Breakinglock downMoreScrollTop NewsUncategorizedಕ್ರೈಮ್ /ಕೋರ್ಟ್ಜಿಲ್ಲೆಫೋಟೋ ಗ್ಯಾಲರಿಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC-KSRTC)ರಾಜಕೀಯರಾಜ್ಯ-ರಾಜಧಾನಿ

HIGHER OFFICERS TORUTURE.! KSRTC CONDUCTOR KASHINATH HANGED HIMSELF…-ಮೇಲಾಧಿಕಾರಿಗಳ ಕಿರುಕುಳಕ್ಕೆ ಮತ್ತೊಬ್ಬ ನಿಷ್ಪಾಪಿ ಸಾರಿಗೆ ಕಾರ್ಮಿಕ ಬಲಿ- ಸರ್ಕಾರ-ಆಡಳಿತ ಮಂಡಳಿ ಕಾರ್ಮಿಕ ವಿರೋಧಿ ಧೋರಣೆಗೆ ಇನ್ನೆಷ್ಟು ಬಲಿ ಬೇಕು..?

ಬೆಂಗಳೂರು/ಯಾದಗಿರಿ: ಮುಷ್ಕರದ ಸನ್ನಿವೇಶದಲ್ಲಿ ಪಾಲ್ಗೊಂಡ ತಪ್ಪಿಗೆ ಅಮಾನತ್ತಾದ-ವಜಾ ಆದ ಸಾರಿಗೆ  ಕಾರ್ಮಿಕರ ಗೋಳು ಕೇಳ ತೀರದಂತಾಗಿದೆ. ಕೆಲಸ ಕಳೆದುಕೊಂಡ ಕಾರ್ಮಿಕರ ಸಿಬ್ಬಂದಿಯ ಗೋಳು ಒಂದ್ ರೀತಿಯದ್ದಾದರೆ ಕೆಲಸಲ್ಲಿದ್ದುಕೊಂಡು ಮೇಲಾಧಿಕಾರಿಗಳ ಕಿರುಕುಳ ಅನುಭವಿಸುತ್ತಿರುವ ಕಾರ್ಮಿಕರ ಬವಣೆ ಮತ್ತೊಂದು ರೀತಿದು.

ದೇವರು ವರ ಕೊಟ್ರು ಪೂಜಾರಿ ಕೊಡೊಲ್ಲ ಎನ್ನುವಂತೆ ಡ್ಯೂಟಿ ನೀಡುವಂತೆ ಸರ್ಕಾರ ಹೇಳಿದ್ರೂ ಘಟಕದಲ್ಲಿರುವ ಅಧಿಕಾರಿಗಳು ಡ್ಯೂಟಿ ನೀಡುವ  ವಿಚಾರದಲ್ಲಿ  ಸಿಕ್ಕಾಪಟ್ಟೆ ತೊಂದರೆ ಕೊಡುತ್ತಿರುವುದು ಮಾಮೂಲಾಗಿ ಬಿಟ್ಟಿದೆ.ಇದರಿಂದ ಬೇಸತ್ತ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಳ್ಳೋದು ಕೂಡ ಕಾಮನ್ ಆಗೋಗಿದೆ.

ಯಾದಗಿರಿ ಜಿಲ್ಲೆಯ ಗುರುಮಠಕಲ್ ನಲ್ಲಿ ಆಗಿರೋದು ಅದೇ, ಕಾಶಿನಾಥ್  ಎನ್ನುವ ಚಾಲಕ-ಕಂ-ನಿರ್ವಾಹಕ ಯಾದಗಿರಿ ವಿಭಾಗ ಯಾದಗಿರಿ ಘಟಕದಲ್ಲಿ ಕೆಲಸ ಮಾಡುತ್ತಿದ್ದನೆನ್ನಲಾಗಿದೆ. ಡ್ಯೂಟಿ ಕೊಡುವ ವಿಚಾರದಲ್ಲಿ ಮೇಲಾಧಿಕಾರಿಗಳು ಸಿಕ್ಕಾಪಟ್ಟೆ ಕಿರುಕುಳ ನೀಡುತ್ತಿದ್ದುದ್ದರಿಂದ ಆತ ಅಕ್ಷರಶಃ ಬೇಸತ್ತಿದ್ದ ಎನ್ನಲಾಗಿದೆ.

ಅನೇಕ ಸನ್ನಿವೇಶಗಳಲ್ಲಿ ಕೆಲಸ ಕೊಡದೆ ಡಿಪೋ ಹೊರಗೆ ಕಾಯಿಸುವಂಥ ಕೆಲಸ ಮಾಡುತ್ತಿದ್ದ  ಮೇಲಾಧಿಕಾರಿಗಳ ಬಳಿ ಮನವಿ ಮಾಡಿಕೊಂಡರೂ ಆತನ ಮನವಿಗೆ ಕ್ಯಾರೆ ಎನ್ನದೆ ಕಿರುಕುಳ ಮುಂದುವರೆಸಿದ್ದರು ಎನ್ನಲಾಗಿದೆ. ಇದರಿಂದ ತೀವ್ರವಾಗಿ ಮನನೊಂದ ಕಾಶೀನಾಥ್, ತನ್ನ ರಾದ ಗುರುಮಠಕಲ್ ಗೆ ಬಂದು  ಇಂದು ಬೆಳಿಗ್ಗೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕುಟುಂಬದ ಮೂಲಗಳು ಹಾಗೂ ಆತನ ಜತೆ ಕೆಲಸ ಮಾಡುತ್ತಿದ್ದವರ ಆರೋಪದ ಪ್ರಕಾರ ಆತ್ಮಹತ್ಯೆಗೆ ಘಟಕದಲ್ಲಿ ಮೇಲಾಧಿಕಾರಿಗಳು  ಸರಿಯಾಗಿ  ಕೆಲಸ ನೀಡದೆ ಸತಾಯಿಸಿ ವಾಪಸ್ ಕಳಿಸುತ್ತಿದ್ದುದೇ ಕಾರಣ ಎನ್ನಲಾಗುತ್ತಿದೆ.ಮುಷ್ಕರ ನಡೆದಾಗಿನಿಂದ ಇಲ್ಲಿಯವರೆಗೆ ಈ ರೀತಿ ಹಲವಾರು ಕಿರುಕುಳದಿಂದ ಆತ್ಮಹತ್ಯೆಗಳು ನಡೆಯುತ್ತಿರುವುದು ದುರಾದೃಷ್ಟಕರ. ಹಾಗೂ ಸರ್ಕಾರ ಮತ್ತು ಆಡಳಿತ ಮಂಡಳಿಗಳ ಅಮಾನವೀಯ ಧೋರಣೆಗೆ ಹಿಡಿದ ಕೈ ಗನ್ನಡಿಯಂತಿದೆ.

Spread the love

Related Articles

Leave a Reply

Your email address will not be published.

Back to top button
Flash News