FATHER KILLED HIS SON AND HANG HIMSELF:ಕಣ್ಣೀರು ತರಿಸದೆ ಇರದು.. ಅಪ್ಪ-ಮಗುವಿನ ಆ ಸಾವಿನ ಕಥೆ..ಕಿವುಡ ಮಗನನ್ನು ಕೊಂದು ಆತ್ಮಹತ್ಯೆಗೆ ಶರಣಾದ ಅನಾರೋಗ್ಯಪೀಡಿತ ತಂದೆ..

ನಾವಿಬ್ಬರು ಸತ್ತರೆ ನೀನಾದ್ರು ಸುಖವಾಗಿರಬಹುದಲ್ವಾ ಎಂದು ನೋವಿನಿಂದ ತೊಳಲಾಟ ಹಂಚಿಕೊಂಡಿದ್ದ ಪತಿ ಸುರೇಶ್

0

ಬೆಂಗಳೂರು: ಇದು ಕರುಳು ಹಿಂಡುವ ಎರಡು ಜೀವಗಳ ದುರಂತ ಕಥೆ..ನಾವಿಬ್ಬರು ಬದುಕಿದ್ದರೆ ಪ್ರಯೋಜನಕ್ಕಿಂತ ಸಮಸ್ಯೆಯೇ ಹೆಚ್ಚು ಎಂದುಕೊಂಡ ರೋಗಗ್ರಸ್ಥ ವ್ಯಕ್ತಿಯೊಬ್ಬ ತನ್ನ ಬುದ್ದಿಮಾಂದ್ಯ ಮಗುವನ್ನು ಸಂಪ್ ನಲ್ಲಿ ಹಾಕಿ ಕೊಂದು,ಮಾಡಿದ ತಪ್ಪಿಗೆ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ತಪ್ಪೇ  ಮಾಡದ ಆ ದೇವರ ಮಗುವನ್ನು ಸಲಹಬೇಕಿದ್ದ ತಂದೆ ತನ್ನನ್ನು ಕಾಡುತ್ತಿದ್ದ ಅನಾರೋಗ್ಯದ ಕಾರಣಕ್ಕೆ ಕೊಂದು ಹಾಕಿದ್ದಾನೆ.ಅಸಹನೀಯವಾದ ಬೆನ್ನುಹುರಿ ಸಮಸ್ಯೆಯಿಂದ ಬಳಲುತ್ತಿದ್ದ ಸಂಪಂಗಿರಾಮನಗರ ನಿವಾಸಿ ಸುರೇಶ್ ತಾನು ಹಾಗು ತನ್ನ ಮಗು ಉದಯ್ ಸಾಯಿ ಬದುಕಿದ್ದರೆ ಹೆಂಡತಿಗೆ ಹೊರೆ ಎಂದು ಕೊರಗಿ ಮಗುವನ್ನು ಮೊದಲು ಕೊಂದು ಆನಂತರ ತನ್ನ ಬದುಕನ್ನು ದುರಂತಗೊಳಿಸಿಕೊಂಡಿದ್ದಾನೆ.ಏನು ಅರಿಯದ ಕಂದನನ್ನು ತುಂಬಾ ನೋವಿನಿಂದಲೇ ತಂದೆ ಸುರೇಶ್ ಮನೆ ಎದುರಿನ ಸಂಪಿನಲ್ಲಿ ಬಿಸಾಕಿ ಉಸಿರು ಚೆಲ್ಲಿಸಿದ್ದಾನೆ.ನಂತರ ಮಾಡಿದ ಪಾಪಕೃತ್ಯಕ್ಕೆ ಪ್ರಾಯಶ್ಚಿತವಾಗಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಹುಟ್ಟುತ್ತಲೇ ಕಿವುಡು-ಮೂಗ ಸಮಸ್ಯೆಗೆ ತುತ್ತಾಗಿದ್ದ ಉದಯ್ ಸಾಯಿಯನ್ನು ಹತ್ತು ವರ್ಷದವರೆಗೆ ಸಲಹಿದ ತಂದೆ ಸುರೇಶ್ ಇಂತದ್ದೊಂದು ನಿರ್ದಾರ ತೆಗೆದುಕೊಳ್ಳುವ ಹಿಂದಿನ ದಿನ ಲೋಕಾಭಿರಾಮವಾಗಿ ಪತ್ನಿಗೆ ನಾವಿಬ್ಬರು ಸತ್ತರೇ ನೀನು ಸುಖವಾಗಿರಬಹುದು ಎಂದು ಹೇಳಿದ್ದ.. ಆದ್ರೆ ಪತ್ನಿ ಪತಿಯ ಮಾತನ್ನು ಸೀರಿಯಸ್ ಆಗಿ ತೆಗೆದುಕೊಂಡಿರಲಿಲ್ಲ.. ನಿನ್ನೆ ಕಠಿಣ ಮನಸ್ಸು ಮಾಡಿ  ಮಗುವನ್ನು ಕೊಂದು ತಾನು ನೇಣಿಗೆ ಶರಣಾಗಿ ಪತ್ನಿಯಿಂದ ದೂರವಾಗಿ ಹೋಗಿದ್ದಾನೆ..

ಬೆನ್ನು ಹುರಿ ಸಮಸ್ಯೆಯಿಂದ ಬಳಲುತ್ತಿದ್ದರೂ ಸುರೇಶ್ ತನ್ನ ಹೆಂಡತಿ‌ ಮತ್ತು‌ ಮಗುವನ್ನು ತುಂಬಾ ಪ್ರೀತಿಸುತ್ತಿದ್ದ. ನನ್ನ ಮತ್ತು‌ ಮಗನಿಂದ ಪತ್ನಿಗೆ ಸಮಸ್ಯೆಯಾಗುತ್ತಿದೆ ಎಂದು ಬೇಸರಗೊಂಡಿದ್ದ.ಆದರೆ ಬದುಕನ್ನು ಎದುರಿಸಲಿಕ್ಕಾಗದೆ ಮಗುವನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಸಂಪಗಿರಾಮನಗರ ಪೊಲೀಸ್ರು ಪ್ರಕರಣ  ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.ಪ್ರಕರಣಕ್ಕೆ ಇಡೀ ಸಂಪಂಗಿರಾಮನಗರ ವಿಷಾದ ವ್ಯಕ್ತಪಡಿಸಿದೆ.

Spread the love
Leave A Reply

Your email address will not be published.

Flash News