ACB RAID ON BBMP “FDC” MAAYANNA:ಹುದ್ದೆಯಲ್ಲಿ FDC:ಆದರೆ ಗಳಿಕೆ “50 ಕೋಟಿ”ಗಿಂತಲೂ ಹೆಚ್ಚು..?! ಇದು BBMP “ಮಾಯಣ್ಣ”ನ ಖರಾಮತ್ತು..?!

ಕಸಾಪ ಬೆಂಗಳೂರು ನಗರ ಜಿಲ್ಲೆ ಮಾಜಿ ನಗರಾಧ್ಯಕ್ಷನ ಮನೆಯಲ್ಲಿ ಸಿಕ್ತು ಅಪಾರ ಮೊತ್ತದ ಅಕ್ರಮ ಸಂಪಾದನೆ ಸಾಕ್ಷ್ಯ..!!

0

ಬೆಂಗಳೂರು:ಭ್ರಷ್ಟಾಚಾರ ನಿಗ್ರಹದಳ ಬೆಳ್ಳಂಬೆಳಗ್ಗೆ ನಡೆಸಿದ ರೇಡ್ ನಲ್ಲಿ ಸಿಕ್ಕಿಬಿದ್ದ ಮಿಖಗಳಲ್ಲಿ ಬೃಹತ್ ಬೆಂಗಳೂರು ಮಹಾನಗರಪಾಲಿಕೆಯ ದ್ವಿತೀಯ ದರ್ಜೆ ಸಹಾಯಕ ಮಾಯಣ್ಣ  ಕೂಡ ಒಬ್ಬರು.ಹುದ್ದೆಯಲ್ಲಿ ಕಡಿಮೆ ಸ್ಥಾನದಲ್ಲಿದ್ದರೂ ಅಕ್ರಮ ಆಸ್ತಿ ಗಳಿಕೆಯಲ್ಲಿ ಎಲ್ಲರಿಗಿಂತ ಭಾರೀ ಕುಳವಾಗಿ ಸಿಕ್ಕಾಕೊಂಡಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ರಸ್ತೆ ಮೂಲಭೂತ ಸೌಕರ್ಯ ವಿಭಾಗದಲ್ಲಿ ನೌಕರನಾಗಿ ರುವ ಮಾಯಣ್ಣ ಅಲಿಯಾಸ್ ಮಾಯಣ್ಣ ಗೌಡ ಮಾಡಿರುವ ಅಕ್ರಮ ಸಂಪಾದನೆಗೆ ಎಸಿಬಿ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ.ಒಂದು ಅಂದಾಜಿನ ಪ್ರಕಾರ ಮಾಯಣ್ಣನ ಅಕ್ರಮ ಸಂಪಾದನೆ 50 ಕೋಟಿಗಿಂತಲೂ ಹೆಚ್ಚು ಎನ್ನಲಾಗುತ್ತಿದೆ.

ಬಿಬಿಎಂಪಿಯ ಪ್ರಮುಖ ಇಲಾಖೆಗಳಲ್ಲೊಂದಾದ ರಸ್ತೆ ಮೂಲಭೂತ ಸೌಕರ್ಯ ವಿಭಾಗದಲ್ಲಿ 2009 ರಿಂದ ಮೊನ್ನೆ ಮೊನ್ನೆಯವರೆಗೂ  ಇಡೀ 198 ವಾರ್ಡ್ ಗಳಿಗೆ ಇದ್ದ ಏಕೈಕ ಎಫ್ ಡಿಎ ( ದ್ವಿತೀಯ ದರ್ಜೆ ಸಹಾಯಕ) ಎಂದ್ರೆ ಅದು ಮಾಯಣ್ಣ.ಸರಿಸುಮಾರು 11 ವರ್ಷಗಳ ಕಾಲ ಸುದೀರ್ಘವಾಗಿ ಸಾವಿರಾರು ಕೋಟಿ ಅನುದಾನದ ನಿರ್ವಹಣೆ ಮಾಡುತ್ತಿದ್ದ ಮಾಯಣ್ಣ ಮೇಲಾಧಿಕಾರಿಗಳು ಕೊಟ್ಟ ಹೊಣೆಗಾರಿಕೆಯನ್ನೇ ಮಿಸ್ಯೂಸ್ ಮಾಡಿಕೊಂಡಿದ್ದರ ಬಗ್ಗೆ ವ್ಯಾಪಕ ಅರೋಪಗಳಿವೆ.

198 ವಾರ್ಡ್ ಗಳಲ್ಲಿರುವ ಅಧಿಕಾರಿಗಳು, ಗುತ್ತಿಗೆದಾರರ ಜತೆ ಕಮಿಷನ್ ವ್ಯವಹಾರ ಮಾಡಿಕೊಂಡು ಅದರಿಂದಲೇ ಅದೆಷ್ಟೋ ಕೋಟಿಗಳನ್ನು ಗಳಿಸಿದ್ದರ ಬಗ್ಗೆ ಈ ಹಿಂದೆಯೇ ಪಾಲಿಕೆಯಲ್ಲಿ ದೊಡ್ಡ ಮಟ್ಟದ ಚರ್ಚೆಯಾಗಿತ್ತು.ಮಾಯಣ್ಣ ಅವರನ್ನು ವರ್ಗಾವಣೆ ಮಾಡುವಂತೆ ಸರ್ಕಾರದ ಮಟ್ಟದಲ್ಲಿಯೂ ದೊಡ್ಡ ಮಟ್ಟದ ಒತ್ತಡ ಸೃಷ್ಟಿಯಾಗಿತ್ತು.ನಗರಾಭಿವೃದ್ಧಿ ಇಲಾಖೆಯಲ್ಲಿರುವವರನ್ನೇ ಅಡ್ಜೆಸ್ಟ್ ಮೆಂಟ್ ಮಾಡಿಕೊಂಡು ವರ್ಗಾವಣೆಯನ್ನು ಕ್ಯಾನ್ಸಲ್ ಮಾಡಿಸಿಕೊಂಡು ಬಂದರೆನ್ನುವ ಆರೋಪ ಮಾಯಣ್ಣ ಮೇಲಿದೆ.ಇದು ಮಾಯಣ್ಣನ ಕೆಪಾಸಿಟಿ ಏನನ್ನುವುದನ್ನು ಪ್ರೂವ್ ಮಾಡಿತ್ತು.

ಅದಷ್ಟೇ ಅಲ್ಲ, ತನ್ನ ಸಂಬಂಧಿಕರನ್ನು ಬಿಬಿಎಂಪಿ ಕಚೇರಿಗೆ ಕರೆ ತಂದು ಅವರಿಂದ ಗೌಪ್ಯವಾಗಿ ಕೆಲಸ ಮಾಡಿಸುತ್ತಿದ್ದ ಅಕ್ರಮವನ್ನು ಮಾದ್ಯಮಗಳು ಹಿಂದೆಯೇ ಬಿತ್ತರಿಸಿದ್ದವು.ಆ ವಿಷಯದಲ್ಲಿ ಆತನ ಸಂಬಂಧಿಗಳೇ ಮಾಯಣ್ಣ ಸೂಚನೆ ಬಂದು ಕೆಲಸ ಮಾಡುತ್ತಿರುವುದಾಗಿಯೂ ಹೇಳಿದ್ದರು.ಇದರಿಂದ ಕೆಂಡಾಮಂಡಲವಾದ ಮಾಯಣ್ಣ ತನ್ನ ವಿರುದ್ಧ ಸುದ್ದಿ ಮಾಡಿದ ಸುದ್ದಿ ವಾಹಿನಿ ಮತ್ತು ವರದಿಗಾರನ ವಿರುದ್ಧವೇ ಕತ್ತಿ ಮಸಿಯುವ ಕೆಲಸ ಮಾಡಿದ್ದರೆನ್ನುವ ಮಾತಿದೆ.

ಎಸಿಬಿ ದಾಳಿ ವೇಳೆ ಮಾಯಣ್ಣ  ಹೇರೋಹಳ್ಳಿ,ಕನಕಪುರ, ಕತ್ರಿಗುಪ್ಪೆ ಸೇರಿದಂತೆ ಅನೇಕ ಕಡೆ ಮಾಡಿದ್ದಾರೆನ್ನಲಾಗುತ್ತಿರುವ ಮನೆಗಳು,ನಿವೇಶನಗಳ ದಾಖಲೆಗಳು ದೊರೆತಿವೆ ಎನ್ನಲಾಗುತ್ತಿದೆ.ಅದರೊಂದಿಗೆ ಅಪಾರ ಮೊತ್ತದ  ಹಣವೂ ಎಸಿಬಿ ತಂಡಕ್ಕೆ ಸಿಕ್ಕಿದೆ ಎನ್ನಲಾಗುತ್ತಿದೆ.ಅಕ್ರಮ ಆಸ್ತಿ ಸಂಪಾದನೆಗೆ ಪೂರಕವಾದ ದಾಖಲೆ ಒದಗಿಸಲು ಮಾಯಣ್ಣ ತಡಬಡಾಯಿಸುತ್ತಿದ್ದಾರೆನ್ನುವ ವರ್ತಮಾನ ಎಸಿಬಿ ಮೂಲಗಳಿಂದಲೇ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ದೊರೆತಿದೆ.

ಮಾಯಣ್ಣ ಕೇವಲ ಬಿಬಿಎಂಪಿಯಲ್ಲಿ ಅಷ್ಟೇ ಅಲ್ಲ, ಕನ್ನಡ ಸಾಹಿತ್ಯ ಪರಿಷತ್ ನಲ್ಲೂ ಸಾಕಷ್ಟು ಅಕ್ರಮ ಎಸಗಿರುವ ಬಗ್ಗೆ ಮಾತುಗಳಿವೆ.ನಗರಾಧ್ಯಕ್ಷರಾಗಿದ್ದ ವೇಳೆ ಪರಿಷತ್ ನ ಹೆಸರೇಳಿಕೊಂಡು ಅಕ್ರಮ ಎಸಗಿದ್ದಾರೆ.

ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ.ತಮ್ಮ ಪಟಾಲಂ ಕಟ್ಟಿಕೊಂಡು ಕನ್ನಡದ ಪ್ರಾತಿನಿಧಿಕ ಸಂಸ್ಥೆಯೊಳಗೆ ಜಾತಿ ರಾಜಕಾರಣ,ಗುಂಪುಗಾರಿಕೆ,ಲಾಭಿ ನಡೆಸಿದ್ದರೆನ್ನುವುದನ್ನು ಅವರನ್ನು ಹತ್ತಿರದಿಂದ ಕಂಡವರೇ ಹೇಳುತ್ತಾರೆ.

ಅಕ್ರಮ ಸಂಪಾದನೆ ಆರೋಪದ ಹಿನ್ನಲೆಯಲ್ಲಿ ಮಾಯಣ್ಣ ವಿರುದ್ದ ಆಯುಕ್ತರಿಗೆ ಬರೆಯಲಾಗಿದ್ದ ಪತ್ರದ ಪ್ರತಿ
ಅಕ್ರಮ ಸಂಪಾದನೆ ಆರೋಪದ ಹಿನ್ನಲೆಯಲ್ಲಿ ಮಾಯಣ್ಣ ವಿರುದ್ದ ಆಯುಕ್ತರಿಗೆ ಬರೆಯಲಾಗಿದ್ದ ಪತ್ರದ ಪ್ರತಿ

ಪರಿಷತ್ ಚುನಾವಣೆಯಲ್ಲಿ ಗೆಲ್ಲಲೇಬೇಕೆನ್ನುವ ಕಾರಣಕ್ಕೆ ಅಪಾರ ಪ್ರಮಾಣದ ಹಣವನ್ನು ಹಂಚಿದ್ದರು.ಇದೆಲ್ಲಾ ಪಾಲಿಕೆಯಲ್ಲಿ ದುಡಿದ ಬೇನಾಮಿ ಹಣ ಎನ್ನಲಾಗುತ್ತಿದೆ.ಅಲ್ಲೆಲ್ಲಾ ದುಡಿದ ಹಡಬೆ ಹಣವನ್ನು ಕಸಾಪದಲ್ಲಿ ತನ್ನ ಶಕ್ತಿ ಹೆಚ್ಚಿಸಿಕೊಳ್ಳೊಕ್ಕೆ ಬಳಸಿಕೊಳ್ಳುತ್ತಿದ್ದರೆನ್ನುವುದನ್ನು ಕಸಾಪದ ಬಹುತೇಕ ಮಂದಿ ಹೇಳಿಕೊಂಡು ತಿರುಗುತ್ತಿದ್ದಾರೆ.ಈ ಬಾರಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಿಂತಿದ್ದ ಮಾಯಣ್ಣ ಶತಗತಾಯ ಗೆಲ್ಲಲೇಬೇಕೆಂದು ಹಣಕೊಟ್ಟು ಸದಸ್ಯತ್ವ ಅಭಿಯಾನ ಮಾಡಿಸಿದ್ದರಂತೆ.

ಮತದಾರರಿಗೆ ಹಣದ ಆಮಿಷ ಒಡ್ಡಿದ್ದರಂತೆ.ಅನೇಕರು ಇದೇ ಒಳ್ಳೆಯ ಸಂದರ್ಭ ಎಂದುಕೊಂಡು ಮಾಯಣ್ಣರಿಂದ ಲಕ್ಷಾಂತರ ಹಣ ಪೀಕಿದ್ದಾರೆನ್ನುವ ಮಾತುಗಳಿವೆ.ಗೆಲ್ಲೊಕ್ಕೆ ಕೋಟ್ಯಾಂತರ ಹಣ ಖರ್ಚು ಮಾಡುತ್ತಿರುವುದಾಗಿ ಅವರಿವರ ಬಳಿ ಹೆಮ್ಮೆಯಿಂದಲೂ ಹೇಳಿಕೊಂಡಿದ್ದರಂತೆ.

ಆದರೆ ಅವರ ಬಳಿ ತಿಂದಿದ್ದನ್ನು ಬಿಟ್ಟರೆ ಅವರ ಬೆನ್ನಿಗೆ ನಿಂತು ಕೆಲಸ ಮಾಡಿದವರೇ ಕಡಿಮೆ ಎನ್ನುವ ಮಾತುಗಳು ಕಸಾಪ ದ ಆವರಣದೊಳಗೆ ಕೇಳಿ ಬರುತ್ತಿವೆ.

ಬಿಬಿಎಂಪಿಯಲ್ಲಿ ಒಬ್ಬ ಸಾಮಾನ್ಯ ನೌಕರನಾಗಿ ಕೆಲಸ ಮಾಡುತ್ತಿರುವ ಮಾಯಣ್ಣ ಕೆಲವೇ ವರ್ಷಗಳಲ್ಲಿ 50 ಕೋಟಿಗಿಂರಲೂ ದೊಡ್ಡ ಕುಳವಾಗಿ ಬೆಳೆಯುತ್ತಾನೆಂದರೆ ಅದರಿಂದೆ ಇರುವ ಗುಟ್ಟು ಏನನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

ಆದರೆ ಪಾಪಿಯ ಕೊಡ ತುಂಬಿದ ಮೇಲೆ ಲೆಕ್ಕ ಕೊಡಲೇಬೇಕೆನ್ನುವ ಮಾತಿನಂತೆ ಮಾಯಣ್ಣರ ಅಕ್ರಮ ಕೊನೆಗೂ ಬಯಲಾಗಿದೆ.ಎಸಿಬಿ ಮಾಯಣ್ಣ ಅವರ ಮನೆಯಲ್ಲಿ ಸಿಕ್ಕ ದಾಖಲೆಗಳನ್ನು ಇಟ್ಟುಕೊಂಡು ಡ್ರಿಲ್ ಮಾಡೊಕ್ಕೆ ಶುರುವಿಟ್ಟುಕೊಂಡಿದ್ದಾರಂತೆ.

Spread the love
Leave A Reply

Your email address will not be published.

Flash News