಾಲ ಗ್ರಾಮದಲ್ಲಿ ಬಿಡಿಎ ಅಧಿಕಾರಿಗಳು ದಲ್ಲಾಳಿಗಳ ಜತೆ ಸೇರಿ ಖೊಟ್ಟಿ ದಾಖಲೆ ಸೃಷ್ಟಿಸಿ 1ವರೆ ಕೋಟಿ ಮೊತ್ತದ ಜಮೀನನ್ನು ಸ್ವಾಧೀನ ಪಡಿಸಿಕೊಂಡ ಪ್ರಕರಣದ ದಾಖಲೆ ವಶಕ್ಕೆ ಪಡೆಯಲಾಗಿದೆ.

ಕೆಂಗೇರಿ ಸ್ಯಾಟಲೈಟ್ ಟೌನ್ ಬಳಿಯ ಜಾಗದ ವಿಚಾರದಲ್ಲಿ 80 ಲಕ್ಷ ಮೌಲ್ಯದ ಅಕ್ರಮ,ಚಂದ್ರಾ ಲೇ ಔಟ್ ನಲ್ಲಿ 1 ವರೆ ಲಕ್ಷದ ಅಕ್ರಮ,ನಾಡಪ್ರಭು ಕೆಂಪೇಗೌಡ ಲೇ ಔಟ್ ನಲ್ಲಿನ ಅಕ್ರಮ,ಮೂಲ ನಿವಾಸಿಗಳಿಗೆ ಸಿಗಬೇಕಾದ ನಿವೇಶನವನ್ನು ಹಣಕ್ಕಾಗಿ ಬೇನಾಮಿ ವ್ಯಕ್ತಿಗೆ ನೀಡಿದ ಬಿಡಿಎ ಅಧಿಕಾರಿಗಳ ಅಕ್ರಮ..ಹೀಗೆ 10ಕ್ಕೂ ಹೆಚ್ಚು ಪ್ರಕರಣಗಳಿಗೆ ಸಂಬಂಧಿಸಿದ ಅಕ್ರಮಗಳನ್ನು ಪತ್ತೆ ಮಾಡಿ ಆ ಎಲ್ಲಾ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ ಕೈಗೊಂಡಿದ್ದಾರೆ.ಉಪ ಕಾರ್ಯದರ್ಶಿಗಳು ಸೇರಿದಂತೆ ಅಲಾಟ್ಮೆಂಟ್ ಸೆಕ್ಷನ್ ನಲ್ಲಿರುವ ಆಧಿಕಾರಿ ಸಿಬ್ಬಂದಿಯ ವಿಚಾರಣೆ ನಡೆಸಲಾರಂಭಿಸಿದ್ದಾರೆ.

ಡಾ.ಸುಧಾ
ಡಾ.ಸುಧಾ
ಶಿವರಾಜು
ಶಿವರಾಜು

ಆದರೆ ಇಲ್ಲಿ ಗಮನಿಸಬೇಕಾಗಿರುವ ಒಂದು ಪ್ರಮುಖ ಸಂಗತಿ ಎಂದ್ರೆ ಈ ಎಲ್ಲಾ ದೂರುಗಳ ಹಿನ್ನಲೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳೆಲ್ಲವೂ ಐದಾರು ವರ್ಷಗಳಿಗೆ ಸಂಬಂಧಿಸಿದಂತವಂತೆ.ಹಾಲಿ ಇರುವ ನಾಲ್ವರು ಡಿಎಸ್ ಗಳ ಪಾತ್ರ ಇದರಲ್ಲಿ ಇರೋದು ಕಡಿಮೆ.ಏಕೆಂದರೆ ಈ ಅಕ್ರಮ ನಡೆದಿದ್ದೆಲ್ಲಾ ಹಿಂದಿನ ಡಿಎಸ್ ಗಳ ಅವಧಿಯಲ್ಲಿ.ಆ ಫೈಲ್ ಗಳೆಲ್ಲಾ ಈಗಿರುವವರ ಕಚೇರಿಯಲ್ಲಿರುತ್ತದೆನ್ನುವ ಕಾರಣಕ್ಕಷ್ಟೇ ಅವರನ್ನು ವಿಚಾರಣೆಗೊಳಪಡಿಸಲಾಗುತ್ತಿದೆ..ಹಾಗಾಗಿ ಅವರೆಲ್ಲಾ ಬಹುತೇಕ ಸೇಫ್ ಆಗಬಹುದೆನ್ನಲಾಗುತ್ತಿದೆ.

ಯುದ್ಧಭೂಮಿ ಸಂಘಟನೆಯ ಹೇಮಂತರಾಜ್
ಯುದ್ಧಭೂಮಿ ಸಂಘಟನೆಯ ಹೇಮಂತರಾಜ್

ಇನ್ನು ಮೇಲ್ಕಂಡ ದಾಳಿಗೆ ಕಾರಣ ತಾವು ಕೊಟ್ಟಿರುವ ದೂರುಗಳೇ ಕಾರಣ ಎಂದು ಕ್ಲೇಮ್ ಮಾಡಿಕೊಳ್ಳುತ್ತಿರುವ ಯುದ್ಧಭೂಮಿ ಸಂಘಟನೆಯ ಹೇಮಂತರಾಜ್ ತಾವು ಬಿಡಿಎ ನಲ್ಲಿ ನಡೆದೆ-ನಡೆಯುತ್ತಿರುವ ಹಗರಣಗಳಿಗೆ ಸಂಬಂಧಿಸಿದಂತೆ 10ಕ್ಕೂ ಹೆಚ್ಚು ದೂರು ನೀಡಿದ್ದರಂತೆ.ಅವುಗಳ ಪೈಕಿ ಕೆಲವು 3-4 ವರ್ಷಗಳಿಗಿಂತ ಹಿಂದಿನವಾಗಿದ್ದರೆ ಇನ್ನು ಕೆಲವು ಇತ್ತೀಚಿನ ದಿನಗಳದ್ದು ಎನ್ನುತ್ತಾರೆ.ಹಾಗಾಗಿ ಹಿಂದಿನವರಿಗೆ ದೊಡ್ಡ ಮಟ್ಟದ ಸಮಸ್ಯೆಯಾದ್ರೆ ಹಾಲಿ ಇರುವವರಿಗೂ ಕಂಟಕ ತಪ್ಪಿದ್ದಲ್ಲ ಎಂದಿದ್ದಾರೆ,

ಹುದ್ದೆಗಳ ಕಾರಣಕ್ಕೆ ಡಾ.ಮಧು,. ನವೀನ್ ಜೊಸೇಫ್, ಸುಧಾ ಹಾಗು ಗೀತಾ ಹುಡೇದ್ ಅವರನ್ನು ವಿಚಾರಣೆಗೊಳಪಡಿಸಲಾಗುತ್ತಿದೆ.ಅಕ್ರಮಗಳಲ್ಲಿ ಇವರ ಪಾತ್ರಕ್ಕಿಂತ  ಹಿಂದೆ ಕೆಲಸ ಮಾಡಿರೋ ಡಾ.ಸುಧಾ, ಶಿವರಾಜು ಹಾಗೂ ಇತರೆ ಕೆಎಎಸ್ ಅಧಿಕಾರಿಗಳ ಶಾಮೀಲಾತಿಯೇ ಪ್ರಮುಖವಾಗಿ ಎದ್ದು ಕಾಣುತ್ತಿದೆಯಂತೆ.ಹಾಗಾಗಿ ವಿಚಾರಣೆಯ ಪ್ರಕ್ರಿಯೆಗಳಿಗಷ್ಟೇ ಅವರನ್ನು ಸೀಮಿತಗೊಳಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ಹಾಗಾಗಿ ಒಟ್ಟಾರೆ ದಾಳಿ ಇದೀಗ ಮತ್ತೊಂದು ಆಯಾಮ ಪಡೆದುಕೊಳ್ಳುವ ಸಾಧ್ಯತೆಗಳಿವೆ.ಈ ಹಿಂದೆ ಡಿಎಸ್ ಗಳಾಗಿ ಕೆಲಸ ಮಾಡಿರುವ ಸಾಕಷ್ಟು ಕೆಎಎಸ್ ಗಳ ಬುಡವನ್ನೇ ಕಾಯಿಸುವ ಸಾಧ್ಯತೆಗಳಿವೆ.ಅವರಷ್ಟೇ ಅಲ್ಲ,ಇಂಥಾ ಅಕ್ರಮಗಳಿಗೆ ಸಾಥ್ ಕೊಟ್ಟಿರುವ ಬಿಡಿಯ ಸಿಬ್ಬಂದಿಗೂ ಕಂಟಕವಾಗುವ ಆತಂಕವಿದೆ.ಒಟ್ಟಾರೆ ಚಿತ್ರಣ ಗಮನಿಸಿದ್ರೆ ನಾಲ್ವರು ಕೆಎಎಸ್ ಗಳು ಸೇಫ್ ಎನ್ನಲಾಗ್ತಿದೆ.ಆದರೆ ಅದು ಕೂಡ, ಹೇಮಂತರಾಜ್ ಅವರ ದೂರಿನಲ್ಲಿ ಈಗಿರುವ  ಈ ನಾಲ್ವರ ಉಲ್ಲೇಖವಾಗಿದಿದ್ರೆ ಮಾತ್ರ..

ಹಾಗಾಗಿ ದಾಳಿಯನ್ನು ಮೂರ್ನಾಲ್ಕು ವರ್ಷಗಳ ಹಿಂದೆ ಹೇಮಂತರಾಜ್ ದಾಖಲಿಸಿದ್ದ ದೂರುಗಳನ್ನು ಆಧರಿಸಿ ನಡೆಸಲಾಗಿದೆ.ಹಿಂದಿದ್ದ ಕೆಎಎಸ್ ಗಳ ಶಾ,ಮೀಲಾತಿಯನ್ನು ಪತ್ತೆ ಮಾಡಿರುವ ಎಸಿಬಿ ಅಧಿಕಾರಿಗಳ ತಂಡ ನಾಳೆ ಒಂದು ದಿನ ಬಿಡುವು ಕೊಟ್ಟು,  ಸೋಮವಾರದಿಂದ ಬಿಡಿಎ ನಲ್ಲಿ ಡಿಎಸ್ ಗಳಾಗಿ ಕೆಲಸ ಮಾಡಿರೋ ಕೆಎಎಸ್ ಗಳ ಹೆಡೆಮುರಿ ಕಟ್ಟೊ ಕೆಲಸಕ್ಕೆ ಮುಂದಾಗಬಹುದೇನೋ..

Spread the love
Leave A Reply

Your email address will not be published.

Flash News