GEN BIPIN SINGH RAWAT NO MORE:ಹೆಲಿಕ್ಯಾಪ್ಟರ್ ಪತನದಲ್ಲಿ ಗಾಯಾಳುವಾಗಿದ್ದ ಸರ್ವ ಸೇನಾಧ್ಯಕ್ಷ ಬಿಪಿನ್ ಸಿಂಗ್ ರಾವತ್ ನಿಧನ

ರಾಜಪುತ ಕುಟುಂಬದ ವೀರ ಸೇನಾನಿ-ಧೈರ್ಯ-ಸಾಹಸ-ಕೆಚ್ಚೆದೆಯ ನಾಯಕನ ದುರ್ಮರಣ

0

ತಮಿಳುನಾಡಿನ ಕೂನೂರಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್‌  ಪತನದಲ್ಲಿ ಸರ್ವಸೇನಾಧ್ಯಕ್ಷ ,ಸೇನಾ ಸಿಬ್ಬಂದಿ ಮುಖ್ಯಸ್ಥ,ರಕ್ಷಣಾ ಪಡೆಗಳ ಮುಖ್ಯಸ್ಥ( ಸಿಡಿಎಸ್)  ಬಿಪಿನ್ ರಾವತ್ ಕೊನೆಯುಸಿರೆಳೆದಿದ್ದಾರೆ. ಸಿಡಿಎಸ್‌ ಬಿಪಿನ್‌ ರಾವತ್‌ ಭಾರತೀಯ ವಾಯುಪಡೆಯ ‘ಎಂಐ–17ವಿ5’ ಹೆಲಿಕಾಪ್ಟರ್‌ ನಲ್ಲಿ ಪಯಣಿಸುತ್ತಿದ್ದ ವೇಳೆ  ತಮಿಳುನಾಡಿನ ಕೂನೂರು ಬಳಿ ಅಪಘಾತಕ್ಕೀಡಾಗಿದೆ. ಘಟನೆಗೆ ಕಾರಣ ತಿಳಿದುಬಂದಿಲ್ಲ.ಪೈಲೆಟ್ ಸೇರಿ 14 ಜನರಿದ್ದ ಹೆಲಿಕ್ಯಾಪ್ಟರ್ ದುರಂತಕ್ಕೀಡಾದ ದುರ್ಘಟನೆಯಲ್ಲಿ ರಾವತ್ ಪತ್ನಿ ಕೂಡ ಕೊನೆಯುಸಿರೆಳೆದಿದ್ದಾರೆ.ದುರ್ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ರಾವತ್ ಅವರಿಗೆ ಊಟಿಯ ನೀಲಗಿರೀಸ್  ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾದ್ರು ಫಲಕಾರಿಯಾಗಲಿಲ್ಲ.

ಭೂಸೇನೆಯ ಮಾಜಿ  ಮುಖ್ಯಸ್ಥರಾಗಿದ್ದ  ಬಿಪಿನ್​ ರಾವತ್ ಅವರನ್ನು ಕಳೆದ ಡಿಸೆಂಬರ್ ನಲ್ಲಿ ಸಶಸ್ತ್ರ ಪಡೆಗಳ ಮುಖ್ಯಸ್ಥರಾಗಿ (ಚೀಫ್​ ಆಫ್​ ಡಿಫೆನ್ಸ್​ ಸ್ಟಾಫ್​) ಪ್ರಧಾನಿ ನರೇಂದ್ರ ಮೋದಿ ನೇಮಿಸಿದ್ದರು. ಡಿ.31ರಂದು ನಿವೃತ್ತರಾಗಿದ್ದ ಅವರನ್ನು ಕೇಂದ್ರ ಸರ್ಕಾರ ದೇಶದ ಮೊದಲ ಸಿಡಿಎಸ್​ ಆಗಿ ನೇಮಕ ಮಾಡಿತ್ತು. ಈ ಹಿಂದೆ ಆಗಸ್ಟ್​ 15ರಂದು ಪ್ರಧಾನಿ ನರೇಂದ್ರ ಮೋದಿಯವರು ಭಾಷಣ ಮಾಡುವ ಸಂದರ್ಭದಲ್ಲಿ ದೇಶದ ಮೂರೂ ರಕ್ಷಣಾ ಪಡೆಗಳಿಗೆ ಓರ್ವ ಮುಖ್ಯಸ್ಥನನ್ನು ನೇಮಕ ಮಾಡುವ ಬಗ್ಗೆ ಪ್ರಸ್ತಾಪಿಸಿದ್ದರು. ಅದರಂತೆ ಈಗ ದೇಶಕ್ಕೆ ಮೊದಲ ಸಿಡಿಎಸ್ ನೇಮಕ ಆಗಿದೆ.ಸಿಡಿಎಸ್​ ಹುದ್ದೆ ಸೃಷ್ಟಿಯಾದಾಗಿನಿಂದ ಅದಕ್ಕೆ ಬಿಪಿನ್​ ರಾವತ್​ ಹೆಸರೇ ಕೇಳಿಬರುತ್ತಿತ್ತು.

63 ವರ್ಷದ ಬಿಪಿನ್ ಲಕ್ಷ್ಮಣ್ ಸಿಂಗ್ ರಾವತ್ ಉತ್ತರಾಕಾಂಡದ ಪೌರಿ ಎಂಬಲ್ಲಿ ಜನಿಸಿದ್ರು.ರಾಜಪುತ ಕುಟುಂಬದ ಹಿನ್ನಲೆಯುಳ್ಳ ರಾವತ್ ಮನೆಯಲ್ಲೂ ತಲೆ ಮಾರುಗಳು ಸೇನೆಯ ಪ್ರಮುಖ ಹುದ್ದೆಗಳಲ್ಲಿ ದೇಶಕ್ಕಾಗಿ ಸೇವೆ ಸಲ್ಲಿಸಿದ್ವು.ಡೆಹ್ರಾಡೂನ್ ನ ಕ್ಯಾಂಬ್ರಿಯನ್ ಪ್ರೌಢಶಾಲೆ, ಶಿಮ್ಲಾದ ಸೆಂಟ್ ಎಡ್ವರ್ಡ್  ಶಾಲೆ ಹಾಗೂ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ವ್ಯಾಸಂಗ ಮಾಡಿದ್ರು.ಡಿಫೆನ್ಸ್ ಸರ್ವಿಸಸ್ ಸ್ಟಾಫ್ ಕಾಲೇಜ್ ನ ಪದವೀಧರರಾಗಿದ್ದ ರಾವತ್ ಉನ್ನತ ಶಿಕ್ಷಣವನ್ನು ಕನ್ಸಾಸ್ ನ ಅಕಾಡೆಮಿಯಿಂದ ಪಡೆದರು.ಡಿಫೆನ್ಸ್ ಸ್ಟಡಿಸ್ ವಿಷಯದಲ್ಲೇ ಪಿಎಚ್ ಡಿ ಪಡೆದರು.

ಪರಮ್ ವಿಶಿಷ್ಟ್ ಸೇವಾ ಪದಕ, ಉತ್ತಮ್ ಯುದ್ಧ್ ಸೇವಾ ಪದಕ,ಅತಿ ವಿಶಿಷ್ಟ್ ಸೇವಾ ಪಸಕ, ಯುದ್ಧ್ ಸೇವಾ ಪದಕ, ಸೇನಾ ಪದಕ,ವಿಶಿಷ್ಟ ಸೇವಾ ಪದಕ, ವೌಂಡ್ ಪದಕ,ಸಾಮಾನ್ಯ ಸೇವಾ ಪದಕ, ಸ್ಪೆಷಲ್ ಸರ್ವಿಸ್ ಪದಕ, ಆಪರೇಷನ್ ಪರಾಕ್ರಮ್ ಪದಕ, ಸೈನ್ಯ ಸೇವಾ ಪದಕ, ಹೈ ಆಟಿಟ್ಯುಡ್ ಸರ್ವಿಸ್ ಪದಕ, ವಿದೇಶ ಸೇವಾ ಪದಕ, 50ನೇ ವರ್ಷದ ಸ್ವಾತಂತ್ರ್ಯೋತ್ಸವ ಪದಕ..ಹೀಗೆ ರಕ್ಷಣಾ ಸೇವೆಯಲ್ಲಿ ಸಲ್ಲಿಸಿದ ಉತ್ಕ್ರಷ್ಟ ಸೇವೆಗೆ ಅನೇಕ ಪದಕಗಳು ರಾವತ್ ಕೊರಳೇರಿದ್ದವು.

ಸೆಕೆಂಡ್ ಲೆಫ್ಟಿನೆಂಟ್, ಲೆಫ್ಟಿನೆಂಟ್,ಕ್ಯಾಪ್ಟನ್,ಮೇಜರ್,ಲೆಫ್ಟಿನೆಂಟ್ ಕರ್ನಲ್,ಕರ್ನಲ್,ಬ್ರಿಗೇಡಿಯರ್,ಮೇಜರ್ ಜನರಲ್,ಲೆಫ್ಟಿನೆಂಟ್ ಜನರಲ್  ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಭಾರತೀಯ ಸೇನೆಯ ಮುಖ್ಯಸ್ಥರಾಗಿ 2017 ರಲ್ಲಿ ನಿಯೋಜನೆಗೊಂಡಿದ್ದರು.ರಕ್ಷಣಾ ಕ್ಷೇತ್ರದಲ್ಲಿ ಸಲ್ಲಿಸಿದ ಅಪರಿಮಿತ ಸೇವೆಗೆ ಪ್ರಧಾನಿ ನರೇಂದ್ರ ಮೋದಿ 2019ರ ಡಿಸೆಂಬರ್ ನಲ್ಲಿ ರಾವತ್ ಅವರನ್ನು ರಕ್ಷಣಾಪಡೆಗಳ ಮುಖ್ಯಸ್ಥರಾಗಿ ನಿಯೋಜಿಸಿದ್ದರು.

Spread the love
Leave A Reply

Your email address will not be published.

Flash News