OMICRON…BIG DISSOPOINTMENT FOR PARTY LOVERS….ಆಗ ಕೊರೊನಾ..ಈಗ ಓಮಿಕ್ರಾನ್..ನ್ಯೂ ಇಯರ್ ಸೆಲಬ್ರೇಷನ್ ನಂಬಿ ಹೂಡಿದ ಕೋಟ್ಯಾಂತರ ಬಂಡವಾಳ ಲಾಸ್..?!

ಕೊರೊನಾ ಎಫೆಕ್ಟ್ ಕಡಿಮೆಯಾಗಿದ್ದರಿಂದ  ಈ ಬಾರಿ ಆಚರಣೆಗೆ ಒಂದಷ್ಟು ಅದ್ದೂರಿತನದ ಪ್ಲ್ಯಾನ್ಸ್ ಮಾಡಿಕೊಳ್ಳಲಾಗಿತ್ತು.ಆದ್ರೆ ಸರ್ಕಾರ ನೀಡಿರುವ ಸುಳಿವು ಗಮನಿಸಿದ್ರೆ ಈ ಬಾರಿಯೂ ನ್ಯೂ ಇಯರ್ ಸೆಲಬ್ರೇಷನ್ ಸ್ತಿತಿ ಕಳೆದ ಬಾರಿಯಂತೆ ರಿಪೀಟ್ ಆಗಲಿದ್ಯಾ ಎನ್ನುವ ಶಂಕೆ ವ್ಯಕ್ತವಾಗಿದೆ.

0

ಬೆಂಗಳೂರು:ಕಳೆದ ಬಾರಿಯ ಹೊಸ ವರ್ಷದ ಆಚರಣೆಗೆ ಕೊರೊನಾ ಬ್ರೇಕ್ ಹಾಕಿದ್ರೆ ಈ ಬಾರಿ ಅದರ ರೂಪಾಂತರಿ ಓಮಿಕ್ರಾನ್ ಕರಿನೆರಳು ನ್ಯೂ ಇಯರ್ ಸೆಲಬ್ರೇಷನ್ ಮೇಲೆ ಬೀಳುವ ಸಾಧ್ಯತೆ ದಟ್ಟವಾಗಿದೆ.ಇದಕ್ಕಾಗಿ ಟಫ್ ರೂಪ್ಸ್ ರೂಪುಗೊಳ್ಳುತ್ತಿದ್ದು ಎಲ್ಲಾ ನಿರೀಕ್ಷೆಯಂತಾಗಿ ಬ್ರೇಕ್ ಬಿದ್ದರೆ ಹೊಸ ವರ್ಷಕ್ಕಾಗಿ ಮಾಡಿಟ್ಟುಕೊಂಡ ಎಲ್ಲಾ ಸಿದ್ಧತೆಗಳಿಗೂ ಮಣ್ ಬೀಳೋದು ಕನ್ಫರ್ಮ್.

ಕೊರೊನಾ ಎಫೆಕ್ಟ್ ಕಡಿಮೆಯಾಗಿದ್ದರಿಂದ  ಈ ಬಾರಿ ಆಚರಣೆಗೆ ಒಂದಷ್ಟು ಅದ್ದೂರಿತನದ ಪ್ಲ್ಯಾನ್ಸ್ ಮಾಡಿಕೊಳ್ಳಲಾಗಿತ್ತು.ಆದ್ರೆ ಸರ್ಕಾರ ನೀಡಿರುವ ಸುಳಿವು ಗಮನಿಸಿದ್ರೆ ಈ ಬಾರಿಯೂ ನ್ಯೂ ಇಯರ್ ಸೆಲಬ್ರೇಷನ್ ಸ್ತಿತಿ ಕಳೆದ ಬಾರಿಯಂತೆ ರಿಪೀಟ್ ಆಗಲಿದ್ಯಾ ಎನ್ನುವ ಶಂಕೆ ವ್ಯಕ್ತವಾಗಿದೆ.

ಇಂದಿನಿಂದಲೇ ಆ ಟಫ್ ರೂಲ್ಸ್ ಜಾರಿಯಾದ್ರೆ ಮುಂದೇನು ಎಂಬ ಚಿಂತೆ ಪ್ರಮುಖವಾಗಿ ಕಾಡುತ್ತಿರುವುದು ನೈಟ್ ಲೈಫ್ ನ್ನು ರಂಗೀನ್ ಗೊಳಿಸಲಿರುವ ಒಂದಷ್ಟು ಉದ್ದಿಮೆಗಳಿವೆ.

ಅದು ಬಹುತೇಕ ಮನರಂಜನೆ ಹಾಗೂ ಮದ್ಯದ ಉದ್ಯಮಕ್ಕೆ ಸಂಬಂಧಿಸಿದ್ದನ್ನು ವುದನ್ನು ಒತ್ತಿ ಹೇಳಬೇಕಿಲ್ಲ..ಕೆಲ ದಿನ ಬಾಕಿ ಇರುವಾಗಲೇ ರಾಜಧಾನಿ ಬೆಂಗಳೂರಿಗೆ ಅಪಾರ ಪ್ರಮಾಣದ ಮದ್ಯ ದಾಸ್ತಾನು ಬಂದಿದೆ.ಡ್ರಿಂಕ್ಸ್ ಮೇಲೆ ಸಾಕಷ್ಟು ಆಫರ್ ಗಳನ್ನೂ ರೂಪಿಸಲಾಗಿದೆ.ಟಫ್ ರೂಲ್ಸ್ ಜಾರಿಯಾದ್ರೆ ನಿರೀಕ್ಷೆಗಳೆಲ್ಲವೂ ಉಲ್ಟಾಪಲ್ಟಾ..

ನೋ ಡೌಟ್..ಟಫ್ ರೂಲ್ಸ್ ಜಾರಿಗೆ ಬಂದ್ರೆ  ಸೆಲಬ್ರೇಷನ್…ಮೋಜು-ಮಸ್ತಿ..ಎಲ್ಲವೂ ಖತಂ ಆಗಲಿದೆ.ಅಷ್ಟೇ ಅಲ್ಲ ಸೆಲಬ್ರೇಷನ್ ಗೆ ಥಳಕು ಹಾಕ್ಕೊಂಡಿರುವ DJ, ನೈಟ್ ಪಾರ್ಟಿ ಮೇಲೆ ಕರಿನೆರಳು ಬೀರಲಿದೆ.

ಡ್ಯಾನ್ಸರ್, ಡಿಜೆ, ಸೆಲೆಬ್ರಿಟಿಗಳ ಬುಕ್ ಗೆ   ಮಾಡಿಕೊಂಡಿರುವ ಸಿದ್ಧತೆಗಳಿಗು ಬ್ರೇಕ್ ಬೀಳಲಿದೆ.ಈ ಹಿನ್ನಲೆಯಲ್ಲಿ ನ್ಯೂಇಯರ್ ಈವೆಂಟ್ ಆಯೋಜಕರಂತೂ ಫುಲ್ ಟೆನ್ಶನ್ ಆಗಿದ್ದಾರೆ.ಬುಕ್ಕಿಂಗ್ ಕ್ಯಾನ್ಸಲಾದ್ರೆ ಅದರಿಂದ ಅಪಾರ ಪ್ರಮಾಣದ ನಷ್ಟ ಕಟ್ಟಿಟ್ಟಬುತ್ತಿ.

ಸಿಲಿಕಾನ್ ನಗರಿಯನ್ನು ಕಳೆ ಗಟ್ಟಿಸುವ ನ್ಯೂ ಇಯರ್ ಸೆಲಬ್ರೇಷನ್ ನಡುವೆಯೇ ಸಿಂಗಲ್, ಕಪಲ್ ಎಂಟ್ರಿ ಪಾಸ್ ಮಾಡಿಸಲು ಗೊಂದಲ ಸೃಷ್ಟಿಯಾಗ್ತಿದೆ.

ಸರ್ಕಾರದ ಟಫ್ ರೂಲ್ಸ್ ಜಾರಿಯಾಗಿದ್ದೇ ಆದಲ್ಲಿ  DJ, ನೈಟ್ ಪಾರ್ಟಿ ತಯಾರಿಗೆ ಖರ್ಚು ಮಾಡಿರೋ ಹಣ ಖತಂ ಆಗಲಿದೆ. ಪಾರ್ಟಿ ಆಯೋಜಕರಿಗೆ ಕೊಟ್ಟ ಅಡ್ವಾನ್ಸ್ ಗೂ ಕೊಕ್ಕೆ ಬೀಳಲಿದೆ.

ಡ್ಯಾನ್ಸರ್, ಡಿಜೆ, ಸೆಲೆಬ್ರಿಟಿಗಳಿಗೆ ನೀಡಿದ್ದ ಅಡ್ವಾನ್ಸ್ ಗೋತಾ ಹೊಡೆಯಲಿದೆ. ಹೊಸ ವರ್ಷಾಚರಣೆಗೆಂದು ತಂದಿಟ್ಟಿರೋ STOCK ನಿಂದ ಲಾಸ್ ಆಗಲಿದೆ ಎನ್ನುವ ಚಿಂತೆಯಿಂದ ಪಬ್, ಬಾರ್ ಮಾಲೀಕರು ಕಂಗಾಲಾಗಿದ್ದಾರೆ.ತಲೆ ಮೇಲೆ ಕೈ ಹೊತ್ತು ಕೂತಿದ್ದಾರೆ.

ಇದೆಲ್ಲವೂ ಡಿಪೆಂಡ್ ಆಗಿರುವುದು ಸರ್ಕಾರದ ಗೈಡ್ ಲೈನ್ಸ್ ಮೇಲೆ.ಹಾಗಾಗಿ ಈಗ ಎಲ್ಲರ ಚಿತ್ತ  ಡಿ.31ರ ರಂಗಿನ ರಾತ್ರಿ ಬಗ್ಗೆ ಸರ್ಕಾರ ಹೊರಡಿಸಲಿರುವ ಮಾರ್ಗಸೂಚಿ ಮೇಲೆ..

Spread the love
Leave A Reply

Your email address will not be published.

Flash News