ACTRESS AMULUYA PREGNENCY STATUS TROLL..?! ತೀವ್ರ TROLL ಆಯ್ತು,ಚೆಲುವಿನ ಚಿತ್ತಾರದ “ಐಶೂ” ಅಮೂಲ್ಯ ಪ್ರಗ್ನೆನ್ಸಿ ಸುದ್ದಿ….!? ಸಂಭ್ರಮಿಸಬೇಕಿದ್ದ ಕುಟುಂಬಕ್ಕೆ ಬೇಸರ-ತೀವ್ರ ಮುಜುಗರ…!!

ತರೇವಾರಿ ರೀತಿ ಟ್ರೋಲ್ ಆದ ಪ್ರಗ್ನೆನ್ಸಿ ಸ್ಟೇಟಸ್:ಇದೆಲ್ಲಾ ಬೇಕಿತ್ತಾ ಎಂದ ಅಭಿಮಾನಿಗಳಿಂದಲೇ ಟೀಕೆ-ಕಿಂಡಲ್..?!

0

ಬೆಂಗಳೂರು:ಯಾವ ಸುದ್ದಿನೂ ಇಷ್ಟೊಂದು ವಿವಾದಕ್ಕೆ ಗ್ರಾಸವಾಗಬಾರದು..ಯಾವ ವ್ಯಕ್ತಿಗೆ ಸಂಬಂಧಿಸಿದ ವ್ಯಕ್ತಿಗತ ಸಂತೋಷದ ವಿಷಯವೂ ಇಷ್ಟೊಂದು ಟೀಕೆ-ಚರ್ಚೆಗೆ ತುತ್ತಾಗಬಾರದು. ನಟಿ ಅಮೂಲ್ಯ ಅವರ ಕುಟುಂಬ ಹಾಗೂ ಅಭಿಮಾನಿಗಳು ಸಂಭ್ರಮಿಸಬೇಕಿದ್ದ ವಿಷಯವೊಂದು ರಾಜ್ಯಾದ್ಯಂತ ಟ್ರೋಲ್ ಆಗಿದ್ದು ವಿಪರ್ಯಾಸವೇ ಸರಿ.

ಚೆಲುವಿನ ಚಿತ್ತಾರದ ನಟಿ ಅಮೂಲ್ಯ ಪ್ರೆಗ್ನೆಂಟ್ ಆಗುತ್ತಿರುವ ಸಂಗತಿ ನಿಜಕ್ಕೂ ಸಂತಸದ ವಿಚಾರ.ಹೊಸ ಜೀವವೊಂದರ ಆಗಮನದ ನಿರೀಕ್ಷೆಯಲ್ಲಿರುವ ಕುಟುಂಬದ ಪಾಲಿಗಂತೂ ಇದು ಸಂಭ್ರಮಿಸುವಂತ ವಿಚಾರವೂ ಕೂಡ.ಆದ್ರೆ ಆ ವಿಷಯವನ್ನು ಮಾದ್ಯಮಗಳು ದೊಡ್ಡ ಬ್ರೇಕಿಂಗ್ ನ್ಯೂಸ್ ನಂತೆ ಬಿತ್ತರಿಸುತ್ತಿದ್ದಂತೆ ಖುಷಿ ಪಡಬೇಕಾದ ವಿಚಾರವೂ ಟೀಕೆ-ಚರ್ಚೆ ಕೇಂದ್ರವಾಗೋಯ್ತು.ಅಮೂಲ್ಯ ಸೇರಿದಂತೆ ಕುಟುಂಬದ ಸದಸ್ಯರನ್ನು ನಾನಾ ರೀತಿಯಲ್ಲಿ ಟ್ರೋಲ್ ಮಾಡುವ ಬೆಳವಣಿಗೆ ಶುರುವಾಗೋಯ್ತು.

ನಟಿ ಅಮೂಲ್ಯ ಗರ್ಭಣಿಯಾಗುತ್ತಿರುವ ಸಂಗತಿಯನ್ನು ಅಮೂಲ್ಯ ತಮ್ಮ nimmaamulya ಟ್ವಿಟರ್ ಅಕೌಂಟ್ ಮೂಲಕ we are not just 2 now,Due this summer 2022, ಸ್ಟೇಟಸ್ ಹಾಕ್ಕೊಂಡಿದ್ರು.ಇದು ಅಮೂಲ್ಯ ಅವರ ಕುಟುಂಬವಷ್ಟೇ ಅಲ್ಲ, ಪ್ರತಿಯೋರ್ವ ಅಭಿಮಾನಿಗೂ ಸಂತೋಷ ತರುವ ವಿಚಾರ.ಆದ್ರೆ ಆ ವಿಚಾರ ನಂತರ ವೈರಲ್ ಆಗಿದ್ದು ಮಾತ್ರ ಕುಟುಂಬದಲ್ಲಿ ಮನೆ ಮಾಡಿದ್ದ ಸಂಭ್ರಮ-ಸಂತೋಷವನ್ನೇ ಹಾಳು ಮಾಡಿಬಿಟ್ಟಿತೆನ್ನುವುದು ಅಮೂಲ್ಯ ಕುಟುಂಬದವರ ಬೇಸರದ ಮಾತು.

ಜವಾಬ್ದಾರಿಯುತವಾದ ಮಾದ್ಯಮಗಳು ತಮ್ಮ ಹೊಣೆ ಮರೆತಂತೆ ವರ್ತಿಸಿದ್ದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.ಅಮೂಲ್ಯ ಪ್ರಗ್ನೆಂಟ್ ಆಗಿದ್ದನ್ನೇ ಜಗತ್ತಿನ ಬಹುದೊಡ್ಡ ವಿದ್ಯಾಮಾನ ಎನ್ನುವಂತೆ ಬಿಂಬಿಸಿದ ಮಾದ್ಯಮಗಳು ಜನರಿಂದ ತೀವ್ರವಾಗಿ ಟ್ರೋಲ್ ಆದವು.

ಅಮೂಲ್ಯ ಪ್ರಗ್ನೆನ್ಸಿಯನ್ನು ಹೀಗೂ ಸಂಭ್ರಮಿಸ್ತವಾ ಎಂದು ಜನ ಆಡಿಕೊಂಡು ಮಾತನಾಡುವಂತಾಯಿತು. ಇದು ಕನ್ನಡ ಚಿತ್ರರಂಗಕ್ಕೆ ದೊಡ್ಡ ಸಂಭ್ರಮದ ಸುದ್ದಿ ಎನ್ನುವಂತೆ ಬಿಂಬಿಸಿದ್ದು ಸ್ವತಃ ಅಮೂಲ್ಯ-ಜಗದೀಶ್ ಹಾಗೂ ಅವರ ಅಪ್ಪ ರಾಮಚಂದ್ರ ಅವರಿಗೇನೆ ಬೇಸರ ಹಾಗೂ ಮುಜುಗರ ತರಿಸಿರಬಹುದೇನೊ..

ಈ ಸುದ್ದಿ ಪಸರ್ ಆಗುತ್ತಿದ್ದಂತೆ ಕೇಳಿಬಂದ ಟೀಕೆಗಳು-ಕಿಂಡಲ್ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗಿವೆ.

ಈ ಹಿನ್ನಲೆಯಲ್ಲಿ ಕೇಳಿ ಬಂದ ತರೇವಾರಿ ಕಾಮೆಂಟ್ ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ನೋಡಿ ಇಡೀ ಕುಟುಂಬ ಬೇಸರ ಪಟ್ಟುಕೊಂಡಿರಬಹುದೇನೋ..ಅದೆಲ್ಲಕ್ಕಿಂತ ಹೆಚ್ಚಾಗಿ ಸಂತಸದ ಸುದ್ದಿಗೆ ಜನರಿಂದ ವಿಡಂಬನೆಯ ಮಾತುಗಳನ್ನು ಕೇಳುವಂತ ಸ್ಥಿತಿ ನಮಗೆ ಬೇಕಿತ್ತಾ..? ಎಂದು ಬೈಯ್ದುಕೊಂಡಿರಬಹುದೇನೋ..ಜನರು ಕೇಳೋ ಪ್ರಶ್ನೆಗಳಿಗೆ ಉತ್ತರಿಸಿಯೇ ಅಮೂಲ್ಯ ಕುಟುಂಬ ಸುಸ್ತು ಹೊಡೆದಿದ್ದರೂ ಆಶ್ಚರ್ಯವಿಲ್ಲ.

ಅದೇನೇ ಆಗಲಿ, ತಾನು ಪ್ರಗ್ನೆಂಟ್ ಆಗಿರೋ ಸಂಭ್ರಮದ ಸುದ್ದಿಯನ್ನು ಯಾಕಾದ್ರೂ ಟ್ವಿಟರ್ ನಲ್ಲಿ ಹಾಕಿದ್ನೋ ಎಂದು ಸ್ವತಃ ಅಮೂಲ್ಯ ದಂಪತಿ ಕೈ ಕೈ ಹಿಸುಕಿಕೊಳ್ಳುವಂತಾಗಿರಬಹುದೇನೋ..ಅದೇನೇ ಆಗಲಿ,ಇಡೀ ಕುಟುಂಬ ಸಂಭ್ರಮಿಸಬೇಕಿದ್ದ ಸುದ್ದಿಯೊಂದು ಕೆಲವು ಕಾರಣಗಳಿಂದ ಮುಜುಗರ ಸೃಷ್ಟಿಸಿದ್ದು ಮಾತ್ರ ವಿಪರ್ಯಾಸ. 

Spread the love
Leave A Reply

Your email address will not be published.

Flash News