KANNADA’S SUPER HITS FILM DIRECTOR-WRITER K.V RAJU NO MORE “ಜಬರ್ ದಸ್ತ್” ಚಿತ್ರಗಳ “ನಿರ್ದೇಶಕ”:”ಖಡಕ್ ಡೈಲಾಗ್” ಗಳ “ಸಂಭಾಷಣಕಾರ” ಕೆ.ವಿ ರಾಜು ಇನ್ನಿಲ್ಲ..

ಯುದ್ದಕಾಂಡ, ಇಂದ್ರಜಿತ್,ಬೆಳ್ಳಿ ಕಾಲುಂಗರ ಚಿತ್ರಗಳ ಸೃಷ್ಟಿಕರ್ತ-ಸಾಂಗ್ಲಿಯಾನ-ಸಿಬಿಐ ಶಂಕರ್ ನಂತ ಚಿತ್ರಗಳ ಮಾತುಗಾರ

0

ಬೆಂಗಳೂರು:ಕನ್ನಡ ಚಿತ್ರರಂಗವನ್ನು ನಿಬ್ಬೆರಗಿನ ಕಣ್ಣಗಳಿಂದ ನೋಡುವಂತೆ ಮಾಡಿದ ಕೆಲವೇ ಕೆಲವು ನಿರ್ದೇಶಕರು-ಸಂಭಾಷಣೆಕಾರರಲ್ಲಿ ಪ್ರತಿಭಾವಂತ ನಿರ್ದೇಶಕ ಕೆ.ವಿ.ರಾಜು ಕೂಡ ಒಬ್ಬರು.

ಅವರ ನಿರ್ದೆಶನದಲ್ಲಿ ಮೂಡಿಬಂದ ಚಿತ್ರಗಳೇ ಇದಕ್ಕೆ ಸಾಕ್ಷಿ.ಕೇವಲ ಹಣಕ್ಕಾಗಿ ಚಿತ್ರಗಳನ್ನು ಮಾಡುವುದಿದ್ದರೆ ಅವರ ಬತ್ತಳಿಕೆಯಲ್ಲಿ ನೂರಾರು ಚಿತ್ರಗಳು ಮೂಡಿ ಹೋಗುತ್ತಿದ್ದ ವೇನೋ..ಆದರೆ ನೆನಪಿನಲ್ಲಿ ಉಳಿಯುವಂಥ ಚಿತ್ರ ಮಾಡಬೇಕೆನ್ನುವ ಮಹತ್ವಾಕಾಂಕ್ಷೆ ಇದ್ದುದ್ದರಿಂದಲೇ ಅವರ ನಿರ್ದೆಶನದ ಬಹುತೇಕ ಚಿತ್ರಗಳು ಪದೇ ಪದೇ ನೋಡಬೇಕೆನಿಸುವಂಥ ಆಯಸ್ಕಾಂತೀಯ ಗುಣ ಹೊಂದಿವೆ.ಅಂಥಾ ಪ್ರತಿಭಾವಂತ ನಿರ್ದೇಶಕ,ಸಂಭಾಷಣೆಕಾರ ವಿಧಿವಶರಾಗಿದ್ದಾರೆ.ನಿಜಕ್ಕೂ ಭರಿಸಲಾಗದ ನಿರ್ವಾತವನ್ನು ಸೃಷ್ಟಿಸಿ ಹೋಗಿದ್ದಾರೆ.

ನಿರ್ದೆಶನದ ಜತೆಗೆ ರಾಜು ಫೇಮಸ್ ಆಗಿದ್ದು ತಮ್ಮ  ಪವರ್ ಫುಲ್ ಡೈಲಾಗ್ ಗಳಿಂದ. ನಿರ್ದೇಶನದ ಜತೆಗೆ ಅನೇಕ ಚಿತ್ರಗಳಿಗೆ ಅವರು ಬರೆದ ಸಂಭಾಷಣೆಯಲ್ಲಿ ಸಾಕಷ್ಟು ಪಂಚಿಂಗ್ ಡೈಲಾಗ್ ಗಳಿರುತ್ತಿದ್ವು.ಅವರ ಪಂಚಿಂಗ್ ಡೈಲಾಗ್ ಗಳಿಂದಲೇ ಎಷ್ಟೋ ಚಿತ್ರಗಳು ಗೆದ್ದ ಉದಾಹರಣೆ ಇದೆ.ಹಾಗಾಗಿ ರಾಜು ಅವರು ಕೇವಲ ನಿರ್ದೇಶಕರಾಗಿ ಅಲ್ಲ, ಸಂಭಾಷಣೆಕಾರರಾಗಿಯೂ ನಮ್ಮ ನಡುವೆ ಉಳಿಯಲಿದ್ದಾರೆ.

ಕೆ.ವಿ ರಾಜು ಎಂದಾಕ್ಷಣ ಮೊದಲು ನೆನಪಾಗುವಂತ ಅವರ ಕೆಲವು ಚಿತ್ರಗಳು ನವಭಾರತ,ಯುದ್ಧಕಾಂಡ,ಹುಲಿಯಾ,ಸಂಗ್ರಾಮ, ಇಂದ್ರಜಿತ್,ಕದನ.ಬಂಧಮುಕ್ತ, ಪೊಲೀಸ್ ಲಾಕಪ್, ನಿಜ ದಂಥ ಚಿತ್ರಗಳನ್ನು ನಿರ್ದೇಶಿಸಿದ್ದರು. ನಿರ್ದೇಶನ ತಮ್ಮ ಮೆಚ್ಚಿನ ಕ್ಷೇತ್ರವಾದರೂ ಅವರಿಗೆ  ಹೆಚ್ಚು ಹೆಸರು ತಂದುಕೊಟ್ಟದ್ದು ಸಂಭಾಷಣೆ. ಕೆ.ವಿ.ರಾಜು ಅವರನ್ನು ನಿರ್ದೇಶನದಷ್ಟೇ ಹೆಚ್ಚು ಎತ್ತರಕ್ಕೆ ಕೊಂಡೊಯ್ದು ಸಾಕಷ್ಟು ವರ್ಷಗಳವರೆಗ ಚಿತ್ರರಂಗದಲ್ಲಿ ಉಳಿಯುವಂತೆ ಮಾಡಿದ್ದೇ ಅವರಲ್ಲಿದ್ದ ಅತ್ಯುತ್ತಮ ಹಾಗೂ ಉತ್ಕ್ರಷ್ಟ ಸಂಭಾಷಣೆಕಾರ.ಹಾಗಾಗಿ ಅವರು  ನಿರ್ದೇಶನಕ್ಕೆ ಗುಡ್ ಬೈ ಹೇಳಿದ್ರೂ ಸಂಭಾಷಣೆಯನ್ನು ಮಾತ್ರ ಬಿಡಲಿಲ್ಲ..ಎಷ್ಟೋ ಚಿತ್ರಗಳು ಸಂಭಾಷಣೆ ಮೂಲಕವೇ ಪ್ರೇಕ್ಷಕರನ್ನು ರಂಜಿಸಿದ್ವು ಎಂದರೆ ಅತಿಶಯವಾಗದು.

ಅಂದ್ಹಾಗೆ ಅವರ ಜಬರ್ ದಸ್ತ್ ಡೈಲಾಗ್ ಸಂಭಾಷಣೆ ನೋಡಬೇಕೆಂದ್ರೆ  ರಾಗಿಣಿ ಐಪಿಎಸ್ ,ಬೃಂದಾವನ,ದಶಮುಖ,ಒಲವೇ ಮಂದಾರ,ದಂಡಂ ದಶಗುಣಂ,ರಾಜಧಾನಿ,ಡೆಡ್ಲಿ-2, ಶೌರ್ಯ, ಕರಿ ಚಿರತೆ,ಪ್ರೀತ್ಸೆ-ಪ್ರೀತ್ಸೆ,ಗಜ ಪಾಂಡವರು, ಇನ್ಸ್ ಪೆಕ್ಟರ್ ಝಾನ್ಸಿ, ಪ್ರೀತಿ ನೀ ಇಲ್ಲದ ಮೇಲೆ ನಾ ಹೇಗಿರಲಿ, ನಿಜ, ಭಗವಾನ್, ಕಲಾಸಿಪಾಳ್ಯ,ರಾಷ್ಟ್ರಗೀತೆ, ಖಡ್ಗ, ಪಾಪಿಗಳ ಲೋಕದಲ್ಲಿ, ತಿಮ್ಮರಾಯ,ಇದು ಎಂಥಾ ಪ್ರೇಮವಯ್ಯ,ಸಿಬಿಐ ದುರ್ಗಾ, ಯುದ್ಧ, ಹುಲಿಯಾ, ಬೊಂಬಾಟ್ ಹುಡ್ಗಾ, ಪೊಲೀಸ್ ಪವರ್, ಅಭಿಜಿತ್, ವಿಜಯಕ್ರಾತಿ, ಬೊಂಬಾಟ್ ಹುಡ್ಗಬೆಳ್ಳಿ ಕಾಲುಂಗುರ,ಬೆಳ್ಳಿ ಮೋಡಗಳು,ಸುಂದರ ಕಾಂಡ, ಸಾಂಗ್ಲಿ ಯಾನ-1,ಎಸ್ ಪಿ ಸಾಂಗ್ಲಿಯಾನ-2, ಇಂದ್ರಜಿತ್, ಸಿಬಿಐ ಶಂಕರ್, ಸಂಕ್ರಾಂತಿ, ಯುದ್ಧಕಾಂಡ, ಅಂತಿಮ ತೀರ್ಪು, ಬಂಧಮುಕ್ತ,ಬೇಡಿ, ಸಂಗ್ರಾಮ,ಬ್ರಹ್ಮಾಸ್ತ್ರ,ಹೊಸ ನೀರು,  ಒಲವೇ ಬದುಕು, ಇಬ್ಬನಿ ಕರಗಿತು, ಮುದುಡಿದ ತಾವರೆ ಅರಳಿತು, ಬಾಡದ ಹೂಚಿತ್ರಗಳನ್ನು ನೋಡಬೇಕಾಗುತ್ತದೆ.

ತೀವ್ರ ಅನಾರೋಗ್ಯದಿಂದಾಗಿ ಒಂದಷ್ಟು ಬಿಡುವು ಪಡೆದಿದ್ದರಾದರೂ ಟೈಗರ್ ಗಲ್ಲಿ ಚಿತ್ರಕ್ಕೆ ಜಬರ್ ದಸ್ತ್ ಸಂಭಾಷಣೆ ಬರೆದಿದ್ದರು.ಅದೇ ಅವರ ಚಿತ್ರವಾಯಿತು.ಕೆ.ವಿ ರಾಜು ಅವರ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ.ಕನ್ನಡ ಫ್ಲ್ಯಾಶ್ ನ್ಯೂಸ್ ತಂಡ ಕೆ.ವಿ ರಾಜು ಅವರ ನಿಧನಕ್ಕೆ ಸಂತಾಸ ಸೂಚಿಸುತ್ತದೆ.

Spread the love
Leave A Reply

Your email address will not be published.

Flash News