Breakinglock downMoreScrollTop NewsUncategorizedಜಿಲ್ಲೆಫೋಟೋ ಗ್ಯಾಲರಿರಾಜಕೀಯರಾಜ್ಯ-ರಾಜಧಾನಿ

LOCAL FIGHT REULT DECLARED-BJP LEADING-CONGRESS IN 2ND-VULNERABLE DEFEAT TO JDS:ರಿಸಲ್ಟ್ ಡೇ..ಮೇಲ್ಮನೆ ಎಲೆಕ್ಷನ್ ಫಲಿತಾಂಶದಲ್ಲಿ  ಬಿಜೆಪಿಗೆ ಭಾರೀ ಮುನ್ನಡೆ-ಕೈ ಸಾಧನೆ ತೃಪ್ತಿಕರ- ಜೆಡಿಎಸ್ ಹೀನಾಯ ಸೋಲು

ಬೆಂಗಳೂರು:ಮೇಲ್ಮನೆಯ 25 ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದೆ.ನಿರೀಕ್ಷೆಯಂತೆಯೇ ಬಿಜೆಪಿ ಅತ್ಯಧಿಕ ಸ್ಥಾನಗಳಲ್ಲಿ ಗೆಲುವು ಹಾಗೂ ಮುನ್ನಡೆ ಕಾಯ್ದುಕೊಂಡಿದೆ.ಪರಿಷತ್ ನಲ್ಲಿ ಬಹುಮತ ಪಡೆಯಲು ಬೇಕಿರುವಷ್ಟು ಸ್ಥಾನಗಳನ್ನು ಪಡೆದುಕೊಳ್ಳುವತ್ತ ದಾಪುಗಾಲು ಹಾಕುತ್ತಿದೆ.ಇನ್ನು  ಕಾಂಗ್ರೆಸ್  ಸಾಧನೆ ತೃಪ್ತಿಕರವಾಗಿದ್ದು ಜೆಡಿಎಸ್ ಕೇವಲ ಒಂದು ಸ್ಥಾನ ಪಡೆದುಕೊಳ್ಳುವುದಕ್ಕೆ ಸೀಮಿತವಾಗಿದೆ.ಎರಡು ಕ್ಷೇತ್ರಗಳನ್ನು ಕಳೆದುಕೊಂಡು ಹೀನಾಯ ಸೋಲು ಅನುಭವಿಸಿದೆ.

ತುಮಕೂರು ಹಾಗು ಕೋಲಾರದಲ್ಲಿ ಜೆಡಿಎಸ್ ತನ್ನ ಸ್ಥಾನ ಕಳೆದುಕೊಂಡಿದೆ.ಕೇವಲ ಹಾಸನದಲ್ಲಿ ಮಾತ್ರ ಸೂರಜ್ ರೇವಣ್ಣ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ದಕ್ಷಿಣ ಕನ್ನಡದಲ್ಲಿ ಹಾಲಿ ಸಚಿವ ಹಾಗೂ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ್ ಪೂಜಾರಿ ಗೆಲುವು ಸಾಧಿಸಿದ್ದಾರೆ.ಶಿವಮೊಗ್ಗದಲ್ಲಿ ಮಾಜಿ ವಿಧಾನಪರಿಷತ್ ಸಭಾಪತಿ ಹಾಗೂ ಬಿಜೆಪಿ ಮುಖಂಡ ಡಿ.ಎಚ್.ಶಂಕರಮೂರ್ತಿ ಅವರ ಪುತ್ರ ಡಿ.ಎಸ್ ಅರುಣ್ ಗೆಲುವು ಸಾದಿಸಿದ್ದಾರೆ.ಅವರು ಕಾಂಗ್ರೆಸ್ ನ ಮಾಜಿ ಎಮ್ಮೆಲ್ಸಿ ಪ್ರಸನ್ನಕುಮಾರ್ ಅವರನ್ನು ಸೋಲಿಸಿದ್ದಾರೆ.ಚಿಕ್ಕಮಗಳೂರಿನಲ್ಲಿ ಎಂ.ಕೆ ಪ್ರಾಣೇಶ್ ಅವರಿಗೆ ಎರಡನೇ ಬಾರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ.ಅವರು ಕಾಂಗ್ರೆಸ್ ಶಾಂತನಗೌಡ ಅವರನ್ನು ಸೋಲಿಸಿದ್ದಾರೆ.

ಕೋಲಾರ-ಚಿಕ್ಕಬಳ್ಳಾಪುರದಲ್ಲಿ ಕೈ ಅಭ್ಯರ್ಥಿ ಅನಿಲ್ ಕುಮಾರ್ ಗೆಲುವು ಸಾಧಿಸಿದ್ದಾರೆ.ಅವರು ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ವೇಣುಗೋಪಾಲ್ ಅವರನ್ನು 432 ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ.ಇಲ್ಲಿ ಜೆಡಿಎಸ್ ಮಣ್ಣುಮುಕ್ಕಿದೆ.ವಿಜಯಪುರ-ಬಾಗಲಕೋಟೆ ದ್ವಿಸದಸ್ಯತ್ವ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ.ಕೈ ಅಭ್ಯರ್ಥಿ ಸುನೀಲ್ ಗೌಡ ಪಾಟೀಲ್ ಗೆಲುವು ಸಾಧಿಸಿದ್ದಾರೆ.ಅವರು ಬಿಜೆಪಿಯ ಪಿ.ಎಚ್ ಪೂಜಾರಿ ಅವರನ್ನು ಹಿಂದಿಕ್ಕಿ ಗೆಲುವು ಸಾಧಿಸಿದ್ದಾರೆ.

ತುಮಕೂರಿನಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ.,ಮಾಜಿ ಶಾಸಕ ,ಮಾಜಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಇಲ್ಲಿ  ಗೆಲುವು ಸಾಧಿಸಿದ್ದಾರೆ.ಅವರು ಬಿಜೆಪಿ ಹಾಗು ಜೆಡಿಎಸ್ ನ ಲೋಕೇಶ್ ಅವರನ್ನು ಸೋಲಿಸಿದ್ದಾರೆ.ಬೀದರ್ ನಲ್ಲಿ ಕೈ ಗೆಲುವು ಸಾಧಿಸಿದೆ.ಕೈ ಅಭ್ಯರ್ಥಿ  ಭೀಮರಾವ್ ಪಾಟೀಲ್ ಗೆಲುವು ಸಾಧಿಸಿದ್ದಾರೆ.ಕೊಡಗಿನಲ್ಲಿ ಬಿಜೆಪಿ ಗೆಲುವು ಸಾಧಿಸುವ ಮೂಲಕ ಪಕ್ಷದ ಭದ್ರಕೋಟೆ ಎನ್ನುವುದನ್ನು ಪ್ರೂವ್ ಮಾಡಿದೆ.ಇಲ್ಲಿ ಬಿಜೆಪಿಯ ಸುಜಾ ಕುಶಾಲಪ್ಪ ಗೆಲುವು ಕಂಡಿದ್ದಾರೆ.ಕಾಂಗ್ರೆಸ್ ನ ಮಾಜಿ ಸಚಿವ ಎ.ಮಂಜು ಅವರ ಪುತ್ರ ಮಂಥರ್ ಗೌಡ ಸೋಲು ಕಂಡಿದ್ದಾರೆ.

ಮೈಸೂರು ಕ್ಷೇತ್ರದಲ್ಲಿ ಕೈ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ.ಕೈ ಅಭ್ಯರ್ಥಿ  ಡಾ.ತಿಮ್ಮಯ್ಯ ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ತಿಗಳನ್ನು ಹಿಂದಿಕ್ಕಿದ್ದಾರೆ.ಬೆಂಗಳೂರು ಗ್ರಾಮಾಂತರದಲ್ಲಿ ಕೈ ಅಭ್ಯರ್ಥಿ ಮುನ್ನಡೆ ಕಾಯ್ದುಕೊಂಡಿದ್ದಾರೆ.ಕೈ ಅಭ್ಯರ್ಥಿ ರವಿ ಮುನ್ನಡೆ ಸಾಧಿಸಿದ್ದಾರೆ.ಉತ್ತರ ಕನ್ನಡದಲ್ಲಿ ಬಿಜೆಪಿ ಗೆಲುವಿನ ಪಥದಲ್ಲಿ ಸಾಗಿದೆ.ಇಲ್ಲಿ ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ್ ಅವರು ಮುನ್ನಡೆ ಕಾಯ್ದುಕೊಂಡಿದ್ದಾರೆ.ಚಿತ್ರದುರ್ಗ-ದಾವಣಗೆರೆಯಲ್ಲಿ ಬಿಜೆಪಿಯ ನವೀನ್ ಅವರು ಗೆಲುವು ಸಾಧಿಸಿದ್ದಾರೆ.ಇಲ್ಲಿ ಕೈ ಅಭ್ಯರ್ಥಿ ಹೀನಾಯ ಸೋಲು ಕಂಡಿದ್ದಾರೆ.

ಮಂಡ್ಯದಲ್ಲಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದೆ.ಇಲ್ಲಿ ದಿನೇಶ್ ಗೂಳಿ ಗೌಡ ಮುನ್ನಡೆ ಕಾಯ್ದುಕೊಂಡಿದ್ದಾರೆ.ಜೆಡಿಎಸ್ ನ ಅಪ್ಪಾಜಿ ಗೌಡ ಹಿನ್ನಡೆ ಅನುಭವಿಸುತ್ತಿದ್ದಾರೆ.ಬೆಳಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ.ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ  ಚನ್ನರಾಜ ಹಟ್ಟಿಹೊಳಿ ಬಿಜೆಪಿ ಅಭ್ಯರ್ತಿಗಿಂತ ಹೆಚ್ಚು ಮುನ್ನಡೆ ಸಾಧಿಸಿದ್ದಾರೆ.ಬೆಂಗಳೂರು ನಗರ ಬಿಜೆಪಿ ತೆಕ್ಕೆಗೆ ಬಿದ್ದಿದೆ.ಬಿಜೆಪಿ ಅಭ್ಯರ್ಥಿ  ಗೋಪಿನಾಥ್ ರೆಡ್ಡಿ ಗೆಲುವು ಸಾಧಿಸಿದ್ದಾರೆ.ಅವರು ಕೈ ಅಭ್ಯರ್ಥಿ ಯೂಸುಫ್ ಷರೀಫ್ ಅಲಿಯಾಸ್ ಕೆಜಿಎಫ್ ಬಾಬು ಅವರನ್ನು ಸೋಲಿಸಿದ್ದಾರೆ.ಧಾರವಾಡದಲ್ಲಿ ಕೈ ಅಭ್ಯರ್ಥಿ ಸಲೀಂ ಅಹಮದ್  ಗೆಲುವು ಸಾಧಿಸಿದ್ದಾರೆ.ಬಿಜೆಪಿಯ ಅಭ್ಯರ್ಥಿ ಹಾಲಿ ಎಮ್ಮೆಲ್ಸಿ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಸಹೋದರ ಪ್ರದೀಪ್ ಶೆಟ್ಟರ್ ಅವರನ್ನು ಸೋಲಿಸಿದ್ದಾರೆ.

Spread the love

Related Articles

Leave a Reply

Your email address will not be published.

Back to top button
Flash News