APPU`S GANDHADA GUDI TEASER RELEASE-MILLIONS VIEW..RECORD“ಅಪ್ಪು” ಕನವರಿಕೆಯ “ಗಂಧದ ಗುಡಿ” ಟೀಸರ್ ರಿಲೀಸ್…ಪುನೀತ್ ನೆನೆದು ಅಭಿಮಾನಿಗಳು ಕಣ್ಣೀರು.. ಕೆಲವೇ ಗಂಟೆಗಳಲ್ಲಿ ಮಿಲಿಯನ್ ವೀಕ್ಷಣೆ ಪಡೆದು ದಾಖಲೆ

ಕರುಳು ಹಿಂಡುತ್ತೆ ಆಣ್ಣಾವ್ರ “ಈ ಗಂಧದ ಗುಡಿಯನ್ನು ಉಳಿಸು..ಉಳಿಸು..ಧ್ವನಿ ಹಿನ್ನಲೆಯಲ್ಲಿ ಪುನೀತ್ ಮಂದಹಾಸ..

0

ಬೆಂಗಳೂರು: ಪವರ್ ಸ್ಟಾರ್ ದಿವಂಗತ.ಪುನೀತ್ ರಾಜ್ ಕುಮಾರ್ ಕನಸು-ಮಹತ್ವಾಕಾಂಕ್ಷೆ ಗಂಧದ ಗುಡಿ..ಸಾಕ್ಷ್ಯಚಿತ್ರ.ಅರಣ್ಯ ಹಾಗೂ ಪರಿಸರ-ವನ್ಯಜೀವಿ ಅವುಗಳ ಜೀವನಶೈಲಿ ಬಗ್ಗೆ ಅಪ್ಪುಗೆ ಎಂಥಾ ಕುತೂಹಲವಿತ್ತು.ಕಕ್ಕುಲತೆ ಇತ್ತು ಎನ್ನುವುದರ ಸಾಕಾರವೇ ಈ ಸಾಕ್ಷ್ಯಚಿತ್ರ.ತನ್ನಲ್ಲಿದ್ದ ಕುತೂಹಲ-ಬೆರಗಿಗೆ ಉತ್ತರ ಕಂಡುಕೊಳ್ಳುವ ಯತ್ನ ಈ ಸಾಕ್ಷ್ಯಚಿತ್ರದಲ್ಲಿದೆ.ಇದಕ್ಕೆ ಸಾಕ್ಷಿ ಇಂದು ಬಿಡುಗಡೆಯಾದ ಗಂಧದ ಗುಡಿಯ ಟೀಸರ್..

ತುಂಬಾ ಭಾವುಕವಾದ ಕ್ಷಣಗಳಿಗೆ ಇವತ್ತಿನ ದಿನ ಸಾಕ್ಷಿಯಾಯಿತು.ಅಗಲಬಾರದ ವಯಸ್ಸು-ಸಮಯದಲ್ಲಿ ನಮ್ಮನ್ನೆಲ್ಲಾ ತೊರೆದು ಹೋದ ಜೀವ ಇರಬೇಕಿತ್ತೆನ್ನುವ ತುಡಿತವನ್ನು ಮೂಡಿಸಿದ ದಿನವಿದು..ಇದಕ್ಕೆಲ್ಲಾ ಸಾಕ್ಷಿಯಾಗಿದ್ದು ಅವರ ಡ್ರೀಮ್ ಪ್ರಾಜೆಕ್ಟ್ ‘ಗಂಧದ ಗುಡಿ’(Puneeth Rajkumar’s Dream Project) ನ ಟೀಸರ್.

ಬಹುಷಃ ಕನ್ನಡ ಚಿತ್ರರಂಗಕ್ಕೆಷ್ಟೇ ಅಲ್ಲ  ವನ್ಯಜೀವಿಗಳ ಜೀವನವನ್ನು ವಿಶಿಷ್ಟ ಶೈಲಿಯಲ್ಲಿ ಸೆರೆ ಹಿಡಿದ ಅತ್ಯದ್ಭುತ ಸಾಕ್ಷ್ಯಚಿತ್ರವೊಂದರ ಮೂರ್ತ ರೂಪವಾಗಿ ‘ಗಂಧದ ಗುಡಿ’(Puneeth Rajkumar’s Dream Project) ಟೀಸರ್ ರಿಲೀಸ್ ಆಗಿದೆ.ಈ ಕಾರಣಕ್ಕೆ ಪುನೀತ್ ಪ್ರಾತಃಸ್ಮರಣೀಯವಾಗೋದ್ರು.

ಪುನೀತ್ ಅವರ ‘ಪಿಆರ್​ಕೆ ಆಡಿಯೋ’ (PRK Audio) ಯೂಟ್ಯೂಬ್ ಚಾನೆಲ್ ನಲ್ಲಿ ಸೋಮವಾರ  ಟೈಟಲ್​ ಟೀಸರ್​ ರಿಲೀಸ್​ ಮಾಡಲಾಗಿದೆ. 1.20 ನಿಮಿಷಗಳ ಟೀಸರ್ ಅದ್ಭುತವಾಗಿ ಮೂಡಿಬಂದಿದ್ದು ಪಕೃತಿ ಸೌಂದರ್ಯವನ್ನು ಬೆರಗು ಮೂಡಿಸುವಂತೆ ಸೆರೆಹಿಡಿಯಲಾಗಿದೆ ಎನ್ನುವ ಅಭಿಪ್ರಾಯಗಳು ಸಾರ್ವತ್ರಿಕವಾಗಿ ಕೇಳಿಬಂದಿದೆ.

‘ಅಪ್ಪು’ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ  ಟೀಸರ್(Gandhada Gudi Teaser)​ ನ್ನು ಕಣ್ತುಂಬಿಕೊಂಡಿರುವ  ಪ್ರತಿಯೊಬ್ಬರು ಸಂತೋಷದ ಜತೆ ಭಾವುಕರಾದರು.ನಮ್ಮ ಅಪ್ಪು ಇರಬೇಕಿತ್ತು ಎಂದು ಕಣ್ಣೀರಾದರು.ಪ್ರತಿಯೊಂದು ಫ್ರೇಮ್ ನಲ್ಲಿ ತಮ್ಮ ನೆಚ್ಚಿನ ನಟನನ್ನು ಸಂಭ್ರಮಿಸಿದರು.

ಇನ್ನೊಂದು ಸಂತೋಷದ ವಿಷಯ ಎಂದರೆ ಟೀಸರ್  ಬಿಡುಗಡೆಯಾದ ಮೂರೇ ಗಂಟೆಗಳಲ್ಲೇ 3 ಮಿಲಿಯನ್  ವ್ಯೂಸ್ ಕಂಡಿದೆ.ಟೀಸರ್ ನ ಕೊನೆಯಲ್ಲಿ ಗಂಧದ ಗುಡಿ ಚಿತ್ರದಲ್ಲಿ ಅಣ್ಣಾವ್ರು ಹೇಳುವ ಈ ಗಂಧದ ಗುಡಿಯನ್ನು ಉಳಿಸು..ಎಂದು ಅಂಗಲಾಚುವ ಸ್ವರದೊಂದಿಗೆ ಅಪ್ಪು ಅವರನ್ನು ಎಮೋಷನಲ್ ಆಗಿ ತೋರಿಸಿರುವುದಂತೂ ತುಂಬಾ ಮಾರ್ಮಿಕ ಹಾಗೂ ಅರ್ಥಪೂರ್ಣವಾಗಿದೆ.

Spread the love
Leave A Reply

Your email address will not be published.

Flash News