KANNADA SENIOR ACTOR SHIVARAM NO MORE: ಕನ್ನಡ ಚಿತ್ರರಂಗದ ಪ್ರೀತಿಯ “ಶಿವರಾಂ @ ಶಿವರಾಮಣ್ಣ” ಇನ್ನಿಲ್ಲ,.. ಶೋಕ ಸಾಗರದಲ್ಲಿ ಮುಳುಗಿದ ಕನ್ನಡ ಚಿತ್ರರಂಗ…

ಚರಿತ್ರಾರ್ಹ ಸಿನೆಮಾಗಳ ನಟನಾ ಬದುಕಿಗೆ ಅಂತ್ಯ ಹಾಡಿದ “ವರದ”-ಕಳಚಿಯೇ ಬಿಡ್ತು ಮೈಲಿಗಲ್ಲಿನ ಚಿತ್ರಗಳನ್ನು ನಿರ್ಮಿಸಿದ್ದ “ರಾಶಿ ಬ್ರದರ್ಸ್” ಕೊನೆ ಕೊಂಡಿ.

0

ಬೆಂಗಳೂರು: ಕೋಟ್ಯಾಂತರ ಅಭಿಮಾನಿಗಳ ಹರಕೆ-ಹಾರೈಕೆ ಕೊನೆಗೂ  ಫಲಿಸಲಿಲ್ಲ..ಕನ್ನಡ ಚಿತ್ರರಂಗದ ಹಿರಿಯ ಕೊಂಡಿ,ಖ್ಯಾತ ಪೋಷಕ ಕಲಾವಿದ,ಹಿರಿ-ಕಿರಿಯ  ಕಲಾವಿದರ ನಡುವೆ ಅಜಾತಶತೃ ಎಂದೇ ಗುರುತಿಸಿಕೊಂಡಿದ್ದ ಸದಾ ಹಸನ್ಮುಖಿ ಜೀವಿ ಶಿವರಾಂ ಅಲಿಯಾಸ್ ಶಿವರಾಮಣ್ಣ ಇನ್ನಿಲ್ಲ.81 ವರ್ಷಗಳ  ತುಂಬು  ಜೀವನ ನಡೆಸಿದ್ದ ಶಿವರಾಂ ಮೆದುಳಿನ ನಿಷ್ಟ್ರೀಯತೆ ಹಿನ್ನಲೆಯಲ್ಲಿ ಬೆಂಗಳೂರಿನ ಪ್ರಶಾಂತ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.ಆರು ದಶಕಗಳ ಕಾಲ ಚಿತ್ರರಂಗದಲ್ಲಿ ನಟ-ನಿರ್ಮಾಪಕ-ನಿರ್ದೇಶಕನ ಭೂಮಿಕೆ ನಿರ್ವಹಿಸಿದ್ದ ಶಿವರಾಂ ತಮ್ಮ ಧೀರ್ಘಕಾಲದ ನಟನಾಬದುಕಿಗೆ ವಿದಾಯ ಹೇಳಿಯೇ ಬಿಟ್ಟಿದ್ದಾರೆ.

1972 ರಲ್ಲಿ ತಮ್ಮ ಸಹೋದರ ಎಸ್.ಶಿವರಾಮನ್ ಜತೆ ಸೇರಿ ರಾಶಿ ಬ್ರದರ್ಸ್ ಎನ್ನುವ ಸಂಸ್ಥೆ ಸ್ಥಾಪಿಸಿ ಹೃದಯ ಸಂಗಮ ಚಿತ್ರ ನಿರ್ಮಿಸಿದ ಶಿವರಾಂ ಸಹೋದರರು ನಂತರ ಗೆಜ್ಜೆಪೂಜೆ (1970), ಉಪಾಸನೆ(1974), ನಾನೊಬ್ಬ ಕಳ್ಳ (1979), ಡ್ರೈವರ್ ಹನುಮಂತು(1980) ಮತ್ತು ಬಹಳ ಚೆನ್ನಾಗಿದೆ (2001) ಗಳಂತಹ ಯಶಸ್ವೀ ಮತ್ತು ವಿಮರ್ಶಕರ ಮೆಚ್ಚುಗೆ ಪಡೆದ ಚಿತ್ರಗಳನ್ನು ನಿರ್ಮಿಸಿದ್ದರು.ಡಾ.ರಾಜ್ ಕುಮಾರ್ ಅವರ 175 ನೇ ಚಿತ್ರ “ನಾನೊಬ್ಬ ಕಳ್ಳ”  ನಿರ್ಮಿಸಿದ ಹೆಗ್ಗಳಿಕೆಯೂ ರಾಶಿ ಬ್ರದರ್ಸ್ ಸಂಸ್ಥೆಗೆ ಸೇರುತ್ತದೆ.

1958 ರಿಂದ 1965 ರವರೆಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಶಿವರಾಂ,ಕಲ್ಯಾಣ್ ಕುಮಾರ್ ನಟನೆಯ ಬೆರೆತ ಜೀವ ಚಿತ್ರದಲ್ಲಿ ಪೋಷಕ ಕಲಾವಿದರಾಗಿ ನಟನಾ ಜೀವನ ಆರಂಭಿಸಿದರು,.1970 ರಿಂದ 2000ರವರೆಗೆ ಸಕ್ರೀಯವಾಗಿದ್ದ  ಶಿವರಾಂ ತಮ್ಮ ನಟನಾ ಜೀವನದಲ್ಲಿ ಚಲಿಸುವ ಮೋಡಗಳು , ಶ್ರಾವಣ ಬಂತು , ಹಾಲು ಜೇನು , ಹೊಂಬಿಸಿಲು, ಹೊಸ ಬೆಳಕು, ಗುರು ಶಿಷ್ಯರು , ಸಿಂಹದಮರಿ ಸೈನ್ಯ , ಮಕ್ಕಳ ಸೈನ್ಯ ದಂಥ ಸೂಪರ್ ಹಿಟ್ ಚಲನಚಿತ್ರಗಳಲ್ಲಿ ನಟಿಸಿದರು.ಹತ್ತು ಹಲವು ಪ್ರಶಸ್ತಿ ಪಡೆದ ಶಿವರಾಂ 2010 ರಲ್ಲಿ ಜೀವಮಾನ ಸಾಧನೆಗೆ ಕೊಡಮಾಡುವ ಡಾ.ರಾಜ್ ಕುಮಾರ್ ಪ್ರಶಸ್ತಿ, 2013 ರಲ್ಲಿ ಪದ್ಮಭೂಷಣ ಡಾ,ಬಿ,.ಸರೋಜಾದೇವಿ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದರು.

1965 ರಲ್ಲಿ ಬೆರೆತ ಜೀವ ಚಿತ್ರದೊಂದಿಗೆ ವೃತ್ತಿ ಜೀವನ ಆರಂಭಿಸಿದ್ದ ಶಿವರಾಂ ಅವರ  ಕೊನೆಯ ಚಿತ್ರ 2021 ರಲ್ಲಿ  ನಟಿಸಿದ ಸ್ನೇಹಿತ ಎನ್ನುವುದು ಗಮನಾರ್ಹ.ತಮ್ಮ ಸಿನಿ ವೃತ್ತಿ ಜೀವನದಲ್ಲಿ  ಲಗ್ನಪತ್ರಿಕೆ,ಮಾವನ ಮಗಳು, ನಮ್ಮ ಮಕ್ಕಳು,ಭಲೇ ಅದೃಷ್ಟವೋ ಅದೃಷ್ಟ, ಸಿಪಾಯಿ ರಾಮು, ನಾಗರಹಾವು, ನಾ ಮೆಚ್ಚಿದ ಹುಡುಗ,ಹೃದಯ ಸಂಗಮ, ಮರಿಯಾ ಮೈ ಡಾರ್ಲಿಂಗ್, ಮಕ್ಕಳ ಸೈನ್ಯ ಬರ ,ಬಂಗಾರದ ಜಿಂಕೆ, ಸಿಂಹದ ಮರಿ ಸೈನ್ಯ ,ಮರೆಯದ ಹಾಡು, ಗುರು ಶಿಷ್ಯರು ,ಗೀತಾ ,ಘರ್ಜನೆ ,ಟೋನಿ ,ಹೊಸ, ಬೆಳಕು, ಹಾಲು ಜೇನು ,ಹಾಸ್ಯರತ್ನ ರಾಮಕೃಷ್ಣ ,ಚಲಿಸುವ ಮೋಡಗಳು, ಬಾಡದ ಹೂ, ಪಲ್ಲವಿ ಅನುಪಲ್ಲವಿ ,ಎರಡು ನಕ್ಷತ್ರಗಳು, ಭಕ್ತಪ್ರಹ್ಲಾದ ,ಮುಗಿಲ ಮಲ್ಲಿಗೆ ಚಿತ್ರಗಳಲ್ಲಿ ನಟಿಸಿದ್ದಾರೆ.

ಜತೆಗೆ ಭಾಗ್ಯದ ಲಕ್ಷ್ಮಿ ಬಾರಮ್ಮ, ರಾಜ ಕೆಂಪು ರೋಜಾ ,ಗಂಡು ಸಿಡಿಗುಂಡು, ಹಳ್ಳಿ ರಂಭೆ ಬೆಳ್ಳಿ ಬೊಂಬೆ, ಮಾಂಗಲ್ಯ, ಧರ್ಮದೊರೈ, ಸಾಹಸಿ, ಕ್ಷೀರಸಾಗರ, ಪ್ರೇಮ ಸಂಗಮ, ಕೋಣ ಈದೈತೆ, ಅಮ್ಮಾವ್ರ ಗಂಡ, ತಾಯಿಸಾಹೇಬ, , ಸಿಂಹಾದ್ರಿಯ ಸಿಂಹ, ಹೃದಯವಂತ, ರಾಜಾ ನರಸಿಂಹ, ಆಪ್ತಮಿತ್ರ ಚಿತ್ರಗಳಲ್ಲಿನ ನಟನೆಯಿಂದ ಶಿವರಾಂ ಗಮನ ಸೆಳೆದಿದ್ದರು.ಅಷ್ಟೇ ಅಲ್ಲ, ಬಳ್ಳಾರಿ ನಾಗ, ಸಜನಿ ,ಗೌತಮ್, ಬ್ರೇಕಿಂಗ್ ನ್ಯೂಸ್,ಭಜರಂಗಿ, ಶಿವಮ್, ಕೇರಾಫ್ ಫುಟ್ ಪಾತ್, ರೇ, ಮುಕುಂದ ಮುರಾರಿ, , ಓಂಕಾರ, ,,ಅಯ್ಯಪ್ಪನೇ ,ಬಂಗಾರ ಸನ್ ಆಫ್ ಬಂಗಾರದ ಮನುಷ್ಯ ,ಒನ್ಸ್ ಮೋರ್ ಕೌರವ, ಸ್ನೇಹಿತದಂಥ ಚಿತ್ರಗಳಲ್ಲಿ ನಟಿಸಿ ಎಲ್ಲರಿಂದ ಸೈ ಎನಿಸಿಕೊಂಡಿದ್ದರು.

ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿರ್ದೇಶನದ “ಗೆಜ್ಜೆಪೂಜೆ” ನಿರ್ಮಿಸಿದ ಹೆಗ್ಗಳಿಕೆ ಶಿವರಾಂ ಮಾಲೀಕತ್ವದ  ರಾಶಿ ಬ್ರದರ್ಸ್ ಸಂಸ್ಥೆದು.ಆನಂತರ ಪುಟ್ಟಣ್ಣ ಅವರೊಂದಿಗಿನ ಸಂಬಂಧ ಅವರದೇ ನಿರ್ದೇಶನದ ಸಾಕಷ್ಟು ಚಿತ್ರಗಳವರೆಗೂ ಮುಂದುವರೆಯಿತು.ಕನ್ನಡದ ಸೂಪರ್ ಹಿಟ್ ಚಿತ್ರ ದೇವಾದ ತಮಿಳು ಅವತರಣಿಕೆ ಧರ್ಮ ದುರೈ ಚಿತ್ರ ನಿರ್ಮಿಸಿದ್ದರು.1985 ರಲ್ಲಿ  ಬಾಲಿವುಡ್ ಬಿಗ್ ಬಿ ಅಮಿತಾಬಚ್ಚನ್ ಅವರಿಗಾಗಿ ಗಿರಪ್ದಾರ್ ಚಿತ್ರ ನಿರ್ಮಿಸಿದ ಹೆಗ್ಗಳಿಕೆ ರಾಶಿ ಬ್ರದರ್ಸ್ ದು,

ತನ್ನ ಪ್ರಾಥಮಿಕ ಶಿಕ್ಷಣ ಮುಗಿಸಿದ ನಂತರ, ಅವರು typewriting ಇನ್ಸ್ಟಿಟ್ಯೂಟ್ ನಡೆಸುತ್ತಿದ್ದ ತಮ್ಮ ಸೋದರನ ಜೊತೆಗೆ ನಗರದ ಬೆಂಗಳೂರಿಗೆ ತೆರಳಿದರು. ಗುಬ್ಬಿ ವೀರಣ್ಣ ಅವರ ನಾಟಕ ಪ್ರದರ್ಶನಗಳ ಪ್ರಭಾವಕ್ಕೆ ಒಳಗಾದರು, 1958ರಲ್ಲಿ ನಿರ್ದೇಶಕ ಕು. ರಾ. ಸೀತಾರಾಮಶಾಸ್ತ್ರಿ ಬಳಿ ಸಹಾಯಕರಾಗಿ ಸೇರಿಕೊಂಡರು. ಅನುಭವಿ ಛಾಯಾಗ್ರಾಹಕ ಬೊಮನ್ ಡಿ ಇರಾನಿ ಗೆ ಕ್ಯಾಮರಾ ಸಹಾಯಕರಾಗಿಯೂ ಕೆಲಸ ಮಾಡಿದರು. ಕೆ ಎಸ್ ಎಲ್ ಸ್ವಾಮಿ, ಗೀತಪ್ರಿಯ, ಸಿಂಗೀತಂ ಶ್ರೀನಿವಾಸರಾವ್ ಮತ್ತು ಪುಟ್ಟಣ್ಣ ಕಣಗಾಲ್ ರಂತಹ ಹಲವಾರು ಪ್ರಮುಖ ನಿರ್ದೇಶಕರಿಗೆ ಸಹಾಯಕರಾಗಿದ್ದರು .1958 ರಿಂದ 1965 ರ ವರೆಗೆ ಸಹಾಯಕ ನಿರ್ದೇಶಕರಾಗಿ ದುಡಿದ ನಂತರ, ಅವರಿಗೆ ಕಲ್ಯಾಣ್ ಕುಮಾರ್ ನಟಿಸಿದ ಕು. ರಾ. ಸೀತಾರಾಮಶಾಸ್ತ್ರಿ ಅವರ ಬೆರೆತ ಜೀವ ಚಿತ್ರದಲ್ಲಿ ಪೋಷಕ ಪಾತ್ರದ ಮೂಲಕ ನಟನೆಗೆ ಬ್ರೆ ಕ್ ಸಿಕ್ಕಿತು. ಆಗಿನಿಂದ ಅವರು 2000 ದ ದಶಕದವರೆಗೆ ಹೆಚ್ಚೂ ಕಡಿಮೆ ಎಲ್ಲಾ ನಿರ್ದೇಶಕರ ನಿರ್ದೇಶನದಲ್ಲಿ ನಟಿಸಿದ್ದರು.

ಕನ್ನಡ ಚಿತ್ರರಂಗದ ಮಟ್ಟಿಗೆ ಅಜಾತಶತೃ ಕಲಾವಿದ ಎಂದೇ ಕರೆಯಿಸಿಕೊಂಡಿದ್ದ ಶಿವರಾಂ ಹಿರಿ-ಕಿರಿಯ ಕಲಾವಿದರ ನಡುವಿನ ಕೊಂಡಿಯಾಗಿದ್ದರು.ಅಯ್ಯಪ್ಪಸ್ವಾಮಿ ಭಕ್ತರಾಗಿದ್ದ ಶಿವರಾಂ,ಡಾ.ರಾಜ್ ಕುಮಾರ್ ಸೇರಿದಂತೆ ಅನೇಕ ಹಿರಿ-ಕಿರಿಯ ಕಲಾವಿದರನ್ನು ಶಬರಿಮಲೈಗೆ ಕರೆದೊಯ್ಯುವ ಸಂಪ್ರದಾಯಕ್ಕೆ ನಾಂದಿ ಹಾಡಿ ಇವತ್ತಿಗೂ ಅದನ್ನು ಮುಂದುವರೆಸಿಕೊಂಡು ಬಂದಿದ್ದರು.ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಶಿವರಾಂ ಅವರನ್ನು ಕಳೆದುಕೊಂಡ ಚಂದನವನದಲ್ಇ ಶೋಕ ಮಡುಗಟ್ಟಿದೆ.ಇಡೀ ಚಿತ್ರರಂಗ ಶಿವರಾಂ ಸಾವಿಗೆ ಕಂಬಿ ಮಿಡಿದಿದೆ.ಅಪಾರ ಪ್ರಮಾಣದ ಅಭಿಮಾನಿಗಳು ಶೋಕ ವ್ಯಕ್ತಪಡಿಸಿದ್ದಾರೆ

Spread the love
Leave A Reply

Your email address will not be published.

Flash News