VETERAN POLITICIAN R.L JAALAPPA HEALTH STABLE ಹಿರಿಯ ಮುತ್ಸದ್ಧಿ- ಮಾಜಿ ಸಂಸದ-ಮಾಜಿ ಕೇಂದ್ರ ಸಚಿವ ಆರ್.ಎಲ್ ಜಾಲಪ್ಪ ಆರೋಗ್ಯ ಸ್ಥಿರ..

ಸ್ಪತ್ರೆಯಲ್ಲಿ ನುರಿತ ವೈದ್ಯರು  ಆರ್.ಎಲ್ ಜಾಲಪ್ಪ ಅವರಿಗೆ ಚಿಕಿತ್ಸೆ ನೀಡುವಲ್ಲಿ ನಿರತವಾಗಿದ್ದಾರೆ.ಸಧ್ಯಕ್ಕೆ ಯಾವುದೇ ತೊಂದರೆ ಇಲ್ಲ..ಅವರ ಆರೋಗ್ಯ ಸ್ಥಿರವಾಗಿದೆ ಎಂದು ಕುಟುಂಬದ ಸದಸ್ಯರು ಹೇಳಿದ್ದಾರೆ.ವೈದ್ಯರು ಕೂಡ ಇದನ್ನೇ ಪುನರುಚ್ಚರಿಸಿದ್ದಾರೆ

0

ಬೆಂಗಳೂರು: ಒಂದು ಕ್ಷಮೆ ಇರಲಿ..ಇದು ಪ್ರಜ್ಞಾಪೂರ್ವಕವಾಗಿ ನಡೆದ ಪ್ರಮಾದ ಅಲ್ಲ.. ಇದು ಸುಳ್ಳೇ ಅಗಿದ್ದರೆ ಇದಕ್ಕಿಂತ ಒಳ್ಳೆಯ ಸುದ್ದಿ ಮತ್ತೊಂದಿರಲಿಕ್ಕಿಲ್ಲ..ಹಿರಿಯ ಮುತ್ಸದ್ಧಿ,ರಾಜಕಾರಣಿ ಆರ್.ಎಲ್ ಜಾಲಪ್ಪ ನಿಧನದ ಸುದ್ದಿ ಸುಳ್ಳೆನ್ನುವ ಮಾಹಿತಿ ಹೊರಬಿದ್ದಿದೆ.

ಅವರ ಕುಟುಂಬದ ಮೂಲಗಳೇ ಈ ವಿಷಯವನ್ನು ದೃಢಪಡಿಸಿದ್ದು,ತಮ್ಮ ಮನೆಯ ಯಜಮಾನರು ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಅವರ ಸಾವಿನ ಸುದ್ದಿ ಸುಳ್ಳೆನ್ನುವ ಮಾಹಿತಿಯನ್ನು ಬಹಿರಂಗಪಡಿಸಿವೆ. ಆಸ್ಪತ್ರೆಯಲ್ಲಿ ನುರಿತ ವೈದ್ಯರು  ಆರ್.ಎಲ್ ಜಾಲಪ್ಪ ಅವರಿಗೆ ಚಿಕಿತ್ಸೆ ನೀಡುವಲ್ಲಿ ನಿರತವಾಗಿದ್ದಾರೆ.

ಸಧ್ಯಕ್ಕೆ ಯಾವುದೇ ತೊಂದರೆ ಇಲ್ಲ..ಅವರ ಆರೋಗ್ಯ ಸ್ಥಿರವಾಗಿದೆ ಎಂದು ಕುಟುಂಬದ ಸದಸ್ಯರು ಹೇಳಿದ್ದಾರೆ.ವೈದ್ಯರು ಕೂಡ ಇದನ್ನೇ ಪುನರುಚ್ಚರಿಸಿದ್ದಾರೆ.

Spread the love
Leave A Reply

Your email address will not be published.

Flash News