INSULT TO VARANATA DR.RAJ KUMAR:PARK COMPOUND COLLASPE :ಅವಮಾನ..ವರ ನಟ ಡಾ.ರಾಜ್ ಗೆ ಘನಘೋರ ಅವಮಾನ: ಕಿಡಿಗೇಡಿಗಳಿಂದ ದೊಮ್ಮಲೂರಿನ ಡಾ.ರಾಜ್ ಉದ್ಯಾನವನದ ಕಾಂಪೌಂಡ್ ಒಡೆದು ವಿಕೃತಿ

ಕನ್ನಡ ಪರ “ಓ”ರಾಟಗಾರರೇ…ಕನ್ನಡವನ್ನು ಗುತ್ತಿಗೆಗೆ ಹಿಡಿದವರಂತೆ ಫೋಸ್ ಕೊಟ್ಟಿಕೊಂಡು “ಹೋ”ಡಾಡುವ ವಾಟಾಳ್ ನಾಗರಾಜ್ ಅವರೇ..

0

ಬೆಂಗಳೂರು: ಎಲ್ಲಿದ್ದೀರಿ ಕನ್ನಡ ಪರ “ಓ”ರಾಟಗಾರರೇ…ಕನ್ನಡವನ್ನು ಗುತ್ತಿಗೆಗೆ ಹಿಡಿದವರಂತೆ ಫೋಸ್ ಕೊಟ್ಟಿಕೊಂಡು “ಹೋ”ಡಾಡುವ ವಾಟಾಳ್ ನಾಗರಾಜ್ ಅವರೇ..ಕನ್ನಡಕ್ಕಾಗಿ ಮಹಾರಾಷ್ಟ್ರದಲ್ಲಿ ಧ್ವನಿ ಎತ್ತಲು ಹೋದ, ಪ್ರಾಣ ಕೊಟ್ಟೇನು ಆದ್ರೆ ಮಾಡಿದ ಕೃತ್ಯಕ್ಕೆ ಕೈ ಮುಗಿದು ಕ್ಷಮಾಪಣೆ ಕೇಳೆನು ಎಂದು ಸ್ವಾಭಿಮಾನ ಮೆರೆದು ಆ ತಪ್ಪಿಗೆ ಮರಾಠಿಗ ಪುಂಡರಿಂದ ಹಲ್ಲೆಗೂ ಒಳಗಾಗಿ ಬಂದಾತನ ಮೇಲೆ ಪೌರುಷ-ದರ್ಪ ಮೆರೆಯುವ ವಾಟಾಳ್,ಪ್ರವೀಣ್ ಶೆಟ್ಟಿ,ಕನ್ನಡ ಕುಮಾರ್ ಅವರಂಥ ಹೋರಾಟಗಾರರೇ ನಿಮ್ಮ ಬುಡದಲ್ಲೇ ಕನ್ನಡದ ವರನಟ-ಗೋಕಾಕ್ ಚಳುವಳಿಗೆ ಧುಮುಕಿ ಕನ್ನಡಾಭಿಮಾನ-ಭಾಷಾ ಬದ್ಧತೆ ಮೆರೆದ ವರನಟ-ನಟ ಸಾರ್ವಭೌಮ ಡಾ.ರಾಜ್ ಗೆ ಆದ ಅವಮಾನ ನಿಮಗೆ ಕಾಣಿಸುತ್ತಿಲ್ಲವೇ..?

ಹೀಗೆ ಪ್ರಶ್ನಿಸಲೇಬೇಕಿದೆ.ಗಾಢ ನಿದ್ದೆಗೆ ಜಾರಿದಂತೆ ನಟಿಸುತ್ತಿರುವ ಕನ್ನಡಪರ ಹೋರಾಟಗಾರರ ಧೋರಣೆಯನ್ನು,.ದೂರದ ಬೆಳಗಾಂ ನಲ್ಲಿ ನಡೆದ ಘಟನೆಗೆ ಅಲ್ಲಿಗೆ ಹೋಗದೆ ಬೆಂಗಳೂರಿನಲ್ಲಿದ್ದುಕೊಂಡೇ ಖಂಡಿಸುವ ವಾಟಾಳ್ ಅವರಂಥವರಿಗೆ ಇಲ್ಲೇ ಪಕ್ಕದ ದೊಮ್ಮಲೂರಿನಲ್ಲಿರುವ ಡಾ.ರಾಜ್ ಉದ್ಯಾನವನದ ಕಾಂಪೌಂಡ್ ಕೆಡವಿದ ಕಿಡಿಗೇಡಿಗಳ ಕೃತ್ಯ ನೆನಪೇ ಆಗೊಲ್ಲ ಎಂದ್ರೆ ಇದಕ್ಕಿಂತ  ದೊಡ್ಡ ದುರಂತ ಮತ್ತೊಂದಿದೆಯಾ..? ಖಂಡಿತಾ ಇಲ್ಲ..

ಹೌದು..ಈ ಘಟನೆ ವಾಟಾಳ್, ನಾರಾಯಣ ಗೌಡ,ಪ್ರವೀಣ್ ಶೆಟ್ಟಿ,ಕನ್ನಡ ಕುಮಾರ್ ಅವರಂಥ ಹೋರಾಟಗಗಾರರ ಗಮನಕ್ಕೂ ಬಂದಿರಲಿಕ್ಕಿಲ್ಲ ಬಿಡಿ..ಡಿಸೆಂಬರ್ 12 ರಂದು ಹಾಡ ಹಗಲೇ ಕೆಲವು ದುಷ್ಕರ್ಮಿಗಳು ದೊಮ್ಮಲೂರಿನ ಸರ್ಕಲ್ ನಲ್ಲಿರುವ ಪ್ರಸಿದ್ಧ ಡಾ.ರಾಜ್ ಕುಮಾರ್ ಪಾರ್ಕ್ ಗೆ ನುಗ್ಗಿದ್ದಾರೆ.ಅದೆಂಥಾ ವಿಕೃತಿ ಮನಸ್ಥಿತಿ ಅವರಲ್ಲಿತ್ತೇನೋ ಗೊತ್ತಿಲ್ಲ,ಪಾರ್ಕ್ ನ ಗೋಡೆ, ಕಾಂಪೌಂಡ್,ಗ್ರಿಲ್ ನ್ನೆಲ್ಲಾ ಒಡೆದು ಬಿಸಾಕಿ ವಿಕೃತಿ ಮೆರೆದಿದ್ದಾರೆ.ಇದೆಲ್ಲಾ ಬೆಳಗ್ಗೆ 11 ರಿಂದ ಸಂಜೆ 5ರ ಒಳಗೆ ನಡೆದೋಗಿದೆ.ಇದು ಸಾಕಷ್ಟು ಜನರ ಗಮನಕ್ಕೆ ಬಂದೇ ಇಲ್ಲ ಎನ್ನಲಾಗುತ್ತಿದೆ.

ಸಂಜೆ ವೇಳೆ ಸ್ಥಳೀಯರ್ಯಾರೋ ಮಾಜಿ ಕಾರ್ಪೊರೇಟರ್ ಗುಂಡಣ್ಣ ಅಲಿಯಾಸ್ ಲಕ್ಷ್ಮಿನಾರಾಯಣ್ ಗಮನಕ್ಕೆ ವಿಷಯ ತಂದಿದ್ದಾರೆ.ತತ್ ಕ್ಷಣ ಪೂರ್ವ ವಲಯದ ಜಂಟಿ ಆಯುಕ್ತರು ಹಾಗೂ ಅಧಿಕಾರಿಗಳ ಗಮನ ಸೆಳೆದಿದ್ದಾರೆ.

ಸ್ಥಳಕ್ಕೆ ಭೇಟಿ ಕೊಟ್ಟ ಬಳಿಕ ಸ್ಥಳೀಯ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ. ಪ್ರಕರಣದ ಬಗ್ಗೆ ಪ್ರಚಾರ ಸಿಗದ ಹಿನ್ನಲೆಯಲ್ಲಿ ಕನ್ನಡಿಗರ ಆಕ್ರೋಶ ಭುಗಿಲೆದ್ದಿಲ್ಲ.ಪರಿಸ್ಥಿತಿ ಕೈ ಮೀರಬಹುದೆನ್ನುವ ಕಾರಣಕ್ಕೆ ಸ್ಥಳಕ್ಕೆ ಕೆಎಸ್ ಆರ್ ಪಿ ವಾಹನ ನಿಲ್ಲಿಸಲಾಗಿದೆ.ಬೆಳಗಾಂ ಗಲಾಟೆಯಲ್ಲಿ ಎಲ್ಲರೂ ಬ್ಯುಸಿಯಾಗಿದ್ದರಿಂದ ಈ ಬಗ್ಗೆ ಹೆಚ್ಚು ಪ್ರಚಾರ ದೊರೆತಿಲ್ಲ.

ಆದ್ರೆ ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಸರ್ವ ಸಂಘಟನೆಗಳ  ಒಕ್ಕೂಟ ಘಟನೆಯನ್ನು ತೀವ್ರವಾಗಿ ಖಂಡಿಸಿದೆ.ಒಕ್ಕೂಟದ ಅಧ್ಯಕ್ಷ ಶಿವಕುಮಾರ ನಾಯ್ಕ ಈ ಬಗ್ಗೆ ಧ್ವನಿ ಎತ್ತಿದ್ದಾರೆ.ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿದ್ದಾರೆ.ಎಲ್ಲಿದ್ದೀರಾ ಕನ್ನಡಪರ ಹೋರಾಟಗಾರರೇ..ಗೋಕಾಕ್ ಚಳುವಳಿಗೆ ತಮ್ಮ ಕೊಡುಗೆ ನೀಡಿದ ಡಾ.ರಾಜ್ ಅವರಿಗೆ ಆಗಿರುವ ಅವಮಾನ ಖಂಡಿಸಿ ಎಂದು ಮನವಿ ಮಾಡಿದ್ದಾರೆ.

Spread the love
Leave A Reply

Your email address will not be published.

Flash News