DOES CM REALLY HAVING GUTS TO TAKE ACTION AGAINST ENCHROCHERS….?! “ರಾಜಕಾಲುವೆ ಒತ್ತುವರಿ”ದಾರರ ಹೆಡೆ ಮುರಿ ಕಟ್ಟೋ ತಾಕತ್ತು ನಿಜಕ್ಕೂ ಬೊಮ್ಮಾಯಿ ಸರ್ಕಾರಕ್ಕಿದೆಯೇ..?! ಜನರ ಹಿಡಿಶಾಪ ತಪ್ಪಿಸಿಕೊಳ್ಳೊಕ್ಕೆ ಹಾಗಂದ್ರಾ..? ಅಥವಾ ಕಾಟಾಚಾರಕ್ಕೆ ಆ ಹೇಳಿಕೆ ಕೊಟ್ರಾ,.?!

"ಒತ್ತುವರಿ"ದಾರರ ಲೀಸ್ಟ್ ನಲ್ಲಿ ರಾಜಕಾರಣಿಗಳು-ಪ್ರಭಾವಿ ಬಿಲ್ಡರ್ಸ್ ಗಳಿರೋ ಸತ್ಯ ಸಿಎಂಗೆ ಗೊತ್ತಿಲ್ವಾ..? ಅವರನ್ನು ಟಚ್ ಮಾಡಲಿಕ್ಕೆ ಹೋದ್ರೆ ಏನಾಗಬಹುದೆನ್ನುವ ಅರಿವು ಅವರಿಗಿಲ್ವೇ..?

0

ಬೆಂಗಳೂರು: ಕಾಟಾಚಾರದ ನಗರ ಪ್ರದಕ್ಷಿಣೆಗೆ ಸೀಮಿತವಾಯ್ತಾ ಸಿಎಂ ಸಿಟಿ ರೌಂಡ್ಸ್..ರಾಜಕಾಲುವೆ ಒತ್ತುವರಿದಾರರಿಗೆ ಕೊಟ್ಟ ವಾರ್ನಿಂಗ್ ವೇಸ್ಟಾ.. ಒತ್ತುವರಿದಾರರಿಗೆ ವಾರ್ನ್ ನೀಡ್ತಿರೋ ಮೊದಲ ಸಿಎಮ್ಮೂ ಬಸವರಾಜ ಬೊಮ್ಮಾಯಿ  ಅವರಲ್ಲ.. ಒತ್ತುವರಿದಾರರ ಹಿನ್ನಲೆಯ ವಾಸ್ತವ ಗೊತ್ತಿಲ್ಲದಷ್ಟು ಮುಗ್ಧರೂ ಮುಖ್ಯಮಂತ್ರಿಗಳಲ್ಲ..ಅವರಿಗೆ ಎಲ್ಲವೂ ಗೊತ್ತಿದೆ..ಆದ್ರೂ ಮುಖ್ಯಮಂತ್ರಿ ಸ್ಥಾನದ ಹೊಣೆಗಾರಿಕೆ-ಬಾಧ್ಯಸ್ಥಿಕೆಯ ಚೌಕಟ್ಟಿನಲ್ಲಿ ರಾಜಕಾಲುವೆ ಒತ್ತುವರಿದಾರರಿಗೆ ಖಡಕ್ ವಾರ್ನ್ ಮಾಡಿದ್ದಾರೆ.ಆದ್ರೆ ಅವರ ಫಾರ್ಮೂಲವಾಗಲಿ,.ವಾರ್ನಿಂಗ್ ಆಗಲಿ ವರ್ಕೌಟ್ ಆಗೋ ಸಾಧ್ಯತೆನೂ ಕಡಿಮೆ ಎನ್ನೋದು ಕೂಡ ವಾಸ್ತವ.  

ಮುಖ್ಯಮಂತ್ರಿಬಸವರಾಜ ಬೊಮ್ಮಾಯಿ ಇವತ್ತು ಬೆಂಗಳೂರಿನಲ್ಲಿ ಮಳೆ ಹಾನಿಗೊಳಗಾದ ಪ್ರದೇಶಗಳತ್ತ ಹೆಜ್ಜೆ ಹಾಕಿ ಪರಿಸ್ಥಿತಿ ಅವಲೋಕಿಸಿದರು.ಪ್ರವಾಹದಿಂದ ಎಲ್ಲವನ್ನು ಕಳಕೊಂಡ ಅಪಾರ್ಟ್ಮೆಂಟ್ ನಿವಾಸಿಗಳು  ಬಿಬಿಎಂಪಿಗೆ ಹಿಡಿಶಾಪ ಹಾಕಿದ್ರು.ಅಧಿಕಾರಿಗಳಿಂದ ಘಟನೆ ಹಿನ್ನಲೆಯಲ್ಲಿ ಮಾಹಿತಿ ಪಡೆದ ಸಿಎಂ ಬೊಮ್ಮಾಯಿ ಅವರಿಗೆ  ಆ ಕ್ಷಣ ಮನವರಿಕೆ ಆಗಿದ್ದು  ರಾಜಕಾಲುವೆ ಒತ್ತುವರಿಯ ಎಫೆಕ್ಟ್.ಕೆಂಡಾಮಂಡಲವಾದಂತಾದ ಅವರು  ಒತ್ತುವರಿದಾರರ ವಿರುದ್ಧ ಕ್ರಮಕ್ಕೆ ಮುಂದಾಗುವ ಮಾತನ್ನಾಡಿದರು.ಅದು ಪ್ರಜ್ಞಾಪೂರ್ವಕವಾಗಿ ನಿರ್ದಾರವೋ ಅಥವಾ ನಿವಾಸಿಗಳ ಆಕ್ರೋಶ ತಣ್ಣನೆ ಮಾಡುವ ಐಡ್ಯಾನೋ ಗೊತ್ತಿಲ್ಲ..

 ರಾಜಕಾಲುವೆ ಒತ್ತುವರಿದಾರರ ವಿರುದ್ಧ ಕೆಂಡಾಮಂಡಲವಾದ ಮುಖ್ಯಮಂತ್ರಿಗಳಿಗೆ  ರಾಜಕಾಲುವೆ ಒತ್ತುವರಿ ಮಾಡಿರೋರು ಯಾರೆನ್ನುವ ಮಾಹಿತಿ ಇಲ್ವೇ ಎನ್ನೋದು ಬೆಂಗಳೂರಿಗರನ್ನು ಕಾಡುತ್ತಿರುವ ಮೂಲಭೂತ ಪ್ರಶ್ನೆ..ಏಕೆಂದ್ರೆ ಒತ್ತುವರಿದಾರರು ಯಾರು..ಅವರ ಹಿನ್ನಲೆ ಏನು..?ಅವರೆಷ್ಟು ಪ್ರಭಾವಿಗಳುಬಲಾಢ್ಯರು..ಅವರ ವಿರುದ್ದ ಕ್ರಮ ಕೈಗೊಳ್ಳೊಕ್ಕೆ ಹೋದರೆ ತಮ್ಮ ಕುರ್ಚಿಗೆ ಕಂಟಕ ತರುವಷ್ಟು ಕೆಪಾಸಿಟಿ ಅವರಿಗಿರುವ  ಸತ್ಯವೆಲ್ಲಾ ತಿಳಿಯದಷ್ಟು ಅವರು ಮುಗ್ಧರೇನಲ್ಲ..

 ಅಲ್ಲದೇ ಸಿಎಮ್ ಸ್ಥಾನದಲ್ಲಿ ನಿಂತು  ವಾರ್ನ್ ಮಾಡಿದಾಕ್ಷಣ ಒತ್ತುವರಿ ನಿಂತೋಗ್ ಬಿಡ್ತದಾ ಎನ್ನುವುದು ಕೂಡ ಅವರಿಗೆ ಗೊತ್ತು.. ಅವರು ಹೇಳಿದಾಕ್ಷಣ ಬಿಬಿಎಂಪಿ ಅದಿಕಾರಿಗಳು ಕ್ರಮ ಕೈಗೊಂಡ್ ಬಿಡ್ತಾರಾ..?ಒತ್ತುವರಿದಾರರಿಗೆ ಕಠಿಣಾತೀಕಠಿಣ ಶಿಕ್ಷೆ ಆಗೋಗ್ ಬಿಡ್ತದಾ.. ಹಾಗೊಂದು ನಿರೀಕ್ಷೆ ಮಾಡೋದೂ ಮೂರ್ಖತನವೇನೋ ಎನಿಸುತ್ತದೆ.

ಶಾಸಕ ಎ.ಟಿ ರಾಮಸ್ವಾಮಿ ಅವರು ಸದನ ಸಮಿತಿ ಅಧ್ಯಕ್ಷರಾಗಿದ್ದ ವೇಳೆ ಭೂ ಕಬಳಿಕೆದಾರರ ಕುರಿತಾಗಿ ಸಮಗ್ರ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದು ಇನ್ನೂ ಹಸಿರಾಗಿದೆ..ಆದ್ರೆ ವರದಿ ಹಿನ್ನಲೆಯಲ್ಲಿ ಆದ ಕ್ರಮಗಳೇನು ಎನ್ನುವುದನ್ನು ನೆನಪಿಸಿಕೊಂಡ್ರೆ..ಈ ಸರ್ಕಾರದ ಸ್ತಿತಿಯನ್ನು ಸಲೀಸಾಗಿ ಅರ್ಥೈಸಿಕೊಳ್ಳಬಹುದೇನೋ..
ಶಾಸಕ ಎ.ಟಿ ರಾಮಸ್ವಾಮಿ ಅವರು ಸದನ ಸಮಿತಿ ಅಧ್ಯಕ್ಷರಾಗಿದ್ದ ವೇಳೆ ಭೂ ಕಬಳಿಕೆದಾರರ ಕುರಿತಾಗಿ ಸಮಗ್ರ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದು ಇನ್ನೂ ಹಸಿರಾಗಿದೆ..ಆದ್ರೆ ವರದಿ ಹಿನ್ನಲೆಯಲ್ಲಿ ಆದ ಕ್ರಮಗಳೇನು ಎನ್ನುವುದನ್ನು ನೆನಪಿಸಿಕೊಂಡ್ರೆ..ಈ ಸರ್ಕಾರದ ಸ್ತಿತಿಯನ್ನು ಸಲೀಸಾಗಿ ಅರ್ಥೈಸಿಕೊಳ್ಳಬಹುದೇನೋ..

ನಿಮಗೆ ತಿಳಿದಿರಲಿ( ಇದು ಬಹುಷಃ ಸಿಎಂ ಬಸವರಾಜ ಬೊಮ್ಮಾಯಿ ಅವರ ಗಮನಕ್ಕು ಇರಬಹುದೇನೋ.) ಬೆಂಗಳೂರಿನಲ್ಲಿ ನಿರ್ಮಾಣವಾಗಿರೋ ಶೇ.75 ರಷ್ಟು ಕಟ್ಟಡಗಳೆಲ್ಲಾ ಅಕ್ರಮ ಎನ್ನುವುದು ಸರ್ವೆಯಿಂದಲೇ ಪ್ರೂವ್ ಆಗಿದೆ.ಆ ಪೈಕಿ ರಾಜಕಾಲುವೆ ಒತ್ತುವರಿ ಮಾಡಿದವರ ಪ್ರಮಾಣ ಶೇ.40ಕ್ಕಿಂತ ಹೆಚ್ಚಿದೆಯಂತೆ. ನಗರ ಯೋಜನಾ ವಿಭಾಗವೇ ಸಲ್ಲಿಸ್ತಾ ಬಂದಿರೋ ವರದಿಯಲ್ಲಿ ಈ ಆತಂಕಾರಿ ಅಂಶದ  ಉಲ್ಲೇಖವಿದೆಯಂತೆ.ಅಷ್ಟಾದರೂ ಒತ್ತುವರಿದಾರರ ವಿರುದ್ದ ಆಗಿರೋ ಕ್ರಮ ಬರೀ ಶೂನ್ಯ ಎನ್ನುವುದು ಬಿಬಿಎಂಪಿಯ ನಿವೃತ್ತ ನಗರ ಯೋಜನಾಧಿಕಾರಿಯವರ ಅಭಿಪ್ರಾಯ.

 ಒತ್ತುವರಿದಾರರ ಅಕ್ರಮ ಕಣ್ಣಿಗೆ ರಾಚುವಂತಿದ್ದರೂ ಏಕೆ ಕ್ರಮ ಜಾರಿಯಾಗುತ್ತಿಲ್ಲ..ಆ ವಿಷಯದಲ್ಲಿ ಗಂಭೀರವಾದ ಕ್ರಮಗಳೇಕೆ ಆಗುತ್ತಿಲ್ಲ ಎನ್ನುವುದನ್ನು ಗಮನಿಸಿದ್ರೆ ಒತ್ತುವರಿಯಲ್ಲಿ ರಾಜಕಾರಣಿಗಳದ್ದೇ ಸಿಂಹಪಾಲು ಇದೆ. ಅವರ ಒಡೆತನದಪಾಲುದಾರಿಕೆಯ ಕಟ್ಟಡಗಳೇ ಒತ್ತುವರಿ ಮಾಡಿರೋದು  ಹೆಚ್ಚು ಎನ್ನುವುದೇ ಮೊದಲ ಕಾರಣ.ಜತೆಗೆ ಅವರಿಗೆ ಅನೇಕ ಸಂದರ್ಭಗಳಲ್ಲಿ ಎಲ್ಲಾ ಅವಶ್ಯಕತೆಗಳನ್ನು ಪೂರೈಸುವ ಪ್ರಭಾವಿ ಬಿಲ್ಡರ್ ಗಳಿಂದಲೂ ರಾಜಕಾಲುವೆ ಒತ್ತುವರಿಯಾಗಿದೆ.ಅವರ ವಿರುದ್ದ ಕ್ರಮ ಕೈಗೊಳ್ಳಲು ಹೋದರೆ ಅವರೆಲ್ಲಾ ಸೇರಿಕೊಂಡು ಲಾಭಿ ಮೂಲಕ ದೊಡ್ಡವರ ಬುಡಕ್ಕೇನೆ ಬೆಂಕಿ ಇಡುವ ಸಾಧ್ಯತೆಗಳಿರುತ್ತವೆ.ಆ ಕಾರಣದಿಂದಲೇ ಒತ್ತುವರಿದಾರರ ವಿರುದ್ಧ ಕ್ರಮವೂ ಆಗೊಲ್ಲ..

ಸರ್ಕಾರಿ ಭೂಮಿಗಳ ಅತಿಕ್ರಮಣದ ಬಗ್ಗೆ ವರದಿ ಸಿದ್ಧಪಡಿಸುವ ವೇಳೆ,ಎ.ಟಿ ರಾಮಸ್ವಾಮಿ, ನಿವೃತ್ತ ಐಎಎಸ್ ಅಧಿಕಾರಿ ಬಾಲಸುಬ್ರಮಣ್ಯಂ,ಮಾಜಿ ಸಭಾಧ್ಯಕ್ಷ ಕೋಳಿವಾಡ ಅವರ ಸಮಿತಿಗಳು ಸಾಕಷ್ಟು ವರದಿಗಳನ್ನು ಸರ್ಕಾರಕ್ಕೆ ಕೊಟ್ಟಿಯಾಗಿದೆ.

ಆ ವರದಿಗಳಲ್ಲಿ ಕೆರೆ ಒತ್ತುವರಿ,ಸರ್ಕಾರಿ ಭೂಮಿ ಒತ್ತುವರಿ ಸೇರಿದಂತೆ ರಾಜಕಾಲುವೆ ಒತ್ತುವರಿದಾರರ ಮಾಹಿತಿಯನ್ನು ಸಮಗ್ರವಾಗಿ ಉಲ್ಲೇಖಿಸಿದ್ದರು.ಒತ್ತುವರಿದಾರರಲ್ಲಿ ಸಾಕಷ್ಟು ಪ್ರಭಾವಿಗಳು,ರಾಜಕಾರಣಿಗಳ ಪಾತ್ರ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಇರೋದನ್ನು ಉದಾಹರಿಸಿದ್ದರು.

ಆದ್ರೆ ಆದದ್ದೇನು..ವರದಿಯಲ್ಲಿನ ಶಿಫಾರಸ್ಸುಗಳನ್ನೇ ಜಾರಿಗೊಳಿಸುವ ಮನಸನ್ನು ಸರ್ಕಾರಗಳೇ ಮಾಡಲಿಲ್ಲ.ಅಂತದ್ದರಲ್ಲಿ ಅಂತದ್ದೊಂದು  ಧೈರ್ಯವನ್ನು ಬಸವರಾಜ ಬೊಮ್ಮಾಯಿ ಮಾಡುತ್ತಾರಾ..ಯಾಕೋ ಸಂದೇಹವೆನಿಸುತ್ತದೆ.ಒತ್ತುವರಿ ವಿಷಯದಲ್ಲಿ ಸರ್ಕಾರ ಒಂದಷ್ಟು ಗಂಭೀರವಾಗಿದೆ ಎನ್ನುವುದನ್ನು ತೋರಿಸಲು ಮುಖ್ಯಮಂತ್ರಿಗಳು ಕೊಟ್ಟ ಹೇಳಿಕೆ ಅದಷ್ಟೇ..ಅದನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ ಎಂಬ ಚರ್ಚೆ ಶುರುವಾಗಿರುವುದಂತೂ ಸತ್ಯ. 

Spread the love
Leave A Reply

Your email address will not be published.

Flash News