SENIOR JOURNALIST VAAGISH NO MORE: ದೃಶ್ಯ-ಮುದ್ರಣ ಮಾದ್ಯಮದ ಹಿರಿಯ ಪತ್ರಕರ್ತ ವಾಗೀಶ್ ನಿಧನ

ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ ವಾಗೀಶ್-ಬಹುದೊಡ್ಡ ಶಿಷ್ಯ ಕೋಟಿ ಅಗಲಿದ ಸರಳ ಜೀವಿ.

0

ಬೆಂಗಳೂರು:ಹಿರಿಯ ಪತ್ರಕರ್ತ ವಾಗೀಶ್ ಕುಮಾರ್ ಕೊನೆಯುಸಿರೆಳೆದಿದ್ದಾರೆ.ಕನ್ನಡ ಪತ್ರಿಕೋದ್ಯಮದಲ್ಲಿ ದೃಶ್ಯ ಹಾಗೂ ಮುದ್ರಣ  ಮಾದ್ಯಮಗಳೆಡರಲ್ಲೂ ಅನೇಕ ವರ್ಷಗಳ  ಅನುಭವ ಹೊಂದಿದ್ದ ವಾಗೀಶ್ ಕುಮಾರ್ ಅನೇಕ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು.ಪ್ರಸ್ತುತ ರಾಜ್ಯ ಮಟ್ಟದ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ವಾಗೀಶ್ ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ದಶಕಗಳ ಕಾಲ ಪತ್ರಿಕೋದ್ಯಮದಲ್ಲಿ ನಿರತವಾಗಿದ್ದ ವಾಗೀಶ್ ತಮ್ಮ ಬರವಣಿಗೆ ಮೂಲಕ ಹೆಸರಾಗಿದ್ದರು.ಅವರ ಗರಡಿಯಲ್ಲಿ ಬಹುದೊಡ್ಡ ಶಿಷ್ಯಕೋಟಿಯೇ ಸಿದ್ದಗೊಂಡು ಅನೇಕ ಮಾದ್ಯಮಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಕೊನೇವರೆಗೂ ಅತ್ಯಂತ ಸರಳ ಶೈಲಿಯಲ್ಲಿ ಜೀವನ ನಡೆಸಿದ ವಾಗೀಶ್ ಅವರ ಸಾವಿನಿಂದ ಓರ್ವ ಉತ್ತಮ ಪತ್ರಕರ್ತನನ್ನು ಕಳೆದುಕೊಂಡಂತಾಗಿದೆ.ವಾಗೀಶ್ ಸಾವಿಗೆ ದೃಶ್ಯ ಹಾಗೂ ಮುದ್ರಣ ಮಾದ್ಯಮದ ಸಂಘಗಳು ಹಾಗೂ ಸಾವಿರಾರು ಪತ್ರಕರ್ತರು ಸಂತಾಪ ಸೂಚಿಸಿದ್ದಾರೆ.ವಾಗೀಶ್ ಅವರ ನಿಧನಕ್ಕೆ ಕನ್ನಡ ಫ್ಲ್ಯಾಶ್ ನ್ಯೂಸ್ ಬಳಗ ಕೂಡ ಸಂತಾಪ ಸೂಚಿಸುತ್ತದೆ.

Spread the love
Leave A Reply

Your email address will not be published.

Flash News