DANGEROUS…OMRICON FIND AND CONFIRM…..ಭಾರತವನ್ನು ಪ್ರವೇಶಿಸಿಯೇ ಬಿಡ್ತು ಹೆಮ್ಮಾರಿ “ಓಮ್ರಿಕಾನ್”..ರೂಪಾಂತರಿಗೆ ಕರ್ನಾಟಕವೇ ಹೆಬ್ಬಾಗಿಲು..

ದಕ್ಷಿಣ ಆಫ್ರಿಕಾ ಮೂಲದವನಿಂದ ಇಬ್ಬರು ವೈದ್ಯರಿಗೆ ಸೋಂಕು...44 ಸಂಪರ್ಕಿತರಿಗೆ ಕ್ವಾರಂಟೈನ್..ಇನ್ನಷ್ಟು ಜನರಿಗೆ ಸೋಂಕಿನ ಸಾಧ್ಯತೆ..?!

0

ಬೆಂಗಳೂರು:ಯಾವ ಆತಂಕಕ್ಕೆ ಭಾರತ ಸಿಲುಕಿತ್ತೋ ಅದು ದೃಢಪಟ್ಟಿಯೇ ಬಿಟ್ಟಿದೆ.ಭಾರತವನ್ನು ಕೊನೆಗೂ ಓಮಿಕ್ರಾನ್ ರೂಪಾಂತರಿ ಪ್ರವೇಶಿಸಿ ಬಿಟ್ಟಿದೆ.ಕೇಂದ್ರ ಆರೋಗ್ಯ ಇಲಾಖೆಯೇ  ಸೋಂಕನ್ನು ದೃಢಪಡಿಸಿದೆ. ದುರಂತದ ಸಂಗತಿ ಏನೆಂದ್ರೆ ಓಮಿಕ್ರಾನ್ ಪ್ರವೇಶಕ್ಕೆ ಕರ್ನಾಟಕ,ಅದರಲ್ಲೂ ಬೆಂಗಳೂರು ಹೆಬ್ಬಾಗಿಲೆನ್ನುವುದು.ತಕ್ಷಣಕ್ಕೆ ಅಲರ್ಟ್ ಆಗಿರುವ ಸರ್ಕಾರ, ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಪರಿಸ್ತಿತಿಯನ್ನು ಎದುರಿಸೊಕ್ಕೆ ಸಮರೋಪಾದಿಯಲ್ಲಿ ತಮ್ಮನ್ನು ಅಣಿಗೊಳಿಸಿಕೊಳ್ಳೋದ್ರಲ್ಲಿ ನಿರತವಾಗಿವೆ.

ಓಮಿಕ್ರಾನ್ ವೈರಸ್ ಕಾಣಿಸಿಕೊಂಡಿದೆ ಎನ್ನುವ ಇಷ್ಟು ದಿನಗಳ ಆತಂಕ ಕೊನೆಗೂ ದೃಢಪಟ್ಟಿದೆ. 66 ವರ್ಷ,44 ವರ್ಷದ ಇಬ್ಬರಲ್ಲಿ ಒಮಿಕ್ರಾನ್ ವೈರಸ್ ಇರೋದು ಪತ್ತೆಯಾಗಿದೆ.ಆಶ್ಚರ್ಯ ಎಂದ್ರೆ ಇಬ್ಬರು ವಿದೇಶದಿಂದ ಸೋಂಕನ್ನು ಹರಡಿಸಿಕೊಂಡು ಬಂದವರ ಸಂರ್ಪಕದಿಂದ ಸೋಂಕಿಗೆ ತುತ್ತಾಗಿದ್ದಾರಂತೆ. ಅವರ ಮೂಲವನ್ನು ಬಸವನಗುಡಿ ಹಾಗೂ ಕೋಣನಕುಂಟೆ ಎನ್ನಲಾಗುತ್ತಿದೆ. .ನವೆಂಬರ್ 19 ರಿಂದ 3 ದಿನ ಖಾಸಗಿ ಹೊಟೇಲ್ ನಲ್ಲಿ ನಡೆದಿದ್ದ ಕಾನ್ಫರೆನ್ಸ್ ನಲ್ಲಿ ಅವರು ಭಾಗಿಯಾಗಿದ್ದರು ಎನ್ನಲಾಗಿದೆ.ಸೋಂಕಿತರಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಖಾಸಗಿ ಹೊಟೇಲ್ ನಲ್ಲಿ ನ. 19 ರಂದು ನಡೆದಿದ್ದ  ಕಾನ್ಫ್ರರೆನ್ಸ್ನಲ್ಲಿ ಸೋಂಕಿಗೆ ತುತ್ತಾಗಿದ್ದರು ಎನ್ನಲಾಗಿರೋ ದಕ್ಷಿಣ ಆಫ್ರಿಕಾದಿಂದ ಬಂದವರೊಬ್ಬರು ಭಾಗಿಯಾಗಿದ್ದರಂತೆ.ಅದೇ ಸೋಂಕಿನ ಮೂಲ ಎನ್ನಲಾಗ್ತಿದೆ.ಸೋಂಕು ದೃಢಪಡುತ್ತಿದ್ದಂತೆ  ಕಾನ್ಫ್ರರೆನ್ಸ್ ನಲ್ಲಿ ಭಾಗವಹಿಸಿದ್ದ 40 ಮಂದಿಗೆ ಕ್ವಾರಂಟೈನ್ ಮಾಡಲಾಗಿದೆ. ಇನ್ನೂ ಮೂವರಿಗೆ ಸೋಂಕಿನ ಲಕ್ಷಣಗಳು ಕಂಡು ಬರುತ್ತಿವೆ.ಅಂದ್ಹಾಗೆ ದಕ್ಷಿಣ ಆಫ್ರಿಕಾದಲ್ಲಿ ಮೊದಲು ಕಂಡು ಬಂದಿದ್ದ  ರೂಪಾಂತರಿ ಒಮಿಕ್ರಾನ್ ಇಡೀ ವಿಶ್ವವನ್ನೇ ಆವರಿಸುತ್ತಿದೆ. ಈಗಾಗಲೇ 11 ರಾಷ್ಟ್ರಗಳಲ್ಲಿ ಹರಡಿಕೊಂಡಿದೆ. 62 ಬಗೆಗಳಲ್ಲಿ ರೂಪಾಂತರಗೊಳ್ಳುವ ಈ ವೈರಸ್ ನಿಂದಾಗಿ  ದಕ್ಷಿಣ ಆಫ್ರಿಕಾ ಜತೆ ವಿಶ್ವರಾಷ್ಟ್ರಗಳ ವೈಮಾನಿಕ ಸಂಪರ್ಕ ಬಂದ್ ಆಗಿದೆ. ಡಿಸೆಂಬರ್ 15 ರಿಂದ ಅಂತಾರಾಷ್ಟ್ರೀಯ ವಿಮಾನಯಾನ ಬಂದ್ ಮಾಡಲಾಗಿದೆ.

ರೂಪಾಂತರಿ ಒಮಿಕ್ರಾನ್ ತಡೆಗೆ ಭಾರತದಲ್ಲಿ ಕಠಿಣ ಕ್ರಮ ಜಾರಿ ಮಾಡಲಾಗುತ್ತಿದೆ. ಸಾರ್ವಜನಿಕ ಸಭೆ,ಸಮಾರಂಭಗಳನ್ನು ರದ್ದು ಮಾಡಲು ಸೂಚನೆ ನೀಡಲಾಗಿದೆ.ಕೊರೊನಾ 2ನೇ ಅಲೆಯ ಶಾಕ್ ನಿಂದ ಚೇತರಿಸಿಕೊಂಡಿಲ್ಲದ ಸನ್ನಿವೇಶದಲ್ಲೇ  ಒಮಿಕ್ರಾನ್ ರೂಪದಲ್ಲಿ ಕೊರೊನಾ 3ನೇ ಅಲೆ ಎದ್ದೇಳುವ ಆತಂಕ ಸೃಷ್ಟಿಯಾಗಿದೆ. ಆದರೆ ಎರಡು ಡೋಸ್ ವ್ಯಾಕ್ಸಿನ್ ಪಡಯುವ ಮೂಲಕ ಒಮಿಕ್ರಾನ್ ತಡೆಗಟ್ಟಬಹುದು.2 ಡೋಸ್ ವ್ಯಾಕ್ಸಿನ್ ನಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಳವಾಗುತ್ತೆ.ಈಗಾಗಲೇ  100 ಕೋಟಿ  ಡೋಸ್ ವ್ಯಾಕ್ಸಿನ್ ನೀಡಿ ದಾಖಲೆ ಮಾಡಿರುವ ಭಾರತಕ್ಕೆ ಇದರಿಂದ ಅಪಾಯ ಕಡಿಮೆ ಎನ್ನಲಾಗುತ್ತಿದೆ.

18 ಮೀರಿದ ಶೇ.98 ರಷ್ಟು ಮಂದಿ ಈಗಾಗಲೇ ವ್ಯಾಕ್ಸಿನ್ ಪಡೆದಿದ್ದಾರೆ 2ನೇ ಡೋಸ್ ವ್ಯಾಕ್ಸಿನ್ ಪಡೆದವರ ಸಂಖ್ಯೆ ಶೇ.50ನ್ನೂ ದಾಟಿಲ್ಲ.ಮಕ್ಕಳಿಗೂ ವ್ಯಾಕ್ಸಿನ್ ನೀಡುವ ಬಗ್ಗೆ ಆರೋಗ್ಯ ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ. 3ನೇ ಬೂಸ್ಟರ್ ಡೋಸ್ ವ್ಯಾಕ್ಸಿನ್ ಕೊಡುವ ಬಗ್ಗೆ ಗಂಭೀರ ಚಿಂತನೆ ನಡೆದಿದೆಯಂತೆ.ಆದರೆ ಗ್ರಾಮೀಣ ಭಾಗದ ಜನರಲ್ಲಿ ಇನ್ನೂ ವ್ಯಾಕ್ಸಿನ್ ಭಯ ದೂರವಾಗಿಲ್ಲ. ಇಂಜೆಕ್ಷನ್ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಮನೆ ಬಾಗಲಿಗೆ ತೆರಳಿ ಲಸಿಕೆ ನೀಡಲು ಆರೋಗ್ಯ ಸಿಬ್ಬಂದಿ ಸಾಹಸ ಪಡಬೇಕಾಗುತ್ತಿದೆ.

ಹಾಗೆಂದು  ಒಮಿಕ್ರಾನ್ ಸೋಂಕಿನ ಬಗ್ಗೆ ಭಯಬೇಡ,ಬದಲಿಗೆ ಮುನ್ನೆಚರಿಕೆ ಇರಲಿ ಎಂದು ವೈದ್ಯರು ಹೇಳುತ್ತಿದ್ದಾರೆ. ಒಮಿಕ್ರಾನ್ ವೇಗವಾಗಿ ಹರಡಬಹುದು  ಆದರೆ ಅದರ ಸ್ವಭಾವ  ಸೌಮ್ಯವಾದುದು. ವ್ಯಾಕ್ಸಿನ್ ಪಡೆದುಕೊಂಡಿರುವವರಿಗೆ ಹೆಚ್ಚಾಗಿ ಜೀವಕ್ಕೆ ಅಪಾಯವಿರುವುದಿಲ್ಲ. ಒಮಿಕ್ರಾನ್ ನಿಯಂತ್ರಣಕ್ಕೆ ಸ್ಯಾನಿಟೈಸೇಷನ್,ಸೋಶಿಯಲ್ ಡಿಸ್ಟೇನ್ಸ್  ಹಾಗೂ ಮಾಸ್ಕ್ ಧಾರಣೆಯೇ ಸೂಕ್ತ ಪರಿಹಾರ ಎಂದು ತಿಳಿಸಿದ್ದಾರೆ. ಹಾಗಾಗಿ ಭಯಬೇಡ..ಜಾಗೃತಿ ಇರಲಿ ಎನ್ನುವುದು  ಕನ್ನಡ ಫ್ಲ್ಯಾಶ್ ನ್ಯೂಸ್ ಬಳಗದ ಕಳಕಳಿ ಮತ್ತು ಆಶಯ ಕೂಡ.

Spread the love
Leave A Reply

Your email address will not be published.

Flash News