BreakingMoreScrollTop NewsUncategorizedಫೋಟೋ ಗ್ಯಾಲರಿರಾಜಕೀಯರಾಜ್ಯ-ರಾಜಧಾನಿ

TUG OF WAR IN BANGLORE UNIVERSITY: BETWEEN VICE CHANCELOR-REGISTRAR: ಬೆಂಗಳೂರು ವಿವಿಯಲ್ಲಿ “ಅಧಿಕಾರ ಹಸ್ತಾಂತರ” ಹೈ ಡ್ರಾಮಾ..!- ಕುಲಪತಿ ವಿರುದ್ಧವೇ ಪೊಲೀಸ್ ಠಾಣೆ ಮೆಟ್ಟಿಲೇರಿದ ಕುಲಸಚಿವೆ….ಪ್ರೊ.ವೇಣುಗೋಪಾಲ್ ವಿರುದ್ಧಅದ್ಯಾಪಕ-ವಿದ್ಯಾರ್ಥಿ ಸಮೂಹ ಕೆಂಡಾಮಂಡಲ..?!

ಬೆಂಗಳೂರು: ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆ-ಅಭ್ಯುದಯದಂಥ ವಿಚಾರಗಳಿಗೆ ಸುದ್ದಿಯಾಗಬೇಕಿದ್ದ ಬೆಂಗಳೂರು ವಿವಿ ಮತ್ತೊಂದು ಕೆಟ್ಟ ಕಾರಣಕ್ಕೆ ಸುದ್ದಿಯ ಲ್ಲಿದೆ.ಆಡಳಿತ ವ್ಯವಸ್ಥೆ- ವಿದ್ಯಾರ್ಥಿಗಳ ಟೀಕೆಗೆ ತುತ್ತಾಗಿದೆ.ಅಧಿಕಾರ ವಹಿಸಿಕೊಂಡ ಮೇಲೆ ಶೈಕ್ಷಣಿಕವಾಗಿ ಸಾಕಷ್ಟು ಅಮೂಲಾಗ್ರ ಬದಲಾವಣೆಗೆ ಕಾರಣವಾಗಿದ್ದ ಕುಲಸಚಿವೆ(ADMIN) ಕೆ.ಜ್ಯೋತಿ ಅವರನ್ನು ತುಂಬಾ ಕೆಟ್ಟದಾಗಿ ನಡೆಸಿಕೊಂಡಿರುವ ವಿಚಾರ ಇದೀಗ ಪೊಲೀಸ್ ಠಾಣೆ ಮೆಟ್ಟಿಲನ್ನೇರಿದೆ.ನೂತನ ರಿಜಿಸ್ಟ್ರಾರ್ ಆಗಿ ನೇಮಕಗೊಂಡಿರುವ ಪ್ರೊ.ಕೊಟ್ರೇಶ್, ಶಿಷ್ಟಾಚಾರ ಮೀರಿ ಜ್ಯೋತಿ ಅವರ ಅಧಿಕಾರ ವಹಿಸಿಕೊಳ್ಳೊಕ್ಕೆ ಮುಂದಾಗಿದ್ದಾರೆನ್ನುವ ಆರೋಪ ಕೋಲಾಹಲಕ್ಕೆ ಕಾರಣವಾಗಿದೆ.

ನಿಷ್ಠೆ-ಪ್ರಾಮಾಣಿಕತೆ-ದಕ್ಷತೆಗೆ ಹೆಸರಾಗಿದ್ದ ಜ್ಯೋತಿ ಅವರಂಥ ರಿಜಿಸ್ಟ್ರಾರ್ ಅವರಿಗೆ ಇಂತದ್ದೊಂದು ಅವಮಾನಕಾರಿ ನಿರ್ಗಮನ ನೀಡುವಂಥ ಹೀನಮನಸ್ಥಿತಿಗೆ ಆಡಳಿತ ವ್ಯವಸ್ಥೆ ಮುಂದಾಯ್ತಲ್ಲ ಎನ್ನುವ ಆಕ್ರೋಶ ನೌಕರ ಹಾಗೂ ವಿದ್ಯಾರ್ಥಿ ಸಮುದಾಯದಲ್ಲಿ ಮೂಡಿದೆ.ಜ್ಯೋತಿ ಅವರನ್ನೇ ಮುಂದುವರೆಸಬೇಕು,ಅಥವಾ ಸರ್ಕಾರದಿಂದ ಅಧೀಕೃತವಾಗಿ ಅವರನ್ನು ವರ್ಗಾವಣೆ ಮಾಡಿರುವ,ಅವರ ಸ್ಥಾನಕ್ಕೆ ಕೊಟ್ರೇಶ್ ಆಗಮಿಸುತ್ತಿರುವ ವಿಚಾರವನ್ನು ಸೌಜನ್ಯಕ್ಕೂ ಅವರ  ಗಮನಕ್ಕೆ ತಾರದೆ ಜ್ಯೋತಿ ಅವರ ಸ್ಥಾನದಲ್ಲಿ ಪ್ರತಿಷ್ಟಾಪನೆ ಮಾಡುವಂತದ್ದು ಯಾವ ನ್ಯಾಯ..ಬಿಜೆಪಿ ಸರ್ಕಾರ ಇಷ್ಟೊಂದು ಅಮಾನವೀಯ-ಸಂವೇದನಾರಹಿತವಾಯ್ತೇ ಎನ್ನುವ ಪ್ರಶ್ನೆ ಕ್ಯಾಂಪಸ್ ನಲ್ಲಿ ಪ್ರತಿಧ್ವನಿಸತೊಡಗಿದೆ.

ಹಾಲಿ ರಿಜಿಸ್ಟ್ರಾರ್ ಆಗಿರುವ ಕೆ.ಜ್ಯೋತಿ ಸ್ಥಾನಕ್ಕೆ ನವೆಂಬರ್ 26 ರಂದೇ ಸರ್ಕಾರ ಕರ್ನಾಟಕ ಸಂಸ್ಕ್ರತಿ ವಿವಿಯ ಕುಲಸಚಿವರಾಗಿದ್ದ ಪ್ರೊ.ಕೊಟ್ರೇಶ್  ಅವರನ್ನು ವರ್ಗಾಯಿಸಿ ಆದೇಶ ಹೊರಡಿಸಿದೆ.ಈ ಆದೇಶದ ಹಿನ್ನಲೆಯಲ್ಲೇ ಪ್ರೊ.ಕೊಟ್ರೇಶ್ ಅಧಿಕಾರವನ್ನು ಹಸ್ತಾಂತರಿಸಿಕೊಳ್ಳಬೇಕಿತ್ತು.ಶಿಷ್ಟಾಚಾರ ಪಾಲಿಸಬೇಕಿತ್ತು.ಆದರೆ ಅದನ್ನು ಮಾಡದೆ ಜ್ಯೋತಿ ಅವರ ನಿರ್ಗಮನಕ್ಕೂ ಮುನ್ನವೇ ತಾವೇ ಬಲವಂತವಾಗಿ ಅಧಿಕಾರ ಪಡೆಯಲು ಮುಂದಾಗಿದ್ದಾರೆನ್ನುವುದು,ಅದಕ್ಕೊಂದು ಹೈ ಡ್ರಾಮ ಸೃಷ್ಟಿಸಿದರೆನ್ನುವ ಆರೋಪ ಕೋಲಾಹಲವನ್ನೇ ಸೃಷ್ಟಿಸಿದೆ.

ಪ್ರೊ.ಕೊಟ್ರೇಶ್.
ಕುಲಸಚಿವ ಪ್ರೊ.ಕೊಟ್ರೇಶ್.

ತಾವು ಅಧಿಕಾರ ವಹಿಸಿಕೊಳ್ಳೊಕ್ಕೆ ಬರುತ್ತಿರುವ ವಿಚಾರವನ್ನಾಗಲಿ,ಅದಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳಿ ಎನ್ನುವ ಸೂಕ್ಷ್ಮವನ್ನು ಕೊಡದೆ ಏಕಾಏಕಿ ದೌಡಾಯಿಸಿ  ಶಿಷ್ಟಾಚಾರ ಮೀರಿ ಕುಲಸಚಿವ ಸ್ಥಾನ ಅಲಂಕರಿಸಲು ಪ್ರೊ,ಕೊಟ್ರೇಶ್ ಮುಂದಾಗಿದ್ದಾರೆನ್ನುವ ಸುದ್ದಿ ಚರ್ಚೆಯನ್ನು ಹುಟ್ಟಾಕಿದೆ. ಜ್ಯೋತಿ ಅವರು ಅಧಿಕಾರವನ್ನು ಹಸ್ತಾಂತರಿಸುವ ಮುನ್ನವೇ ತಾವೇ ಅಧಿಕಾರ ವಹಿಸಿಕೊಂಡು ಅಧಿಕಾರಿಗಳ ಸಭೆ ಕರೆಯುವಂಥ ಉದ್ದಟತನ ಪ್ರದರ್ಶಿಸಿದ್ದಾರೆನ್ನುವ ಆರೋಪಕ್ಕೆ ತುತ್ತಾಗಿದ್ದಾರೆ.

ಶಿ್ಷ್ಟಾಚಾರದ ಪ್ರಕಾರ ಅಧಿಕಾರವನ್ನು ಹಸ್ತಾಂತರಿಸಿಕೊಂಡ ಮೇಲೆ ಸಭೆ ಕರೆಯಬೇಕಾಗುತ್ತದೆ.ಆದ್ರೆ ಕೊಟ್ರೇಶ್ ಆ ಕೆಲಸವನ್ನೇ ಮಾಡಿಲ್ಲ.ಇದು ಜ್ಯೋತಿ ಅವರನ್ನು ಕೆಂಡಾಮಂಡಲಗೊಳಿಸಿದೆ.ಅಧಿಕಾರ ವಹಿಸಿಕೊಂಡು,ಸಭೆ ನಡೆಸಿದ್ದಷ್ಟೇ ಅಲ್ಲ,ಸಾಕಷ್ಟು ಕಡತಗಳಿಗೂ ಸಹಿ ಹಾಕಿದ್ದಾರೆನ್ನಲಾಗಿದೆ.ತಮ್ಮ ಅನುಪಸ್ಥಿತಿಯಲ್ಲಿ ಹೀಗೆಲ್ಲಾ ನಡೆಯುತ್ತಿದೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆ ಸಭೆಗೆ ಆಗಮಿಸಿ ಪ್ರಶ್ನಿಸಿದ್ದಾರೆ ಕೂಡ.ಕಕ್ಕಾಬಿಕ್ಕಿಯಾದ ಕೊಟ್ರೇಶ್ ಸಮಜಾಯಿಷಿ ಕೊಡಲಿಕ್ಕೆ ಮುಂದಾದ್ರೂ ಜ್ಯೋತಿ ಅವರ ಆಕ್ರೋಶಕ್ಕೆ ಸುಸ್ತಾಗಿ ಸಭೆಯಿಂದ ಹೊರ ನಡೆದರೆನ್ನುವುದು ಆ ಘಟನೆಗೆ ಸಾಕ್ಷಿಯಾದ ಅಧಿಕಾರಿಯೊಬ್ಬರ ಹೇಳಿಕೆ.

ನವೆಂಬರ್ 26 ರಂದೇ ಸರ್ಕಾರದಿಂದ ವರ್ಗಾವಣೆಯ ಅಧೀಕೃತ ಆದೇಶ ಹೊರಬಿದ್ದಿದೆ.ಇದು ಜ್ಯೋತಿ ಅವರಿಗೂ ಗೊತ್ತು.ಅಧಿಕಾರ ಹಸ್ತಾಂತರಿಸೊಕ್ಕೆ ಮುನಿಸಾಗಲಿ,ಆಕ್ಷೇಪವನ್ನಾಗಲಿ ಅವರು ತೋರಿರಲಿಲ್ಲ.ಆದ್ರೆ ತಾವು ಬರುತ್ತಿರುವ ವಿಚಾರದ ಸೂಕ್ಷ್ಮವನ್ನು ಬಿಟ್ಟುಕೊಡದೆ ಇದ್ದಕ್ಕಿದ್ದಂತೆ ವಿವಿಗೆ ಆಗಮಿಸಿ ತಮ್ಮ ಕಚೇರಿಗೆ ತೆರಳಿ ಅಧಿಕಾರ ಹಸ್ತಾಂತರದ ಪ್ರಕ್ರಿಯೆಯನ್ನೂ ಪೂರ್ಣಗೊಳಿಸದೆ ತಾವೇ ಅಧಿಕಾರಿಗಳ ಸಭೆ ಕರೆದು,ಕಡತಗಳಿಗೆ ಸಹಿ ಹಾಕಿದ್ದಾರೆನ್ನುವುದು ಕೆ.ಜ್ಯೋತಿ ಅವರನ್ನು ತೀವ್ರ ಮುಜುಗರಕ್ಕಷ್ಟೇ ಅಲ್ಲ ಅವಮಾನಕ್ಕೂ ಈಡು ಮಾಡಿದೆಯಂತೆ.

ರಿಜಿಸ್ಟ್ರಾರ್ ಕೆ.ಜ್ಯೋತಿ ಅವರು ಜ್ಞಾನಭಾರತಿ ಪೊಲೀಸ್ ಠಾಣೆಗೆ ನೀಡಿರುವ ದೂರಿನ ಪ್ರತಿ
ರಿಜಿಸ್ಟ್ರಾರ್ ಕೆ.ಜ್ಯೋತಿ ಅವರು ಜ್ಞಾನಭಾರತಿ ಪೊಲೀಸ್ ಠಾಣೆಗೆ ನೀಡಿರುವ ದೂರಿನ ಪ್ರತಿ

“02-12-2021 ರ ಸಂಜೆ 6.14ರ ಸುಮಾರಿಗೆ ನನ್ನ ಕಚೇರಿಗೆ ನಾನಿಲ್ಲದ ವೇಳೆಯಲ್ಲಿ ಆಗಮಿಸಿ ನನ್ನ ಸುಪರ್ದಿಯಲ್ಲಿದ್ದ ಕಡತಗಳು ಹಾಗೂ ಪತ್ರಗಳಿಗೆ ಸಹಿ ಹಾಕಿ ವ್ಯವಹರಿಸಿದ್ದಾರೆ.ಇದು ಸಿಸಿ ಟಿವಿ ದೃಶ್ಯಾವಳಿಯಲ್ಲೇ ಸೆರೆಯಾಗಿದೆ.ಇದನ್ನು ಪ್ರಶ್ನಿಸಲಾಗಿ  ಕುಲಪತಿಗಳ ಮೌಖಿಕ ನಿರ್ದೇಶನದ ಮೇಲೆ ಹೀಗೆಲ್ಲಾ ನಡೆದುಕೊಂಡೆ ಎನ್ನುವುದಾಗಿ ಹೇಳಿದ್ದಾರೆ.ತನ್ನ ಅನುಪಸ್ಥಿತಿಯಲ್ಲಿ ಕಚೇರಿಗೆ ಆಗಮಿಸಿದ ಪ್ರೊ.ಕೊಟ್ರೇಶ್ ಹಾಗೂ ಅಂತದ್ದೊಂದು ಆದೇಶ ಕೊಟ್ಟ ಕುಲಪತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಜ್ಞಾನಭಾರತಿ ಪೊಲೀಸ್ ಠಾಣೆಗೆ 03-12-2021 ರಂದು ಕುಲಸಚಿವೆ ಕೆ.ಜ್ಯೋತಿ ದೂರು ಸಹ ನೀಡಿದ್ದಾರೆ.

ಜ್ಯೋತಿ ಅವರಿಗೆ ಅವಮಾನ ಮಾಡಬೇಕೆನ್ನುವ ವಿಚಾರಕ್ಕೆ ಇಂತದ್ದೊಂದು ಹೈಡ್ರಾಮ ಸೃಷ್ಟಿಸಲಾಗಿದೆ. ಇದರ ಹಿಂದಿನ ಕಾರಣಕರ್ತರೇ ವಿವಿ ಕುಲಪತಿ ಡಾ.ವೇಣುಗೋಪಾಲ್ ಎನ್ನುವುದು ಸಾಕಷ್ಟು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ಆರೋಪ.ಆಡಳಿತಾತ್ಮಕ ವಿಚಾರಗಳಲ್ಲಿ ನೇರಾನೇರವಾಗಿ ಮಾತನಾಡುತ್ತಿದ್ದ ತಪ್ಪಿದ್ದರೆ ಅದನ್ನು ಖಂಡಾತುಂಡವಾಗಿ ಖಂಡಿಸುವ ಮೂಲಕ  ಕುಲಪತಿಗಳನ್ನೇ ಇಕ್ಕಟ್ಟಿಗೆ ಸಿಲುಕಿಸಿ,ಮುಜುಗರಕ್ಕೀಡಾಗುವಂತೆ ಮಾಡಿದ ಸಾಕಷ್ಟು ಘಟನೆಗಳಿವೆ.

ಇಂಥಾ ಜ್ಯೋತಿ ವಿರುದ್ಧ ಸದಾ ಕತ್ತಿ ಮಸಿಯುತ್ತಿದ್ದ,ಅವಕಾಶ ಸಿಕ್ಕಾಗಲೆಲ್ಲಾ ಇಕ್ಕಟ್ಟಿಗೆ ಸಿಲುಕಿಸಲು ಪ್ರಯತ್ನಿಸುತ್ತಿದ್ದ ವೇಣುಗೋಪಾಲ್ ಅವರೇ ಜ್ಯೋತಿ ಅವರ ಮೇಲಿನ ಸಿಟ್ಟಿಗೆ ಪ್ರತೀಕಾರ ತೀರಿಸಿಕೊಳ್ಳೊಕ್ಕೆ ಪ್ರೊ.ಕೊಟ್ರೇಶ್ ಅವರನ್ನು ಎತ್ತಿಕಟ್ಟಿ ಇಂತದ್ದೊಂದು ಹೈಡ್ರಾಮ ಸೃಷ್ಟಿಸಿರಬಹುದಾದ ಸಾಧ್ಯತೆಗಳಿವೆ ಎನ್ನುವುದು ಇವರಿಬ್ಬರ ಸಂಘರ್ಷವನ್ನು ತೀವ್ರ ಹತ್ತಿರದಿಂದ ಬಲ್ಲಂತವರ ವಿಶ್ಲೇಷಣೆ.ಆದರೆ ಅವರಿಬ್ಬರ ಜಗಳ-ಕಾದಾಟ-ವೈಮಸ್ಸು-ತಿಕ್ಕಾಟಗಳು ಏನೇ ಇರಲಿ,ಒಬ್ಬ ಹಿರಿಯ ಐಎಎಸ್ ಅಧಿಕಾರಿಗೆ ಇಂತದ್ದೊಂದು ಅವಮಾನಕಾರಿ ಬೀಳ್ಕೋಡುಗೆ ನೀಡಿ,ತುಚ್ಛವಾಗಿ ನಡೆಸಿಕೊಳ್ಳುವಂತದ್ದು ಶೋಭೆ ತರುವಂತದ್ದಲ್ಲ.ಸರ್ಕಾರ ಈ ಘಟನೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕೆನ್ನುವುದು ಸಾಕಷ್ಟು ಶಿಕ್ಷಣ ತಜ್ಞರ ವಾದ.

ಅದೇನೇ ಆಗಲಿ, ಕುಲಪತಿ ವೇಣುಗೋಪಾಲ್ ಅವರ ವಿರುದ್ದವೇ ಇದೆಲ್ಲಕ್ಕೂ ಕಾರಣ ಎನ್ನುವ ಆರೋಪ ಕೇಳಿಬಂದಿರುವುದು ದುರಾದೃಷ್ಟಕರ.ಜ್ಯೋತಿ ಅವರ ದೂರು ಅವರಿಬ್ಬರ ನಡುವಿನ ಸಂಘರ್ಷಕ್ಕೆ ಮತ್ತೊಂದು ಆಯಾಮ ದೊರಕಿಸಿಕೊಟ್ಟಿರುವುದಂತೂ ಸತ್ಯ.

ಬಲವಂತವಾಗಿ ಕಚೇರಿ ಪ್ರವೇಶಿಸಿ,ಕಡತಗಳಿಗೆ ಸಹಿ ಹಾಕಿದ ನಂತರ ಸಭೆ ನಡೆಸಿದ್ದಾರೆನ್ನಲಾಗುತ್ತಿರುವ ಪ್ರೊ.ಕೊಟ್ರೇಶ್.
ಬಲವಂತವಾಗಿ ಕಚೇರಿ ಪ್ರವೇಶಿಸಿ,ಕಡತಗಳಿಗೆ ಸಹಿ ಹಾಕಿದ ನಂತರ ಸಭೆ ನಡೆಸಿದ್ದಾರೆನ್ನಲಾಗುತ್ತಿರುವ ಪ್ರೊ.ಕೊಟ್ರೇಶ್.

ಇದಕ್ಕೆಲ್ಲಾ ಕಾರಣಗಳೇನು,,?

ಹಿರಿಯ ಐಎಎಸ್ ಅಧಿಕಾರಿ ಕೆ.ಜ್ಯೋತಿ ರಿಜಿಸ್ಟ್ರಾರ್ ಆಗಿ ಬಂದ   ಮೇಲೆ ಸಾಕಷ್ಟು ಅಮೂಲಾಗ್ರ ಬದಲಾವಣೆಗೆ ಕಾರಣವಾದವರು.ತಾನು ಮಾಡಲು ಹೊರಟ ಒಳ್ಳೆಯ ಕಾರ್ಯಕ್ಕೆ ಕುಲಪತಿ ವೇಣುಗೋಪಾಲ್ ಅಡ್ಡ ಬಂದರೂ ಅದಕ್ಕೆ ಡೋಂಟ್ ಕೇರ್ ಎನ್ನದವರು.ಅದಕ್ಕಾಗಿ ಅವರೊಂದಿಗೆ ಶರಂಪರ ಕಾದಾಟಕ್ಕೇ ಇಳಿದು ವಿವಾದಕ್ಕೀಡಾದವರು.ಸರ್ಕಾರದ ಮಟ್ಟದಲ್ಲೂ ಇವರಿಬ್ಬರ ಜಗಳ ಸುದ್ದಿಯಾದದ್ದಿದೆ.ಆದ್ರೆ ತನಗೆ ಸರ್ಕಾರ ಕೊಟ್ಟಿರುವ ಹೊಣೆಗಾರಿಕೆಯನ್ನು ಯಾರೊಂದಿಗೂ ಕಾಂಪ್ರಮೈಸ್ ಆಗದೆ,ಯಾವುದೇ ಹಿತಾಸಕ್ತಿಗೆ ಈಡಾಗದೆ,ಯಾರ ಒತ್ತಡಕ್ಕೂ ಮಣಿಯದೆ ನಿಷ್ಟೂರವಾಗಿ ನಿರ್ವಹಿಸಿದ ದಿಟ್ಟ ಮಹಿಳಾ ಅಧಿಕಾರಿ ಎನ್ನುವ ಹೆಗ್ಗಳಿಕೆ ಅವರ ಮೇಲಿದೆ.

ನವೆಂಬರ್ 26 ರಂದು ನೂತನ ಕುಲಸಚಿವರನ್ನು ನೇಮಕಗೊಳಿಸಿ ಸರ್ಕಾರ ಹೊರಡಿಸಿದ ಅದೇಶ
ನವೆಂಬರ್ 26 ರಂದು ನೂತನ ಕುಲಸಚಿವರನ್ನು ನೇಮಕಗೊಳಿಸಿ ಸರ್ಕಾರ ಹೊರಡಿಸಿದ ಅದೇಶ

ಸಾಕಷ್ಟು ವಿಚಾರಗಳಲ್ಲಿ ತನ್ನ ನೇರ-ನಿಷ್ಟೂರ-ಪಾರದರ್ಶಕ-ರಾಜಿರಹಿತ ಆಡಳಿತಾತ್ಮಕ ನಿರ್ದಾರಗ ಳಿಂದ ಕುಲಪತಿ ವೇಣುಗೋಪಾಲ್ ಅವರನ್ನೇ ಮುಜುಗರಕ್ಕೀಡುಮಾಡಿದ ಹಿನ್ನಲೆ ಜ್ಯೋತಿ ಅವರಿಗಿದೆ. ಬಹುಷಃ ಅದೇ ರಾಜಿರಹಿತ ಧೋರಣೆ ಬಹಳಷ್ಟು ವಿಚಾರಗಳಲ್ಲಿ ಅವರಿಗೆ ಮುಳುವಾಯಿತೇನೋ..ಅಡ್ಜೆಸ್ಟ್ ಮೆಂಟ್ ಸ್ವಭಾವ ಅವರದಾಗಿದ್ದರೆ ಇಷ್ಟೊಂದು ವಿವಾದಗಳೇ ಆಗುತ್ತಿರಲಿಲ್ಲವೇನೋ ಎಂದು ಮಾತನಾಡಿಕೊಂಡವರು ಅದೆಷ್ಟೋ..

ಆದರೆ ಯಾವತ್ತೂ ತನ್ನ ನಿಷ್ಠೆ-ಪ್ರಾಮಾಣಿಕತೆ-ಸಿದ್ದಾಂತಗಳ ಜತೆ ರಾಜಿ ಮಾಡಿಕೊಳ್ಳದ ಜ್ಯೋತಿ ನೇರವಾಗಿಯೇ ವಾಗ್ಯುದ್ಧಕ್ಕಿಳಿದವರು.ಅವರ ಪ್ರಾಮಾಣಿಕತೆಯಿಂದಲೇ ಎಷ್ಟೋ ಅನ್ಯಾಯ-ಅಕ್ರಮಗಳಿಗೆ ಬ್ರೇಕ್ ಬಿದ್ದಿದ್ದುಂಟು.ಆದರೆ ಅವರ ವಿರುದ್ದ ಮಸಲತ್ತು ನಡೆಸುತ್ತಲೇ ಇದ್ದ ಒಂದು ದುಷ್ಟಕೂಟ ಪರಿಸ್ತಿತಿಯ ಲಾಭ ಪಡೆದುಕೊಂಡಿದೆ ಅಷ್ಟೇ..ಆದ್ರೆ ಜ್ಯೋತಿ ಅವರು ತಮಗಾಗಿರುವ ಸೋಲು-ತಮ್ಮ ಸಿದ್ಧಾಂತಕ್ಕೆ ಆಗಿರುವ ಅಪಮಾನವನ್ನು ಮರೆಯಬಾರದು. ಅದಕ್ಕೊಂದು ಸಾತ್ವಿಕ ಪ್ರತೀಕಾರವನ್ನು ಕಾನೂನಿನ ಚೌಕಟ್ಟಿನಲ್ಲೇ ತೀರಿಸಿಕೊಳ್ಳಬೇಕೆನ್ನುವುದು ವಿವಿ ಆಡಳಿತವನ್ನು ಹತ್ತಿರದಿಂದ ಬಲ್ಲವರ ಅನಿಸಿಕೆ.

Spread the love

Related Articles

Leave a Reply

Your email address will not be published.

Back to top button
Flash News