SENIOR KANNADA SUPPORTING ACTOR SHIVARAM CRITICAL..?! “ಜೀವನ್ಮರಣ”ಗಳ ಹೋರಾಟದಲ್ಲಿ ಹಿರಿಯ ನಟ ಶಿವರಾಂ….ಕ್ಷಣ ಕ್ಷಣಕ್ಕೂ ಕ್ಷೀಣಿಸುತ್ತಿರುವ “ಹಿರಿಯ ಚೇತನ”ದ ಆರೋಗ್ಯ..

ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಆಸ್ಪತ್ರೆಗೆ ದಾಖಲು-ಹಿರಿಯ ಚೇತನದ ಚೇತರಿಕೆಗೆ ಪೂಜೆ-ಅರಿಕೆ..

0

ಬೆಂಗಳೂರು:ಕನ್ನಡ ಚಿತ್ರರಂಗದ ಹಿರಿಯ ಹಾಗೂ ಸಂಭಾವಿತ ನಟ ಶಿವರಾಂ  ಸ್ತಿತಿ ಗಂಭೀರವಾಗಿದ್ದು ಜೀವನ್ಮರಣಗಳ ಹೋರಾಟ ನಡೆಸುತ್ತಿರುವ ಅಘಾತಕಾರಿ ಸುದ್ದಿ ಹೊರಬಿದ್ದಿದೆ.ಅಯ್ಯಪ್ಪಸ್ವಾಮಿಯ ಮಹಾನ್ ಭಕ್ತರಾಗಿದ್ದ ಶಿವರಾಂ ದೇವರ ಮನೆಯಲ್ಲಿ ಪೂಜೆ ಮಾಡುವಾಗ ಆಯತಪ್ಪಿ ಬಿದ್ದು ಅಸ್ವಸ್ಥರಾಗಿದ್ದರು.ಅವರನ್ನು ಈಗ ವಿದ್ಯಾಪೀಠ ಸರ್ಕಲ್ ನಲ್ಲಿರುವ  ಪ್ರಶಾಂತ ಆಸ್ಪತ್ರೆಗೆ ದಾಖಲಿಸಲಾಗಿದ್ದು,ಪರಿಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗ್ತಿದೆ.

ಮೆದುಳಿನಲ್ಲಿ ತೀವ್ರತರದ ರಕ್ತಸ್ರಾವಾಗಿರುವುದು ಅಪಾಯವನ್ನು ಮತ್ತಷ್ಟು ಹೆಚ್ಚಿಸಿದೆ.84 ವರ್ಷ ವಯಸ್ಸಾಗಿರುವುದರಿಂದ ಆಪರೇಷನ್ ಮಾಡುವುದು ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆ ವೈದ್ಯರಲ್ಲಿ ಮೂಡಿದೆ.ಇದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ವೈದ್ಯರ ನುರಿತ ತಂಡಗಳು ಶಿವರಾಂ ಅವರಿಗೆ ಚಿಕಿತ್ಸೆ ನೀಡುವಲ್ಲಿ ನಿರತವಾಗಿದೆ.ಆದರೂ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದರಿಂದ ಅಪಾಯ ಹೆಚ್ಚೆನ್ನುವ ಮಾಹಿತಿ ನೀಡಿದ್ದಾರೆ ಎಂದು ಶಿವರಾಂ ಪುತ್ರ ರವಿಶಂಕರ್ ಹೇಳಿದ್ದಾರೆ.

ಚಿತ್ರರಂಗದ ಹಿರಿಯ ಕೊಂಡಿ ಎಂದೆ ಕರೆಯಿಸಿಕೊಂಡಿರುವ ಶಿವರಾಂ ಅವರ ಆರೋಗ್ಯ ಕ್ಷಣ ಕ್ಷಣಕ್ಕೂ ಹದಗೆಡುತ್ತಿದ್ದು ವೈದ್ಯರು ಕೈ ಚೆಲ್ಲುವ ಸ್ತಿತಿ ತಲುಪಿದ್ದಾರೆ.ಹಾಗಾಗಿ ದೇವರೇ ಕಾಪಾಡಬೇಕು..ದೇವರಲ್ಲಿ ಅವರ ಆರೋಗ್ಯ ಹಾಗೂ ಪುನರ್ ಚೇತರಿಕೆಗೆ ಪ್ರಾರ್ಥಿಸಿ ಎಂದು ಕುಟುಂಬ ಅಪಾರ ಅಭಿಮಾನಿಗಳನ್ನು ಮನವಿ ಮಾಡಿಕೊಂಡಿದೆ.

ಶಿವರಾಂ ಅವರು ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ ಹರಡುತ್ತಿದ್ದಂತೆ ಅಪಾರ ಪ್ರಮಾಣದ ಅಭಿಮಾನಿಗಳು ಹಾಗೂ ಚಿತ್ರರಂಗದ ಅನೇಕ ಗಣ್ಯರು ಆಸ್ಪತ್ರೆಯತ್ತ ದೌಡಾಯಿಸಿ ವೈದ್ಯರ ಬಳಿ ಸಮಾಲೋಚನೆ ನಡೆಸುತ್ತಿದ್ದಾರೆ.ಕನ್ನಡ ಪ್ಲ್ಯಾಶ್ ನ್ಯೂಸ್ ಬಳಗ ಕೂಡ ಹಿರಿಯ ಚೇತನ ಶಿವರಾಂ ಚೇತರಿಕೆಗೆ ದೇವರಲ್ಲಿ ಪ್ರಾರ್ಥಿಸುತ್ತದೆ.

1938 ರಲ್ಲಿ ಆಗಿನ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಗಡಿಯಲ್ಲಿನ ಚೂಡಸಂದ್ರ ಹಳ್ಳಿಯಲ್ಲಿ ಜನಿಸಿದ ಶಿವರಾಂ ಕಳೆದ ರು ದಶಕಗಳಿಂದ  ನೂರಾರು ಕನ್ನಡ ಚಿತ್ರಗಳಲ್ಲಿ  ಅಭಿನಯಿಸಿದ್ದಾರೆ.ಹಾಸ್ಯನಟನಾಗಿ ತಮ್ಮ ನಟನಾ ಜೀವನ ಆರಂಭಿಸಿದವರು.ನಂತರ ನಟನೆ ಅಷ್ಟೇ ಅಲ್ಲ ನಿರ್ದೇಶಕನಾಗಿ,ನಿರ್ಮಾಪಕರಾಗಿ ಹೆಸರು ಮಾಡಿದವರು. ತನ್ನ ಸಹೋದರ ಎಸ್.ರಾಮನಾಥನ್ ರವರೊಂದಿಗೆ ಸೇರಿ ರಾಶಿ ಬ್ರದರ್ಸ್ ಎಂಬ ಸಂಸ್ಥೆ  ಹುಟ್ಟು ಹಾಕಿ ಹಲವಾರು ಚಿತ್ರಗಳನ್ನು ನಿರ್ಮಿಸಿದರು..ಇದರಲ್ಲಿ  bollyowood ಚಿತ್ರ ಕೂಡಾ ಸೇರಿತ್ತು.

ತನ್ನ ಪ್ರಾಥಮಿಕ ಶಿಕ್ಷಣ ಮುಗಿಸಿದ ನಂತರ, ಅವರು typewriting ಇನ್ಸ್ಟಿಟ್ಯೂಟ್ ನಡೆಸುತ್ತಿದ್ದ ತಮ್ಮ ಸೋದರನ ಜೊತೆಗೆ ನಗರದ ಬೆಂಗಳೂರಿಗೆ ತೆರಳಿದರು. ಗುಬ್ಬಿ ವೀರಣ್ಣ ಅವರ ನಾಟಕ ಪ್ರದರ್ಶನಗಳ ಪ್ರಭಾವಕ್ಕೆ ಒಳಗಾದರು, 1958ರಲ್ಲಿ ನಿರ್ದೇಶಕ ಕು. ರಾ. ಸೀತಾರಾಮಶಾಸ್ತ್ರಿ ಬಳಿ ಸಹಾಯಕರಾಗಿ ಸೇರಿಕೊಂಡರು. ಅನುಭವಿ ಛಾಯಾಗ್ರಾಹಕ ಬೊಮನ್ ಡಿ ಇರಾನಿ ಗೆ ಕ್ಯಾಮರಾ ಸಹಾಯಕರಾಗಿಯೂ ಕೆಲಸ ಮಾಡಿದರು. ಕೆ ಎಸ್ ಎಲ್ ಸ್ವಾಮಿ, ಗೀತಪ್ರಿಯ, ಸಿಂಗೀತಂ ಶ್ರೀನಿವಾಸರಾವ್ ಮತ್ತು ಪುಟ್ಟಣ್ಣ ಕಣಗಾಲ್ ರಂತಹ ಹಲವಾರು ಪ್ರಮುಖ ನಿರ್ದೇಶಕರಿಗೆ ಸಹಾಯಕರಾಗಿದ್ದರು .

1958 ರಿಂದ 1965 ರ ವರೆಗೆ ಸಹಾಯಕ ನಿರ್ದೇಶಕರಾಗಿ ದುಡಿದ ನಂತರ, ಅವರಿಗೆ ಕಲ್ಯಾಣ್ ಕುಮಾರ್ ನಟಿಸಿದ ಕು. ರಾ. ಸೀತಾರಾಮಶಾಸ್ತ್ರಿ ಅವರ ಬೆರೆತ ಜೀವ ಚಿತ್ರದಲ್ಲಿ ಪೋಷಕ ಪಾತ್ರದ ಮೂಲಕ ನಟನೆಗೆ ಬ್ರೆ ಕ್ ಸಿಕ್ಕಿತು. ಆಗಿನಿಂದ ಅವರು 2000 ದ ದಶಕದವರೆಗೆ ಹೆಚ್ಚೂ ಕಡಿಮೆ ಎಲ್ಲಾ ನಿರ್ದೇಶಕರ ನಿರ್ದೇಶನದಲ್ಲಿ ನಟಿಸಿದರು. ಚರಿತ್ರ ನಟರಾಗಿ ಅವರ ಅವಿಸ್ಮರಣೀಯ ಅಭಿನಯ ದ ಚಿತ್ರಗಳಲ್ಲಿ ಶರಪಂಜರ , ನಾಗರಹಾವು , ಶುಭಮಂಗಳ ಸೇರಿವೆ. ; ಇವೆಲ್ಲವೂ ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ ಚಿತ್ರಗಳು.

ಚಲಿಸುವ ಮೋಡಗಳು , ಶ್ರಾವಣ ಬಂತು , ಹಾಲು ಜೇನು , ಹೊಂಬಿಸಿಲು, ಹೊಸ ಬೆಳಕು, ಗುರು ಶಿಷ್ಯರು , ಸಿಂಹದಮರಿ ಸೈನ್ಯ , ಮಕ್ಕಳ ಸೈನ್ಯ ದಂಥ ಸೂಪರ್ ಹಿಟ್ ಚಲನಚಿತ್ರಗಳಲ್ಲಿ ನಟಿಸಿದ ಹೆಗ್ಗಳಿಕೆ ಅವರದು. ಡ್ರೈವರ್ ಹನುಮಂತು (1980) ಬರ ಮತ್ತು ತಾಯಿ ಸಾಹೇಬ, ಆಪ್ತಮಿತ್ರ ,ಹುಚ್ಚ ದಂತಹ ಯಶಸ್ವಿ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದರು . ಗಿರೀಶ್ ಕಾಸರವಳ್ಳಿ ನಿರ್ದೇಶನದ  ಗೃಹಭಂಗ ರವಿಕಿರಣ್ ನಿರ್ದೇಶಿಸಿದ ಬದುಕು ಧಾರಾವಾಹಿಯಲ್ಲೂ ಅಭಿನಯಿಸಿದ್ದರು.

ತನ್ನ ಸಹೋದರ ಎಸ್ ರಾಮನಾಥನ್ ಜತೆಗೂಡಿ “ರಾಶಿ ಬ್ರದರ್ಸ್” ಎಂಬ ಚಿತ್ರನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿ ಮತ್ತು ಗೆಜ್ಜೆಪೂಜೆ (1970), ಉಪಾಸನೆ(1974), ನಾನೊಬ್ಬ ಕಳ್ಳ (1979), ಡ್ರೈವರ್ ಹನುಮಂತು(1980) ಮತ್ತು ಬಹಳ ಚೆನ್ನಾಗಿದೆ (2001) ಗಳಂತಹ ಯಶಸ್ವೀ ಮತ್ತು ವಿಮ್ರ್ಶಕರ ಮೆಚ್ಚುಗೆ ಪಡೆದ ಚಿತ್ರಗಳನ್ನು ನಿರ್ಮಿಸಿದ್ದರು.

Spread the love
Leave A Reply

Your email address will not be published.

Flash News