JDS ADJUSTMENT POLITICS:HORATTI AND JDS MAY LOOSE CHAIRMAN POST..?ಜೆಡಿಎಸ್ ಅಡ್ಜೆಸ್ಟ್ ಮೆಂಟ್ ರಾಜಕಾರಣ: ಸೆಲ್ಪ್ ಸೂಸೈಡ್ ಮಾಡಿಕೊಂಡ ದಳಪತಿ:ಹೊರಟ್ಟಿ ಸ್ಥಾನಕ್ಕೆ ಬರಲಿದೆಯಾ ಕುತ್ತು..?

ಬಹುಮತ ಪಡೆದ ಹಿನ್ನಲೆಯಲ್ಲಿ ಜೆಡಿಎಸ್ ಜತೆಗಿನ ಮೈತ್ರಿ ಕಡಿದುಕೊಳ್ಳಲಿದೆಯಾ ಬಿಜೆಪಿ-ಹೊರಟ್ಟಿಗೆ ಅವಮಾನ ಮಾಡಿದ ದಳಪತಿಗಳು..

0

ಬೆಂಗಳೂರು: ಎಮ್ಮೆಲ್ಸಿ ಚುನಾವಣೆಯಲ್ಲಿ ಬಹುಮತ ಪಡೆಯೊಕ್ಕೆ ಬೇಕಿರುವಷ್ಟು ಸ್ಥಾನಗಳನ್ನು ಗೆದ್ದಿರುವ ಹಿನ್ನಲೆಯಲ್ಲಿ ಜೆಡಿಎಸ್ ಜತೆಗೆ ಮೈತ್ರಿ ಕಡಿದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ.ಈ ಹಿನ್ನಲೆಯಲ್ಲಿ ಜೆಡಿಎಸ್ ಜತೆಗಿನ ಮೈತ್ರಿ ಅಭ್ಯರ್ಥಿಯಾಗಿರುವ ಸಭಾಪತಿ ಬಸವರಾಜ್ ಹೊರಟ್ಟಿ ಸಭಾಪತಿ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗುತ್ತಿದೆ.

ಬಿಜೆಪಿಗೆ ಅಗತ್ಯವಿರುವ ಬಹುಮತ ಈ ಬಾರಿಯ ಚುನಾವಣೆಯಲ್ಲಿ ದಕ್ಕಿರುವ ಹಿನ್ನಲೆಯಲ್ಲಿ ಜೆಡಿಎಸ್ ಜತೆಗಿನ ಮೈತ್ರಿಯ ಅವಶ್ಯಕತೆಯೇನು ಇಲ್ಲ..ಹಾಗಾಗಿ ಮೈತ್ರಿ ಕಡಿದುಕೊಂಡರೂ ಆಶ್ಚರ್ಯಪಡಬೇಕಿಲ್ಲ..ಒಂದು ವೇಳೆ ಬಿಜೆಪಿ ತನ್ನ ಸಂಬಂಧವನ್ನು ಕಡಿದುಕೊಂಡರೆ ಮೈತ್ರಿ ಅಭ್ಯರ್ಥಿ ಹೊರಟ್ಟಿ ಸ್ಥಾನ ಕಳೆದುಕೊಳ್ಳುವುದು ಬಹುತೇಕ ಖಚಿತ.

ರಾಜಕೀಯ ಅಸ್ಥಿತ್ವದ ದೃಷ್ಟಿಯಿಂದಲೂ ಜೆಡಿಎಸ್ ಜತೆಗಿನ ಮೈತ್ರಿ ಕಡಿದುಕೊಳ್ಳುವುದು ಬಿಜೆಪಿಗೆ

ಅನಿವಾರ್ಯವಾಗಲಿದೆ.ಏಕೆಂದರೆ ಏಕಪಕ್ಷವಾಗಿ ನಿರ್ದಾರ ಕೈಗೊಳ್ಳಲು ಜೆಡಿಎಸ್ ಮೈತ್ರಿ ಅಡ್ಡವಾಗಬಹುದು..ಆದರೆ ಜೆಡಿಎಸ್ ಈ ಬೆಳವಣಿಗೆಯಿಂದ ಎಷ್ಟರ ಮಟ್ಟಿಗೆ ಕೊತ ಕೊತ ಕುದಿಯಲಿದೆ..ಭವಿಷ್ಯದಲ್ಲಿ ಅನೇಕ ರಾಜಕೀಯ ವಿಚಾರ ಹಾಗೂ ನಿರ್ದಾರಗಳಲ್ಲಿ ಬಿಜೆಪಿ ಜತೆಗೆ ನಿಲ್ಲುವ ಮನಸು ಮಾಡಲಿದೆ ಎನ್ನುವುದು ಕೂಡ ಕುತೂಹಲ ಮೂಡಿಸಿದೆ.ಒಂದ್ವೇಳೆ ಮೈತ್ರಿ ಕಡಿದುಕೊಂಡಿದ್ದೇ ಆದಲ್ಲಿ ಜೆಡಿಎಸ್ ನಿಂದ ಸಾಕಷ್ಟು ಅಂತರ ಕಾಯ್ದುಕೊಳ್ಳುವ ಸಾಧ್ಯತೆಗಳು ದಟ್ಟವಾಗಿದೆ ಎನ್ನಲಾಗುತ್ತಿದೆ.

ಆದರೆ ಒಂದಂತೂ ಸತ್ಯ, ಅಡ್ಜಸ್ಟ್ ಮೆಂಟ್ ರಾಜಕಾರಣಕ್ಕೆ ಜೋತುಬಿದ್ದು 6 ಸ್ಥಾನಗಳ ಪೈಕಿ ಗೆಲ್ಲಬಹುದಾದ ಕ್ಷೇತ್ರಗಳನ್ನು ಕಳಕೊಂಡು ಕೇವಲ ಒಂದು ಸ್ಥಾನಕ್ಕಷ್ಟೇ ತೃಪ್ತಿ ಪಟ್ಟುಕೊಳ್ಳುವ ಮೂಲಕ ತಮ್ಮ ಪಕ್ಷದ ಸಭಾಪತಿಯನ್ನು ಕಳೆದುಕೊಳ್ಳುವಂತಾಗಿದ್ದು ಮಾತ್ರ ಜೆಡಿಎಸ್ ಮಟ್ಟಿಗೆ ಭಾರೀ ಹಿನ್ನಡೆ ಹಾಗು ಮುಖಭಂಗ.

ಹಾಗಾಗಿ ಬಸವರಾಜ ಹೊರಟ್ಟಿ ಅವರಂಥ ಹಿರಿಯ ಹಾಗೂ ಸಂಭಾವಿತ ರಾಜಕಾರಣಿಯನ್ನು ತಮ್ಮ ಸ್ವಯಂಕೃತಪರಾಧದಿಂದಲೇ ಕೆಳಕ್ಕಿಳಿಯುವಂತೆ ಮಾಡಿದ ದಳಪತಿಗಳದ್ದು ಸೆಲ್ಫ್ ಸೂಸೈಡ್ ಎಂದೇ ವಿಶ್ಲೇಷಿಸಲಾಗುತ್ತಿದೆ.

Spread the love
Leave A Reply

Your email address will not be published.

Flash News