ಬೆಂಗಳೂರು…ಕೊಂಚ ಯಾಮಾರಿದ್ರೂ ಜೆಸಿಬಿ ನಾರಾಯಣನ ಕಥೆ ಇವತ್ತು ಮುಗಿದೋಗಿ ಬಿಡ್ತಿತ್ತೇನೋ..ಆತನ ಹೆಂಡತಿ ಮಕ್ಕಳ ಪ್ರಾರ್ಧನೆ ಫಲವೋ..ಅಥವಾ ಆತನ ಹಿತವನ್ನು ಕಾಯೊಕ್ಕೆ ಪುಣ್ಯಾತ್ಮರೆನಿಸಿಕೊಂಡವರು ಮಾಡಿದ ಪುಣ್ಯದ ಫಲವೋ ಗೊತ್ತಿಲ್ಲ.,..ಅಥವಾ ಆತನ ಆಯಸ್ಸು ಗಟ್ಟಿಗಿತ್ತೇನೋ ಗೊತ್ತಿಲ್ಲ… ಜೆಸಿಬಿ ಅಟೆಂಪ್ಟ್ ನಲ್ಲಿ ಬದುಕುಳಿದಿದ್ದಾನೆ.ಇದು ಆತನಿಗೆ ಮತ್ತೊಂದು ಮರುಹುಟ್ಟು ಎಂದೇ ಹೇಳಲಾಗುತ್ತಿತ್ತು.
ಪಾತಕ ಲೋಕವೇ ಹಾಗೆ ಇಲ್ಲಿ ಹಗೆ ಯಾವಾಗ ಹೆಡೆ ಎತ್ತೋ ಹಾವಾಗುತ್ತೆಂದು ಹೇಳೋದೇ ಅಸಾಧ್ಯ. ಹಿಂದೆ ಎನ್ ಕೌಂಟರ್ ನಿಂದ ತಪ್ಪಿಸಿಕೊಂಡಿದ್ದ ರೌಡಿ ಶೀಟರ್ ನಾರಾಯಣ್ (ಆ ಎನ್ ಕೌಂಟರ್ ನಿಂದ ತಪ್ಪಿಸಿಕೊಳ್ಳೊಕ್ಕೆ ಜೆಸಿಬಿಗೆ ಸಹಾಯ ಮಾಡಿದಾಕೆ ಓರ್ವ ಪತ್ರಕರ್ತೆ ಎನ್ನುವುದು ಸುದ್ದಿಯಾಗಿತ್ತು,ಆ ಪತ್ರಕರ್ತೆ ಇವತ್ತು ವೆಬ್ ಸೈಟ್ ವೊಂದರಲ್ಲಿ ಕೆಲಸ ಮಾಡುತ್ತಿದ್ದಾಳೆ ಕೂಡ.ಆಕೆ ಹಾಗೆ ಮಾಡೊಕ್ಕೆ ಆತನಿಂದ ಲಕ್ಷಾಂತರ ಬಕ್ಷೀಸ್ ಪಡೆದಿದ್ದಳು.ಅದರಲ್ಲಿ ಸಿಂಹಪಾಲು ಆಕೆ ಕೆಲಸ ಮಾಡುತ್ತಿದ್ದ ಚಾನೆಲ್ ನ ಮುಖ್ಯಸ್ಥರಿಗೂ ಶೇರ್ ಆಗಿತ್ತು.ಆಗ ಆ ಪತ್ರಕರ್ತೆಯನ್ನು ಆಗಿನ ಪೊಲೀಸ್ ಅಧಿಕಾರಿಯೊಬ್ಬರು ಕರೆದು ಚೆನ್ನಾಗಿ ಉಗಿದಿದ್ದರಂತೆ.ಯಾಕಂದ್ರೆ ಅವತ್ತು ಆತನಿಗೆ ಇಟ್ಟಿದ್ದ ಮುಹೂರ್ತದಂತೆ ಎಲ್ಲವೂ ನಡೆದೋಗಿದ್ದರೆ ಜೆಸಿಬಿ ಫೋಟೋಗೆ ಹಾರ ಬಿದ್ದು ಅದೆಷ್ಟೋ ವರ್ಷಗಳಾಗುತ್ತಿದ್ದವೇನೋ..?! ) ನಂತರವೂ ಅನೇಕ ಅಟೆಂಪ್ಟ್ ಗಳಲ್ಲೂ ಆತ ಬಚಾವಾಗಿದ್ದ..
ಇವತ್ತು ಕೂಡ ಆತನ ಅದೃಷ್ಟ ಚೆನ್ನಾಗಿತ್ತು ಅನ್ಸುತ್ತೆ..ಕೂದಲೆಳೆ ಅಂತರದಲ್ಲಿ ಜೀವ ಉಳಿಸಿಕೊಂಡಿದ್ದಾನೆ. ಹುಳಿಮಾವು ಠಾಣೆ ರೌಡಿಶೀಟರ್ ಆಗಿದ್ದ ಜೆಸಿಬಿ ನಾರಾಯಣನ ಹತ್ಯೆಗೆ ಹಂತಕರು ವ್ಯವಸ್ತಿತವಾಗಿ ಸಂಚು ರೂಪಿಸಿ ಹುಳಿಮಾವು ಠಾಣಾ ವ್ಯಾಪ್ತಿಯ ಡಿಎಲ್ ಎಫ್ ರಸ್ತೆಯಲ್ಲಿ ಅಟ್ಯಾಕ್ ಮಾಡೊಕ್ಕೆ ಹೊಂಚಾಕಿ ಕಾಯುತ್ತಿದ್ದರು. ಜೆಸಿಬಿ ನಾರಾಯಣ ಕಾರು ಅಡ್ಡಗಟ್ಟಿದ್ದ ಗ್ಯಾಂಗ್ ಹಲ್ಲೆ ನಡೆಸಲು ಯತ್ನಿಸಿದೆ.ಆದರೆ ಅಪಾಯ ಅರಿತ ಜೆಸಿಬಿ ನಾರಾಯಣ ತನ್ನ ಭಂಟರೊಂದಿಗೆ ಕಾರು ರಿವರ್ಸ್ ತಗೊಂಡು ಎಸ್ಕೇಪ್ ಆಗಿದ್ದಾನೆ.
ಹಾಡಹಗಲೇ ನಡುರಸ್ತೆಯಲ್ಲಿ ಮಾರಕಾಸ್ತ್ರ ಹಿಡಿದು ಹೊಂಚು ಹಾಕಿ ಅಟ್ಯಾಕ್ ಮಾಡಿದ ಟೀಮ್ ಯಾವುದೆನ್ನುವುದು ಸ್ಪಷ್ಟವಾಗಿಲ್ಲ. ನಾಲ್ಕೈದು ಜನ ದುಷ್ಕರ್ಮಿಗಳ ಗ್ಯಾಂಗ್ ಚಲನವಲನ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ. ದುಷ್ಕರ್ಮಿಗಳು ಮಾರಕಾಸ್ತ್ರ ಹಿಡಿದು ಹಾಡಹಗಲೇ ನಡುರಸ್ತೆಯಲ್ಲಿ ಅಟ್ಯಾಕ್ ಯತ್ನಿಸುವ ದೃಶ್ಯ ಸೆರೆಯಾಗಿದ್ದು, ಸಿನಿಮೀಯ ರೀತಿಯಲ್ಲಿ ದುಷ್ಕರ್ಮಿಗಳ ಅಟ್ಯಾಕ್ ನಿಂದ ಎಸ್ಕೇಪ್ ಆದ ರೌಡಿಶೀಟರ್ ಕೊಲೆ ಯತ್ನಕ್ಕೆ ಜೆಸಿಬಿ ನಾರಾಯಣನ ಶತೃಗಳೇ ಸ್ಕೆಚ್ ಹಾಕಿದ್ದರೆನ್ನುವುದು ಪ್ರಾಥಮಿಕ ಮಾಹಿತಿಯಿಂದ ಹೊರಬಿದ್ದಿದೆ.
ನಾಲ್ಕೈದು ಜನ ದುಷ್ಕರ್ಮಿಗಳ ಗ್ಯಾಂಗ್ ನಿಂದ ಕಾರ್ ಅಡ್ಡಗಟ್ಟಿ ಹತ್ಯೆಗೆ ಯತ್ನ ಮಾಡಲಾಗಿದೆ.ಆದರೆ ಅಪಾಯದ ಮುನ್ಸೂಚನೆ ಅರಿತು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ.ಲಾಂಗ್ ಹಿಡಿದು ಕಾರಿನಿಂದ ಇಳಿದು ಅಡ್ಡಗಟ್ಟುತ್ತಿದ್ದಂತೆ ಕಾರು ರಿವರ್ಸ್ ಚಲಾಯಿಸಿ ಎಸ್ಕೇಪ್ ಆಗಿದ್ದಾನೆ.ಸಿಸಿ ಕ್ಯಾಮರಾ ದೃಶ್ಯ ಹಾಗು ದೂರನ್ನು ಆಧರಿಸಿ ಆರೋಪಿಗಳಿಗೆ ಶೋಧ ನಡೆಸಲಾಗುತ್ತಿದೆ.
ಇನ್ನೊಂದೆಡೆ ಕುಖ್ಯಾತ ಪಾತಕಿ ಜೆಸಿಬಿ ನಾರಾಯಣ ಕೊಲೆ ಬಗ್ಗೆ ಸಾಕಷ್ಟು ಅನುಮಾನ ಕಾಡ ಹತ್ತಿದೆ. ಕೊಲೆಯತ್ನದ ಸುಳಿವು ಮೊದಲೇ ಪೊಲೀಸ್ರಿಗೆ ಇತ್ತಾ? ಜೆಸಿಬಿ ನಾರಯಣನೇ ಪ್ಲಾನ್ ಮಾಡಿ ಈ ಅಟ್ಯಾಕ್ ಮಾಡಿಸಿಕೊಂಡ್ನಾ? ಎನ್ನುವುದು ಪ್ರಶ್ನೆಗೀಡಾಗುತ್ತಿದೆ. ಸಿಸಿಟಿವಿ ಇರೋ ಜಾಗದಲ್ಲೆ ಕಾದು ಅಟ್ಯಾಕ್ ಮಾಡಿದ ಹಂತಕರು ಕಾರು ಡಿಕ್ಕಿಯಾದ್ರೂ ಸಡನ್ ಅಟ್ಯಾಕ್ ಮಾಡದ ಸುಮ್ಮನಿದ್ದರೇಕೆ..? ಎನ್ನುವ ಪ್ರಶ್ನೆ ಹಿಂದೆ ಇದೆಲ್ಲಾ ಜೆಸಿಬಿ ನಾರಾಯಣ ತನಗೆ ಗನ್ ಮ್ಯಾನ್ ಪಡೆಯಲು ನಾರಾಯಣ ಮಾಡಿದ ಪ್ಲ್ಯಾನಾ ಎನ್ನುವ ಅನುಮಾನ ಕಾಡುತ್ತಿದೆ.
ಪೊಲೀಸ್ರಿಗೆ ಮಾಹಿತಿ ಕೊಟ್ಟು, ಅವ್ರ ಅನುಮತಿ ಪಡೆದೇ ಅಟ್ಯಾಕ್ ಪ್ಲಾನ್ ಮಾಡಿರುವ ಶಂಕೆಯನ್ನು ಆಗ್ನೇಯ ವಿಭಾಗ ಡಿಸಿಪಿ ಶ್ರೀನಾಥ್ ಜೋಶಿ ವ್ಯಕ್ತಪಡಿಸಿದ್ದಾರೆ.ಸಧ್ಯಕ್ಕೆ ಎಲ್ಲವೂ ನಿಗೂಢವಾಗಿದೆ. ಜೆಸಿಬಿ ನಾರಾಯಣನನ್ನು ಠಾಣೆಗೆ ಕರೆಯಿಸಿಕೊಂಡು ಪೊಲೀಸರು ವಿಚಾರಣೆ ನಡೆಸೊಕ್ಕೆ ಮುಂದಾಗಿದ್ದಾರೆ.ವಿಚಾರಣೆ ವೇಳೆಯಲ್ಲಿ ಆತ ಬಾಯಿಬಿಡುವ ವಿಚಾರಗಳ ಮೇಲೆ ಅಟೆಂಪ್ಟ್ ಮಾಡಿದವರ ಹಿನ್ನಲೆ-ವಿವರ ಗೊತ್ತಾಗಬಹುದೇನೋ..?!