38,249 BUILDINGS IN BENGALURU READY FOR DEMOLITION..!? “ಡೆಮಾಲಿಷನ್” ಗೆ ಸಿದ್ಧವಾಗಿವೆ ಬೆಂಗಳೂರಿನ 38,249 ಕಟ್ಟಡಗಳು..ಹೈ ಕೋರ್ಟ್ ಗೆ ಸಲ್ಲಿಸೊಕ್ಕೆ ಪಟ್ಟಿ ರೆಡಿ ಮಾಡಿದ ಬಿಬಿಎಂಪಿ ಕಾನೂನು ಕೋಶ..

ನವೆಂಬರ್ 31ಕ್ಕೆ ಅನ್ವಯವಾಗುವಂತೆ ಸರ್ವೆ ನಡೆಸಿದ್ದು 1,30,937 ಕಟ್ಟಡ-ನೊಟೀಸ್ ಸರ್ವೆ ಮಾಡಿದ್ದು 13755 ಕಟ್ಟಡ.

0

ಬೆಂಗಳೂರು:ಕಟ್ಟಡ ನಿರ್ಮಾಣ ನಿಯಾಮವಳಿ ಉಲ್ಲಂಘಿಸಿದ ತಪ್ಪಿಗೆ ಡೆಮಾಲಿಷನ್ ಆಗೊಕ್ಕೆ ಸಿದ್ಧವಾಗಿರುವ ಕಟ್ಟಡಗಳು ಎಷ್ಟು ಗೊತ್ತೆ… ಬಿಬಿಎಂಪಿ ಹೈ ಕೋರ್ಟ್ ಸೂಚನೆ ಮೇರೆಗೆ ಸಿದ್ಧಪಡಿಸಿರುವ ಪಟ್ಟಿ ಗಮನಿಸಿದ್ರೆ ಆಶ್ಚರ್ಯದೊಂದಿಗೆ ಅನುಮಾನವೂ ಮೂಡುತ್ತೆ. 30-11-2021 ಕ್ಕೆ ಅನ್ವಯವಾಗುವಂತೆ ಸಿದ್ದಪಡಿಸಿರುವ ಪಟ್ಟಿ ಪ್ರಕಾರ ಬಿಬಿಎಂಪಿ ಆಡಳಿತದ ವಕ್ರದೃಷ್ಟಿಗೆ ತುತ್ತಾಗಿರುವ ಕಟ್ಟಡಗಳು ಎಷ್ಟು ಗೊತ್ತೆ..? ಬರೋಬ್ಬರಿ 38,249.

ಹೌದು..ಅಕ್ರಮ ಕಟ್ಟಡಗಳ ಸರ್ವೆ ಮಾಡಿ ಅವನ್ನು ಡೆಮಾಲಿಷನ್ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್  ಬಿಬಿಎಂಪಿಗೆ ಸೂಚಿಸಿತ್ತು.ಪಾಲಿಕೆ 8 ವಲಯಗಳಲ್ಲಿರುವ ಅಧಿಕಾರಿಗಳು ಆರಂಭದಲ್ಲಿ ಸೋಮಾರಿತನ ಪ್ರದರ್ಶಿಸಿದರೂ ಕೋರ್ಟ್ ಚಾವಟಿ ಮೇಲೆ ಚಾವಟಿ ಬೀಸಿದ ನಂತರ  ಅಂತಿಮ ಪಟ್ಟಿಯನ್ನು ಸಿದ್ದಪಡಿಸಿ ಹೈಕೋರ್ಟ್ ಗೆ ಸಲ್ಲಿಸೊಕ್ಕೆ ಸಿದ್ಧವಾಗಿದೆ.

ಅಂದ್ಹಾಗೆ 8 ವಲಯಗಳಲ್ಲಿ ಬಿಬಿಎಂಪಿ ಅಧಿಕಾರಿಗಳು 1,30,937 ಕಟ್ಟಡಗಳನ್ನು ಸರ್ವೆಗೆ ಬಳಸಿಕೊಂಡಿದ್ದಾರೆ.ಈ ಪೈಕಿ   ಸೆಕ್ಷನ್  313 ಪ್ರಕಾರ 13755 ಕಟ್ಟಡಗಳ ಮಾಲೀಕರಿಗೆ ಕಟ್ಟಡಗಳಿಗೆ ಸಂಬಂಧಿಸಿದಂತೆ ಪ್ಲ್ಯಾನ್ ಸೇರಿದಂತೆ ಇತರೆಲ್ಲಾ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದೆ. ಈ ಪೈಕಿ 1560 ಕಟ್ಟಡಗಳ ಮಾಲೀಕರು ದಾಖಲೆಗಳನ್ನು ಸಲ್ಲಿಸಿದ್ದಾರೆ ಎನ್ನಲಾಗಿದೆ.

ಲೀಗಲ್ ಸೆಲ್ ನ ಮುಖ್ಯಸ್ಥ ದೇಶಪಾಂಡೆ
ಲೀಗಲ್ ಸೆಲ್ ನ ಮುಖ್ಯಸ್ಥ ದೇಶಪಾಂಡೆ

ಸೆಕ್ಷನ್ 248(1) ಹಾಗೂ 248(2) ಅನ್ವಯ 75 ಕಟ್ಟಡಗಳ ಮಾಲೀಕರಿಗೆ ಉಲ್ಲಂಘನೆ ಖಚಿತವಾಗಿರುವ ಬಗ್ಗೆ ನೊಟೀಸ್ ನೀಡಲಾಗಿದೆ.ಆದರೆ ಈ ಸಂಬಂದ ಯಾರೊಬ್ಬರೂ ದಾಖಲೆಗಳನ್ನಾಗಲಿ,ವಿವರಣೆಯನ್ನಾಗಲಿ ನೀಡಲು ವಿಫಲವಾಗಿದ್ದಾರೆ.ಈ ಅವಧಿಯಲ್ಲಿ ಡೆಮಾಲಿಷನ್ ಮಾಡಿರುವ ಕಟ್ಟಡ ಕೇವಲ ಎಷ್ಟು ಗೊತ್ತೆ..ಕೇವಲ ಒಂದೇ ಒಂದು..ಇದರಲ್ಲೇ ಗೊತ್ತಾಗುತ್ತೆ ಪಾಲಿಕೆಯ ಆಡಳಿತ ವ್ಯವಸ್ಥೆ ಅಕ್ರಮ ಕಟ್ಟಡಗಳ ವಿಷಯದಲ್ಲಿ ಎಷ್ಟು ಗಂಭೀರವಾಗಿದೆ.ಹೈ ಕೋರ್ಟ್ ಆರ್ಡರ್ಸ್ ನ್ನು ಯಾವ್ ರೀತಿ ಪಾಲನೆ ಮಾಡುತ್ತಿದೆ ಎನ್ನುವುದು.ಈ ಎಲ್ಲಾ ಸಂಗತಿಗಳ ಹಿನ್ನಲೆಯಲ್ಲಿ ಅಂತಿಮವಾಗಿ ಡೆಮಾಲಿಷನ್ ಆಗಬೇಕೆಂದು ಮಾಡಿರುವ ಪಟ್ಟಿಯಲ್ಲಿ 38249 ಕಟ್ಟಡಗಳನ್ನು ಸೇರಿಸಿ ಹೈ ಕೋರ್ಟ್  ಗ ಸಲ್ಲಿಸೊಕ್ಕೆ ಸಿದ್ದವಾಗಿದೆ.

ಬಿಬಿಎಂಪಿ ಸಿದ್ದಪಡಿಸಿಟ್ಟುಕೊಂಡಿರುವ ಪಟ್ಟಿಯನ್ನು ಗಮನಿಸಿದ್ರೆ ಅತೀ ಹೆಚ್ಚು ನಿಯಮ ಉಲ್ಲಂಘನೆ ಮಾಡಿರುವ ಕಟ್ಟಡಗಳು ಬೊಮ್ಮನಹಳ್ಳಿ ವಲಯದಲ್ಲಿದೆ.75098 ಕಟ್ಟಡಗಳನ್ನು ಸರ್ವೆ ಮಾಡಿ 4779 ಕಟ್ಟಡಗಳಿಗೆ ನೊಟೀಸ್ ಜಾರಿ ಮಾಡಲಾಗಿದೆ.

ಆರ್ ಆರ್ ನಗರದಲ್ಲಿ 38417 ಕಟ್ಟಡಗಳನ್ನು ಸರ್ವೆ ಮಾಡಿ 1687 ಕಟ್ಟಡಗಳಿಗೆ ನೊಟೀಸ್ ಜಾರಿ ಮಾಡಲಾಗಿದೆ.ಪಶ್ಚಿಮ ವಲಯದಲ್ಲಿ 10619 ಕಟ್ಟಡಗಳನ್ನು ಸರ್ವೆ ಮಾಡಿ 2701 ಕಟ್ಟಡಗಳಿಗೆ ನೊಟೀಸ್ ನೀಡಲಾಗಿದೆ.

ಇನ್ನು ಯಲಹಂಕದಲ್ಲಿ 2168 ಕಟ್ಟಡಗಳನ್ನು ಸರ್ವೆ ಮಾಡಿ 2143 ಕಟ್ಟಡಗಳಿಗೆ ನೊಟೀಸ್ ನೀಡಲಾಗಿದೆ.ಪೂರ್ವ  ವಲಯದಲ್ಲಿ 1291 ಕಟ್ಟಡಗಳನ್ನು ಸರ್ವೆ ಮಾಡಿ ದಾಖಲೆಗಳನ್ನು ಸಲ್ಲಿಸುವಂತೆ 1291 ಕಟ್ಟಡಗಳಿಗೆ ನೊಟೀಸ್ ನೀಡಲಾಗಿದೆ. ಮಹಾದೇವಪುರದಲ್ಲಿ 713 ಕಟ್ಟಡಗಳಲ್ಲಿ 713 ಕಟ್ಟಡಗಳು ಹಾಗೂ ದಾಸರಹಳ್ಳಿಯಲ್ಲಿ 459 ಕಟ್ಟಡಗಳಲ್ಲಿ 441 ಕಟ್ಟಡಗಳಿಗೆ ನೊಟೀಸ್ ಜಾರಿ ಮಾಡಲಾಗಿದೆ.

ಅಂದ್ಹಾಗೆ  ಅನಧೀಕೃತ ಕಟ್ಟಡಗಳ ಹಿನ್ನಲೆಯಲ್ಲಿ ಪತ್ತೆಯಾಗಿರುವ ಅಂತಿಮ ವರದಿಯಲ್ಲ.ನವೆಂಬರ್ 31 ರ ಅಂತ್ಯದವರೆಗು ಮಾಡಿದ ಸರ್ವೆಯಲ್ಲಿ ಅನಧೀಕೃತ ಎಂದು ತಿಳಿದುಬಂದಿದ್ದು ಡೆಮಾಲಿಷನ್ ಪಟ್ಟಿಗೆ 38,249 ಕಟ್ಟಡಗಳು ಸೇರ್ಪಡೆಯಾದಂ ತಾಗಿದೆ.

ಆದ್ರೆ ಈ ಪಟ್ಟಿ ಗಮನಿಸಿದರೆ ,ಹೈ ಕೋರ್ಟ್ ನೀಡಿದ ಸೂಚನೆ ಹಿನ್ನಲೆಯಲ್ಲಿ ಪಾಲಿಕೆ ಅಧಿಕಾರಿಗಳು ಆತುರದಲ್ಲಿ ಸರ್ವೆಮಾಡಿ ರೆಡಿ ಮಾಡಿದ ಪಟ್ಟಿ ಎನಿಸದೆ ಇರೊಲ್ಲ.

 

 

ವಲಯವಾರು ಅಕ್ರಮ ಕಟ್ಟಡಗಳ ವಿವರ ಕೆಳಕಂಡಂತಿದೆ.

ವಲಯ                   ಸರ್ವೆ ಮಾಡಲಾದ ಕಟ್ಟಡಗಳು             ಡೆಮಾಲಿಷನ್ ಗೆ ನೊಟೀಸ್ ನೀಡಲಾಗಿರುವ ಕಟ್ಟಡಗಳು

-ಬೊಮ್ಮನಹಳ್ಳಿ                       75098                                    4779 ಕಟ್ಟಡ

-ಆರ್ ಆರ್ ನಗರ                     38417                                    1687 ಕಟ್ಟಡ

-ಪಶ್ಚಿಮ ವಲಯ                      10619                                    2701 ಕಟ್ಟಡ

-ಯಲಹಂಕ                              2168                                     2143 ಕಟ್ಟಡ

-ಪೂರ್ವ  ವಲಯ                     1291                                      1291 ಕಟ್ಟಡ

-ಮಹಾದೇವಪುರ                    713                                         713 ಕಟ್ಟಡ

-ದಾಸರಹಳ್ಳಿ                          459                                        441 ಕಟ್ಟಡ

=============================================================

-ಒಟ್ಟು                               1,30,937                               13755 ಕಟ್ಟಡಗಳು

Spread the love
Leave A Reply

Your email address will not be published.

Flash News