KARNATAKA BUNDH:VATAAL NAGARAJ AIDS ASSAULTS SHIVAKUMAR NAIK:ಕನ್ನಡದ ಕಟ್ಟಾಳು ವಾಟಾಳ್ ಗೆ ಠಕ್ಕರ್-ಏಕವಚನದಲ್ಲೇ ಯುವ ಹೋರಾಟಗಾರ ಶಿವಕುಮಾರ ನಾಯ್ಕ ತರಾಟೆ…

“ಕನ್ನಡ” ಅಡವಿಟ್ಟು ದುಡ್ಡು ಮಾಡಿದ ವಂಚಕ “ವಾಟಾಳ್“ -ಆತನ ತಾಕತ್ತು-ಪೌರುಷ ಕರ್ನಾಟಕದಲ್ಲಿ ಅಷ್ಟೇ..”

0

ಬೆಂಗಳೂರು..ವಾಟಾಳ್ ನಾಗರಾಜ್ ಒಬ್ಬ ಮೋಸಗಾರ.. ಲೋಫರ್..ಲಫಂಗ..ಡೋಂಗಿ..ಹೋರಾಟಗಾರರ ತಲೆ ಎಣಿಸಿ ಅದನ್ನು ಸರ್ಕಾರಕ್ಕೆ ತೋರಿಸಿ ಅದರಿಂದ ದುಡ್ಡು ಮಾಡಿಕೊಳ್ಳುವ ಖತರ್ನಾಕ್ ಆಸಾಮಿ.. ಆತ ಒಬ್ಬ ನಪುಂಸಕ..ಇಲ್ಲಿ ತೋರಿಸುವ ತಾಕತ್ತನ್ನು ಮಹಾರಾಷ್ಟ್ರದಲ್ಲಿ ಪ್ರದರ್ಶಿಸಲಿ,ನಾನ್ ಕನ್ನಡಕ್ಕಾಗಿ ಕತ್ತು ಕೊಯ್ದುಕೊಳ್ಳುತ್ತೇನೆ,ನಿನಗೆ ಆ ತಾಕತ್ತಿದೆಯಾ.ನೀನೊಬ್ಬ ಸೂಟ್ ಕೇಸ್ ಗಿರಾಕಿ..ಹೀಗೆ ವಾಚಾಮಗೋಚರವಾಗಿ ವಾಟಾಳ್ ನಾಗರಾಜ್ ಅವರನ್ನು ಟೀಕಿಸಿದ್ದು,ಬೈಯ್ದಿದ್ದು ಯುವ ಹೋರಾಟಗಾರ ಶಿವಕುಮಾರ ನಾಯ್ಕ.

ಬೆಂಗಳೂರಿನ ವುಡ್ ಲ್ಯಾಂಡ್ಸ್ ಹೊಟೇಲ್( ವಾಟಾಳ್ ನಾಗರಾಜ್ ಅವರ ಪರ್ಮನೆಂಟ್ ಅಡ್ಡಾ ಇದು.) ಇಂದು ಆಗಬಾರದ ಸುದ್ದಿಗೆ ಸುದ್ದಿಯಾಯ್ತು.ಚರ್ಚೆಯ ಕೇಂದ್ರವಾಯ್ತು.ಆ ಒಂದು ಘಟನೆ ಕನ್ನಡದ ಅಘೋಷಿತ-ಸ್ವಘೋಷಿತ “ಕಟ್ಟಾಳು” ವಾಟಾಳ್ ನಾಗರಾಜ್ ಅವರೇ ಮುಜುಗರಕ್ಕೀಡಾಗುವಂತೆ ಮಾಡಿದ್ದು ಸುಳ್ಳಲ್ಲ.ಇದಕ್ಕೆ ಕಾರಣ ಬಿಸಿರಕ್ತದ ತರುಣ ಹೋರಾಟಗಾರ ಶಿವಕುಮಾರ ನಾಯ್ಕ.

ಕನ್ನಡವನ್ನು ಗುತ್ತಿಗೆಗೆ ಪಡೆದವರಂತೆ ಫೋಸ್ ಕೊಡುತ್ತಾ, ಹೋರಾಟ ಮಾಡುತ್ತಾ ಬಂದಿರೋ ಆರೋಪ ಎದುರಿಸುತ್ತಿರುವ ವಾಟಾಳ್ ಗೆ  ಈ ರೀತಿ ಠಕ್ಕರ್ ಕೊಟ್ಟವರೂ ಇರಲಿಲ್ಲವೇನೋ..ಅಂತಹದೊಂದು ಧೈರ್ಯ ಮಾಡಿದ್ದಾರೆ ಬೆಂಗಳೂರಿನ ಸರ್ವ ಸಂಘಟನೆಗಳ ಒಕ್ಕೂಟದ ಬಿಸಿ ರಕ್ತದ ತರುಣ ಶಿವಕುಮಾರ ನಾಯ್ಕ.ಬಹುಷಃ ಕನ್ನಡದ ಅಘೋಷಿತ-ಸ್ವಘೋಷಿತ “ಕಟ್ಟಾಳು” ವಾಟಾಳ್ ನಾಗರಾಜ್ ವಿರುದ್ಧ ಹೀಗೆ ಹರಿಹಾಯ್ದವರೇ ಇರಲಿಕ್ಕಿಲ್ಲವೇನೋ…ಈ ರೀತಿ ಠಕ್ಕರ್ ಕೊಟ್ಟವರೂ ಇರಲಿಲ್ಲವೇನೋ.?.

ಮೊನ್ನೆ ಮಹಾರಾಷ್ಟ್ರದಲ್ಲಿ ಮರಾಠ ಗೂಂಡಾಗಳಿಂದ ಹಲ್ಲೆಗೊಳಗಾಗಿದ್ದ ಶಿವಕುಮಾರ ನಾಯ್ಕ
ಮೊನ್ನೆ ಮಹಾರಾಷ್ಟ್ರದಲ್ಲಿ ಮರಾಠ ಗೂಂಡಾಗಳಿಂದ ಹಲ್ಲೆಗೊಳಗಾಗಿದ್ದ ಸರ್ವ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ, ಶಿವಕುಮಾರ ನಾಯ್ಕ

ಕನ್ನಡದ ಹೋರಾಟಗಳ ಸ್ಥಿತಿ ಇಂದು ಏನಾಗಿದೆ ಎನ್ನುವುದನ್ನು ಬಿಡಿಸೇಳಬೇಕಿಲ್ಲ..ಒಂದಷ್ಟು ಸಂಘಟನೆಗಳಿಗೆ ಅದು ಗುತ್ತಿಗೆಯಾದರೆ,ಇನ್ನು ಕೆಲವರಿಗೆ ಹೊಟ್ಟೆ ಪಾಡಾಗಿ ಹೋಗಿದೆ.ಕನ್ನಡದ ಶಾಲು  ಹಾಕಿಕೊಂಡು ಕನ್ನಡದ ಕಾವಲುಗಾರರಂತೆ ಫೋಸ್ ಕೊಡುವ ಶೇಕಡಾ 60 ರಷ್ಟು “ಓರಾಟ”ಗಾರರಿಗೆ ಬಾವುಟದ ಮಹತ್ವ ಕೇಳಿದ್ರೆ, ಮುಗಿಲು ನೋಡ್ತಾರೆ..ಕಾಲು-ತಲೆ ಕೆರೆದುಕೊಳ್ಳುತ್ತಾರೆ.ಇಂಥವರ ಕೈಯಲ್ಲಿ ಕನ್ನಡ ಸಿಕ್ಕರೆ ಇನ್ನೇನಾಗುತ್ತದೆ ಹೇಳಿ..ಕನ್ನಡಕ್ಕಾಗುತ್ತಿರುವ ಸಧ್ಯದ ಸ್ಥಿತಿಯೂ ಹಾಗೆಯೇ ಇದೆ.

ಇನ್ನು ವಾಟಾಳ್ ವಿಚಾರಕ್ಕೆ ಬಂದ್ರೆ ಇಂದು ಬೆಂಗಳೂರಿನ ವುಡ್ ಲ್ಯಾಂಡ್ಸ್ ಹೊಟೇಲ್ ನಲ್ಲಿ ನಡೆದ ಘಟನೆ ವಾಟಾಳ್ ಬಗ್ಗೆ ಕಾರ್ಯಕರ್ತರಿಗೆ ಇರುವ ಅಸಹನೆ-ಆಕ್ರೋಶವನ್ನು ಎತ್ತಿ ಹಿಡಿಯುತ್ತದೆ.ಕನ್ನಡಿಗರಿಗೆ ಮರಾಠಿಗರಿಂದ ಅವಮಾನ-ಅನ್ಯಾಯವಾಗುತ್ತಿದೆ ಎನ್ನುವ ಕೂಗಿನ ಹಿನ್ನಲೆಯಲ್ಲಿ ಹೋರಾಟ ಮಾಡುವ ಚಳುವಳಿಗಾರರ ಆಕ್ರೋಶ ಕೇವಲ ಮಹಾರಾಷ್ಟ್ರದ ಗಡಿಯಾದ ಬೆಳಗಾಂಗೆ ಮಾತ್ರ ಸೀಮಿತವಾಗ್ಹೋಗಿದೆ.ಇದುವರೆಗೆ ಅದೆಷ್ಟು ಹೋರಾಟಗಾರರು ಘಟನೆ ನಡೆದಿರುವಂಥ ಉದ್ವಿಗ್ನ ಪರಿಸ್ತಿತಿಯ ಸ್ಥಳಕ್ಕೆ ತೆರಳಿ ಪ್ರತಿಭಟನೆ ಮಾಡಿದ್ದಾರೆ..ಅಲ್ಲಿ ಅವರೆದುರು ಎದೆ ಸೆಟೆಸಿ ನಿಂತು ಸೈ ಎನಿಸಿಕೊಂಡಿದ್ದಾರೆ.ಎಣಿಸಿದರೂ ಸಿಗಲಿಕ್ಕಿಲ್ಲವೇನೋ..ಇದಕ್ಕೆ ವಾಟಾಳ್ ಕೂಡ ಹೊರತಾಗಿರಲಿಕ್ಕಿಲ್ಲವೇನೋ..?

ಇಂಥಾ ಸನ್ನಿವೇಶದಲ್ಲಿ ಸರ್ವ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ, ವಂದೇ ಮಾತರಂ ಸಂಘಟನೆಯ ಮುಖಂಡ ಶಿವಕುಮಾರ ನಾಯ್ಕ ಮಹಾರಾಷ್ಟ್ರದ ನೆಲಕ್ಕೇ ತೆರಳುವ ಧೈರ್ಯ ಮಾಡಿದ್ದಷ್ಟೇ ಅಲ್ಲ,ಮರಾಠಿಗರ ನೆಲದಲ್ಲಿ ಕನ್ನಡ ಶಾಲನ್ನು ಹಾಕ್ಕೊಂಡು ಕನ್ನಡತನವನ್ನು ಮೆರೆದಿದ್ದಾರೆ.ಇದೆಲ್ಲಾ ತುಂಬಾ ವರ್ಷಗಳ ಹಿಂದೆ ನಡೆದ ಯಾವುದೋ ಇತಿಹಾಸವಿಲ್ಲ..ಮೊನ್ನೆ ಮೊನ್ನೆಯಲ್ಲಿ ನಡೆದ ಘಟನೆ.ಮಹಾರಾಷ್ಟ್ರದ ಸಿಎಂ ಅವರನ್ನು ಭೇಟಿ ಮಾಡಿಯೇ ವಾಪಸ್ ಆಗುವುದಾಗಿ ಹೇಳಿ ಹೊರಟ ಶಿವಕುಮಾರ ನಾಯ್ಕ,ಮರಾಠಿಗರ ನೆಲದಲ್ಲೇ ನಿಂತು ಸಾಮಾಜಿಕ ಜಾಲತಾಣಗಳಲ್ಲಿ ಮರಾಠಿಗರ ದೌರ್ಜನ್ಯ ಖಂಡಿಸಿದ್ರು.

ಇಂದು ಕನ್ನಡದ ಕಟ್ಟಾಳು ವಾಟಾಳ್ ಬೆಂಬಲಿಗರಿಂದ ತಳ್ಳಾಟ-ನೂಕಾಟಕ್ಕೊಳಗಾದ ಶಿವಕುಮಾರ ನಾಯ್ಕ
ಇಂದು ಕನ್ನಡದ ಕಟ್ಟಾಳು ವಾಟಾಳ್ ಬೆಂಬಲಿಗರಿಂದ ತಳ್ಳಾಟ-ನೂಕಾಟಕ್ಕೊಳಗಾದ ಶಿವಕುಮಾರ ನಾಯ್ಕ

ಇದನ್ನೆಲ್ಲಾ ಹೊಂಚಾಕಿ ಶಿವಕುಮಾರ್ ತಂಡವನ್ನೇ ಹಿಂಬಾಲಿಸುತ್ತಿದ್ದ ಕಟ್ಟರ್ ಮರಾಠಿಗರ ಟೀಮ್ ಮೊನ್ನೆ,ಅವರಿದ್ದ ಮನೆಯಲ್ಲೇ ಲಾಕ್ ಮಾಡಿಕೊಂಡು ಮಾರಕಾಸ್ತ್ರಗಳಿಂದ ಥಳಿಸುವ ಪ್ರಯತ್ನ ಮಾಡಿದೆ.ಶಿವಕುಮಾರ್ ಕೆನ್ನೆಗೆ ಬಾರಿಸಿದೆ.ಮರಾಠಿಯಲ್ಲೇ ಕ್ಷಮೆಗೆ ಒತ್ತಾಯಿಸಿದೆ.ಆದರೆ ಸ್ವಾಭಿಮಾನಿ ಶಿವಕುಮಾರ್ ಇದಕ್ಕೆ ಸೊಪ್ಪಾಕಿಲ್ಲ.ಹೇಗೋ ತಪ್ಪಿಸಿಕೊಂಡು ನಿನ್ನೆ ಬೆಂಗಳೂರನ್ನು ತಲುಪಿದೆ.

ಕನ್ನಡದ ಸ್ವಾಭಿಮಾನ-ಅಸ್ಮಿತೆ ಎತ್ತಿ ಹಿಡಿಯೊಕ್ಕೆ ಮಹಾರಾಷ್ಟ್ರಕ್ಕೆ ತೆರಳುವ ಸಾಹಸ ಮಾಡಿ,ಅಲ್ಲಿ ಕನ್ನಡಕ್ಕಾಗಿ ಹಿಂಸೆ-ಬೈಗುಳವನ್ನೆಲ್ಲಾ ಸಹಿಸಿಕೊಂಡು ಬಂದ ಶಿವಕುಮಾರ್ ಗೆ, ವಾಟಾಳ್ ಹಾಗೂ ಇತರೆ ಸೋ ಕಾಲ್ಡ್ ಕನ್ನಡ ಮುಖಂಡರಿಗೆ ನಿಜಕ್ಕೂ ಕನ್ನಡದ ಬಗ್ಗೆ ಒಲವಿದ್ದಿದ್ದರೆ  ಸನ್ಮಾನ ಮಾಡಬೇಕಿತ್ತು.ಹಾಡಿ ಹೊಗಳಬೇಕಿತ್ತು.ಆದರೆ ಇವರು ಮಾಡಿದ್ದೇನು..? ಶಿವಕುಮಾರ್ ಹೊಗಳಿದ್ರೆ ತಮ್ಮ ಬೇಳೆ ಎಲ್ಲಿ ಬೇಯಲ್ವೋ ಎನ್ನುವ ಸ್ವಾರ್ಥದಿಂದ ತನಗೆ ಆದ ಅನ್ಯಾಯವನ್ನು ಪ್ರಶ್ನಿಸಲು ಬಂದ ಶಿವಕುಮಾರ್ ಹಾಗೂ ತಂಡವನ್ನು ಪ್ರೆಸ್ ಮೀಟ್ ನಿಂದಲೇ ಹೊರಗಟ್ಟಿದ್ದಾರೆ.

ಕರ್ನಾಟಕ ಬಂದ್ ಗೆ ಕರೆ ಕೊಟ್ಟು ತಮ್ಮ ಬೇಳೆ ಬೇಯಿಸಿಕೊಳ್ಳುವ ಐಡ್ಯಾವನ್ನು ಫ್ಲಾಪ್ ಮಾಡೊಕ್ಕೆ ಬಂದ ಎಂದುಕೊಂಡು ಕನ್ನಡಿಗರ ಸ್ವಾಭಿಮಾನ-ಐಕ್ಯತೆಯ ಪ್ರದರ್ಶನಕ್ಕೆ ಕರೆ ಕೊಟ್ಟ ಕರ್ನಾಟಕ ಬಂದ್ ಗೆ ತೊಂದರೆ ಕೊಟ್ಟು ಕನ್ನಡ ವಿರೋಧಿ ಧೋರಣೆ ಪ್ರದರ್ಶಿಸುತ್ತಿದ್ದಾನೆ ಎಂದು ಶಿವಕುಮಾರ್ ಬಗ್ಗೆಯೇ ಸಾರ್ವಜನಿಕವಾಗಿ ತಪ್ಪು ಅಭಿಪ್ರಾಯ ಮೂಡುವಂತೆ ಮಾಡಿದ್ದಾರೆ. ಪ್ರೆಸ್ ಮೀಟ್ ನಲ್ಲಿ ಕೂತುಕೊಂಡಿದ್ದ ಕನ್ನಡದ ಉದ್ದಾರಕರೆಲ್ಲಾ ಸೇರಿಕೊಂಡು ಶಿವಕುಮಾರ್ ನಾಯ್ಕನ ಮೇಲೆ ಮನಸೋಇಚ್ಛೆ ಥಳಿಸಿದ್ದಾರೆ.ಆತನ ಶರ್ಟ್ ಹರಿದಾಕಿದ್ದಾರೆ.ಮೈ ಪರಚಿದ್ದಾರೆ.ಹಲ್ಲೆ ಮಾಡಿ ಘಾಸಿಗೊಳಿಸಿದ್ದಾರೆ.ಪರಿಸ್ತಿತಿ ತಹಬದಿ ಮೀರುತ್ತಿರುವುದನ್ನು ಅರ್ಥ ಮಾಡಿಕೊಂಡ ಸಂಪಂಗಿರಾಮನಗರ ಪೊಲೀಸರು ಸ್ಥಳಕ್ಕೆ ಧಾವಿಸಿ ಶಿವಕುಮಾರ್ ನಾಯ್ಕನನ್ನು ಬಂಧಿಸಿ ಕರೆದೊಯ್ದಿದೆ.

ಕನ್ನಡಕ್ಕಾಗಿ ಮಹರಾಷ್ಟ್ರದವರೆಗೂ ಹೋಗಿ,ಅಲ್ಲಿ ಕನ್ನಡದ ಅಸ್ಮಿತೆ ಎತ್ತಿ ಹಿಡಿಯೊಕ್ಕೆ ಶ್ರಮಿಸಿದ ನನಗೆ ಇಂಥಾ ಅವಮಾನ ಬೇಕಿತ್ತಾ..? ಕನ್ನಡಕ್ಕಾಗಿ ಹೋರಾಡಿದ ನನಗೆ ಕನ್ನಡಿಗರಿಂದಲೇ ಇಂಥಾ ಅವಮಾನ ಬೇಕಿತ್ತಾ..? ನನ್ನನ್ನು ಹಾಡಿ ಹೊಗಳುವುದು ಬೇಡ,ನನ್ನ ಮೇಲೆ ಹಲ್ಲೆ ಮಾಡಿದ ಮರಾಠಿಗರ ಕೃತ್ಯ ಖಂಡಿಸುವ ಸಣ್ಣ ಪ್ರಯತ್ನವನ್ನೂ ವಾಟಾಳ್ ಅವರಂಥವರು ಮಾಡಲಿಲ್ಲವಲ್ಲಾ ಎನ್ನೋದಷ್ಟೇ ಶಿವಕುಮಾರ್ ಬೇಸರ ಹಾಗೂ ಆಕ್ರೋಶ.ಅದನ್ನು ಅರ್ಥೈಸಿಕೊಳ್ಳದೆ ಶಿವಕುಮಾರ್ ನಾಯ್ಕನನ್ನು ಇಡೀ ರಾಜ್ಯದ ಜನರ ಮುಂದೆ ವಿಲನ್ ರೂಪದಲ್ಲಿ ಕನ್ನಡ ವಿರೋಧಿ ಎನ್ನುವಂತೆ ಬಿಂಬಿಸಲು ಹೊರಟಿದ್ದು ಮಾತ್ರ ವಿಪರ್ಯಾಸ. ಈ ಪ್ರಯತ್ನದಲ್ಲಿ ನಗೆ ಪಾಟಲಿಗೆ ಈಡಾಗಿದ್ದು ವಾಟಾಳ್ ಅವರೇ ಹೊರತು ಶಿವಕುಮಾರ್ ನಾಯ್ಕ..ಅಲ್ಲವೇ ಅಲ್ಲ ಎನಿಸುತ್ತದೆ.

Spread the love
Leave A Reply

Your email address will not be published.

Flash News