

ಬೆಂಗಳೂರು:ಮುಸ್ಲಿಂ ಸಮುದಾಯದಲ್ಲಿ ನಾಯಕತ್ವದ ವಿಚಾರಕ್ಕೆ ಮತ್ತೆ ವಾಗ್ವಾದ ಶುರುವಾಗಿದೆ.ಕಾಂಗ್ರೆಸ್ ಕಮ್ಯುನಿಟಿ ನಿಮ್ಮೊಂದಿಗಿದೆ ಎಂದು ಜಮೀರ್ ಹೇಳಿದ್ದಾರೆನ್ನುವುದು ಕೆಲ ಮುಸ್ಲಿಂ ನಾಯಕರನ್ನು ಕೆಂಡಾಮಂಡಲಗೊಳಿಸಿದೆ.ಆತ ತನ್ನನ್ನು ಬೇಕಿದ್ರೆ ಅಡವಿಟ್ಟುಕೊಳ್ಳಲಿ, ಇಡೀ ಸಮುದಾಯವನ್ನೇಕೆ ಕಾಂಗ್ರೆಸ್ ಗೆ ಅಡವಿಡಬೇಕು..ಆ ಅಧಿಕಾರ ಆತನಿಗೆ ಕೊಟ್ಟೊರ್ಯಾರು ಎಂದು ಮುಸ್ಲಿಂ ಸಮುದಾಯದ ಪವರ್ ಫುಲ್ ಲೀಡರ್ ಗಳಲ್ಲೊಬ್ಬರಾದ ನಯಾಜ್ ಪಾಷಾ ಹರಿಹಾಯ್ದಿದ್ದಾರೆ.ಇದರಿಂದ ನಿಗಿನಿಗಿ ಕೆಂಡವಾಗಿರುವ ಕೆಲ ಜಮೀರ್ ಬೆಂಬಲಿಗರು ಮಾಡಿದ ಅವಹೇಳನಕಾರಿ ವೀಡಿಯೋಗಳಿಂದಾಗಿ ಎಫ್ ಐಆರ್ ಜಡಿಸಿಕೊಂಡಿದ್ದಾರೆ.
ಮುಸ್ಲಿಂ ಸಮುದಾಯದಲ್ಲಿ ನಾನಾ ಕಾರಣಗಳಿಗೆ ಪದೇ ಪದೇ ಸಂಘರ್ಷಗಳಾಗೋದು ಕಾಮನ್..ಆದ್ರೆ ನಾಯಕತ್ವದ ವಿಚಾರದಲ್ಲಿ ಅಪರೂಪಕ್ಕೆ ಎನ್ನುವಂತೆ ಜಮೀರ್ ವಿರುದ್ಧ ನಯಾಜ್ ಪಾಷಾ ತೊಡೆ ತಟ್ಟಿದ್ದಾರೆ.ಜಮೀರ್ ತಾಕತ್ತೇನಿದ್ರೂ ಚಾಮರಾಜಪೇಟೆಗಿರಲಿ,ಆ ಗಡಿ ದಾಟಿ ಬರೋ ಧೈರ್ಯ ಮಾಡೋದ್ ಬೇಡ.ಅದು ಅವರಿಗೂ ಒಳ್ಳೇದಲ್ಲ ಎನ್ನುವ ಲಹರಿಯಲ್ಲಿ ಜಾವೇದ್ ಮಾತನಾಡಿರು ವುದು ಬಹುಷಃ ಯಾವ್ ಬೆಳವಣಿಗೆಗೆ ವೇದಿಕೆ ಕಲ್ಪಿಸಿಕೊಡಲಿಕ್ಕೆ ಹೊರಟಿದೆ ಎನ್ನುವ ಆತಂಕ ಶುರುವಾಗಿದೆ.

ಚಾಮರಾಜಪೇಟೆ “ಕೈ” ಶಾಸಕ ಝಮೀರ್ ಅಹಮದ್ ಖಾನ್ ಸಧ್ಯಕ್ಕೆ ಮುಸ್ಲಿಂ ನಾಯಕನ ಸ್ಥಾನದಲ್ಲಿ ಗುರುತಿಸಲ್ಪಡುತ್ತಾರೆ.ಮುಸ್ಲಿಂ ಸಮುದಾಯಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಮಂಚೂಣಿಯಲ್ಲಿ ಕಾಣಸಿಗುತ್ತಿದ್ದಾರೆನ್ನು ವುದನ್ನು ಒಪ್ಪಿಕೊಳ್ಳಲೇಬೇಕು..ಆದ್ರೆ ಅವರನ್ನು ಮುಸ್ಲಿಂ ಲೀಡರ್ ಎಂದು ಒಪ್ಪಿಕೊಳ್ಳುವ ವಿಚಾರದಲ್ಲಿ ಒಂದಷ್ಟು ವ್ಯತ್ಯಾಸಗಳು ಕಂಡುಬರಲಿಕ್ಕೆ ಶುರುವಾಗಿದೆ.ಜಮೀರ್ ವಿರುದ್ಧ ಹತ್ತಲವು ಕಾರಣಗಳಿಗೆ ನಿಲ್ಲೊಕ್ಕೆ-ಮಾತನಾಡೊಕ್ಕೆ ಹಿಂಜರಿಯುತ್ತಿದ್ದವರ ಪೈಕಿ ನಯಾಜ್ ಪಾಷಾ ಎನ್ನುವ ಮುಸ್ಲಿಂ ಸಮುದಾಯದ ಪವರ್ ಫುಲ್ ಲೀಡರ್ ಮುಂದಾಗಿರುವುದು ಸಮುದಾಯದಲ್ಲಿ ಬೇರೆಯದೇ ರೀತಿಯ ಮಾತುಕತೆ ಶುರುವಾಗಲಿಕ್ಕೆ ಕಾರಣವಾಗುತ್ತಿದೆ.ಜಮೀರ್ ವಿರುದ್ಧ ಸೊಲ್ಲೆತ್ತುವುದಿರಲಿ, ನಿಂತುಕೊಳ್ಳೊಕ್ಕೂ ಹಿಂಜರಿಯುವಂತಿದ್ದ ವಾತಾವರಣದ ನಡುವೆ ನಯಾಜ್ ಪಾಷಾ ಕೊಟ್ಟಿರುವ ಹೇಳಿಕೆ..ಅದರ ಬೆನ್ನಲ್ಲಿ ನಡೆದ ವಿದ್ಯಾಮಾನಗಳು,ನಂತರ ದಾಖಲಾದ ಎಫ್ ಐಆರ್..ಗಳೆಲ್ಲಾ ಬೇರೆ ಯಾವುದೋ ಮುನ್ಸೂಚನೆ ನೀಡುವಂತಿದೆ.ಜಮೀರ್ ವರ್ಚಸ್ಸು ಸಮುದಾಯದಲ್ಲೇ ಕುಂದುತ್ತಿದೆಯೇ ಎನ್ನುವ ಶಂಕೆ ಮೂಡುವಂತಾಗಿದೆ.
ಘಟನೆಗೆ ಕಾರಣವಾದದ್ದು ಏನು..? ಇತ್ತೀಚೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರ ಪದಗ್ರಹಣ ಸಮಾರಂಭ ನಡೆಯಿತು.ತಾನು ಹೇಳಿದವರನ್ನು ಅಧ್ಯಕ್ಷರನ್ನಾಗಿಸಲಿಲ್ಲ ಎನ್ನುವ ಸಿಟ್ಟಿಗೆ ಜಮೀರ್ ಅಹಮದ್ ಅಂದು ಈ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆನ್ನುವ ಮಾತುಗಳಿವೆ.
ಅಂದಿನ ಕಾರ್ಯಕ್ರಮದಲ್ಲಿ ಜಮೀರ್ ಪರ ಕೆಲ ಬೆಂಬಲಿಗರು ಘೋಷಣೆ ಕೂಗಿದಾಗ ಡಿಕೆ ಶಿವಕುಮಾರ್ ಗದರಿದ್ದರು.ನೀವೆಲ್ಲಾ ಕಾಂಗ್ರೆಸ್ ವಿರೋಧಿಗಳು ಎಂದಿದ್ದರಲ್ಲದೇ ನಿಮ್ಮನ್ನೆಲ್ಲಾ ಹೊರ ದಬ್ಬಬೇಕಾಗುತ್ತದೆ ಎಂದು ಕಿಡಿಕಾರಿದ್ದರಂತೆ.ಜಮೀರ್ ಬೆಂಬಲಿಗರು ಮಾಡಿದ ಒಂದು ತಪ್ಪಿನಿಂದ ಇಡೀ ಮುಸ್ಲಿಂರು ಕೈ ವಿರೋಧಿಗಳು ಎಂದಿದ್ದಕ್ಕೆ ನಯಾಜ್ ಪಾಷಾ ಕೆಂಡಾಮಂಡಲವಾಗಿದ್ರಂತೆ.ಮಾದ್ಯಮಗಳ ಪ್ರಶ್ನೆಗೆ ಉತ್ತರಿಸುವಾಗ, ಝಮೀರ್ ವಿರುದ್ಧ ನಯಾಜ್ ಪಾಷಾ ಹರಿಹಾಯ್ದಿದ್ದರು.
ಮಾಜಿ ಸಿಎಂ ಸಿದ್ಧರಾಮಯ್ಯ ಬಳಿ ಮಾತನಾಡುವಾಗ ಇಡೀ ಮುಸ್ಲಿಂ ಸಮುದಾಯ ನಿಮ್ಮ ಜತೆಗಿದೆ ಎಂದ್ಹೇಳಿದ್ದರು.ತನ್ನ ಬೇಳೆ ಬೇಯಿಸಿಕೊಳ್ಳೊಕ್ಕೆ ಕೊಟ್ಟ ಹೇಳಿಕೆಯಿಂದ ಮುಸ್ಲಿಂ ಸಮುದಾಯ ಬಹಳ ನೊಂದುಕೊಂಡಿದೆ ಎಂಬ ಲಹರಿಯಲ್ಲಿ ಮಾತನಾಡಿದ್ದ ನಯಾಜ್ ಪಾಷಾ ,ಶಾಸಕ ಜಮೀರ್ ಏನಿದ್ದರೂ ಚಾಮರಾಜಪೇಟೆ ಕ್ಷೇತ್ರಕ್ಕಷ್ಟೇ ನಾಯಕ..ಇಡೀ ಮುಸ್ಲಿಂ ಸಮುದಾಯಕ್ಕಲ್ಲ..ನಮಗೆ ನಮ್ಮ ಮುಲ್ಲಾ..ಮೌಲ್ವಿ..ಖಾಜಿಗಳೇ ಮುಖಂಡರು ಎಂದು ಸೋಶಿಯಲ್ ಮೀಡಿಯಾದಲ್ಲಿ ಠಕ್ಕರ್ ಕೊಟ್ಟಿದ್ದರು.
ಟಿಪ್ಪು ಜಯಂತಿ ಆಚರಣೆ ವಿಚಾರದಲ್ಲೂ ಟಿಪ್ಪುವಿನ ವ್ಯಕ್ತಿತ್ವ ಹಾಗೂ ಜನ್ಮದಿನಾಚರಣೆಯ ಮಹತ್ವ ಕಳೆದ ಅಪಖ್ಯಾತಿಯೂ ಜಮೀರ್ ಗೆ ಸಲ್ಲುತ್ತೆ .ಟಿಪ್ಪುವಿನ ಮಾನ ಜಮೀರ್ ಕಡೆಯಿಂದ ಬೀದಿಗೆ ಬಂತು.ನಮ್ಮನ್ನು ವಿಲನ್ ಗಳ ದೃಷ್ಟಿಯಲ್ಲಿ ಜನರು ನೋಡುವಂತಾಯಿತು..ಟಿಪ್ಪು ಎಂದರೆ ಇವತ್ತು ಜನಸಮುದಾಯದಲ್ಲಿ ತಪ್ಪು ಭಾವನೆ ಮೂಡುವಂತೆ ಮಾಡಿದ್ದೇ ಜಮೀರ್ ಎಂದು ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೆ ಕೊಟ್ಟಿದ್ದರು ನಯಾಜ್ ಪಾಷಾ
ಈ ಹೇಳಿಕೆಗಳ ಬೆನ್ನಲ್ಲಿ ಜಮೀರ್ ಬೆಂಬಲಿಗರೆಂದು ಹೇಳಿಕೊಂಡ ಸಾಕಷ್ಟು ಜನರು ಸೋಶಿಯಲ್ ಮೀಡಿಯಾಗ|ಳಲ್ಲಿ ನಯಾಜ್ ಪಾಷಾ ವಿರುದ್ಧ ಹರಿಹಾಯ್ದಿದ್ದರು.ತುಚ್ಛವಾಗಿ ನಿಂದಿಸಿದ್ದರು.ಅವಹೇಳನಕಾರಿಯಾಗಿ ಮಾತನಾಡಿದ್ದರು.ಇದರ ವಿರುದ್ದ ಕೋಪಗೊಂಡ ನಯಾಜ್ ಪಾಷಾ ಇದೀಗ ಪೊಲೀಸ್ ಠಾಣೆಯಲ್ಲಿ ಜಮೀರ್ ಬೆಂಬಲಿಗರೆಂದು ಕರಯಿಸಿಕೊಂಡ
ಆರೀಫ್,ಕಲೀಂ,ಸೈಯ್ಯದ್ ಮುಜಾಹಿದ್,ಅಜ್ಜು ಬ್ರದರ್ಸ್,ಗೌಸಿ,ಫಯಾಜ್,ಸೊಹೇಲ್ ಶೇಟ್,ಮೆಹಬೂಬ,ಜಾಸೀಮ್ ಆಯೂಬ್ ವಿರುದ್ದ ದಕ್ಷಿಣ ವಿಭಾಗದ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಅವರ ದೂರಿನ ಹಿನ್ನಲೆಯಲ್ಲಿ ಎಫ್ ಐಆರ್ ದಾಖಲಿಸಿಕೊಳ್ಳಲಾಗಿದೆ.
ಜಮೀರ್ ಮುಸ್ಲಿಂ ಸಮುದಾಯದ ಲೀಡರ್ ಎನ್ನೊಕ್ಕೆ ಇಡೀ ಸಮುದಾಯವನ್ನು ಅವರಿಗೆ ಅಡವಿಟ್ಟಿಲ್ಲ..ಅಥವಾ ಮಾರಿಕೊಂಡಿಲ್ಲ..ಜಮೀರ್ ಕೂಡ ಎಲ್ಲರಂತೆ ಲೀಡರ್..ಅವರಂತೆ ಇನ್ನೂ ಸಾಕಷ್ಟು ಮುಖಂಡರು ಸಮುದಾಯದಲ್ಲಿದ್ದಾರೆ.ಇದನ್ನು ಜಮೀರ್ ಅರ್ಥ ಮಾಡಿಕೊಳ್ಳಬೇಕು.ಅದನ್ನು ಬಿಟ್ಟು ತಮ್ಮನ್ನು ಸರ್ವೋಚ್ಛ ನಾಯಕ ಎಂದು ಸ್ವಘೋಷಿಸಿಕೊಂಡರೆ ಎಲ್ಲರೂ ಒಪ್ಪಲೇಬೇಕೆಂದೇನಿಲ್ಲ ಎಂದು ನಯಾಜ್ ಪಾಷಾ ತಿಳಿಸಿದ್ದಾರೆ.
ಜಾವೇದ್ ಅವರ ಹೇಳಿಕೆಗೆ ಜಮೀರ್ ರಿಯಾಕ್ಟ್ ಮಾಡಿಲ್ಲ.ಸಧ್ಯ ಬೆಳಗಾವಿ ಕಾರ್ಯಕಲಾಪದಲ್ಲಿರುವ ಜಮೀರ್ ಇಂದು ಮರಳುವ ಸಾಧ್ಯತೆಗಳಿವೆ. ನಯಾಜ್ ಪಾಷಾ ಹೇಳಿಕೆಗೆ ಅವರು ಯಾವ್ ರೀತಿ ರಿಯಾಕ್ಟ್ ಮಾಡುತ್ತಾರೆನ್ನುವುದು ಕೂಡ ಕುತೂಹಲ ಮೂಡಿಸಿದೆ..ಸಮುದಾಯದ ಇಬ್ಬರು ಮುಖಂಡರ ನಡುವೆ ಸೃಷ್ಟಿಯಾಗಿರುವ ಸಂಘರ್ಷ ಬೇರೆ ಬೆಳವಣಿಗೆಗೆ ಎಡೆ ಮಾಡಿಕೊಡುತ್ತಿರುವುದನ್ನು ಮನಗಂಡಿರುವ ಧರ್ಮದ ಗುರುಗಳು ಇಬ್ಬರನ್ನು ಕರೆದು ಕೂರಿಸಿ ಬುದ್ದಿ ಹೇಳುವ,ಕಿವಿ ಹಿಂಡುವ ಕೆಲಸಕ್ಕೆ ಮುಂದಾಗಿದ್ದಾರೆ.ಆದರೆ ಸಮಾಧಾನಗೊಳ್ಳುವ ಸ್ಥಿತಿಯಲ್ಲಿ ಮಾತ್ರ ಇಬ್ಬರೂ ಇಲ್ಲ..