MLA MURDER SKETCH-KULLA DEVARAJ ARREST…ಇಂದು ಕುಳ್ಳ ದೇವರಾಜ್-ನಾಳೆ ಗೋಪಾಲಕೃಷ್ಣ…ವಿಚಾರಣೆಗೆ ಎಮ್ಮೆಲ್ಲೆ ವಿಶ್ವನಾಥ್ ಗೂ ಬರಬಹುದಾ ಬುಲಾವ್..?!

"MLA ಮರ್ಡರ್ ಸ್ಕೆಚ್" ಪ್ರಕರಣ-.ವಿಚಾರಣೆ ವೇಳೆ ಸ್ಪೋಟಕ ಮಾಹಿತಿ ಬಾಯಿಬಿಟ್ಟ ಕುಳ್ಳ ದೇವರಾಜ್..?!

0

ಬೆಂಗಳೂರು:ಸಧ್ಯಕ್ಕೆ ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಪ್ರಕರಣ ಎಂದರೆ ಅದು ಎಮ್ಮೆಲ್ಲೆ ಮರ್ಡರ್ ಸ್ಕೆಚ್ .ಪ್ರಕರಣದ ಸತ್ಯಾಸತ್ಯತೆ ಅರಿಯೊಕ್ಕೆ ಟೊಂಕ ಕಟ್ಟಿ ನಿಂತಿರುವ ಪೊಲೀಸರು ಒಬ್ಬೊಬ್ಬರನ್ನೇ ಖೆಡ್ಡಾಕ್ಕೆ ಬೀಳಿಸಿಕೊಳ್ಳೊಕ್ಕೆ  ಮುಂದಾಗಿದ್ದಾರೆ. ಅದರ ಭಾಗವಾಗಿ ಸುಪಾರಿ ಪಡೆದ ಆರೋಪ ಎದುರಿಸುತ್ತಿರುವ ದೇವರಾಜ್ ಅಲಿಯಾಸ್ ಕುಳ್ಳ ದೇವರಾಜ್ ಅರೆಸ್ಟ್.

ಹೌದು..ಯಲಹಂಕ ಬಿಜೆಪಿ ಶಾಸಕ,ಬಿಡಿಎ ಅಧ್ಯಕ್ಷ  ಎಸ್.ಆರ್ ವಿಶ್ವನಾಥ್ ಅವರ ಕೊಲೆಗೆ ಸ್ಕೆಚ್ ರೂಪಿಸಿದ್ದ ಪ್ರಕರಣ ಸಂಬಂಧ ಸುಪಾರಿ ಪಡೆದಿದ್ದ ಎನ್ನಲಾದ ಕುಳ್ಳ ದೇವರಾಜ್ ನನ್ನು ಇಂದು  ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಕೈಗೆತ್ತಿಕೊಂಡಿದ್ದಾರೆ.

ಘಟನೆ ನಡೆದ ಕೆಲ ಕ್ಷಣಗಳಲ್ಲೇ ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಬೆಂಗಳೂರು ಗ್ರಾಮಾಂತರ ಎಸ್ಪಿ ವಂಶಿಕೃಷ್ಣ ಘಟನೆ ನಡೆದ ಸ್ಥಳದ ವ್ಯಾಪ್ತಿಯ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಠಿಕಾಣಿ ಹೂಡಿ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಕಾರ್ಯಾಚರಣೆ ಭಾಗವಾಗಿ ಕುಳ್ಳ ದೇವರಾಜ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಕರೆದೊಯ್ಯಲಾಯಿತು.ನಂತರ ಬೆಂಗಳೂರಿನ ACJM-2ನೇ  ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.

ಕುಳ್ಳ ದೇವರಾಜನನ್ನು ವಶಕ್ಕೆ ಪಡೆದ ನಂತರ ತೀವ್ರ ವಿಚಾರಣೆ ನಡೆಸಿದ  ಎಸ್ ಪಿ, ಎ.ಎಸ್.ಪಿ ಮತ್ತು ಡಿವೈಎಸ್ ಪಿ  ಕುಳ್ಳ ದೇವರಾಜ್ ಅವನಿಂದ ವಶಕ್ಕೆ ಪಡೆದ ಪೆನ್ ಡ್ರೈವ್ ನಲ್ಲಿ ಇರುವ ವಿಚಾರಗಳ ಬಗ್ಗೆ ಹೇಳಿಕೆ ಪಡೆದರು.ಕುಳ್ಳ ದೇವರಾಜುಗೆ ಪ್ರತಿಯೊಂದು ದೃಶ್ಯ ತೋರಿಸಿ ಹೇಳಿಕೆ ಪಡೆದರಲ್ಲದೇ ವಿಡಿಯೋದಲ್ಲಿರುವ ಮಾತುಕತೆಯ ಹಿಂದಿನ ಸತ್ಯಾಸತ್ಯತೆ ಬಗ್ಗೆಯೂ ಪರಿಶೀಲನೆ ನಡೆಸುತ್ತಿದ್ದಾರೆ.

ಪ್ರತಿ ದೃಶ್ಯ ಘಟನೆ ಚಿತ್ರೀಕರಿಸಿದ ಸಮಯದ ಮಾಹಿತಿ ಹಾಗೂ ವಿಚಾರಣೆಯ ಪ್ರತಿ ಹೇಳಿಕೆಯ ಎಲ್ಲಾ  ವಿಡಿಯೋ ರೆಕಾರ್ಡ್ ಮಾಡಲಾಗಿದೆ.

ಇವತ್ತು ಕುಳ್ಳ ದೇವರಾಜ್ ನನ್ನು ಅರೆಸ್ಟ್ ಮಾಡಿರುವ ಪೊಲೀಸರು ನಾಳೆ ಸ್ಕೆಚ್ ರೂವಾರಿ ಕೈ ಪಕ್ಷದ ಪರಾಜಿತ ಅಭ್ಯರ್ಥಿ ಗೋಪಾಲಕೃಷ್ಣ ನನ್ನು ವಶಕ್ಕೆ ಪಡೆದು  ವಿಚಾರಣೆ ನಡೆಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

ತನಿಖೆಯ ಭಾಗವಾಗಿ ಎಸ್ಪಿ ವಂಶಿಕೃಷ್ಣ  ಶಾಸಕ ಎಸ್.ಆರ್ ವಿಶ್ವನಾಥ್ ಅವರನ್ನು ವಿಚಾರಣೆಗೆ ಕರೆಯಿಸುವ ಸಾಧ್ಯತೆಗಳಿವೆ. ಇದೆಲ್ಲದರ ನಡುವೆ ಘಟನೆ ಹಿಂದಿನ ಸಾಕಷ್ಟು ಸಂಗತಿಗಳು ತೀವ್ರ ಕೋಲಾಹಲವನ್ನೇ ಸೃಷ್ಟಿಸಿವೆ.

ಒಟ್ಟಾರೆ ಘಟನೆಯ ರೂವಾರಿ ಯಾರು..ಯಾವ ಕಾರಣಕ್ಕೆ ಇದೆಲ್ಲಾ ನಡೆಯಿತು..ಇದರ ಹಿಂದಿರುವ ಕಾರಣಗಳೇನು ಎನ್ನುವುದರ ಬಗ್ಗೆಯೂ ಸಾಕಷ್ಟು ಮಾಹಿತಿ ಕಲೆ ಹಾಕುವಲ್ಲಿ ಪೊಲೀಸರು ನಿರತವಾಗಿದ್ದಾರೆ. ಅದೇನೇ ಆಗಲಿ ಎಮ್ಮೆಲ್ಲೆ ಮರ್ಡರ್ ಸ್ಕೆಚ್ ಮಿಸ್ಟರಿ ಯಾರ್ಯಾರ ಪಾಲಿಗೆ ಉರುಳಾಗುತ್ತೋ ಕಾದು ನೋಡಬೇಕಿದೆ.

Spread the love
Leave A Reply

Your email address will not be published.

Flash News